MIFF banner

19ನೇ ಮುಂಬೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಮುಂಬೈನಲ್ಲಿ ಚಾಲನೆ; ಸಿನಿಮಾದಲ್ಲಿನ ಜಾಗತಿಕ ಧ್ವನಿಗಳನ್ನು ಒಗ್ಗೂಡಿಸಿತು

ಸಾಕ್ಷ್ಯಚಿತ್ರ, ಕಿರುಚಿತ್ರ, ಅನಿಮೇಷನ್ ಮತ್ತು ಎಐ (ಕೃತಕ ಬುದ್ಧಿಮತ್ತೆ) ಆಧಾರಿತ ಚಿತ್ರಗಳ ಭಾರತದ ಪ್ರತಿಷ್ಠಿತ ಚಲನಚಿತ್ರೋತ್ಸವವಾದ 'ಮುಂಬೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ'ದ (ಎಂಐಎಫ್ ಎಫ್) 19ನೇ ಆವೃತ್ತಿಗೆ ಇಂದು ಮುಂಬೈನ ರವೀಂದ್ರ ನಾಟ್ಯ ಮಂದಿರದಲ್ಲಿ ಅದ್ಧೂರಿ ಉದ್ಘಾಟನಾ ಸಮಾರಂಭದೊಂದಿಗೆ ಚಾಲನೆ ನೀಡಲಾಯಿತು.

ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿ ಬರುವ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (ಎನ್ ಎಫ್ ಡಿ ಸಿ) ಆಯೋಜಿಸಿರುವ ಎಂ ಐ ಎಫ್ ಎಫ್, ಚಲನಚಿತ್ರೇತರ  ಚಿತ್ರಗಳಿಗಾಗಿ ಮೀಸಲಾದ ದಕ್ಷಿಣ ಏಷ್ಯಾದ ಅತ್ಯಂತ ಹಳೆಯ ಮತ್ತು ಅತಿ ದೊಡ್ಡ ಚಲನಚಿತ್ರೋತ್ಸವವಾಗಿದೆ. ಗಡಿಗಳಿಲ್ಲದ ಈ ಸಾಂಸ್ಕೃತಿಕ ಮತ್ತು ಸಿನೆಮಾ ಹಬ್ಬವು ಸಾಕ್ಷ್ಯಚಿತ್ರ, ಕಿರುಚಿತ್ರ, ಅನಿಮೇಷನ್ ಮತ್ತು ಎಐ ತಂತ್ರಜ್ಞಾನದ ಕಥೆ ಹೇಳುವಿಕೆಯಲ್ಲಿನ ಶ್ರೇಷ್ಠತೆಯನ್ನು ಸಂಭ್ರಮಿಸಲು ಪ್ರಪಂಚದೆಲ್ಲೆಡಿಗಿನ ಚಲನಚಿತ್ರ ನಿರ್ಮಾಪಕರು, ಚಿತ್ರರಂಗದ ತಜ್ಞರು ಮತ್ತು ಚಲನಚಿತ್ರ ಪ್ರೇಮಿಗಳನ್ನು ಒಂದೆಡೆ ಸೇರಿಸುತ್ತದೆ.

ಉದ್ಘಾಟನಾ ದಿನದಂದು ಗಣ್ಯ ಅತಿಥಿಗಳು, ಚಲನಚಿತ್ರ ನಿರ್ಮಾಪಕರು ಮತ್ತು ಪ್ರತಿನಿಧಿಗಳು ಆಗಮಿಸಿದರು. ನಂತರ ಚಲನಚಿತ್ರ ಮತ್ತು ಸಾಂಸ್ಕೃತಿಕ ಕ್ಷೇತ್ರದ ಗಣ್ಯ ವ್ಯಕ್ತಿಗಳ ಸಮ್ಮುಖದಲ್ಲಿ ಉದ್ಘಾಟನಾ ಸಮಾರಂಭ ನೆರವೇರಿತು.

19ನೇ ಎಂ ಐ ಎಫ್ ಎಫ್ ನ ಉದ್ಘಾಟನಾ ಸಮಾರಂಭದ ಕೆಂಪು ಹಾಸಿನ ಮೇಲೆ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಚಂಚಲ್ ಕುಮಾರ್ ಮತ್ತು ಖ್ಯಾತ ಚಲನಚಿತ್ರ ನಿರ್ಮಾಪಕ ಹಾಗೂ ನಿರ್ದೇಶಕ ಡಾ. ಚಂದ್ರಪ್ರಕಾಶ್ ದ್ವಿವೇದಿ

19ನೇ ಎಂ ಐ ಎಫ್ ಎಫ್ ನ ಉದ್ಘಾಟನಾ ದಿನದ  ಸಂಜೆಯಂದು ಮಹಾರಾಷ್ಟ್ರದ ಸಾಂಸ್ಕೃತಿಕ ವ್ಯವಹಾರಗಳು ಮತ್ತು ಐಟಿ ಸಚಿವರಾದ ಶ್ರೀ ಆಶಿಶ್ ಶೆಲಾರ್ ಮತ್ತು ಮರಾಠಿ ಭಾಷಾ ಇಲಾಖೆಯ ಕಾರ್ಯದರ್ಶಿ ಡಾ. ಕಿರಣ್ ಕುಲಕರ್ಣಿ

19ನೇ ಎಂ ಐ ಎಫ್ ಎಫ್ ನ   ಉದ್ಘಾಟನಾ ಸಮಾರಂಭದ ಕೆಂಪು ಹಾಸಿನ ಮೇಲೆ ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವರಾದ ಡಾ. ಎಲ್. ಮುರುಗನ್, ಎನ್ ಎಫ್ ಡಿ ಸಿ  ಅಧ್ಯಕ್ಷರಾದ ಶ್ರೀ ಜಿ. ಕೃಷ್ಣಕುಮಾರ್ ಮತ್ತು ಎನ್ ಎಫ್ ಡಿ ಸಿ  ವ್ಯವಸ್ಥಾಪಕ ನಿರ್ದೇಶಕ ಶ್ರೀ ಪ್ರಕಾಶ್ ಮಗ್ದುಮ್

19ನೇ ಎಂ ಐ ಎಫ್ ಎಫ್ ನ ಉದ್ಘಾಟನಾ ಸಮಾರಂಭವನ್ನು ತಮ್ಮ ಉಪಸ್ಥಿತಿಯಿಂದ ಅಲಂಕರಿಸಿದ  ಪ್ರಸಿದ್ಧ ಚಲನಚಿತ್ರ ನಿರ್ಮಾಪಕ ಮತ್ತು ವಿ. ಶಾಂತಾರಾಮ್ ಅವರ ಪುತ್ರ ಶ್ರೀ ಕಿರಣ್ ಶಾಂತಾರಾಮ್

19ನೇ ಎಂ ಐ ಎಫ್ ಎಫ್ ನ ಉದ್ಘಾಟನಾ ಸಮಾರಂಭದ ಕೆಂಪು ಹಾಸಿನ ಮೇಲೆ ಆಗಮಿಸಿದ ಪ್ರಖ್ಯಾತ ಚಲನಚಿತ್ರ ನಿರ್ಮಾಪಕ ಶ್ರೀ ಅಶುತೋಷ್ ಗೋವಾರಿಕರ್ ಮತ್ತು ಇಫಿ  ನಿರ್ದೇಶಕರು

19ನೇ ಎಂ ಐ ಎಫ್ ಎಫ್ ನ ಉದ್ಘಾಟನಾ ಸಮಾರಂಭದ ಕೆಂಪು ಹಾಸಿನ ಮೇಲೆ ಆಗಮಿಸಿದ ಪ್ರಸಿದ್ಧ ಚಲನಚಿತ್ರ ನಟ ಶ್ರೀ ಜೈದೀಪ್ ಅಹ್ಲಾವತ್ ಮತ್ತು ನಟಿ ಕುಮಾರಿ ಶೀನಾ ಚೋಹನ್

19ನೇ ಎಂ ಐ ಎಫ್ ಎಫ್ ನ ಅದ್ಧೂರಿ ಉದ್ಘಾಟನೆಯ ಕೆಂಪು ಹಾಸಿನ ಮೇಲೆ ಸಂವಾದ ನಡೆಸುತ್ತಿರುವ ಪಿಐಬಿ ಮುಂಬೈನ ಮಹಾನಿರ್ದೇಶಕರಾದ ಶ್ರೀಮತಿ ಸ್ಮಿತಾ ವತ್ಸ್ ಶರ್ಮಾ

ಉದ್ಘಾಟನಾ ಸಮಾರಂಭದ ನೋಟ

19ನೇ ಎಂ ಐ ಎಫ್ ಎಫ್ ನ   ಉದ್ಘಾಟನಾ ಸಮಾರಂಭದಲ್ಲಿ ನೆರೆದಿದ್ದವರನ್ನು ಉದ್ದೇಶಿಸಿ ಮಾತನಾಡುತ್ತಿರುವ ಪ್ರಸಿದ್ಧ ಚಲನಚಿತ್ರ ನಟ ಶ್ರೀ ಜೈದೀಪ್ ಅಹ್ಲಾವತ್

19ನೇ ಎಂ ಐ ಎಫ್ ಎಫ್ ನ ಉದ್ಘಾಟನಾ ಸಮಾರಂಭದಲ್ಲಿ ಸಭಿಕರನ್ನು ಉದ್ದೇಶಿಸಿ ಮಾತನಾಡುತ್ತಿರುವ ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವರಾದ ಡಾ. ಎಲ್. ಮುರುಗನ್

 

*****


Great films resonate through passionate voices. Share your love for cinema with #MIFF2026. Tag us @pibmumbai on X, and we'll help spread your passion! For journalists, bloggers, and vloggers wanting to connect with filmmakers for interviews/interactions, reach out to us at miff.mediadesk@pib.gov.in with the subject line: Take One with PIB.


रिलीज़ आईडी: 2273401   |   Visitor Counter: 13