ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪತಂಜಲಿ ಋಷಿ ಮತ್ತು ಯೋಗದ ಸದ್ಗುಣಗಳನ್ನು ಗೌರವಿಸುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ

प्रविष्टि तिथि: 04 JUN 2026 9:16AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಋಷಿ ಪತಂಜಲಿಯವರಿಗೆ ಗೌರವ ಸಲ್ಲಿಸುತ್ತಾ ಮತ್ತು ಯೋಗದ ಅಗಾಧ ಪ್ರಯೋಜನಗಳನ್ನು ಉಲ್ಲೇಖಿಸುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿರುವರು. ನಿಯಮಿತ ಯೋಗಾಭ್ಯಾಸವು ದೇಹವನ್ನು ಆರೋಗ್ಯಕರವಾಗಿ ಮತ್ತು ಮನಸ್ಸನ್ನು ಶಾಂತವಾಗಿರಿಸುತ್ತದೆ, ಇದನ್ನು ಒಬ್ಬರ ದೈನಂದಿನ ದಿನಚರಿಯ ಭಾಗವಾಗಿಸುವುದರಿಂದ ಜೀವನವು ಸಮತೋಲಿತ ಮತ್ತು ಶಕ್ತಿಯುತವಾಗಿರುತ್ತದೆ ಎಂದು ಶ್ರೀ ಮೋದಿ ತಿಳಿಸಿದ್ದಾರೆ.  

ಪ್ರಧಾನಮಂತ್ರಿಯವರು ಎಕ್ಸ್ ನಲ್ಲಿ ಹೀಗೆ ಬರೆದಿದ್ದಾರೆ:

"योग का नियमित अभ्यास तन को स्वस्थ और मन को शांत रखता है। इसे अपनी दिनचर्या का हिस्सा बनाने से जीवन संतुलित और ऊर्जावान बनता है।

योगेन चित्तस्य पदेन वाचां
मलं शरीरस्य च वैद्यकेन।

योऽपाकरोत् तं परवरं मुनीनां
पतञ्जलिं प्राञ्जलिरानतोऽस्मि॥"

ಯೋಗದ ಮೂಲಕ ಮನಸ್ಸಿನಲ್ಲಿರುವ ಕಲ್ಮಶವನ್ನು, ವ್ಯಾಕರಣದ ಮೂಲಕ ಮಾತಿನ ಕಲ್ಮಶವನ್ನು ಮತ್ತು ಆಯುರ್ವೇದದ ಮೂಲಕ ದೇಹದ ಕಲ್ಮಶವನ್ನು ತೆಗೆದುಹಾಕಿದ,   ಮಹಾ ಋಷಿಗಳಲ್ಲಿ ಅತ್ಯಂತ ಶ್ರೇಷ್ಠರಾದ ಪತಂಜಲಿ ಮಹರ್ಷಿಗಳಿಗೆ ನಾನು ಕೈಮುಗಿದು ನಮಸ್ಕರಿಸುತ್ತೇನೆ.

 

*****


(रिलीज़ आईडी: 2268792) आगंतुक पटल : 6
इस विज्ञप्ति को इन भाषाओं में पढ़ें: English , Urdu , Marathi , हिन्दी , Assamese , Bengali , Gujarati , Malayalam