ಹಣಕಾಸು ಸಚಿವಾಲಯ
azadi ka amrit mahotsav

ಪ್ರಧಾನಮಂತ್ರಿ ಅವರ ಪ್ರಧಾನ ಕಾರ್ಯದರ್ಶಿ ಮತ್ತು ಗುಜರಾತ್ ನ ಉಪಮುಖ್ಯಮಂತ್ರಿ ಸಮ್ಮುಖದಲ್ಲಿ ಗಾಂಧಿನಗರದ ಗಿಫ್ಟ್ ಸಿಟಿಯಲ್ಲಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್


ಗಿಫ್ಟ್ ಸಿಟಿಯನ್ನು ಜಾಗತಿಕವಾಗಿ ಸ್ಪರ್ಧಾತ್ಮಕ ಅಂತರರಾಷ್ಟ್ರೀಯ ಹಣಕಾಸು ಮತ್ತು ವ್ಯಾಪಾರ ಕೇಂದ್ರವಾಗಿ ಮತ್ತಷ್ಟು ಬಲಪಡಿಸಲು ವಿವಿಧ ಆಯಾಮಗಳ ಕುರಿತು ಪ್ರಸ್ತುತಿಗಳು ಮತ್ತು ಚರ್ಚೆಗಳಿಗೆ ಸಾಕ್ಷಿಯಾದ ಪರಿಶೀಲನಾ ಸಭೆ.

ಗಿಫ್ಟ್ ಸಿಟಿಯ ಮೂಲಕ ಭಾರತವು ಪ್ರಮಾಣ, ತಂತ್ರಜ್ಞಾನ, ಪ್ರತಿಭೆ ಮತ್ತು ಬೆಳವಣಿಗೆಯ ಅವಕಾಶಗಳ ವಿಶಿಷ್ಟ ಸಂಯೋಜನೆಯನ್ನು ನೀಡುತ್ತದೆ: ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್.

ಗಿಫ್ಟ್ ಐಎಫ್ಎಸ್ಸಿಗಾಗಿ ಪ್ರಧಾನಮಂತ್ರಿಯವರ ದೂರದೃಷ್ಟಿಯನ್ನು ಸಾಕಾರಗೊಳಿಸುವ ಪ್ರಾಮುಖ್ಯತೆಯನ್ನು ಒತ್ತಿಹೇಳಿದ ಪ್ರಧಾನಮಂತ್ರಿಯವರ ಪ್ರಧಾನ ಕಾರ್ಯದರ್ಶಿ

ಪ್ರಕಟಣಾ ದಿನಾಂಕ: 22 MAY 2026 8:12PM by PIB Bengaluru

ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರ ಗಾಂಧಿನಗರದ ಗಿಫ್ಟ್ ಸಿಟಿಯಲ್ಲಿ,  ಅದರ ಪ್ರಗತಿ ಮತ್ತು ವಿಕಸನಗೊಳ್ಳುತ್ತಿರುವ ಅಂತರರಾಷ್ಟ್ರೀಯ ಹಣಕಾಸು ಸೇವೆಗಳ ಪರಿಸರ ವ್ಯವಸ್ಥೆಯ ಕುರಿತು ಉನ್ನತ ಮಟ್ಟದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಪರಿಶೀಲನಾ ಸಭೆಯಲ್ಲಿ ಪ್ರಧಾನ ಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಶ್ರೀ ಪಿ.ಕೆ. ಮಿಶ್ರಾ; ಗುಜರಾತ್ ಉಪ ಮುಖ್ಯಮಂತ್ರಿ ಶ್ರೀ ಹರ್ಷ ಸಂಘವಿ; ಪ್ರಧಾನಮಂತ್ರಿಗಳ ಕಚೇರಿ, ಹಣಕಾಸು ಸಚಿವಾಲಯ, ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ, ಗುಜರಾತ್ ಸರ್ಕಾರ, ಅಂತರರಾಷ್ಟ್ರೀಯ ಹಣಕಾಸು ಸೇವೆಗಳ ಕೇಂದ್ರಗಳ ಪ್ರಾಧಿಕಾರ (ಐ ಎಫ್ ಸಿ ಎ)ದ ಹಿರಿಯ ಅಧಿಕಾರಿಗಳು ಮತ್ತು ಗಿಫ್ಟ್ (GIFT) ಸಿಟಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ವೆಚ್ಚ ಇಲಾಖೆಯ ಕಾರ್ಯದರ್ಶಿ ಶ್ರೀ ವಿ. ವುಅಲ್ನಾಮ್; ಆರ್ಥಿಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಶ್ರೀಮತಿ ಅನುರಾಧಾ ಠಾಕೂರ್; ಕಂದಾಯ ಇಲಾಖೆಯ ಕಾರ್ಯದರ್ಶಿ ಶ್ರೀ ಅರವಿಂದ್ ಶ್ರೀವಾಸ್ತವ; ಗಿಫ್ಟ್ ಸಿಟಿಯ ಅಧ್ಯಕ್ಷರಾದ ಶ್ರೀ ಉದಯ್ ಕೋಟಕ್ ಮತ್ತು ಅಂತರರಾಷ್ಟ್ರೀಯ ಹಣಕಾಸು ಸೇವೆಗಳ ಕೇಂದ್ರಗಳ ಪ್ರಾಧಿಕಾರದ (ಐಎಫ್ ಸಿ ಎ) ಅಧ್ಯಕ್ಷ ಶ್ರೀ ಕೆ. ರಾಜಾರಾಮನ್ ಉಪಸ್ಥಿತರಿದ್ದರು.

ಸಭೆಯಲ್ಲಿ ಬ್ಯಾಂಕಿಂಗ್, ಬಂಡವಾಳ ಮಾರುಕಟ್ಟೆಗಳು, ನಿಧಿ ನಿರ್ವಹಣೆ, ವಿಮೆ ಮತ್ತು ಮರುವಿಮೆ, ವಿಮಾನ ಮತ್ತು ಹಡಗು ಗುತ್ತಿಗೆ, ಫಿನ್ ಟೆಕ್, ಚಿನಿವಾರ ಪೇಟೆ, ಅಂತರರಾಷ್ಟ್ರೀಯ ಶಿಕ್ಷಣ ಮತ್ತು ಸಂಬಂಧಿತ ಸೇವೆಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಿಫ್ಟ್ ಸಿಟಿ ಸಾಧಿಸಿದ ಪ್ರಗತಿಯ ಕುರಿತು ಪ್ರಸ್ತುತಿಗಳನ್ನು ಪ್ರದರ್ಶಿಸಲಾಯಿತು.

ಮೂಲಸೌಕರ್ಯ ಅಭಿವೃದ್ಧಿ, ಪ್ರತಿಭಾನ್ವಿತ ಪರಿಸರ ವ್ಯವಸ್ಥೆ, ಸುಲಭವಾಗಿ ವ್ಯಾಪಾರ ಮಾಡುವುದು, ತೆರಿಗೆ ಚೌಕಟ್ಟು, ವಸತಿ ಪರಿಸರ ವ್ಯವಸ್ಥೆ ಮತ್ತು ಗಿಫ್ಟ್ ಸಿಟಿಯನ್ನು ಜಾಗತಿಕವಾಗಿ ಸ್ಪರ್ಧಾತ್ಮಕ ಅಂತರರಾಷ್ಟ್ರೀಯ ಹಣಕಾಸು ಮತ್ತು ವ್ಯಾಪಾರ ಕೇಂದ್ರವಾಗಿ ಮತ್ತಷ್ಟು ಬಲಪಡಿಸಲು ಅಗತ್ಯವಿರುವ ಕ್ರಮಗಳ ಕುರಿತು ಚರ್ಚೆಗಳು ನಡೆದವು.

ಇಂದು ಗಿಫ್ಟ್ ಸಿಟಿಯು ಹಣಕಾಸು ಸೇವೆಗಳು, ತಂತ್ರಜ್ಞಾನ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 1,150 ಕ್ಕೂ ಹೆಚ್ಚು ಸಂಸ್ಥೆಗಳಿಗೆ ನೆಲೆಯಾಗಿದೆ. ಗಿಫ್ಟ್ ಸಿಟಿಯಲ್ಲಿನ ಬ್ಯಾಂಕಿಂಗ್ ಆಸ್ತಿಗಳು 110 ಶತಕೋಟಿ ಯುಎಸ್ ಡಾಲರ್ ದಾಟಿದ್ದರೆ, ನಿಧಿ ನಿರ್ವಹಣಾ ಚಟುವಟಿಕೆಗಳ ಅಡಿಯಲ್ಲಿ ಬಂಡವಾಳ ಬದ್ಧತೆಗಳು 32 ಶತಕೋಟಿ ಯುಎಸ್ ಡಾಲರ್ ಮೀರಿದೆ. ಈ ಪರಿಸರ ವ್ಯವಸ್ಥೆಯು 37 ಬ್ಯಾಂಕಿಂಗ್ ಘಟಕಗಳು, 217 ನಿಧಿ ನಿರ್ವಹಣಾ ಸಂಸ್ಥೆಗಳು, 36 ವಿಮಾ ಕಂಪನಿಗಳು, 35 ವಿಮಾನ ಗುತ್ತಿಗೆದಾರರು ಮತ್ತು 36 ಹಡಗು ಗುತ್ತಿಗೆ ಸಂಸ್ಥೆಗಳು, ಹಾಗೆಯೇ ಅಂತರರಾಷ್ಟ್ರೀಯ ವಿನಿಮಯ ಕೇಂದ್ರಗಳು, ಫಿನ್-ಟೆಕ್ ಸಂಸ್ಥೆಗಳು ಮತ್ತು ಅಂತರರಾಷ್ಟ್ರೀಯ ವಿಶ್ವವಿದ್ಯಾಲಯಗಳನ್ನು ಒಳಗೊಂಡಿದೆ.

ತಮ್ಮ ವಿಮರ್ಶೆಯ ನಂತರದ ಭಾಷಣದಲ್ಲಿ, ಜಾಗತಿಕ ಹಣಕಾಸು ಮಾರುಕಟ್ಟೆಗಳೊಂದಿಗೆ ಭಾರತದ ಸಮೀಕರಣವನ್ನು ಆಳಗೊಳಿಸುವಲ್ಲಿ ಮತ್ತು ಜಾಗತಿಕವಾಗಿ ಮಾನದಂಡದ ಸಾಂಸ್ಥಿಕ ಚೌಕಟ್ಟುಗಳು, ನಿಯಂತ್ರಕ ಚುರುಕುತನ ಮತ್ತು ಪೂರಕವಾದ ಸಾಮಾಜಿಕ ಪರಿಸರ ವ್ಯವಸ್ಥೆಯಿಂದ ಬೆಂಬಲಿತವಾದ ದೇಶಕ್ಕೆ ಅಂತರರಾಷ್ಟ್ರೀಯ ಬಂಡವಾಳ ಹರಿವನ್ನು ಸುಗಮಗೊಳಿಸುವಲ್ಲಿ ಗಿಫ್ಟ್ಟ ಸಿಟಿಯ ಕಾರ್ಯತಂತ್ರದ ಮಹತ್ವವನ್ನು ಕೇಂದ್ರ ಹಣಕಾಸು ಸಚಿವರು ಎತ್ತಿ ತೋರಿಸಿದರು.

ಭಾರತದ ಅಂತರರಾಷ್ಟ್ರೀಯ ಹಣಕಾಸು ಸೌಧದ ಪ್ರಮುಖ ಸ್ತಂಭವಾಗಿ ಗಿಫ್ಟ್ ಸಿಟಿ ಹೊರಹೊಮ್ಮಿದೆ ಮತ್ತು ಇದು ದೇಶದ ಬೆಳೆಯುತ್ತಿರುವ ಆರ್ಥಿಕ ವಿಶ್ವಾಸ ಹಾಗೂ ಜಾಗತಿಕ ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ ಶ್ರೀಮತಿ ಸೀತಾರಾಮನ್, ಭಾರತವು ಇಂದು ಪ್ರಮಾಣ, ತಂತ್ರಜ್ಞಾನ, ಪ್ರತಿಭೆ ಮತ್ತು ಬೆಳವಣಿಗೆಯ ಅವಕಾಶಗಳ ವಿಶಿಷ್ಟ ಸಂಯೋಜನೆಯನ್ನು ನೀಡುತ್ತದೆ ಎಂದು ತಿಳಿಸಿದರು.

ತಳಮಟ್ಟದ ಬದಲಾವಣೆಗಳನ್ನು ಪ್ರೇರೇಪಿಸುವ ತಕ್ಷಣದ ಕ್ರಮಗಳಿಗೆ ಕಾರಣವಾಗುವ ಭವಿಷ್ಯದ ಚರ್ಚೆಗಳ ಪ್ರಾಮುಖ್ಯತೆಯನ್ನು ಕೇಂದ್ರ ಹಣಕಾಸು ಸಚಿವರು ಒತ್ತಿಹೇಳಿದರು. ಇದುವರೆಗೆ ಸಾಧಿಸಿದ ಪ್ರಗತಿಯು ಆಶಾದಾಯಕವಾಗಿದ್ದು, ಪಾಲುದಾರರ ನಡುವಿನ ನಿರಂತರ ಸಮನ್ವಯವು ʻವಿಕಸಿತ ಭಾರತ @2047ʼರ ಕಡೆಗೆ ಭಾರತದ ಬೆಳವಣಿಗೆಯ ಪಯಣದಲ್ಲಿ ಗಿಫ್ಟ್ ಸಿಟಿಯ ಪಾತ್ರವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಹೇಳಿದರು.

ಪರಿಶೀಲನೆಯ ನಂತರದ ತಮ್ಮ ಭಾಷಣದಲ್ಲಿ ಪ್ರಧಾನಮಂತ್ರಿಯವರ ಪ್ರಧಾನ ಕಾರ್ಯದರ್ಶಿಯವರು, ನುರಿತ ವೃತ್ತಿಪರರನ್ನು ಕರೆತರುವ ಮೂಲಕ ಮತ್ತು ವಿಶ್ವದರ್ಜೆಯ ಮೂಲಸೌಕರ್ಯಗಳನ್ನು ಸೃಷ್ಟಿಸುವ ಮೂಲಕ ಗಿಫ್ಟ್ ಐಎಫ್ಎಸ್ ಸಿಗಾಗಿ ಪ್ರಧಾನಮಂತ್ರಿಯವರ ದೂರದೃಷ್ಟಿಯನ್ನು ಸಾಕಾರಗೊಳಿಸುವ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು ಮತ್ತು ಆ ನಿಟ್ಟಿನಲ್ಲಿ ಇದುವರೆಗೆ ಕೈಗೊಂಡ ಪ್ರಯತ್ನಗಳನ್ನು ಶ್ಲಾಘಿಸಿದರು.

 

*****


(ಪ್ರಕಟಣೆ ಐ.ಡಿ.: 2264419) ವಿಸಿಟರ್ ಕೌಂಟರ್ : 13
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Gujarati , Tamil