ಶಿಕ್ಷಣ ಸಚಿವಾಲಯ
azadi ka amrit mahotsav

ಲಿವರ್‌ ಪೂಲ್ ವಿಶ್ವವಿದ್ಯಾಲಯವು ಬೆಂಗಳೂರಿನಲ್ಲಿ ತನ್ನ ಕ್ಯಾಂಪಸ್ ಸ್ಥಾಪಿಸಲು ಅನುಮೋದನೆ ಪತ್ರವನ್ನು (ಎಲ್.ಒ.ಎ) ಸ್ವೀಕರಿಸಿದೆ


ರಾಷ್ಟ್ರೀಯ ಶಿಕ್ಷಣ ನೀತಿ 2020ರ ಅಡಿಯಲ್ಲಿ ಉನ್ನತ ಶಿಕ್ಷಣದ ಅಂತಾರಾಷ್ಟ್ರೀಕರಣವನ್ನು ಮುಂದುವರಿಸುವಲ್ಲಿ ಒಂದು ಮೈಲಿಗಲ್ಲಾಗಿದೆ

ಕೇಂದ್ರ ಶಿಕ್ಷಣ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್, ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಮತ್ತು ಯುಕೆ ವಿದೇಶಾಂಗ ಕಾರ್ಯದರ್ಶಿ ನಿವೃತ್ತ ಗೌರವಾನ್ವಿತ ಶ್ರೀ ಯೆವೆಟ್ ಕೂಪರ್ ಅವರು ಕಾರ್ಯದರ್ಶಿ (ಉನ್ನತ ಶಿಕ್ಷಣ) ಡಾ. ವಿನೀತ್ ಜೋಶಿ ಅವರು ಲಿವರ್‌ಪೂಲ್ ಬೆಂಗಳೂರು ವಿಶ್ವವಿದ್ಯಾಲಯದ ಪ್ರೊವೊಸ್ಟ್ ಪ್ರೊಫೆಸರ್ ರಿಚರ್ಡ್ ಗ್ರೋಸ್ ಅವರಿಗೆ ಲಿವರ್‌ಪೂಲ್ ವಿಶ್ವವಿದ್ಯಾಲಯಕ್ಕೆ ಅನುಮೋದನೆ ಪತ್ರವನ್ನು ಹಸ್ತಾಂತರಿಸುವ ಸಮಾರಂಭಕ್ಕೆ ಸಾಕ್ಷಿಯಾದರು

प्रविष्टि तिथि: 04 JUN 2026 8:11PM by PIB Bengaluru

ರಾಷ್ಟ್ರೀಯ ಶಿಕ್ಷಣ ನೀತಿ (ಎನ್.ಇ.ಪಿ.) 2020 ರ ಅಡಿಯಲ್ಲಿ ಉನ್ನತ ಶಿಕ್ಷಣದ ಅಂತಾರಾಷ್ಟ್ರೀಕರಣದತ್ತ ಮಹತ್ವದ ಹೆಜ್ಜೆಯಲ್ಲಿ, ಶಿಕ್ಷಣ ಸಚಿವಾಲಯವು ಇಂದು ಯುನೈಟೆಡ್ ಕಿಂಗ್‌ಡಂನ ಲಿವರ್‌ಪೂಲ್ ವಿಶ್ವವಿದ್ಯಾಲಯಕ್ಕೆ ಕರ್ನಾಟಕದ ಬೆಂಗಳೂರಿನಲ್ಲಿ ತನ್ನ ಶಾಖಾ ಕ್ಯಾಂಪಸ್ ಅನ್ನು ಸ್ಥಾಪಿಸಲು ಅನುಮೋದನೆ ಪತ್ರವನ್ನು  ಹಸ್ತಾಂತರಿಸಿತು.

ಕೇಂದ್ರ ಶಿಕ್ಷಣ ಸಚಿವಾಲಯದ ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಮತ್ತು ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಅಧ್ಯಕ್ಷರಾದ ಡಾ. ವಿನೀತ್ ಜೋಶಿ ಅವರು ಲಿವರ್‌ಪೂಲ್ ಬೆಂಗಳೂರು ವಿಶ್ವವಿದ್ಯಾಲಯದ ಪ್ರೊವೋಸ್ಟ್ ಪ್ರೊಫೆಸರ್ ಶ್ರೀ ರಿಚರ್ಡ್ ಗ್ರೋಸ್ ಅವರಿಗೆ ಕೇಂದ್ರ ಶಿಕ್ಷಣ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್, ಗೌರವಾನ್ವಿತ ವಿದೇಶಾಂಗ ಸಚಿವರಾದ ಡಾ. ಎಸ್. ಜೈಶಂಕರ್ ಮತ್ತು ಯುನೈಟೆಡ್ ಕಿಂಗ್‌ಡಮ್‌ ನ ವಿದೇಶಾಂಗ ಕಾರ್ಯದರ್ಶಿ ಗೌರವಾನ್ವಿತ ಯೆವೆಟ್ ಕೂಪರ್ ಅವರ ಸಮ್ಮುಖದಲ್ಲಿ ಈ ಲೋಗೋವನ್ನು ಹಸ್ತಾಂತರಿಸಿದರು.

ಈ ಕಾರ್ಯಕ್ರಮದಲ್ಲಿ ಭಾರತ ಸರ್ಕಾರದ ವಿದೇಶಾಂಗ ಕಾರ್ಯದರ್ಶಿ ಶ್ರೀ ವಿಕ್ರಮ್ ಮಿಶ್ರಿ, ಭಾರತಕ್ಕೆ ಬ್ರಿಟಿಷ್ ಹೈಕಮಿಷನರ್ ಶ್ರೀಮತಿ ಲಿಂಡಿ ಕ್ಯಾಮರೂನ್, ಸಿಬಿ ಒಬಿಇ ಸೇರಿದಂತೆ ಭಾರತ ಮತ್ತು ಯುನೈಟೆಡ್ ಕಿಂಗ್‌ಡಮ್‌ನ ಹಿರಿಯ ಗಣ್ಯರು ಭಾಗವಹಿಸಿದ್ದರು.

ಲಿವರ್‌ಪೂಲ್ ವಿಶ್ವವಿದ್ಯಾಲಯಕ್ಕೆ ಮೇ 26, 2025 ರಂದು ನವದೆಹಲಿಯಲ್ಲಿ ಯುಜಿಸಿ (ಭಾರತದಲ್ಲಿ ವಿದೇಶಿ ಉನ್ನತ ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್‌ಗಳ ಸ್ಥಾಪನೆ ಮತ್ತು ಕಾರ್ಯಾಚರಣೆ) ನಿಯಮಗಳು, 2023ರ ಅಡಿಯಲ್ಲಿ ಲೆಟರ್ ಆಫ್ ಇಂಟೆಂಟ್ (ಎಲ್‌ಒಐ) ನೀಡಲಾಯಿತು. ಕಳೆದ ವರ್ಷದಲ್ಲಿ, ವಿಶ್ವವಿದ್ಯಾನಿಲಯವು ಅಗತ್ಯವಿರುವ ಶೈಕ್ಷಣಿಕ, ಮೂಲಸೌಕರ್ಯ ಮತ್ತು ನಿಯಂತ್ರಕ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ಯುಜಿಸಿ ನಿಯಮಗಳ ನಿಬಂಧನೆಗಳ ಅನುಸರಣೆ ಮತ್ತು ಸಿದ್ಧತೆಯ ಮೌಲ್ಯಮಾಪನದ ನಂತರ, ವಿಶ್ವವಿದ್ಯಾನಿಲಯವು ಭಾರತದಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಈಗ ಅನುಮೊದನೆಯನ್ನು ಪಡೆದಿದೆ.

ಬೆಂಗಳೂರಿನಲ್ಲಿರುವ ವಿಶ್ವವಿದ್ಯಾನಿಲಯದ ಕ್ಯಾಂಪಸ್ ವ್ಯವಹಾರ ನಿರ್ವಹಣೆ, ಕಂಪ್ಯೂಟರ್ ವಿಜ್ಞಾನ, ಆಟದ ವಿನ್ಯಾಸ, ಹಣಕಾಸು ಮತ್ತು ಜೈವಿಕ ವೈದ್ಯಕೀಯ ವಿಜ್ಞಾನಗಳಂತಹ ಕ್ಷೇತ್ರಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ಕಾರ್ಯಕ್ರಮಗಳನ್ನು ನೀಡುತ್ತದೆ. ಮುಂಬರುವ ವರ್ಷಗಳಲ್ಲಿ ಹೆಚ್ಚುವರಿ ವಿಭಾಗಗಳನ್ನು ಪರಿಚಯಿಸಲು ಸಹ ಇದು ಯೋಜಿಸಿದೆ. ಬೆಂಗಳೂರು ಕ್ಯಾಂಪಸ್ ಸ್ಥಾಪನೆಯು ಎನ್.ಇ.ಪಿ. 2020ರ ಅನುಷ್ಠಾನದಲ್ಲಿ ಮತ್ತೊಂದು ಪ್ರಮುಖ ಮೈಲಿಗಲ್ಲನ್ನು ಗುರುತಿಸುತ್ತದೆ, ಇದು ಹೆಚ್ಚಿನ ಶೈಕ್ಷಣಿಕ ಸಹಯೋಗ, ವರ್ಧಿತ ವಿದ್ಯಾರ್ಥಿಗಳ ಚಲನಶೀಲತೆ ಮತ್ತು ಭಾರತದಲ್ಲಿ ಹೆಸರಾಂತ ಜಾಗತಿಕ ಸಂಸ್ಥೆಗಳ ಉಪಸ್ಥಿತಿಯ ಮೂಲಕ ಉನ್ನತ ಶಿಕ್ಷಣದ ಅಂತರಾಷ್ಟ್ರೀಕರಣಕ್ಕೆ ಆದ್ಯತೆ ನೀಡುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಸಹಕಾರವು ಭಾರತ-ಯುಕೆ ದ್ವಿಪಕ್ಷೀಯ ಸಂಬಂಧಗಳ ಪ್ರಮುಖ ಆಧಾರಸ್ತಂಭವಾಗಿದೆ ಮತ್ತು ಭಾರತದಲ್ಲಿ ಲಿವರ್‌ಪೂಲ್ ವಿಶ್ವವಿದ್ಯಾಲಯ ಕ್ಯಾಂಪಸ್ ಅನ್ನು ತೆರೆಯುವುದು ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಹೆಚ್ಚಿಸುವ ನಿರೀಕ್ಷೆಯಿದೆ.

1881ರಲ್ಲಿ ಸ್ಥಾಪನೆಯಾದ ಲಿವರ್‌ಪೂಲ್ ವಿಶ್ವವಿದ್ಯಾಲಯವು ವಿಶ್ವದ ಪ್ರಮುಖ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ. ಬೋಧನೆ, ಸಂಶೋಧನೆ ಮತ್ತು ನಾವೀನ್ಯತೆಯಲ್ಲಿನ ಶ್ರೇಷ್ಠತೆಗಾಗಿ ವಿಶ್ವವಿದ್ಯಾಲಯವು ಗುರುತಿಸಲ್ಪಟ್ಟಿದೆ ಮತ್ತು ಜಾಗತಿಕವಾಗಿ ಉನ್ನತ ವಿಶ್ವವಿದ್ಯಾಲಯಗಳಲ್ಲಿ ಸ್ಥಾನ ಪಡೆದಿದೆ. ಭಾರತದಲ್ಲಿ ಕ್ಯಾಂಪಸ್ ಸ್ಥಾಪಿಸುವ ಅದರ ನಿರ್ಧಾರವು ಭಾರತದ ಉನ್ನತ ಶಿಕ್ಷಣ ಪರಿಸರ ವ್ಯವಸ್ಥೆಯ ಬೆಳೆಯುತ್ತಿರುವ ಆಕರ್ಷಣೆ ಮತ್ತು ಪ್ರಗತಿಪರ ನಿಯಂತ್ರಕ ಸುಧಾರಣೆಗಳ ಮೂಲಕ ಸೃಷ್ಟಿಯಾದ ಅವಕಾಶಗಳನ್ನು ಪ್ರತಿಬಿಂಬಿಸುತ್ತದೆ.  ಭಾರತದಲ್ಲಿ ವಿಶ್ವ ದರ್ಜೆಯ ಸಂಸ್ಥೆಗಳನ್ನು ತೆರೆಯುವುದರಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅವಕಾಶಗಳು ವಿಸ್ತರಿಸುವ ಮತ್ತು ಅಂತಾರಾಷ್ಟ್ರೀಯ ಶೈಕ್ಷಣಿಕ ಸಹಕಾರವನ್ನು ಹೆಚ್ಚಿಸುವ ನಿರೀಕ್ಷೆಯಿದೆ.

 

*****


(रिलीज़ आईडी: 2269126) आगंतुक पटल : 5
इस विज्ञप्ति को इन भाषाओं में पढ़ें: English , हिन्दी