ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ (ಬಿಟಿಎ) ಕುರಿತು ಚರ್ಚೆಗಳಿಗಾಗಿ 1 ರಿಂದ 4 ಜೂನ್ 2026 ರವರೆಗೆ ದೆಹಲಿಗೆ ಅಮೆರಿಕ (ಯು.ಎಸ್.) ನಿಯೋಗದ ಭೇಟಿ
ಪ್ರಕಟಣಾ ದಿನಾಂಕ:
27 MAY 2026 4:31PM by PIB Bengaluru
ಪರಸ್ಪರ ಮತ್ತು ಜಂಟಿ ಪ್ರಯೋಜನಕಾರಿ ವ್ಯಾಪಾರಕ್ಕೆ ಸಂಬಂಧಿಸಿದ ಮಧ್ಯಂತರ ಒಪ್ಪಂದದ ಚೌಕಟ್ಟನ್ನು ಭಾರತ ಮತ್ತು ಅಮೆರಿಕ ಫೆಬ್ರವರಿ 7, 2026 ರಂದು ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದವು. ಈ ಚೌಕಟ್ಟು ಉಭಯ ದೇಶಗಳ ನಡುವಿನ ವಿಶಾಲವಾದ ಭಾರತ- ಅಮೆರಿಕ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಮಾತುಕತೆಗಳ ಬದ್ಧತೆಯನ್ನು ಪುನರುಚ್ಚರಿಸಿತು. ಇದರ ಪ್ರಕಾರ, ಭಾರತೀಯ ತಂಡವು ತಮ್ಮ ಅಮೆರಿಕ ಸಹವರ್ತಿಗಳೊಂದಿಗೆ ವೈಯುಕ್ತಿಕ ಸಭೆಗಳಿಗಾಗಿ 20 ರಿಂದ 23 ಏಪ್ರಿಲ್ 2026 ರವರೆಗೆ ವಾಷಿಂಗ್ಟನ್ ಡಿ.ಸಿ.ಗೆ ಭೇಟಿ ನೀಡಿತ್ತು. ಚರ್ಚೆಗಳನ್ನು ಮುಂದುವರಿಸಲು, ಮುಖ್ಯ ಸಮಾಲೋಚಕರ ನೇತೃತ್ವದ ಅಮೆರಿಕದ ತಂಡವು 1 ರಿಂದ 4 ಜೂನ್ 2026 ರವರೆಗೆ ಭಾರತಕ್ಕೆ ಭೇಟಿ ನೀಡಲಿದೆ. ಮಧ್ಯಂತರ ಒಪ್ಪಂದದ ವಿವರಗಳನ್ನು ಅಂತಿಮಗೊಳಿಸಲು ಮತ್ತು ಮಾರುಕಟ್ಟೆ ಪ್ರವೇಶ, ಸುಂಕೇತರ ಕ್ರಮಗಳು, ಕಸ್ಟಮ್ಸ್ ಮತ್ತು ವ್ಯಾಪಾರ ಸುಲಭೀಕರಣ, ಹೂಡಿಕೆ ಉತ್ತೇಜನ, ಆರ್ಥಿಕ ಭದ್ರತೆಯ ಹೊಂದಾಣಿಕೆಯಂತಹ ಬಹು ಕ್ಷೇತ್ರಗಳಲ್ಲಿ ವಿಶಾಲವಾದ ಬಿಟಿಎ ಅಡಿಯಲ್ಲಿ ಮಾತುಕತೆಗಳನ್ನು ಮುಂದುವರಿಸಲು ಪ್ರಸ್ತಾಪಿಸಲಾಗಿದೆ.
*****
(ಪ್ರಕಟಣೆ ಐ.ಡಿ.: 2265908)
ವಿಸಿಟರ್ ಕೌಂಟರ್ : 10