ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿ ಅವರಿಗೆ ಅಧ್ಯಕ್ಷೀಯ ಪ್ರಶಸ್ತಿ 'ಗಾರ್ಡಿಯನ್ ಆಫ್ ದಿ ಬ್ಲೂ ಹಾರಿಜಾನ್' ಗೌರವ ಪ್ರದಾನ
प्रविष्टि तिथि:
28 JUN 2026 3:07PM by PIB Bengaluru
ವಿಶೇಷ ಸಮಾರಂಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಸೀಶೆಲ್ಸ್ ಅಧ್ಯಕ್ಷರಾದ ಗೌರವಾನ್ವಿತ ಡಾ. ಪ್ಯಾಟ್ರಿಕ್ ಹರ್ಮಿನಿ ಅವರು ಇಂದು ಅಧ್ಯಕ್ಷೀಯ ಪ್ರಶಸ್ತಿ 'ಗಾರ್ಡಿಯನ್ ಆಫ್ ದಿ ಬ್ಲೂ ಹಾರಿಜಾನ್' ಪ್ರದಾನ ಮಾಡಿದರು. ಪ್ರಧಾನಮಂತ್ರಿಗಳಿಗೆ ಅವರ ಹಸಿರು ನಾಯಕತ್ವ, ಅಭಿವೃದ್ಧಿಶೀಲ ರಾಷ್ಟ್ರಗಳ ಹಿತಾಸಕ್ತಿಗಳನ್ನು ಮುನ್ನಡೆಸುವ ಪ್ರಯತ್ನಗಳು ಮತ್ತು ನೀಲಿ ಆರ್ಥಿಕತೆ, ಹವಾಮಾನ ನಿಯಂತ್ರಣ ಕ್ರಮಗಳು, ಸಾಗರ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆ ಮತ್ತು ಸಣ್ಣ ದ್ವೀಪ ಅಭಿವೃದ್ಧಿಶೀಲ ರಾಜ್ಯಗಳ ಅಭಿವೃದ್ಧಿಯ ಆಕಾಂಕ್ಷೆಗಳನ್ನು ಉತ್ತೇಜಿಸುವ ಅವರ ದೀರ್ಘಕಾಲದ ಬದ್ಧತೆಗಾಗಿ ಈ ಗೌರವವನ್ನು ನೀಡಲಾಗಿದೆ. ಈ ವಿಶಿಷ್ಟ ಗೌರವವನ್ನು ನೀಡುತ್ತಿರುವುದು ಇದೇ ಮೊದಲು.
ಪ್ರಧಾನಮಂತ್ರಿ ಅವರು ಈ ಗೌರವವನ್ನು ಪರಿಸರ ಸಂರಕ್ಷಣೆ ಮತ್ತು ಹವಾಮಾನ ವೈಪರೀತ್ಯಗಳ ವಿರುದ್ಧ ಹೋರಾಡಲು ಬದ್ಧವಾಗಿರುವ ಎಲ್ಲಾ ದೇಶಗಳಿಗೆ ಅರ್ಪಿಸಿದರು. ಎರಡೂ ದೇಶಗಳು ತಮ್ಮ ರಾಜತಾಂತ್ರಿಕ ಸಂಬಂಧಗಳ 50 ವರ್ಷಗಳನ್ನು ಆಚರಿಸುತ್ತಿರುವ ಸಮಯದಲ್ಲಿ ಈ ಮನ್ನಣೆಯು ವಿಶೇಷ ಸ್ನೇಹವನ್ನು ಮತ್ತಷ್ಟು ಹೆಚ್ಚಿಸುವಲ್ಲಿ ಬಹಳ ಸಹಾಯ ಮಾಡುತ್ತದೆ ಎಂದು ಅವರು ಒತ್ತಿ ಹೇಳಿದರು. ಅಂತಾರಾಷ್ಟ್ರೀಯ ಸೌರ ಒಕ್ಕೂಟ, ಮಿಷನ್ ಲೈಫ್ (ಪರಿಸರಕ್ಕಾಗಿ ಜೀವನಶೈಲಿ), ಏಕ್ ಪೆಡ್ ಮಾ ಕೆ ನಾಮ್ (ತಾಯಿಯ ಹೆಸೆರಿನಲ್ಲಿ ಒಂದು ಗಿಡ ನೆಡಿ), ಅಂತಾರಾಷ್ಟ್ರೀಯ ಬಿಗ್ ಕ್ಯಾಟ್ ಅಲೈಯನ್ಸ್ ಸೇರಿದಂತೆ ಹಸಿರು ಭೂಮಿಯ ಬಗ್ಗೆ ಪ್ರಧಾನಿಯವರ ದೀರ್ಘಕಾಲದ ಬದ್ಧತೆಯನ್ನು ಈ ಗೌರವವು ಗುರುತಿಸುತ್ತದೆ. ಈ ಮನ್ನಣೆಯು ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸಿದ್ದಕ್ಕಾಗಿ ಪ್ರಧಾನ ಮಂತ್ರಿಯವರಿಗೆ ನೀಡಲಾದ ಅಂತಹ ಗೌರವಗಳ ಸರಣಿಯಲ್ಲಿ ಇತ್ತೀಚಿನದು, ಇದರಲ್ಲಿ ಎಫ್ ಎಒ ನಿಂದ ಅಗ್ರಿಕೋಲಾ ಪದಕ, ಸಿಯೋಲ್ ಶಾಂತಿ ಪ್ರಶಸ್ತಿ ಮತ್ತು ವಿಶ್ವಸಂಸ್ಥೆಯ ಚಾಂಪಿಯನ್ ಆಫ್ ದಿ ಅರ್ಥ್ ಪ್ರಶಸ್ತಿ ಸೇರಿವೆ.
ಸಾಮರ್ಥ್ಯವೃದ್ಧಿ, ಪರಿಸರ ರಕ್ಷಣೆ ಕ್ರಮಗಳು, ಸುಸ್ಥಿರ ಅಭಿವೃದ್ಧಿ ಉಪಕ್ರಮಗಳು ಮತ್ತು ಹಿಂದೂ ಮಹಾಸಾಗರ ಪ್ರದೇಶದಾದ್ಯಂತ ಹಂಚಿಕೆಯ ಆದ್ಯತೆಗಳನ್ನು ಮುಂದುವರಿಸುವಲ್ಲಿ ವಿಶ್ವಾಸಾರ್ಹ ಪಾಲುದಾರನಾಗಿ ಭಾರತದ ಬೆಳೆಯುತ್ತಿರುವ ಪಾತ್ರಕ್ಕೆ ಸೀಶೆಲ್ಸ್ ನೀಡಿರುವ ಪ್ರಾಮುಖ್ಯತೆಯನ್ನು ಈ ಗೌರವವು ಒತ್ತಿಹೇಳುತ್ತದೆ.
*****
(रिलीज़ आईडी: 2278618)
आगंतुक पटल : 17