ರೈಲ್ವೇ ಸಚಿವಾಲಯ
azadi ka amrit mahotsav

ಉತ್ತರ ರೈಲ್ವೆಯ ಅಂಬಾಲ ವಿಭಾಗಕ್ಕೆ ಕವಚ್ ಯೋಜನೆಗೆ 201 ಕೋಟಿ ರೂ. ಅನುಮೋದನೆ ನೀಡಿದ ಭಾರತೀಯ ರೈಲ್ವೆ


ಅಂಬಾಲ ಕಂಟೋನ್ಮೆಂಟ್–ಲುಧಿಯಾನ, ಕಲ್ಕಾ–ಚಂಡೀಗಢ–ನ್ಯೂ ಮೊರಿಂಡಾ–ಸಹ್ನೆವಾಲ್ ಮತ್ತು ಹರಿಯಾಣ, ಪಂಜಾಬ್ ಮತ್ತು ಹಿಮಾಚಲ ಪ್ರದೇಶದಾದ್ಯಂತ ಇತರ ಪ್ರಮುಖ ಮಾರ್ಗಗಳನ್ನು ಒಳಗೊಳ್ಳಲಿರುವ ಕವಚ್

प्रविष्टि तिथि: 15 JUN 2026 2:27PM by PIB Bengaluru

ಭಾರತೀಯ ರೈಲ್ವೆ, ರೈಲ್ವೆ ಸುರಕ್ಷತೆಯನ್ನು ಬಲಪಡಿಸುವತ್ತ ಒಂದು ಪ್ರಮುಖ ಕ್ರಮವಾಗಿ, ಉತ್ತರ ರೈಲ್ವೆಯ ಅಂಬಾಲ ವಿಭಾಗದ ಉಳಿದ ಬ್ರಾಡ್‌ಗೇಜ್ ವಿಭಾಗಗಳಲ್ಲಿ ಕವಚ್ ಅಳವಡಿಸಲು ಅನುಮೋದನೆ ನೀಡಿದೆ. ಈ ಯೋಜನೆಯು 811 ರೂಟ್ ಕಿಲೋಮೀಟರ್‌ಗಳನ್ನು ಒಳಗೊಂಡಿದೆ ಮತ್ತು 201 ಕೋಟಿ ರೂ.ವೆಚ್ಚವನ್ನು ಮಂಜೂರು ಮಾಡಲಾಗಿದೆ. ಭಾರತೀಯ ರೈಲ್ವೆಯ ಉಳಿದ ಮಾರ್ಗಗಳಲ್ಲಿ ಎಲ್ ಟಿ ಇ-ಆಧಾರಿತ ಸಂವಹನ ಬೆನ್ನೆಲುಬಿನೊಂದಿಗೆ ಕವಚ್ ಒದಗಿಸಲು ಹಲವು ಕಾಮಗಾರಿಗಳ ಕಾರ್ಯಕ್ರಮದಡಿಯಲ್ಲಿ ಈ ಕಾರ್ಯವನ್ನು ಅನುಮೋದಿಸಿದೆ.

ಮಂಜೂರು ಮಾಡಿದ ಕಾಮಗಾರಿಯು ಅಂಬಾಲ ಕಂಟೋನ್ಮೆಂಟ್–ಲುಧಿಯಾನ, ಕಲ್ಕಾ–ಚಂಡೀಗಢ–ನ್ಯೂ ಮೊರಿಂಡಾ–ಸಹ್ನೆವಾಲ್, ಸಿರ್ಹಿಂದ್–ದೌಲತ್‌ಪುರ್ ಚೌಕ್, ರಾಜ್‌ಪುರ–ಭಟಿಂಡಾ–ಶ್ರೀ ಗಂಗಾನಗರ ಮತ್ತು ಲುಧಿಯಾನ–ಧುರಿ–ಜಖಲ್ ವಿಭಾಗಗಳನ್ನು ಒಳಗೊಂಡಂತೆ ಅಂಬಾಲ ವಿಭಾಗದ ಪ್ರಮುಖ ರೈಲು ಮಾರ್ಗಗಳನ್ನು ಒಳಗೊಂಡಿದೆ.

ಈ ಮಾರ್ಗಗಳು ಹರಿಯಾಣ,ಪಂಜಾಬ್ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳನ್ನು ಸಂಪರ್ಕಿಸುವ ಪ್ರಮುಖ ರೈಲು ಕಾರಿಡಾರ್‌ಗಳಾಗಿ ಕಾರ್ಯನಿರ್ವಹಿಸುತ್ತವೆ. ಅವು ಗಣನೀಯ ಪ್ರಮಾಣದ ಪ್ರಯಾಣಿಕ ಮತ್ತು ಸರಕು ಸಾಗಣೆಯನ್ನು ನಿರ್ವಹಿಸುತ್ತವೆ ಮತ್ತು ಪ್ರದೇಶದಾದ್ಯಂತ ಜನರು ಮತ್ತು ಸರಕುಗಳ ಚಲನೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ.

ಕವಚ್ ಎಂಬುದು ಕಾರ್ಯಾಚರಣೆಯ ಸುರಕ್ಷತೆಯನ್ನು ಹೆಚ್ಚಿಸಲು ಸ್ಥಳೀಯವಾಗಿ ವಿನ್ಯಾಸ ಮತ್ತು ಅಭಿವೃದ್ಧಿಪಡಿಸಲಾದ ಸ್ವಯಂಚಾಲಿತ ರೈಲು ರಕ್ಷಣೆ (ಎಟಿಪಿ) ವ್ಯವಸ್ಥೆಯಾಗಿದೆ. ಇದು ಅಪಾಯದಲ್ಲಿ ಸಿಗ್ನಲ್ ಹಾದುಹೋಗುವುದನ್ನು ತಡೆಯಲು ಸಹಾಯ ಮಾಡುತ್ತದೆ (ಎಸ್ ಪಿಎಡಿ), ಅಸುರಕ್ಷಿತ ಸಂದರ್ಭಗಳನ್ನು ತಪ್ಪಿಸಲು ಅಗತ್ಯವಿದ್ದಾಗ ಸ್ವಯಂಚಾಲಿತವಾಗಿ ಬ್ರೇಕ್‌ಗಳನ್ನು ಅನ್ವಯಿಸುತ್ತದೆ, ನಿರ್ಣಾಯಕ ಪರಿಸ್ಥಿತಿಗಳಲ್ಲಿ ರೈಲು ವೇಗವನ್ನು ನಿಯಂತ್ರಿಸುತ್ತದೆ ಮತ್ತು ಮುಖಾಮುಖಿ ಢಿಕ್ಕಿಯಾಗುವ ಅಪಾಯವನ್ನು ಗಮನಾರ್ಹವಾಗಿ ತಗ್ಗಿಸುತ್ತದೆ.

ಭಾರತೀಯ ರೈಲ್ವೆ, ಹೆಚ್ಚಿನ ಸಾಂದ್ರತೆ ಮತ್ತು ಕಾರ್ಯತಂತ್ರದ ಪ್ರಮುಖ ಮಾರ್ಗಗಳಲ್ಲಿ ಸುರಕ್ಷತೆ, ವಿಶ್ವಾಸಾರ್ಹತೆ ಮತ್ತು ಸಾಮರ್ಥ್ಯವನ್ನು ಸುಧಾರಿಸುವ ನಿರಂತರ ಪ್ರಯತ್ನಗಳ ಭಾಗವಾಗಿ ತನ್ನ ಜಾಲದಾದ್ಯಂತ ಹಂತಹಂತವಾಗಿ ಕವಚ್ ಅನ್ನು ವಿಸ್ತರಣೆ ಮಾಡುತ್ತಿದೆ.

 

*****


(रिलीज़ आईडी: 2272958) आगंतुक पटल : 13
इस विज्ञप्ति को इन भाषाओं में पढ़ें: English , Urdu , हिन्दी , Gujarati , Tamil , Telugu