ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

2026ರ ಭಾರತ್ ಇನ್ನೋವೇಟ್ಸ್ ನಲ್ಲಿ ಭಾಗವಹಿಸಿದ ಪ್ರಧಾನಮಂತ್ರಿ

प्रविष्टि तिथि: 14 JUN 2026 5:11PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷರಾದ ಗೌರವಾನ್ವಿತ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಇಂದು ನೈಸ್‌ನ ಪಲೈಸ್ ಡೆಸ್ ಎಕ್ಸ್‌ಪೊಸಿಷನ್ಸ್‌ನಲ್ಲಿ "ಭಾರತ್ ಇನ್ನೋವೇಟ್ಸ್ 2026" ಅನ್ನು ಜಂಟಿಯಾಗಿ ಉದ್ಘಾಟಿಸಿದರು. ಮೂರು ದಿನಗಳ ಕಾರ್ಯಕ್ರಮವಾದ ಭಾರತ್ ಇನ್ನೋವೇಟ್ಸ್, ಜಾಗತಿಕ ನಾವೀನ್ಯತೆ ನಿಧಿಗಳು ಮತ್ತು ಹೆಜ್ಜೆಗುರುತನ್ನು ಹೊಂದಿರುವ ಭಾರತೀಯ ಡೀಪ್-ಟೆಕ್ ನವೋದ್ಯಮಗಳು (ಸ್ಟಾರ್ಟ್-ಅಪ್‌ಗಳು), ನಾವೀನ್ಯಕಾರರು, ಸಂಶೋಧಕರು ಮತ್ತು ಹೂಡಿಕೆದಾರರನ್ನು ಒಟ್ಟುಗೂಡಿಸುತ್ತದೆ. ಇದು ಜಾಗತಿಕ ಹಂತದಲ್ಲಿ ಭಾರತದ ಪ್ರಮುಖ ಡೀಪ್ ಟೆಕ್  ತಂತ್ರಜ್ಞಾನವನ್ನು ಪ್ರದರ್ಶಿಸುತ್ತದೆ, ಜಾಗತಿಕ ಪ್ರಾಮುಖ್ಯತೆಯ 13 ನಿರ್ಣಾಯಕ ತಂತ್ರಜ್ಞಾನ ಸ್ತಂಭಗಳಲ್ಲಿ 120 ಪಥ-ಭಂಜಕ (ಹೊಸ ಹಾದಿ ತೋರುವ) ಸ್ಟಾರ್ಟ್-ಅಪ್‌ಗಳು ಮತ್ತು 20ಕ್ಕೂ ಹೆಚ್ಚು ಶ್ರೇಷ್ಠತಾ ಸಂಸ್ಥೆಗಳನ್ನು ಪ್ರಸ್ತುತಪಡಿಸುತ್ತದೆ. ಪ್ರಪಂಚದಾದ್ಯಂತದ 350ಕ್ಕೂ ಹೆಚ್ಚು ಉನ್ನತ ಹೂಡಿಕೆದಾರರು ಮತ್ತು ಸಾಹಸೋದ್ಯಮ (ವೆಂಚರ್) ಬಂಡವಾಳಗಾರರು ಸಹ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.

ಪ್ರಧಾನಮಂತ್ರಿ ಮೋದಿ ಮತ್ತು ಅಧ್ಯಕ್ಷರಾದ ಮ್ಯಾಕ್ರನ್ ಸಭೆಯನ್ನುದ್ದೇಶಿಸಿ ಮಾತನಾಡಿದರು. ಪ್ರಧಾನಮಂತ್ರಿ ಅವರು ಅಧ್ಯಕ್ಷರಾದ ಮ್ಯಾಕ್ರನ್ ಅವರ ಉದಾತ್ತ ಉಪಸ್ಥಿತಿಗೆ ಧನ್ಯವಾದಗಳನ್ನು ಅರ್ಪಿಸಿದರು ಮತ್ತು ಭಾರತ ಹಾಗು ಫ್ರಾನ್ಸ್ ಎರಡೂ ಜಾಗತಿಕ ಸವಾಲುಗಳನ್ನು ಎದುರಿಸಲು ಶ್ರಮಿಸುತ್ತಿರುವ ದೃಢ ಪಾಲುದಾರರಾಗಿದ್ದಾರೆ ಎಂಬುದರತ್ತ ಗಮನ ಸೆಳೆದರು. ಈ ಸಂದರ್ಭದಲ್ಲಿ, ಅವರು ಅಂತರರಾಷ್ಟ್ರೀಯ ಸೌರ ಒಕ್ಕೂಟದಂತಹ ಇಂಡೋ-ಫ್ರೆಂಚ್ ಉಪಕ್ರಮಗಳನ್ನು ಹಾಗೂ ಕೃತಕ ಬುದ್ಧಿಮತ್ತೆ ಮತ್ತು ಇಂಡೋ-ಪೆಸಿಫಿಕ್‌ನಲ್ಲಿ ಸ್ಥಿರತೆ ಮತ್ತು ಭದ್ರತಾ ಉತ್ತೇಜನದ ಕ್ಷೇತ್ರಗಳಲ್ಲಿನ ಉಪಕ್ರಮಗಳನ್ನು ಉಲ್ಲೇಖಿಸಿದರು. ಭಾರತ-ಫ್ರಾನ್ಸ್ ಇನ್ನೋವೇಷನ್ (ನಾವೀನ್ಯತೆಯ) ವರ್ಷವನ್ನು ಆಚರಿಸುತ್ತಿರುವುದನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಯವರು, ಜಾಗತಿಕ ಒಳಿತಿಗಾಗಿ ಕೆಲಸ ಮಾಡುವ ಎರಡೂ ದೇಶಗಳ ಹಂಚಿಕೆಯ ಸಂಕಲ್ಪದಲ್ಲಿ ಭಾರತ್ ಇನ್ನೋವೇಟ್ಸ್ ಮತ್ತೊಂದು ಮೈಲಿಗಲ್ಲು ಎಂದು ಹೇಳಿದರು. ಪ್ರದರ್ಶನದಲ್ಲಿರುವ ಡೀಪ್ ಟೆಕ್ (ಆಳ ತಂತ್ರಜ್ಞಾನ ) ಪರಿಹಾರಗಳಲ್ಲಿ ಪ್ರತಿಫಲಿಸಿದ ಭಾರತದಲ್ಲಿನ ಸ್ಟಾರ್ಟ್-ಅಪ್ ಕ್ರಾಂತಿಯನ್ನು ಉಲ್ಲೇಖಿಸುತ್ತಾ, ಗ್ರಾಮೀಣಾಭಿವೃದ್ಧಿಗಾಗಿ ಎ.ಐ (ಕೃತಕ ಬುದ್ಧಿಮತ್ತೆ) ಮತ್ತು ಉಪಗ್ರಹ ತಂತ್ರಜ್ಞಾನದ ಪರಿವರ್ತಕ ಸಾಮರ್ಥ್ಯ, ಸುಸ್ಥಿರ ಜೀವನಕ್ಕಾಗಿ ಸುಧಾರಿತ ಉತ್ಪಾದನೆ ಹಾಗು ಶುದ್ಧ ಅಭಿವೃದ್ಧಿಗಾಗಿ ಹಸಿರು ಹೈಡ್ರೋಜನ್, ಬ್ಯಾಟರಿ ತಂತ್ರಜ್ಞಾನಗಳು ಮತ್ತು ವಿದ್ಯುತ್ ಚಲನಶೀಲತೆಯ ಅಗತ್ಯವನ್ನು ಅವರು ಒತ್ತಿ ಹೇಳಿದರು.

ಡಿಜಿಟಲ್ ಯುಗದಲ್ಲಿ ಸಾಗುತ್ತಿರುವ ತಾಂತ್ರಿಕ ಕ್ರಾಂತಿಯು ಮಾನವೀಯತೆಗೆ ಹೊಸ ಅವಕಾಶಗಳನ್ನು ನೀಡುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಈ ಸಂದರ್ಭದಲ್ಲಿ, ಭಾರತ್ ಇನ್ನೋವೇಟ್ಸ್‌ನಲ್ಲಿ ನೆರೆದಿರುವ ನಾವೀನ್ಯಕಾರರು, ಹೂಡಿಕೆದಾರರು ಮತ್ತು ಉದ್ಯಮಿಗಳಿಗೆ ವಿಶ್ವಾಸಾರ್ಹ, ಎಲ್ಲರನ್ನೂ ಒಳಗೊಳ್ಳುವ ಮತ್ತು ಮಾನವ ಕೇಂದ್ರಿತ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವಂತೆ ಅವರು ಕರೆ ನೀಡಿದರು. ಸ್ಟಾರ್ಟ್ಅಪ್‌ಗಳನ್ನು ಅವುಗಳ ಮಾರುಕಟ್ಟೆ ಮೌಲ್ಯಮಾಪನದಿಂದ ಮಾತ್ರವಲ್ಲದೆ, ಅವು ಮಾನವೀಯತೆಯ ಮೇಲೆ ಬೀರುವ ಪ್ರಭಾವದಿಂದಲೂ ಸಮಾನ ಪ್ರಮಾಣದಲ್ಲಿ ನಿರ್ಣಯಿಸಬೇಕು ಎಂದು ಅವರು ಒತ್ತಿ ಹೇಳಿದರು. ಇದು ಭಾರತ್ ಇನ್ನೋವೇಟ್ಸ್‌ನ ಪ್ರಮುಖ ಸಂದೇಶ ಎಂದು ಹೇಳಿದ ಅವರು, ಜಾಗತಿಕ ನಾವೀನ್ಯತೆಯ ಮುಂದಿನ ಅಧ್ಯಾಯವನ್ನು ಸಹ-ರಚಿಸಲು ಭಾರತದೊಂದಿಗೆ ಕೈಜೋಡಿಸಲು ಪ್ರೇಕ್ಷಕರನ್ನು ಆಹ್ವಾನಿಸಿದರು. ಕ್ವಾಂಟಮ್ ಕಂಪ್ಯೂಟಿಂಗ್, ಸೆಮಿಕಂಡಕ್ಟರ್‌ಗಳು, ಜೈವಿಕ ತಂತ್ರಜ್ಞಾನ, ರಕ್ಷಣೆ, ಬಾಹ್ಯಾಕಾಶ, ​​ಆರೋಗ್ಯ ರಕ್ಷಣೆ, ಮೆಡ್‌ಟೆಕ್, ಅಡ್ವಾನ್ಸ್ಡ್ ಮೆಟೀರಿಯಲ್ಸ್, ಕ್ಲೀನ್ ಎನರ್ಜಿ ಮತ್ತು ಇತರ ಮುಂಚೂಣಿ ವಲಯಗಳನ್ನು ವ್ಯಾಪಿಸಿರುವ ಸ್ಟಾರ್ಟ್‌ಅಪ್‌ಗಳು ಮತ್ತು ನಾವೀನ್ಯಕಾರರೊಂದಿಗೆ ಪ್ರಧಾನಮಂತ್ರಿ  ಸಂವಹನ ನಡೆಸಿದರು. ನಾಯಕರು ಪ್ರದರ್ಶನವನ್ನು ವೀಕ್ಷಿಸಿದರು.  

ಭಾರತ ಇನ್ನೋವೇಟ್ಸ್, ಭಾರತವನ್ನು ಜಾಗತಿಕ ನಾವೀನ್ಯತಾ ಕೇಂದ್ರವಾಗಿ ಪರಿವರ್ತಿಸುವ ಭಾರತ ಸರ್ಕಾರದ ದೃಢ ಬದ್ಧತೆಯನ್ನು, ವಿಕಸಿತ ಭಾರತದ ದೃಷ್ಟಿಕೋನ ಮತ್ತು ಜಾಗತಿಕ ತಂತ್ರಜ್ಞಾನ ಭೂದೃಶ್ಯಕ್ಕೆ ಕೊಡುಗೆ ನೀಡುವಲ್ಲಿ ಭಾರತ-ಫ್ರಾನ್ಸ್ ಸಹಕಾರದ ಮಹತ್ವವನ್ನು ಒತ್ತಿಹೇಳುತ್ತದೆ.

 

*****


(रिलीज़ आईडी: 2272700) आगंतुक पटल : 14
इस विज्ञप्ति को इन भाषाओं में पढ़ें: Telugu , English , Urdu , Marathi , हिन्दी , Manipuri , Gujarati , Odia , Tamil , Malayalam