ರೈಲ್ವೇ ಸಚಿವಾಲಯ
ಆಗ್ನೇಯ ರೈಲ್ವೆಯಾದ್ಯಂತ ಸುಮಾರು 1,700 ರೂಟ್ ಕಿಲೋಮೀಟರ್ ಗಳನ್ನು ಒಳಗೊಂಡ ₹200 ಕೋಟಿಯ ಆಪ್ಟಿಕಲ್ ಫೈಬರ್ ಕೇಬಲ್ ಯೋಜನೆಗೆ ಭಾರತೀಯ ರೈಲ್ವೆಖ ಅನುಮೋದನೆ ನೀಡಿದೆ
ವೇಗವಾದ ಮತ್ತು ಹೆಚ್ಚು ವಿಶ್ವಾಸಾರ್ಹ ರೈಲ್ವೆ ಸಂವಹನಗಳನ್ನು ಬಲಪಡಿಸಲು ಆದ್ರಾ, ಚಕ್ರಧರಪುರ, ಖರಗ್ ಪುರ ಮತ್ತು ರಾಂಚಿ ವಿಭಾಗಗಳಲ್ಲಿ 48-ಫೈಬರ್ ಒ.ಎಫ್.ಸಿ. ಮೂಲಸೌಕರ್ಯಗಳನ್ನು ಹಾಕಲಾಗುವುದು
प्रविष्टि तिथि:
30 JUN 2026 5:57PM by PIB Bengaluru
ಭಾರತೀಯ ರೈಲ್ವೆಯ ಡಿಜಿಟಲ್ಊ ಸಂವಹನ ಬೆನ್ನೆಲುಬನ್ನು ಬಲಪಡಿಸುವ ಮಹತ್ವದ ಹೆಜ್ಜೆಯಲ್ಲಿ, ಭಾರತೀಯ ರೈಲ್ವೆಯು ಆಗ್ನೇಯ ರೈಲ್ವೆ ವಲಯಾದ್ಯಂತ ₹200 ಕೋಟಿ ವೆಚ್ಚದಲ್ಲಿ ಬ್ಯಾಲೆನ್ಸ್ 48-ಫೈಬರ್ ಆಪ್ಟಿಕಲ್ ಫೈಬರ್ ಕೇಬಲ್ (ಒ.ಎಫ್.ಸಿ.) ಒದಗಿಸುವಿಕೆಯನ್ನು ಅನುಮೋದಿಸಿದೆ.
ಈ ಯೋಜನೆಯು ಆಗ್ನೇಯ ರೈಲ್ವೆಯ ನಾಲ್ಕು ಪ್ರಮುಖ ವಿಭಾಗಗಳಲ್ಲಿ 1,696.2 ರೂಟ್ ಕಿಲೋಮೀಟರ್(ಆರ್.ಕೆ.ಎಂ.)ಗಳಲ್ಲಿ 48-ಫೈಬರ್ ಒ.ಎಫ್.ಸಿ. ಸಂಪರ್ಕವನ್ನು ಒದಗಿಸುತ್ತದೆ, ಸುರಕ್ಷಿತ, ದಕ್ಷ ಮತ್ತು ತಂತ್ರಜ್ಞಾನ-ಚಾಲಿತ ರೈಲ್ವೆ ಕಾರ್ಯಾಚರಣೆಗಳನ್ನು ಬೆಂಬಲಿಸುವ ಸಂವಹನ ಜಾಲವನ್ನು ಬಲಪಡಿಸುತ್ತದೆ.
ಸಂವಹನದ ಬೆನ್ನೆಲುಬನ್ನು ಬಲಪಡಿಸುವುದು
ಅನುಮೋದಿತ ಕೆಲಸವು ಈ ಕೆಳಗಿನ ವಿಭಾಗಗಳಲ್ಲಿ ಒ.ಎಫ್.ಸಿ. ಅಳವಡಿಕೆಯನ್ನು ಒಳಗೊಂಡಿದೆ:
- ಆದ್ರಾ ವಿಭಾಗ: 545.4 ಆರ್.ಕೆ.ಎಂ.
- ಚಕ್ರಧರಪುರ ವಿಭಾಗ: 392.3 ಆರ್.ಕೆ.ಎಂ.
- ಖರಗ್‌ಪುರ ವಿಭಾಗ: 339.9 ಆರ್.ಕೆ.ಎಂ.
- ರಾಂಚಿ ವಿಭಾಗ: 418.6 ಆರ್.ಕೆ.ಎಂ.
ಒಟ್ಟಾರೆಯಾಗಿ, ಈ ಕೆಲಸಗಳು ಆಗ್ನೇಯ ರೈಲ್ವೆಯ 1,696.2 ರೂಟ್ ಕಿಲೋಮೀಟರ್ ಗಳಲ್ಲಿ ಸಂವಹನ ಮೂಲಸೌಕರ್ಯವನ್ನು ಬಲಪಡಿಸುತ್ತವೆ.
ಸುರಕ್ಷಿತ ಮತ್ತು ಆಧುನಿಕ ರೈಲ್ವೆ ಕಾರ್ಯಾಚರಣೆಗಳನ್ನು ಬೆಂಬಲಿಸುವುದು
ನವೀಕರಿಸಿದ ಫೈಬರ್ ಆಪ್ಟಿಕ್ ಬೆನ್ನೆಲುಬು ರೈಲ್ವೆ ಕಾರ್ಯಾಚರಣೆಗಳಿಗೆ ದೃಢವಾದ, ಹೆಚ್ಚಿನ ಸಾಮರ್ಥ್ಯದ ಸಂವಹನ ಜಾಲವನ್ನು ಒದಗಿಸುತ್ತದೆ. ಇದು ಸಂವಹನ ವ್ಯವಸ್ಥೆಗಳ ವಿಶ್ವಾಸಾರ್ಹತೆ ಮತ್ತು ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುತ್ತದೆ, ಕಾರ್ಯಾಚರಣೆಯ ದತ್ತಾಂಶದ ವೇಗದ ಪ್ರಸರಣವನ್ನು ಬೆಂಬಲಿಸುತ್ತದೆ ಮತ್ತು ನಿಲ್ದಾಣಗಳು, ನಿಯಂತ್ರಣ ಕಚೇರಿಗಳು ಮತ್ತು ಕ್ಷೇತ್ರ ಘಟಕಗಳ ನಡುವಿನ ಸಮನ್ವಯವನ್ನು ಸುಧಾರಿಸುತ್ತದೆ.
ಈ ಯೋಜನೆಯು ಆಧುನಿಕ ರೈಲ್ವೆ ತಂತ್ರಜ್ಞಾನಗಳನ್ನು ಬೆಂಬಲಿಸಲು, ಕಾರ್ಯಾಚರಣೆಯ ದಕ್ಷತೆಯನ್ನು ಸುಧಾರಿಸಲು ಮತ್ತು ಆಗ್ನೇಯ ರೈಲ್ವೆ ಜಾಲದಾದ್ಯಂತ ಭವಿಷ್ಯದ ಸಾಮರ್ಥ್ಯ ವಿಸ್ತರಣೆಗಾಗಿ ಡಿಜಿಟಲ್ ಅಡಿಪಾಯವನ್ನು ಬಲಪಡಿಸಲು ಅಗತ್ಯವಾದ ಸಂವಹನ ಮೂಲಸೌಕರ್ಯವನ್ನು ಒದಗಿಸುತ್ತದೆ.
ರಾಷ್ಟ್ರೀಯ ಜಾಲದಾದ್ಯಂತ ಸುರಕ್ಷಿತ, ಚುರುಕಾದ ಮತ್ತು ಹೆಚ್ಚು ಪರಿಣಾಮಕಾರಿ ರೈಲು ಕಾರ್ಯಾಚರಣೆಗಳನ್ನು ಖಚಿತಪಡಿಸಿಕೊಳ್ಳಲು, ಮುಂದುವರಿದ ಸಂವಹನ ವ್ಯವಸ್ಥೆಗಳ ಮೂಲಕ ನಿರ್ಣಾಯಕ ರೈಲ್ವೆ ಮೂಲಸೌಕರ್ಯವನ್ನು ಆಧುನೀಕರಿಸುವ ಭಾರತೀಯಟ ರೈಲ್ವೆಯ ನಿರಂತರ ಪ್ರಯತ್ನಗಳ ಒಂದು ಭಾಗವಾಗಿ ಈ ಅನುಮೋದನೆ ನೀಡಲಾಗಿದೆ.
*****
(रिलीज़ आईडी: 2279652)
आगंतुक पटल : 9