ರೈಲ್ವೇ ಸಚಿವಾಲಯ
ಗುಜರಾತ್‌ನ ಅಹಮದಾಬಾದ್ ವಿಭಾಗಕ್ಕೆ ಕವಚ್ ಯೋಜನೆಗೆ 140 ಕೋಟಿ ರೂ. ಅನುಮೋದನೆ ನೀಡಿದ ಭಾರತೀಯ ರೈಲ್ವೆ
प्रविष्टि तिथि:
15 JUN 2026 2:25PM by PIB Bengaluru
ರೈಲು ಸುರಕ್ಷತೆಯನ್ನು ಹೆಚ್ಚಿಸುವ ಮಹತ್ವದ ಕ್ರಮವಾಗಿ ಭಾರತೀಯ ರೈಲ್ವೆ, ಗುಜರಾತ್‌ನ ಪಶ್ಚಿಮ ರೈಲ್ವೆಯ ಅಹಮದಾಬಾದ್ ವಿಭಾಗದ 48 ಬ್ಲಾಕ್ ವಿಭಾಗಗಳನ್ನು ಒಳಗೊಂಡ 598 ಮಾರ್ಗ ಕಿಲೋಮೀಟರ್‌ಗಳಲ್ಲಿ ಕವಚ್ ಆವೃತ್ತಿ 4.0 ಅನ್ನು ಸ್ಥಾಪಿಸಲು ಅನುಮೋದನೆ ನೀಡಿದೆ. 140 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆಗೆ ಅನುಮೋದನೆ ನೀಡಲಾಗಿದೆ. ಭಾರತೀಯ ರೈಲ್ವೆಯ ಬಾಕಿ ಮಾರ್ಗಗಳಲ್ಲಿ ಎಲ್ ಟಿಇ-ಆಧಾರಿತ ಸಂವಹನ ಬೆನ್ನೆಲುಬಿನೊಂದಿಗೆ ಕವಚ್ ಅನ್ನು ಒದಗಿಸುವ ಹಲವು ಕಾಮಗಾರಿಗಳ ಕಾರ್ಯಕ್ರಮದಡಿಯಲ್ಲಿ ಈ ಕಾರ್ಯಕ್ಕೆ ಅನುಮೋದನೆ ನೀಡಲಾಗಿದೆ.
ಈ ಹಿಂದೆ ಅಹಮದಾಬಾದ್ ವಿಭಾಗದ ಸುಮಾರು 702 ಮಾರ್ಗ ಕಿಲೋಮೀಟರ್‌ಗಳಲ್ಲಿ ಕವಚ್ ಕಾಮಗಾರಿಯನ್ನು ಈಗಾಗಲೇ ಮಂಜೂರು ಮಾಡಲಾಗಿತ್ತು. ಹಾಲಿ ಯೋಜನೆಯ ಅನುಮೋದನೆಯೊಂದಿಗೆ ವಿಭಾಗದ ಉಳಿದ ವಿಭಾಗಗಳನ್ನು ಸಹ ಕವಚ್ ಅಡಿಯಲ್ಲಿ ತರಲಾಗುವುದು, ಇದು ವಿಭಾಗದಾದ್ಯಂತ ಸ್ಥಳೀಯ ರೈಲು ರಕ್ಷಣಾ ವ್ಯವಸ್ಥೆಯ ವ್ಯಾಪಕ ನಿಯೋಜನೆಗೆ ದಾರಿ ಮಾಡಿಕೊಡುತ್ತದೆ.
ಕವಚ್ ಎಂಬುದು ಕಾರ್ಯಾಚರಣೆಯ ಸುರಕ್ಷತೆಯನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾದ ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾದ ಸ್ವಯಂಚಾಲಿತ ರೈಲು ರಕ್ಷಣೆ (ಎಟಿಪಿ) ವ್ಯವಸ್ಥೆಯಾಗಿದೆ. ಇದು ಸಿಗ್ನಲ್ ಪಾಸಿಂಗ್ ಅಟ್ ಡೇಂಜರ್ (SPAD) ಅನ್ನು ತಡೆಯಲು ಸಹಾಯ ಮಾಡುತ್ತದೆ, ಅಸುರಕ್ಷಿತ ಸಂದರ್ಭಗಳನ್ನು ತಪ್ಪಿಸಲು ಅಗತ್ಯವಿದ್ದಾಗ ಸ್ವಯಂಚಾಲಿತವಾಗಿ ಬ್ರೇಕ್‌ಗಳನ್ನು ಅನ್ವಯಿಸುತ್ತದೆ, ನಿರ್ಣಾಯಕ ಪರಿಸ್ಥಿತಿಗಳಲ್ಲಿ ರೈಲಿನ ವೇಗವನ್ನು ನಿಯಂತ್ರಿಸುತ್ತದೆ ಮತ್ತು ಮುಖಾ ಮುಖಿ ಢಿಕ್ಕಿಯಾಗುವ ಅಪಾಯವನ್ನು ಗಮನಾರ್ಹವಾಗಿ ತಗ್ಗಿಸುತ್ತದೆ.
ಭಾರತೀಯ ರೈಲ್ವೆ ಸುರಕ್ಷತೆಯನ್ನು ಬಲಪಡಿಸಲು ಮತ್ತು ರೈಲು ಕಾರ್ಯಾಚರಣೆಗಳನ್ನು ಆಧುನೀಕರಿಸಲು ತನ್ನ ಜಾಲದಾದ್ಯಂತ ಹಂತಹಂತವಾಗಿ ಕವಚ್ ಅನ್ನು ವಿಸ್ತರಣೆ ಮಾಡುತ್ತಿದೆ.
*****
(रिलीज़ आईडी: 2272939)
आगंतुक पटल : 14