ಪ್ರಧಾನ ಮಂತ್ರಿಯವರ ಕಛೇರಿ
2047ರ ವೇಳೆಗೆ ವಿಕಸಿತ ಭಾರತ ನಿರ್ಮಿಸುವಲ್ಲಿ ಯುವಜನರ ಪಾತ್ರದ ಕುರಿತಾದ ಲೇಖನ ಹಂಚಿಕೊಂಡಿರುವ ಪ್ರಧಾನಮಂತ್ರಿ
प्रविष्टि तिथि:
18 JUN 2026 2:40PM by PIB Bengaluru
ಕೇಂದ್ರ ಸಚಿವರಾದ ಶ್ರೀ ಮನ್ಸುಖ್ ಮಾಂಡವೀಯ ಅವರು ಬರೆದಿರುವ ಲೇಖನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದಾರೆ.
ಕಳೆದ 12 ವರ್ಷಗಳಲ್ಲಿನ ಭಾರತದ ರೂಪಾಂತರದ ಗಾಥೆಯು ಅದರ ಯುವಜನರ ಕಥೆಯೂ ಆಗಿದೆ ಎಂದು ಲೇಖನ ವಿವರಿಸಿದೆ. ಕೌಶಲ್ಯ, ನಾವೀನ್ಯತೆ ಮತ್ತು ಉದ್ಯಮಶೀಲತೆಯಲ್ಲಿ ಅಭೂತಪೂರ್ವ ಹೂಡಿಕೆಗಳಿಂದ ಬೆಂಬಲಿತವಾದ ದೃಷ್ಟಿಕೋನದಿಂದ ಮಾರ್ಗದರ್ಶಿಸಲ್ಪಟ್ಟು ಅಮೃತ ಪೀಳಿಗೆಯು ತಮ್ಮ ಆಕಾಂಕ್ಷೆಗಳನ್ನು ಸಾಕಾರಗೊಳಿಸಲು ಮತ್ತು ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಲು ಅವಕಾಶಗಳನ್ನು ಸೃಷ್ಟಿಸಲಾಗುತ್ತಿದೆ ಎಂದು ಲೇಖನ ತಿಳಿಸಿದೆ. 2047ರ ವಿಕಸಿತ ಭಾರತವನ್ನು ನಿರ್ಮಿಸುವಲ್ಲಿ ಯುವ ಭಾರತದ ಪಾತ್ರವನ್ನು ಲೇಖನ ವಿಸ್ತಾರವಾಗಿ ತಿಳಿಸಿದೆ.
ಪ್ರಧಾನಮಂತ್ರಿಗಳ ಕಚೇರಿಯು ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದೆ:
"ಕಳೆದ 12 ವರ್ಷಗಳಲ್ಲಿನ ಭಾರತದ ಪರಿವರ್ತನಾ ಗಾಥೆಯು ಅದರ ಯುವಸಮೂಹದ ಕಥೆಯೂ ಆಗಿದೆ. ನಮ್ಮ ಮುನ್ನೋಟದೊಂದಿಗೆ ಕೌಶಲ್ಯ, ನಾವೀನ್ಯತೆ ಮತ್ತೊಂದು ಉದ್ಯಮಶೀಲತೆಯಲ್ಲಿ ಅಭೂತಪೂರ್ವ ಹೂಡಿಕೆಗಳಿಂದ ಮಾರ್ಗದರ್ಶಿಸಲ್ಪಟ್ಟು, ನಾವು ಅಮೃತ್ ಪೀಳಿಗೆಯ ಆಕಾಂಕ್ಷೆಗಳನ್ನು ಸಾಕಾರಗೊಳಿಸಲು ಮತ್ತು ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಲು ಅವಕಾಶಗಳನ್ನು ಸೃಷ್ಟಿಸುತ್ತಿದ್ದೇವೆ.
ವಿಕಸಿತ ಭಾರತ 2047 ಅನ್ನು ನಿರ್ಮಿಸುವಲ್ಲಿ ಯುವ ಭಾರತದ ಪಾತ್ರ ಕುರಿತಂತೆ ಕೇಂದ್ರ ಸಚಿವರಾದ ಶ್ರೀ @mansukhmandviya ಅವರ ಒಳನೋಟವುಳ್ಳ ಲೇಖನ!"
*****
(रिलीज़ आईडी: 2274682)
आगंतुक पटल : 12