ಪ್ರಧಾನ ಮಂತ್ರಿಯವರ ಕಛೇರಿ
ಸ್ವಾಮಿ ವಿವೇಕಾನಂದ ಅವರಿಗೆ ಅವರ ನಿರ್ವಾಣ ದಿನದಂದು ಗೌರವ ನಮನ ಸಲ್ಲಿಸಿದ ಪ್ರಧಾನಮಂತ್ರಿ
प्रविष्टि तिथि:
04 JUL 2026 1:49PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಸ್ವಾಮಿ ವಿವೇಕಾನಂದರ ನಿರ್ವಾಣ ದಿನದಂದು ಅವರಿಗೆ ಗೌರವ ನಮನ ಸಲ್ಲಿಸಿದರು. ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ಆಧ್ಯಾತ್ಮಿಕ ಸಂಪ್ರದಾಯಗಳು ಮತ್ತು ರಾಷ್ಟ್ರೀಯ ಪ್ರಜ್ಞೆಗೆ ಜಾಗತಿಕ ಮಟ್ಟದಲ್ಲಿ ಮನ್ನಣೆ ದೊರಕಿಸಿಕೊಡುವಲ್ಲಿ ಸ್ವಾಮಿ ವಿವೇಕಾನಂದಜಿ ಅವರ ಅಪ್ರತಿಮ ಕೊಡುಗೆ ಪ್ರಸ್ತುತ ಪೀಳಿಗೆಗೆ ಸ್ಫೂರ್ತಿ ನೀಡುತ್ತಲೇ ಇದೆ ಎಂದು ಶ್ರೀ ನರೇಂದ್ರ ಮೋದಿಯವರು ಹೇಳಿದರು. ಅವರ ಅಪಾರ ಬುದ್ಧಿವಂತಿಕೆ ಮತ್ತು ಕಾಲಾತೀತ ಆದರ್ಶಗಳು ದೇಶಾದ್ಯಂತ ಲಕ್ಷಾಂತರ ಯುವಜನರಿಗೆ ಮಾರ್ಗದರ್ಶಕ ಶಕ್ತಿಯಾಗಿ ಉಳಿದಿವೆ. "ಅವರ ಆಧ್ಯಾತ್ಮಿಕ ಸಂದೇಶವು ವಿಕಸಿತ ಭಾರತವನ್ನು ನಿರ್ಮಿಸುವ ಸಾಮೂಹಿಕ ಸಂಕಲ್ಪದಲ್ಲಿ ರಾಷ್ಟ್ರವನ್ನು ಪ್ರೇರೇಪಿಸಿ, ಚೈತನ್ಯಗೊಳಿಸುತ್ತದೆ" ಎಂದು ಶ್ರೀ ಮೋದಿಯವರು ಹೇಳಿದರು.
ಪ್ರಧಾನಮಂತ್ರಿಯವರು Xನಲ್ಲಿ ಪೋಸ್ಟ್ ಮಾಡಿ:
स्वामी विवेकानंद जी के निर्वाण दिवस पर उन्हें कोटि-कोटि नमन। भारतीय संस्कृति, अध्यात्म और राष्ट्र-चेतना को वैश्विक पहचान दिलाने में उनका योगदान अतुलनीय है। उनकी बौद्धिकता और प्रेरणादायी विचार आज भी करोड़ों युवाओं का मार्गदर्शन कर रहे हैं। उनके आध्यात्मिक संदेश विकसित भारत के निर्माण का संकल्प साकार करने में देश को नई ऊर्जा एवं दिशा प्रदान करते रहेंगे।
*****
(रिलीज़ आईडी: 2281335)
आगंतुक पटल : 11
इस विज्ञप्ति को इन भाषाओं में पढ़ें:
Urdu
,
English
,
हिन्दी
,
Marathi
,
Manipuri
,
Bengali
,
Bengali-TR
,
Assamese
,
Gujarati
,
Odia
,
Tamil
,
Telugu
,
Malayalam