ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿ ಅವರಿಂದ ಡಿಜಿಟಲ್ ಇಂಡಿಯಾ ಉಪಕ್ರಮಕ್ಕೆ 11 ವರ್ಷ ತುಂಬಿದ ಸಂದರ್ಭದ ಆಚರಣೆ; ಈ ಉಪಕ್ರಮವು ಆಡಳಿತವನ್ನು ಮಾರ್ಪಡಿಸಿದೆ, ನಾಗರಿಕರನ್ನು ಸಬಲೀಕರಿಸಿದೆ ಮತ್ತು ವಿಕಸಿತ ಭಾರತದ ಅಡಿಪಾಯವನ್ನು ಬಲಪಡಿಸಿದೆ ಎಂದು ಹೇಳಿದರು
प्रविष्टि तिथि:
01 JUL 2026 12:04PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು 'ಡಿಜಿಟಲ್ ಇಂಡಿಯಾ' ಉಪಕ್ರಮಕ್ಕೆ 11 ವರ್ಷಗಳು ಸಂದಿರುವುದನ್ನು ಗುರುತಿಸಿ, ಆಡಳಿತ, ಸಾರ್ವಜನಿಕ ಸೇವೆಗಳ ವಿತರಣೆ ಮತ್ತು ನಾಗರಿಕರ ಜೀವನದ ಮೇಲೆ ಇದು ಬೀರಿದ ಪರಿವರ್ತನಾತ್ಮಕ ಪ್ರಭಾವವನ್ನು ಉಲ್ಲೇಖಿಸಿದರು.
ದೇಶಾದ್ಯಂತ ಸರ್ವತೋಮುಖ ಅಭಿವೃದ್ಧಿಯನ್ನು ವೇಗಗೊಳಿಸುವುದರ ಜೊತೆಗೆ ಡಿಜಿಟಲ್ ಇಂಡಿಯಾ ಆಡಳಿತವನ್ನು ಹೆಚ್ಚು ಪಾರದರ್ಶಕ, ದಕ್ಷ ಮತ್ತು ನಾಗರಿಕ ಕೇಂದ್ರಿತವಾಗಿಸುವ ಮೂಲಕ ಅದನ್ನು ಮರು ವ್ಯಾಖ್ಯಾನಿಸಿದೆ ಎಂದು ಶ್ರೀ ಮೋದಿ ಹೇಳಿದರು. ತಡೆರಹಿತ ಡಿಜಿಟಲ್ ಪಾವತಿಗಳು ಮತ್ತು ಪಾರದರ್ಶಕ ನೇರ ನಗದು ವರ್ಗಾವಣೆಯಿಂದ ಹಿಡಿದು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯಗಳ ವಿಸ್ತರಣೆಯವರೆಗೆ, ಈ ಉಪಕ್ರಮವು ಜೀವನದ ಪ್ರತಿಯೊಂದು ಅಂಶವನ್ನು ತಲುಪಿದೆ ಮತ್ತು ತಂತ್ರಜ್ಞಾನವನ್ನು ʻಜೀವನದ ಸುಲಭತೆʼಯನ್ನು ಸುಧಾರಿಸುವ ಪ್ರಬಲ ಸಾಧನವನ್ನಾಗಿ ಮಾಡಿದೆ ಎಂದು ಹೇಳಿದರು.
ಒಂದು ಶತಕೋಟಿಗೂ ಹೆಚ್ಚು ಭಾರತೀಯರು ತಂತ್ರಜ್ಞಾನವನ್ನು ವ್ಯಾಪಕವಾಗಿ ಅಳವಡಿಸಿಕೊಂಡಿರುವುದು ಒಂದು ಪರಿವರ್ತನಾತ್ಮಕ ಬದಲಾವಣೆಯನ್ನು ತಂದಿದೆ ಹಾಗು ಡಿಜಿಟಲ್ ಇಂಡಿಯಾವನ್ನು ಅಭಿವೃದ್ಧಿ ಹೊಂದಿದ ಮತ್ತು ಸ್ವಾವಲಂಬಿ ಭಾರತದ ಭದ್ರ ಬುನಾದಿಯನ್ನಾಗಿ ಮಾಡಿದೆ ಎಂದು ಪ್ರಧಾನಮಂತ್ರಿಯವರು ತಿಳಿಸಿದರು. ಡಿಜಿಟಲ್ ಇಂಡಿಯಾವು ನಾವೀನ್ಯತೆಯ ಅಲೆಯನ್ನು ದೇಶದ ಪ್ರತಿಯೊಂದು ಭಾಗಕ್ಕೂ, ವಿಶೇಷವಾಗಿ ಹಳ್ಳಿಗಳು ಹಾಗೂ ಟೈರ್-2 ಮತ್ತು ಟೈರ್-3 ನಗರಗಳಿಗೆ ಕೊಂಡೊಯ್ದಿದೆ ಎಂದು ಶ್ರೀ ಮೋದಿ ತಿಳಿಸಿದರು. ಭಾರತದೆಲ್ಲೆಡೆ ಇರುವ ಯುವ ಉದ್ಯಮಿಗಳು, ನವೋದ್ಯಮಗಳು ಮತ್ತು ನಾವೀನ್ಯಕಾರರು ವಿಶ್ವದ ಅತ್ಯಂತ ಗಂಭೀರ ಸವಾಲುಗಳನ್ನು ಎದುರಿಸಲು ಪರಿಹಾರಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ ಎಂದು ಅವರು ಹೇಳಿದರು. ಈ ಉಪಕ್ರಮವು ಶಿಕ್ಷಣ, ಆರೋಗ್ಯ, ಕೃಷಿ, ವಾಣಿಜ್ಯ ಮತ್ತು ಸಾರ್ವಜನಿಕ ಸೇವೆಗಳ ವಿತರಣೆಯಂತಹ ಪ್ರಮುಖ ವಲಯಗಳನ್ನು ಬಲಪಡಿಸಿದೆ; ಆಡಳಿತವನ್ನು ಹೆಚ್ಚು ಸುಲಭವಾಗಿ ಲಭ್ಯವಾಗುವಂತೆ, ಪಾರದರ್ಶಕ ಮತ್ತು ಪರಿಣಾಮಕಾರಿಯನ್ನಾಗಿ ಮಾಡಿದೆ ಎಂದು ಪ್ರಧಾನಮಂತ್ರಿಯವರು ಉಲ್ಲೇಖಿಸಿದರು.
ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಭಾರತದ ಬೆಳೆಯುತ್ತಿರುವ ಮುಂದಾಳತ್ವವನ್ನು ಎತ್ತಿ ತೋರಿಸಿದ ಶ್ರೀ ಮೋದಿ ಅವರು, ಕೃತಕ ಬುದ್ಧಿಮತ್ತೆ, ಅರೆವಾಹಕಗಳು (ಸೆಮಿಕಂಡಕ್ಟರ್) ಮತ್ತು ಕ್ವಾಂಟಮ್ ಕಂಪ್ಯೂಟಿಂಗ್ ನಂತಹ ಕ್ಷೇತ್ರಗಳಲ್ಲಿ ದೇಶದ ಪ್ರಗತಿಯು ಬೆಳವಣಿಗೆ ಮತ್ತು ಅವಕಾಶಗಳ ಹೊಸ ಹಾದಿಗಳನ್ನು ಮುಕ್ತಗೊಳಿಸಲಿದೆ ಎಂದು ಒತ್ತಿ ಹೇಳಿದರು. ತಂತ್ರಜ್ಞಾನವು ಮಾನವಕುಲಕ್ಕೆ ಸೇವೆ ಮಾಡುವ, ಪ್ರತಿಯೊಬ್ಬ ನಾಗರಿಕರನ್ನು ಸಬಲೀಕರಿಸುವ ಮತ್ತು ಸುಸ್ಥಿರ ಅಭಿವೃದ್ಧಿಗೆ ಚಾಲನೆ ನೀಡುವ ಭವಿಷ್ಯವನ್ನು ನಿರ್ಮಿಸಲು ಸರ್ಕಾರ ಬದ್ಧವಾಗಿದೆ ಎಂದು ಪುನರುಚ್ಚರಿಸಿದರು.
ಪ್ರಧಾನಮಂತ್ರಿಯವರು 'ಎಕ್ಸ್' ನಲ್ಲಿ ಹೀಗೆ ಬರೆದಿದ್ದಾರೆ:
ಇಂದು, ಡಿಜಿಟಲ್ ಇಂಡಿಯಾ ಉಪಕ್ರಮವನ್ನು ಪ್ರಾರಂಭಿಸಿ 11 ವರ್ಷಗಳಾದ ಸಂದರ್ಭವನ್ನು ನಾವು ಆಚರಿಸುತ್ತೇವೆ. ಈ ಉಪಕ್ರಮವು ಆಡಳಿತವನ್ನು ಮರು ವ್ಯಾಖ್ಯಾನಿಸಿದೆ, ನಾಗರಿಕರನ್ನು ಸಬಲೀಕರಿಸಿದೆ ಮತ್ತು ಸರ್ವತೋಮುಖ ಅಭಿವೃದ್ಧಿಯನ್ನು ವೇಗಗೊಳಿಸಿದೆ. ಇದು ಜೀವನದ ಪ್ರತಿಯೊಂದು ಅಂಶವನ್ನು ತಲುಪಿದೆ. ತಡೆರಹಿತ ಡಿಜಿಟಲ್ ಪಾವತಿಗಳು ಮತ್ತು ಫಲಾನುಭವಿಗಳಿಗೆ ಪಾರದರ್ಶಕವಾಗಿ ತಲುಪುವ ನೇರ ನಗದು ವರ್ಗಾವಣೆಯಿಂದ ಹಿಡಿದು, ವಿಸ್ತರಿಸುತ್ತಿರುವ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದವರೆಗೆ, ತಂತ್ರಜ್ಞಾನವು 'ಜೀವನದ ಸುಲಭತೆʼಯನ್ನು ಮತ್ತಷ್ಟು ಉತ್ತೇಜಿಸುವ ಪ್ರಬಲ ಸಾಧನವಾಗಿದೆ.
ಡಿಜಿಟಲ್ ಇಂಡಿಯಾವು ನಾವೀನ್ಯತೆಯ ಅಲೆಯನ್ನು ಭಾರತದ ಎಲ್ಲಾ ಭಾಗಗಳಿಗೆ, ವಿಶೇಷವಾಗಿ ಹಳ್ಳಿಗಳು, ಟೈರ್-2 ಮತ್ತು ಟೈರ್-3 ನಗರಗಳಿಗೆ ಕೊಂಡೊಯ್ದಿದೆ. ದೇಶದ ಪ್ರತಿಯೊಂದು ಮೂಲೆಯ ಯುವ ಉದ್ಯಮಿಗಳು, ನವೋದ್ಯಮಗಳು ಮತ್ತು ನಾವೀನ್ಯಕಾರರು ನಮ್ಮ ಭೂಮಿ ಎದುರಿಸುತ್ತಿರುವ ಜ್ವಲಂತ ಸವಾಲುಗಳಿಗೆ ಪರಿಹಾರಗಳನ್ನು ಸೃಷ್ಟಿಸುತ್ತಿದ್ದಾರೆ. ಈ ಉಪಕ್ರಮವು ಶಿಕ್ಷಣ, ಆರೋಗ್ಯ, ಕೃಷಿ, ವಾಣಿಜ್ಯ ಮತ್ತು ಸಾರ್ವಜನಿಕ ಸೇವೆಗಳ ವಿತರಣೆಯನ್ನು ಬಲಪಡಿಸಿದೆ, ಆಡಳಿತವನ್ನು ಹೆಚ್ಚು ಪಾರದರ್ಶಕ, ಪರಿಣಾಮಕಾರಿ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡಿದೆ.
ಡಿಜಿಟಲ್ ಜಗತ್ತಿನಲ್ಲಿ ನಮ್ಮ ಹೆಜ್ಜೆಗಳು, ಕೃತಕ ಬುದ್ಧಿಮತ್ತೆ , ಸೆಮಿಕಂಡಕ್ಟರ್ ಗಳು, ಕ್ವಾಂಟಮ್ ಕಂಪ್ಯೂಟಿಂಗ್ ಮತ್ತು ಇನ್ನೂ ಹೆಚ್ಚಿನ ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಭಾರತವು ಕ್ಷಿಪ್ರ ಪ್ರಗತಿಯನ್ನು ಸಾಧಿಸುತ್ತಿರುವುದನ್ನು ಖಚಿತಪಡಿಸಿದೆ. ಇದೂ ಸಹ ಬೆಳವಣಿಗೆ ಮತ್ತು ಅವಕಾಶಗಳ ಹೊಸ ಹಾದಿಗಳನ್ನು ತೆರೆಯುತ್ತದೆ. ತಂತ್ರಜ್ಞಾನವು ಮನುಕುಲದ ಸೇವೆ ಮಾಡುವ, ಪ್ರತಿಯೊಬ್ಬ ನಾಗರಿಕನನ್ನು ಸಬಲೀಕರಿಸುವ ಮತ್ತು ಸುಸ್ಥಿರ ಅಭಿವೃದ್ಧಿಗೆ ಚಾಲನೆ ನೀಡುವ ಭವಿಷ್ಯವನ್ನು ಸೃಷ್ಟಿಸುವುದರ ಮೇಲೆಯೇ ನಮ್ಮ ಗಮನ ಮುಂದುವರಿಯುತ್ತದೆ.
ಒಂದು ಶತಕೋಟಿಗೂ ಹೆಚ್ಚು ಜನರು ತಂತ್ರಜ್ಞಾನವನ್ನು ಅಳವಡಿಸಿಕೊಂಡಾಗ, ಅದರ ಪ್ರಭಾವವು ಪರಿವರ್ತನಾತ್ಮಕವಾಗಿರುತ್ತದೆ!
#11YearsOfDigitalIndia
डिजिटल इंडिया विकसित और आत्मनिर्भर भारत की सशक्त नींव है। बीते 11 वर्षों में इसने गरीबों और वंचितों के सशक्तिकरण में महत्वपूर्ण भूमिका निभाने के साथ ही देशवासियों के जीवन को आसान बनाया है। ऑप्टिकल फाइबर नेटवर्क के विस्तार से लेकर डिजिटल ट्रांजैक्शन तक इस अभियान की अभूतपूर्व सफलता ने दुनियाभर का ध्यान भारत की ओर खींचा है।
#11YearsOfDigitalIndia
*****
(रिलीज़ आईडी: 2279779)
आगंतुक पटल : 16
इस विज्ञप्ति को इन भाषाओं में पढ़ें:
Bengali
,
Bengali-TR
,
English
,
Urdu
,
Marathi
,
हिन्दी
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam