ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ನವದೆಹಲಿಯ ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ 12ನೇ ಅಂತಾರಾಷ್ಟ್ರೀಯ ಯೋಗದ ದಿನದ ಅಂಗವಾಗಿ ಯೋಗಾಭ್ಯಾಸ ಕಾರ್ಯಕ್ರಮ


"ಯೋಗ ಪ್ರತಿಯೊಬ್ಬರ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಬೇಕು, ಈ ಆಚರಣೆ ವಾರ್ಷಿಕ ಒಂದು ದಿನಕ್ಕೆ ಸೀಮಿತವಾಗಬಾರದು": ಶ್ರೀ ಚಂಚಲ್ ಕುಮಾರ್

प्रविष्टि तिथि: 21 JUN 2026 12:34PM by PIB Bengaluru

12ನೇ ಅಂತಾರಾಷ್ಟ್ರೀಯ ಯೋಗದ ದಿನ-2026 ಅಂಗವಾಗಿ ನವದೆಹಲಿಯ ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿಂದು ಯೋಗಾಭ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಾರ್ತಾ ಮತ್ತು ಪ್ರಸಾರ ಸಚಿವಾಲಯ ಕಾರ್ಯದರ್ಶಿ ಶ್ರೀ ಚಂಚಲ್ ಕುಮಾರ್ ನೇತೃತ್ವದಲ್ಲಿ ಯೋಗ ದಿನಾಚರಣೆ ಕಾರ್ಯಕ್ರಮ ನಡೆಯಿತು ಮತ್ತು ಅದರಲ್ಲಿ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಹಾಗೂ ಭಾರತೀಯ ಪತ್ರಿಕಾ ಶಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು. 12ನೇ ಅಂತಾರಾಷ್ಟ್ರೀಯ ಯೋಗದ ದಿನದ ಈ ವರ್ಷದ ಘೋಷ ವಾಕ್ಯ “ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ” ಎಂಬುದಾಗಿದ್ದು, ಅದಕ್ಕೆ ಅನುಗುಣವಾಗಿ ಯೋಗ ದಿನ ಆಚರಿಸಲಾಯಿತು.

ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಕಾರ್ಯದರ್ಶಿ ಶ್ರೀ ಚಂಚಲ್ ಕುಮಾರ್ ಈ ಸಂದರ್ಭದಲ್ಲಿ ಮಾತನಾಡಿ, ಯೋಗ ದಿನಾಚರಣೆ ವಾರ್ಷಿಕ ಆಚರಣೆಗೆ ಸೀಮಿತವಾಗಬಾರದು, ಅದನ್ನು ದೈನಂದಿನ ಜೀವನದ ಭಾಗವನ್ನಾಗಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ದೇಹದ ಸಮಗ್ರ ಅಭಿವೃದ್ಧಿಗೆ ನಿಯಮಿತವಾಗಿ ಯೋಗಾಭ್ಯಾಸವನ್ನು ರೂಢಿಸಿಕೊಳ್ಳುವುದು ಅತ್ಯಗತ್ಯ ಮತ್ತು ಇದು ವೈಯಕ್ತಿಕ ಮತ್ತು ವೃತ್ತಿಪರ ಯೋಗಕ್ಷೇಮಕ್ಕೂ ಗಣನೀಯ ಕೊಡುಗೆ ನೀಡುತ್ತದೆ ಎಂದರು. ಯೋಗ ಎಲ್ಲಾ ವೃತ್ತಿಪರರು ಮತ್ತು ಎಲ್ಲಾ ವಯೋಮಾನದವರಿಗೂ ಸೂಕ್ತವಾದದು ಎಂದ ಅವರು, ಸಾರ್ವಜನಿಕರು ತಮ್ಮ ಪ್ರತಿನಿತ್ಯದ ಜೀವನದಲ್ಲಿ ಅದನ್ನು ಅಳವಡಿಸಿಕೊಂಡು ಮೌಲ್ಯಗಳನ್ನು ಪಾಲಿಸಬೇಕು. ಅದನ್ನು ಒಂದೇ ದಿನಕ್ಕೆ ಸೀಮಿತಗೊಳಿಸಬಾರದು ಎಂದರು.

ತರಬೇತಿ ಪಡೆದ ಯೋಗ ಮಾರ್ಗದರ್ಶಕರ ನೇತೃತ್ವದಲ್ಲಿ ಯೋಗದ ಹಲವು ಆಸನಗಳನ್ನು, ಉಸಿರಾಟದ ತಂತ್ರಗಳನ್ನು ಪ್ರಾಣಾಯಾಮ ಮತ್ತು ಧ್ಯಾನ ಚಟುವಟಿಕೆಗಳನ್ನು ನಡೆಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು ಸಾಮಾನ್ಯ ಯೋಗ ಶಿಷ್ಟಾಚಾರದಂತೆ ಅತ್ಯುತ್ಸಾಹದಿಂದ ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸಿ, ಆರೋಗ್ಯ ಮತ್ತು ಸ್ವಾಸ್ಥ್ಯಕ್ಕೆ ತಮ್ಮ ಬದ್ಧತೆಯನ್ನು ಪುನರುಚ್ಛರಿಸಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಂಡಿಸಿದ್ದ ಪ್ರಸ್ತಾವವನ್ನು ವಿಶ್ವಸಂಸ್ಥೆಯ ಮಹಾಧಿವೇಶನ 2014ರಲ್ಲಿ ಅಳವಡಿಸಿಕೊಂಡು ಪ್ರತಿವರ್ಷ ಜೂನ್ 21ಅನ್ನು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಅಂಗೀಕರಿಸಿತು. ಆನಂತರ ಹಲವು ವರ್ಷಗಳಿಂದ ಈ ಯೋಗ ದಿನಾಚರಣೆ ಜಾಗತಿಕ ಆಂದೋಲನವಾಗಿ ರೂಪುಗೊಂಡಿರುವುದೇ ಅಲ್ಲದೆ, ಯೋಗದ ಪ್ರಾಮುಖ್ಯತೆಯನ್ನು ಮತ್ತು ಅದು ದೈಹಕ ಕ್ಷಮತೆ, ಮಾನಸಿಕ ಆರೋಗ್ಯ ಮತ್ತು ಸಮಗ್ರ ಆರೋಗ್ಯ ಕಾಪಾಡುವುದನ್ನು ಪ್ರತಿಬಿಂಬಿಸುತ್ತಿದೆ.

 

*****


(रिलीज़ आईडी: 2276081) आगंतुक पटल : 13
इस विज्ञप्ति को इन भाषाओं में पढ़ें: English , हिन्दी , Urdu , Tamil