ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪಹಾಡ್‌ಪುರದಲ್ಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಕುಟುಂಬದ ಸದಸ್ಯರ ಸಮಾಧಿ ಸ್ಥಳಕ್ಕೆ ಪುಷ್ಪ ನಮನ ಸಲ್ಲಿಸಿದ ಪ್ರಧಾನಮಂತ್ರಿ

प्रविष्टि तिथि: 20 JUN 2026 8:47PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಪಹಾಡ್‌ಪುರದ ಶಾಲಾ ಆವರಣದಲ್ಲಿರುವ ದಿವಂಗತ ಶ್ರೀ ಶ್ಯಾಮ್ ಚರಣ್ ಮುರ್ಮು, ದಿವಂಗತ ಶ್ರೀ ಲಖನ್ ಮುರ್ಮು ಮತ್ತು ದಿವಂಗತ ಶ್ರೀ ಸಿಪುನ್ ಮುರ್ಮು ಅವರ ಸಮಾಧಿ ಸ್ಥಳಕ್ಕೆ ಪುಷ್ಪ ನಮನ ಸಲ್ಲಿಸಿದರು.

ವೈಯಕ್ತಿಕ ದುರಂತಗಳ ನಡುವೆಯೂ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ತೋರಿಸಿದ ಧೈರ್ಯ ಮತ್ತು ದೃಢಸಂಕಲ್ಪ ಎಲ್ಲರಿಗೂ ಸ್ಪೂರ್ತಿದಾಯಕವಾಗಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು.

ಅವರ ವೈಯಕ್ತಿಕ ಅನುಭವಗಳು ಸಾರ್ವಜನಿಕ ಸೇವೆ ಮತ್ತು ಜನರ ಜೀವನವನ್ನು ಸುಧಾರಿಸುವಲ್ಲಿ ಅವರ ಬದ್ಧತೆಯನ್ನು ಮತ್ತಷ್ಟು ಆಳಗೊಳಿಸಿವೆ ಎಂದು ಶ್ರೀ ಮೋದಿಯವರು ಉಲ್ಲೇಖಿಸಿದ್ದಾರೆ.

ಪ್ರಧಾನಮಂತ್ರಿಯವರು X ನಲ್ಲಿ ಹೀಗೆ ಬರೆದಿದ್ದಾರೆ;

"ಪಹಾಡ್‌ಪುರದ ಶಾಲಾ ಆವರಣದಲ್ಲಿ, ದಿವಂಗತ ಶ್ರೀ ಶ್ಯಾಮ್ ಚರಣ್ ಮುರ್ಮು, ದಿವಂಗತ ಶ್ರೀ ಲಖನ್ ಮುರ್ಮು ಮತ್ತು ದಿವಂಗತ ಶ್ರೀ ಸಿಪುನ್ ಮುರ್ಮು ಅವರ ಸಮಾಧಿ ಸ್ಥಳಕ್ಕೆ ಪುಷ್ಪ ನಮನ ಸಲ್ಲಿಸಿದೆ.

ವೈಯಕ್ತಿಕ ದುರಂತಗಳ ನಡುವೆಯೂ ರಾಷ್ಟ್ರಪತಿಯವರು ತೋರಿಸಿದ ಧೈರ್ಯ ಮತ್ತು ದೃಢಸಂಕಲ್ಪ ಸ್ಪೂರ್ತಿದಾಯಕವಾಗಿದೆ. ಅವರ ವೈಯಕ್ತಿಕ ಅನುಭವಗಳು ಸಾರ್ವಜನಿಕ ಸೇವೆ ಮತ್ತು ಜನರ ಜೀವನವನ್ನು ಸುಧಾರಿಸುವಲ್ಲಿ ಅವರ ಬದ್ಧತೆಯನ್ನು ಮತ್ತಷ್ಟು ಆಳಗೊಳಿಸಿವೆ.

@rashtrapatibhvn"

 

*****


(रिलीज़ आईडी: 2276596) आगंतुक पटल : 7
इस विज्ञप्ति को इन भाषाओं में पढ़ें: English , Urdu , हिन्दी , Marathi , Manipuri , Bengali , Bengali-TR , Assamese , Punjabi , Gujarati , Tamil , Telugu , Malayalam