ಔಷಧೀಯ ಇಲಾಖೆ
azadi ka amrit mahotsav

ವೈದ್ಯಕೀಯ ಸಾಧನಗಳ ಜಾಗತಿಕ ಟೆಂಡರ್ ವಿಚಾರಣೆ (ಜಿಟಿಇ) ವಿನಾಯಿತಿ ಪಟ್ಟಿಗೆ ಪ್ರಸ್ತಾವಿತ ತಿದ್ದುಪಡಿಗಳಿಗೆ ಸಂಬಂಧಿತರ ಅಭಿಪ್ರಾಯ ಆಹ್ವಾನಿಸಿರುವ ಔಷಧ ಇಲಾಖೆ


ಸಂಬಂಧಿತರು ಟೀಕೆ ಟಿಪ್ಪಣಿ ಸಲ್ಲಿಸಲು 2026ರ ಜುಲೈ 15 ರವರೆಗೆ ಅವಕಾಶ

ಪ್ರಕಟಣಾ ದಿನಾಂಕ: 23 JUN 2026 3:34PM by PIB Bengaluru

ವೈದ್ಯಕೀಯ ಸಾಧನಗಳ ಜಾಗತಿಕ ಟೆಂಡರ್ ವಿಚಾರಣೆ (ಜಿಟಿಇ) ವಿನಾಯಿತಿ ಪಟ್ಟಿಗೆ ತಿದ್ದುಪಡಿ ಮಾಡಲು ಸ್ವೀಕರಿಸಲಾಗಿರುವ ಪ್ರಸ್ತಾವನೆಗಳ ಕುರಿತು ಔಷಧ ಇಲಾಖೆಯು ಪಾಲುದಾರರಿಂದ ಟೀಕೆ - ಟಿಪ್ಪಣಿ ಆಹ್ವಾನಿಸಿದೆ.

ಅಸ್ತಿತ್ವದಲ್ಲಿರುವ ಜಿಟಿಇ ವಿನಾಯಿತಿ ಪಟ್ಟಿಯ ಬಗ್ಗೆ ಪ್ರತಿಕ್ರಿಯೆಯನ್ನು ಕೋರಿ 2026ರ ಫೆಬ್ರವರಿ 11 ರಂದು ಸಾರ್ವಜನಿಕ ಸೂಚನೆಯನ್ನು ನೀಡಿದ ನಂತರ, ಇಲಾಖೆಯು ಪಟ್ಟಿಯ ಅಡಿಯಲ್ಲಿ ನಮೂದುಗಳ ಸೇರ್ಪಡೆ, ತೆಗೆದುಹಾಕುವಿಕೆ ಮತ್ತು/ಅಥವಾ ಮಾರ್ಪಾಡುಗಳನ್ನು ಕೋರಿ ವಿವಿಧ ಸಂಬಂಧಿತರಿಂದ ಪ್ರಸ್ತಾವನೆಗಳನ್ನು ಸ್ವೀಕರಿಸಿದೆ.

ಸ್ಥಳೀಯ ತಯಾರಕರು, ಆಮದುದಾರರು, ಕೈಗಾರಿಕಾ ಸಂಘಗಳು, ಖರೀದಿ ಸಂಸ್ಥೆಗಳು, ಆರೋಗ್ಯ ರಕ್ಷಣಾ ಸಂಸ್ಥೆಗಳು ಸೇರಿದಂತೆ ಎಲ್ಲಾ ಸಂಬಂಧಪಟ್ಟ ಪಾಲುದಾರರು, 2026ರ ಜುಲೈ 15 ರೊಳಗೆ ತಮ್ಮ ಸಲಹೆ - ಆಕ್ಷೇಪಗಳನ್ನು ಪೂರಕ ಮಾಹಿತಿಯೊಂದಿಗೆ usmedicaldevices@pharma-dept.gov.in ಗೆ ಇಮೇಲ್  ಕಳುಹಿಸಬಹುದಾಗಿದೆ. ಇ-ಮೇಲ್ ವಿಳಾಸ so-medicaldevices@pharma-dept.gov.in ಗೂ‌ ಪ್ರತಿ ಕಳುಹಿಸುವಂತೆ ಕೋರಲಾಗಿದೆ. 

ಹೆಚ್ಚಿನ ವಿಸ್ತೃತ ಮಾಹಿತಿ ಜಾಲಾತಾಣ https://pharma-dept.gov.in/ನಲ್ಲಿ ಲಭ್ಯ.

ತಿದ್ದುಪಡಿಗಳ ಪ್ರಸ್ತಾವನೆಗಳ ಸಂಪೂರ್ಣ ಪಟ್ಟಿಯನ್ನು ನೋಡಲು, ದಯವಿಟ್ಟು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:

https://acrobat.adobe.com/id/urn:aaid:sc:AP:af2bd2ba-945f-474a-9762-795547f0a09f

 

*****


(ಪ್ರಕಟಣೆ ಐ.ಡಿ.: 2277066) ವಿಸಿಟರ್ ಕೌಂಟರ್ : 48
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Tamil , Telugu