ಸಂವಹನ ಸಚಿವಾಲಯ
azadi ka amrit mahotsav

'ಡಿಜಿಟಲ್ ಸಂಪರ್ಕಕ್ಕಾಗಿ ಆಸ್ತಿಗಳ ರೇಟಿಂಗ್, 2024' ಅಡಿಯಲ್ಲಿ ಡಿಜಿಟಲ್ ಸಂಪರ್ಕದ ಮೌಲ್ಯಮಾಪನಕ್ಕಾಗಿ  ತಿದ್ದುಪಡಿ ಮಾಡಿದ 'ರೇಟಿಂಗ್ ಕೈಪಿಡಿ 2026' ಅನ್ನು ಬಿಡುಗಡೆ ಮಾಡಿದ ಟ್ರಾಯ್

प्रविष्टि तिथि: 09 JUN 2026 4:12PM by PIB Bengaluru

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಇಂದು 'ಡಿಜಿಟಲ್ ಸಂಪರ್ಕಕ್ಕಾಗಿ ಆಸ್ತಿಗಳ ರೇಟಿಂಗ್ ನಿಯಮಗಳು, 2024' ಅಡಿಯಲ್ಲಿ ಡಿಜಿಟಲ್ ಸಂಪರ್ಕದ ಮೌಲ್ಯಮಾಪನಕ್ಕಾಗಿ ತಿದ್ದುಪಡಿ ಮಾಡಿದ 'ರೇಟಿಂಗ್ (ಶ್ರೇಯಾಂಕ) ಕೈಪಿಡಿ 2026' ಅನ್ನು ಬಿಡುಗಡೆ ಮಾಡಿದೆ.

ಟ್ರಾಯ್ 2024ರ ಅಕ್ಟೋಬರ್ 25 ರಂದು 'ಡಿಜಿಟಲ್ ಸಂಪರ್ಕಕ್ಕಾಗಿ ಆಸ್ತಿಗಳ ರೇಟಿಂಗ್ ನಿಯಮಗಳು 2024' ಅನ್ನು ಪ್ರಕಟಿಸಿತ್ತು. ಈ ನಿಯಂತ್ರಣವು ಸಹಯೋಗದ ಮತ್ತು ಸ್ವಯಂ-ಸಮರ್ಥನೀಯ ವಿಧಾನದ ಮೂಲಕ ಕಟ್ಟಡಗಳ ಒಳಗೆ ಉತ್ತಮ ಡಿಜಿಟಲ್ ಸಂಪರ್ಕವನ್ನು ಪಡೆಯುವಲ್ಲಿ ಗ್ರಾಹಕರು ಎದುರಿಸುತ್ತಿರುವ ಸವಾಲುಗಳನ್ನು ಪರಿಹರಿಸುವ ಗುರಿ ಹೊಂದಿದೆ.

ಬಳಿಕ ಟ್ರಾಯ್ 2025ರ ಆಗಸ್ಟ್ 13 ರಂದು ಡಿಜಿಟಲ್ ಸಂಪರ್ಕದ ಮೌಲ್ಯಮಾಪನಕ್ಕಾಗಿ 'ರೇಟಿಂಗ್ ಕೈಪಿಡಿ'ಯನ್ನು ಮಾರ್ಗಸೂಚಿಯಾಗಿ ಬಿಡುಗಡೆ ಮಾಡಿತು. ರೇಟಿಂಗ್ ಕೈಪಿಡಿಯು ನಿಯಂತ್ರಣದ ನಿಬಂಧನೆಗಳ ಅಡಿಯಲ್ಲಿ ಡಿಜಿಟಲ್ ಸಂಪರ್ಕವನ್ನು ನಿರ್ಣಯಿಸಲು ನ್ಯಾಯಯುತ, ಪಾರದರ್ಶಕ ಮತ್ತು ಪ್ರಮಾಣೀಕೃತ ವಿಧಾನವನ್ನು ಖಾತ್ರಿಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾದ ರಚನಾತ್ಮಕ ಚೌಕಟ್ಟಾಗಿ ಕಾರ್ಯನಿರ್ವಹಿಸಿತು. ಡಿಜಿಟಲ್ ಕನೆಕ್ಟಿವಿಟಿ ರೇಟಿಂಗ್ ಏಜೆನ್ಸಿ (ಡಿಸಿಆರ್ ಎ), ಪ್ರಾಪರ್ಟಿ ಮ್ಯಾನೇಜರ್ (ಪಿಎಂ) ಮತ್ತು ಸೇವಾ ಪೂರೈಕೆದಾರರು ಸೇರಿದಂತೆ ಆಸ್ತಿಗಳು ಮತ್ತು ವಲಯಗಳಲ್ಲಿ ಡಿಜಿಟಲ್ ಸಂಪರ್ಕದ ಅನುಷ್ಠಾನ ಮತ್ತು ಮೌಲ್ಯಮಾಪನದಲ್ಲಿ ತೊಡಗಿರುವ ಎಲ್ಲಾ ಪಾಲುದಾರರಿಗೆ ಈ ದಾಖಲೆಯು ಸಮಗ್ರ ಮಾರ್ಗದರ್ಶಿಯನ್ನು ಒದಗಿಸಿದೆ/

ಡಿಜಿಟಲ್ ಸಂಪರ್ಕದ ಮೌಲ್ಯಮಾಪನಕ್ಕಾಗಿ 'ನಿಯಂತ್ರಣ' ಮತ್ತು 'ರೇಟಿಂಗ್ ಕೈಪಿಡಿ'ಯಲ್ಲಿ ನಿರ್ದಿಷ್ಟಪಡಿಸಿದ ವಿಧಾನದ ಉತ್ತಮ ತಿಳಿವಳಿಕೆಗಾಗಿ ನಡೆಸಿದ ಜಾಗೃತಿ ಅವಧಿಗಳು ಮತ್ತು ಕಾರ್ಯಾಗಾರಗಳ ಸಮಯದಲ್ಲಿ, ಹೆಚ್ಚುವರಿ ಸ್ಪಷ್ಟತೆ ಮತ್ತು ಪರಿಷ್ಕರಣೆಯನ್ನು ಒದಗಿಸಲು ಕೆಲವು ಕ್ಷೇತ್ರಗಳಿಗೆ ವಿಮರ್ಶೆಯ ಅಗತ್ಯವಿದೆ ಎಂದು ಗಮನಿಸಲಾಯಿತು.

ಅದರಂತೆ ಟ್ರಾಯ್ 2026ರ ಫೆಬ್ರವರಿ 27 ರಂದು 'ಡಿಜಿಟಲ್ ಸಂಪರ್ಕಕ್ಕಾಗಿ ಆಸ್ತಿಗಳ ರೇಟಿಂಗ್ ಪರಿಶೀಲನೆ, 2024 (2024 ರ 7)' ಕುರಿತು ಸಮಾಲೋಚನಾ ದಾಖಲೆಯನ್ನು ಬಿಡುಗಡೆ ಮಾಡಿತು, ಇದು ಪ್ರಸ್ತುತ ನಿಯಂತ್ರಣದ ಕೆಲವು ಅಂಶಗಳ ಪರಿಷ್ಕರಣೆಯನ್ನು ಪ್ರಸ್ತಾಪಿಸುತ್ತದೆ.

ಸಮಾಲೋಚನಾ ದಾಖಲೆಗೆ ಪ್ರತಿಯಾಗಿ ಟ್ರಾಯ್ ಪಾಲುದಾರರಿಂದ ವಿಶ್ಲೇಷಣೆಗಳು ಮತ್ತು ಪ್ರತಿಕ್ರಿಯೆಯನ್ನು ಸ್ವೀಕರಿಸಿತು. ಪಾಲುದಾರರ ಕಾಮೆಂಟ್‌ಗಳ ಮೇಲಿನ ಆಂತರಿಕ ವಿಶ್ಲೇಷಣೆ ಮತ್ತು ಚರ್ಚೆಯ ಆಧಾರದ ಮೇಲೆ, ಟ್ರಾಯ್ ನಿಯಂತ್ರಣದಲ್ಲಿ ತಿದ್ದುಪಡಿಗಳನ್ನು ಮಾಡಿತು ಮತ್ತು 2026ರ ಮೇ 13 ರಂದು 'ಡಿಜಿಟಲ್ ಸಂಪರ್ಕಕ್ಕಾಗಿ ಆಸ್ತಿಗಳ ರೇಟಿಂಗ್ (ತಿದ್ದುಪಡಿ) ನಿಯಮಗಳು, 2026 (2026 ರ 3)' ಅನ್ನು ಸೂಚಿಸಿತು. ಬಳಿಕ ಹಿಂದಿನ ರೇಟಿಂಗ್ ಕೈಪಿಡಿಯಲ್ಲಿ ನಿಯಮಗಳ ತಿದ್ದುಪಡಿ ಮಾಡಿದ ನಿಬಂಧನೆಗಳನ್ನು ಸೇರಿಸಲು ಟ್ರಾಯ್ ಇಂದು ತಿದ್ದುಪಡಿ ಮಾಡಿದ 'ರೇಟಿಂಗ್ ಕೈಪಿಡಿ 2026' ಅನ್ನು ಬಿಡುಗಡೆ ಮಾಡಿದೆ.

ದ್ದುಪಡಿ ಮಾಡಿದ ನಿಯಮಗಳಿಗೆ ಅನುಗುಣವಾಗಿ ಇರಿಸಿಕೊಳ್ಳಲು ತಿದ್ದುಪಡಿ ಮಾಡಿದ 'ರೇಟಿಂಗ್ ಕೈಪಿಡಿ 2026' ನಲ್ಲಿ ಪರಿಚಯಿಸಲಾದ ಪ್ರಮುಖ ಬದಲಾವಣೆಗಳು ಈ ಕೆಳಗಿನಂತಿವೆ: -

  1. ನಿರ್ಮಾಣ ಹಂತದಲ್ಲಿರುವ ಆಸ್ತಿಗಳಿಗೆ ರಚನಾತ್ಮಕ ಬಹು-ಹಂತದ ಮೌಲ್ಯಮಾಪನ ಮತ್ತು ಪ್ರಮಾಣೀಕರಣ ಚೌಕಟ್ಟಿನ ಪರಿಚಯ.
  2. ಆಸ್ತಿಗಳಲ್ಲಿ ಡಿಜಿಟಲ್ ಸಂಪರ್ಕ ಮೂಲಸೌಕರ್ಯದ ಮೌಲ್ಯಮಾಪನ ಮತ್ತು ಸುಧಾರಣೆಗೆ ಅನುಕೂಲವಾಗುವಂತೆ ಐಚ್ಛಿಕ ಡಿಜಿಟಲ್ ಸಂಪರ್ಕ ಲೆಕ್ಕಪರಿಶೋಧನೆಗೆ ಅವಕಾಶ.
  3. ವಿಶ್ವಾಸಾರ್ಹತೆಯ ಅವಶ್ಯಕತೆಗಳನ್ನು ಕಾಯ್ದುಕೊಳ್ಳುವಾಗ ವಿದ್ಯುತ್ ಮೂಲಸೌಕರ್ಯ ಮೌಲ್ಯಮಾಪನದಲ್ಲಿ ಅಗತ್ಯವಾದ ನಮ್ಯತೆ.
  4. ಸಾಂಪ್ರದಾಯಿಕ ಕಟ್ಟಡ ನಿರ್ವಹಣಾ ವ್ಯವಸ್ಥೆಗಳನ್ನು (ಬಿಎಂಎಸ್ ) ಮೀರಿ ಕೇಂದ್ರೀಕೃತ ಮೇಲ್ವಿಚಾರಣಾ ವ್ಯವಸ್ಥೆಗಳನ್ನು ಅನುಮತಿಸುವ ಮೇಲ್ವಿಚಾರಣಾ ಚೌಕಟ್ಟಿನ ವ್ಯಾಪಕ ವ್ಯಾಖ್ಯಾನ.
  5. ಫೈಬರ್ ಮತ್ತು ವೈರ್‌ಲೆಸ್ ಬ್ಯಾಕ್‌ಹೋಲ್ ಪರಿಹಾರಗಳನ್ನು ಅನುಮತಿಸುವ ಮೂಲಕ ತಂತ್ರಜ್ಞಾನ-ತಟಸ್ಥ ವಿಧಾನವನ್ನು ಅಳವಡಿಸಿಕೊಳ್ಳುವುದು.
  6. ಟ್ರಾಯ್  ಗೊತ್ತುಪಡಿಸಿದ ಪರೀಕ್ಷಾ ಅಪ್ಲಿಕೇಶನ್ ಮೂಲಕ ಸೇವಾ ಕಾರ್ಯಕ್ಷಮತೆಯ ಮೌಲ್ಯಮಾಪನದ ಪ್ರಮಾಣೀಕರಣ.
  7. ಸಾರ್ವಜನಿಕವಲ್ಲದ ಪ್ರದೇಶಗಳ ಮೌಲ್ಯಮಾಪನಕ್ಕಾಗಿ ವ್ಯಾಖ್ಯಾನಿಸಲಾದ ಮಾದರಿ ವಿಧಾನದ ಪರಿಚಯ.
  8. ಇತ್ತೀಚಿನ 'ರಾಷ್ಟ್ರೀಯ ಕಟ್ಟಡ ನಿರ್ಮಾಣ ಮಾನದಂಡಗಳು (ಎನ್ ಬಿಸಿಎಸ್)', 2026 ರೊಂದಿಗೆ ಜೋಡಣೆ.

ಡಿಜಿಟಲ್ ಸಂಪರ್ಕದ ಮೌಲ್ಯಮಾಪನಕ್ಕಾಗಿ ತಿದ್ದುಪಡಿ ಮಾಡಲಾದ 'ರೇಟಿಂಗ್ ಮ್ಯಾನುಯಲ್ 2026' ಅನ್ನು TRAI ವೆಬ್‌ಸೈಟ್‌ನಲ್ಲಿ (www.trai.gov.in) ಇರಿಸಲಾಗಿದ್ದು, ಇದು ತಕ್ಷಣದಿಂದ ಜಾರಿಗೆ ಬರಲಿದೆ.

ಪರಿಷ್ಕೃತ ಮ್ಯಾನುಯಲ್ ಕುರಿತು ಪ್ರಶ್ನೆಗಳಿಗಾಗಿ, ದಯವಿಟ್ಟು ಟ್ರಾಯ್ ಸಲಹೆಗಾರ (QoS-I), ಶ್ರೀ ತೇಜ್‌ಪಾಲ್ ಸಿಂಗ್ ಅವರನ್ನು ಸಂಪರ್ಕಿಸಿ.

ಇ-ಮೇಲ್ : adv-qos1@trai.gov.in | ದೂರವಾಣಿ ಸಂಖ್ಯೆ : +91-11-20907759

 

*****


(रिलीज़ आईडी: 2270799) आगंतुक पटल : 24
इस विज्ञप्ति को इन भाषाओं में पढ़ें: English , Gujarati , Urdu , हिन्दी , Tamil