ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
azadi ka amrit mahotsav

ಜಂಟಿ ಹೇಳಿಕೆ


ಭಾರತ ಗಣರಾಜ್ಯದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಹಾಗೂ ಜಪಾನ್‌ನ ಆರ್ಥಿಕತೆ, ವ್ಯಾಪಾರ ಮತ್ತು ಕೈಗಾರಿಕಾ ಸಚಿವಾಲಯದ ನಡುವೆ ಇಂಧನ ಸ್ಥಿತಿಸ್ಥಾಪಕತ್ವದ ಕುರಿತು ಹೇಳಿಕೆ

प्रविष्टि तिथि: 02 JUL 2026 5:54PM by PIB Bengaluru

ಜುಲೈ 2, 2026 ರಂದು, ಭಾರತ ಗಣರಾಜ್ಯದ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಜಪಾನ್‌ ನ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ತಕೈಚಿ ಸನಾಯೆ ಅವರು ಭಾರತದ ನವದೆಹಲಿಯಲ್ಲಿ ಭೇಟಿಯಾದರು. ಪ್ರಸ್ತುತ ಜಾಗತಿಕ ರಾಜಕೀಯ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಏಷ್ಯಾದ ಜವಾಬ್ದಾರಿಯುತ ಶಕ್ತಿಗಳಾಗಿ ಮತ್ತು ಇಂಧನವನ್ನು ಅತಿ ಹೆಚ್ಚು ಬಳಸುವ ಪ್ರಮುಖ ದೇಶಗಳಾಗಿ ಜಂಟಿಯಾಗಿ ಇಂಧನ ಭದ್ರತೆ ಮತ್ತು ದೃಢತೆಯನ್ನು ಬಲಪಡಿಸಲು ಒಟ್ಟಾಗಿ ಕೆಲಸ ಮಾಡುವ ತಮ್ಮ ಸಮಾನ ಆಶಯವನ್ನು ಉಭಯ ನಾಯಕರು ವ್ಯಕ್ತಪಡಿಸಿದರು.

ಇಂಧನ ದೃಢತೆಯನ್ನು ಬಲಪಡಿಸಲು ಪ್ರಾದೇಶಿಕ ಉಪಕ್ರಮಗಳು ಅತ್ಯಂತ ಪ್ರಮುಖವಾಗಿವೆ ಎಂದು ಉಭಯ ಕಡೆಯವರು ಒತ್ತಿಹೇಳಿದರು. ಇದಕ್ಕೆ ಉದಾಹರಣೆಯಾಗಿ, ಜಪಾನ್‌ ನ 'ಪಾರ್ಟ್ನರ್‌ಶಿಪ್ ಆನ್ ವೈಡ್ ಎನರ್ಜಿ ಅಂಡ್ ರಿಸೋರ್ಸಸ್ ರೆಸಿಲಿಯನ್ಸ್' (POWERR Asia) ಮತ್ತು ದಕ್ಷಿಣ ಏಷ್ಯಾದಲ್ಲಿ ಇಂಧನ ಭದ್ರತೆಗಾಗಿ ಭಾರತ ನೀಡುತ್ತಿರುವ ಬೆಂಬಲವನ್ನು ಉಲ್ಲೇಖಿಸಲಾಯಿತು. ಉಭಯ ನಾಯಕರ ಚರ್ಚೆಗಳ ಆಧಾರದ ಮೇಲೆ, ಭಾರತ ಗಣರಾಜ್ಯದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಹಾಗೂ ಜಪಾನ್‌ ನ ಆರ್ಥಿಕತೆ, ವ್ಯಾಪಾರ ಮತ್ತು ಕೈಗಾರಿಕಾ ಸಚಿವಾಲಯವು ಈ ಕೆಳಗಿನ ನಿರ್ದಿಷ್ಟ ಉಪಕ್ರಮಗಳಲ್ಲಿ ಪರಸ್ಪರ ಸಹಕರಿಸಲಿವೆ:

  1. ಕಾರ್ಯತಂತ್ರದ ದಾಸ್ತಾನು ವ್ಯವಸ್ಥೆಯಲ್ಲಿ ಸಹಕಾರ

ಕಚ್ಚಾ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ದಾಸ್ತಾನು ವ್ಯವಸ್ಥೆಗಳು ಹಾಗೂ ಮೀಸಲು ಕಾರ್ಯವಿಧಾನಗಳಿಗೆ ಸಂಬಂಧಿಸಿದಂತೆ ಪರಸ್ಪರ ಜ್ಞಾನ ಮತ್ತು ಅನುಭವವನ್ನು ಹಂಚಿಕೊಳ್ಳುವ ಮತ್ತು ಸೂಕ್ತವಾದ ಕಡೆಗಳಲ್ಲಿ ದೃಢವಾದ ಸಹಕಾರವನ್ನು ಉತ್ತೇಜಿಸುವ ಮಹತ್ವವನ್ನು ಉಭಯ ಕಡೆಯವರು ಪುನರುಚ್ಚರಿಸಿದರು. ಸಹಕಾರವು ಮುಖ್ಯವಾಗಿ ಕೆಳಗಿನ ವಿಷಯಗಳ ಮೇಲೆ ಕೇಂದ್ರೀಕೃತವಾಗಿರುತ್ತದೆ:

  • ಕೈಗಾರಿಕಾ ದಾಸ್ತಾನುಗಳು ಸೇರಿದಂತೆ ರಾಷ್ಟ್ರೀಯ ದಾಸ್ತಾನು ವ್ಯವಸ್ಥೆಗಳು ಮತ್ತು ಮೀಸಲುಗಳಿಗೆ ಸಂಬಂಧಿಸಿದ ಕಾರ್ಯವಿಧಾನಗಳು
  • ತೈಲ ಉತ್ಪಾದಿಸುವ ದೇಶಗಳೊಂದಿಗಿನ ವ್ಯವಸ್ಥೆಗಳಿಗೆ ಸಂಬಂಧಿಸಿದಂತೆ ಸಮನ್ವಯ
  • ತುರ್ತು ಪರಿಸ್ಥಿತಿಯ ಸ್ಪಂದನೆ ಮತ್ತು ಮಾರುಕಟ್ಟೆ ಸ್ಥಿರೀಕರಣ

 

2. ಇಂಧನ ಬಳಸುವ ದೇಶಗಳ ಧ್ವನಿಯನ್ನು ಬಲಪಡಿಸುವುದು

ಪೂರೈಕೆಯ ಭರವಸೆ, ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುವುದು ಮತ್ತು ಬೆಲೆ ಏರಿಳಿತವನ್ನು ತಗ್ಗಿಸುವ ಕಾರ್ಯವಿಧಾನಗಳನ್ನು ರೂಪಿಸುವ ಮೂಲಕ ಇಂಧನದ ಲಭ್ಯತೆ ಮತ್ತು ಕೈಗೆಟುಕುವ ದರದ ಸಮಾನ ಸವಾಲುಗಳನ್ನು ಎದುರಿಸಲು ಸಹಕರಿಸುವ ಮಹತ್ವವನ್ನು ಉಭಯ ಕಡೆಯವರು ಪುನರುಚ್ಚರಿಸಿದರು, ತನ್ಮೂಲಕ ತೈಲ ಮತ್ತು ಅನಿಲವನ್ನು ಬಳಸುವ ದೇಶಗಳ ಧ್ವನಿಯನ್ನು ಬಲಪಡಿಸಲು ನಿರ್ಧರಿಸಿದರು. ಸಹಕಾರವು ಕೆಳಗಿನ ವಿಷಯಗಳ ಮೇಲೆ ಕೇಂದ್ರೀಕರಿಸುತ್ತದೆ:

  • ಮಾರುಕಟ್ಟೆಯ ಟ್ರೆಂಡ್‌ ಗಳ ಕುರಿತು ಮಾಹಿತಿ ಹಂಚಿಕೆಯಲ್ಲಿ ಸಹಕಾರ ಮತ್ತು ಮಾರುಕಟ್ಟೆ ಸ್ಥಿರೀಕರಣಕ್ಕಾಗಿ ಜಂಟಿ ಪ್ರಯತ್ನಗಳು
  • ಮೂರನೇ ದೇಶಗಳಿಂದ ಇಂಧನ ಪೂರೈಕೆಗಾಗಿ ತೊಡಗಿಸಿಕೊಳ್ಳುವಿಕೆಯನ್ನು ಅನ್ವೇಷಿಸುವುದು
  • ಮೂರನೇ ದೇಶಗಳಲ್ಲಿನ ಅಪ್‌ಸ್ಟ್ರೀಮ್ ವಲಯದಲ್ಲಿ (ತೈಲ ಉತ್ಪಾದನಾ ವಲಯ) ಹೂಡಿಕೆಗಳಿಗಾಗಿ ವಾಣಿಜ್ಯಕ ತೊಡಗಿಸಿಕೊಳ್ಳುವಿಕೆಯನ್ನು ಅನ್ವೇಷಿಸುವುದು.

 

3.ಇಂಧನ ಸಾಗಣೆಯಲ್ಲಿ ಸಹಕಾರ

ಉಭಯ ದೇಶಗಳ ಇಂಧನ ಭದ್ರತೆಯ ನಿರ್ಣಾಯಕ ಸ್ತಂಭವಾಗಿ ತೈಲ ಮತ್ತು ಅನಿಲದ ಸ್ಥಿತಿಸ್ಥಾಪಕ, ಸ್ವಾವಲಂಬಿ ಮತ್ತು ದಕ್ಷ ಸಮುದ್ರ ಸಾರಿಗೆಯ ಮಹತ್ವವನ್ನು ಉಭಯ ಕಡೆಯವರು ಪುನರುಚ್ಚರಿಸಿದರು. ಅಲ್ಲದೆ, ಸಮುದ್ರ ಇಂಧನ ಸಾರಿಗೆಯ ಮೌಲ್ಯ ಸರಪಳಿಯಾದ್ಯಂತ ಜಂಟಿ ಹೂಡಿಕೆಗಳು ಸೇರಿದಂತೆ ಸಹಯೋಗದ ಅವಕಾಶಗಳನ್ನು ಅನ್ವೇಷಿಸಲು ಉಭಯ ಕಡೆಯವರು ಒಪ್ಪಿಕೊಂಡರು.

 

4. ಸಾಂಸ್ಥಿಕ ಸಹಕಾರ

ತಾಂತ್ರಿಕ ಮತ್ತು ಹಣಕಾಸು ಸಹಕಾರ ಸೇರಿದಂತೆ ಇಂಧನ ವಲಯದಲ್ಲಿ ಸಮಗ್ರ ಸಹಕಾರವನ್ನು ಗಾಢವಾಗಿಸಲು, ಕೆಳಗೆ ಪಟ್ಟಿ ಮಾಡಲಾದ ಸಂಸ್ಥೆಗಳು ಸೇರಿದಂತೆ ಸಂಬಂಧಿತ ಪಾಲುದಾರರ ನಡುವೆ ಸಾಂಸ್ಥಿಕ ಸಹಯೋಗವನ್ನು ಉತ್ತೇಜಿಸುವ ತಮ್ಮ ಆಶಯವನ್ನು ಉಭಯ ಕಡೆಯವರು ಖಚಿತಪಡಿಸಿದರು:

  • ಜಪಾನಿನ ಸಂಸ್ಥೆಗಳು: ಜಪಾನ್ ಆರ್ಗನೈಸೇಶನ್ ಫಾರ್ ಮೆಟಲ್ಸ್ ಅಂಡ್ ಎನರ್ಜಿ ಸೆಕ್ಯುರಿಟಿ (JOGMEC); ಜಪಾನ್ ಬ್ಯಾಂಕ್ ಫಾರ್ ಇಂಟರ್ನ್ಯಾಷನಲ್ ಕೋಆಪರೇಷನ್ (JBIC); ಮತ್ತು ಇತರ ಸಂಬಂಧಿತ ಪಾಲುದಾರರು
  • ಭಾರತೀಯ ಸಂಸ್ಥೆಗಳು: ಭಾರತೀಯ ರಾಷ್ಟ್ರೀಯ ತೈಲ ಕಂಪನಿಗಳು, ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ಸ್ ಲಿಮಿಟೆಡ್ (ISPRL); ಮತ್ತು ಇತರ ಸಂಬಂಧಿತ ಪಾಲುದಾರರು

 

5.ಸಂವಾದಕ್ಕಾಗಿ ವೇದಿಕೆ

ಹೇಳಿಕೆಯಲ್ಲಿ ಗುರುತಿಸಲಾದ ಆದ್ಯತೆಯ ಕ್ಷೇತ್ರಗಳಲ್ಲಿ ಸಹಕಾರವನ್ನು ಮುಂದುವರೆಸುವ ಉದ್ದೇಶದಿಂದ, ಉಭಯ ಕಡೆಯವರು 'ಭಾರತ-ಜಪಾನ್ ಇಂಧನ ಸಂವಾದ'ದ ಅಡಿಯಲ್ಲಿ ಬರುವ 'ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲದ ಕುರಿತಾದ ಭಾರತ-ಜಪಾನ್ ಜಂಟಿ ಕಾರ್ಯಕಾರಿ ಗುಂಪು' ಅಡಿಯಲ್ಲಿ ಚರ್ಚೆಗಳನ್ನು ನಡೆಸಲು ನಿರ್ಧರಿಸಿದರು. ಈ ವೇದಿಕೆಯ ಮೂಲಕ, ಉಭಯ ಕಡೆಯವರು ತಮ್ಮ ನವೀಕೃತ ಜ್ಞಾನ ಮತ್ತು ಅನುಭವವನ್ನು ಹಂಚಿಕೊಳ್ಳಲಿದ್ದಾರೆ ಮತ್ತು ಸಹಕಾರಕ್ಕಾಗಿ ಪರಸ್ಪರ ಪ್ರಯೋಜನಕಾರಿ ಅವಕಾಶಗಳನ್ನು ಅನ್ವೇಷಿಸಲಿದ್ದಾರೆ.

 

*****


(रिलीज़ आईडी: 2280557) आगंतुक पटल : 10
इस विज्ञप्ति को इन भाषाओं में पढ़ें: English , Urdu , हिन्दी , Tamil