ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಅಫ್ಸ್ಲೈಟ್‌ಡೈಕ್ (Afsluitdijk) ಅಣೆಕಟ್ಟಿಗೆ ಭೇಟಿ ನೀಡಿದ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 17 MAY 2026 3:38PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನೆದರ್‌ಲ್ಯಾಂಡ್ಸ್ ನ ಗೌರವಾನ್ವಿತ ಪ್ರಧಾನಮಂತ್ರಿ ರೋಬ್ ಜೆಟ್ಟನ್ ಅವರೊಂದಿಗೆ ಡಚ್ ಜಲ ನಿರ್ವಹಣೆಯ ಐತಿಹಾಸಿಕ ಸಂರಚನೆಯಾದ ಅಫ್ಸ್ಲೈಟ್‌ಡೈಕ್‌ಗೆ ಭೇಟಿ ನೀಡಿದರು.

ಈ ಭೇಟಿಯು ನವೀನ ಜಲ ನಿರ್ವಹಣಾ ಪರಿಹಾರಗಳು, ಹವಾಮಾನ ಸ್ಥಿತಿಸ್ಥಾಪಕತ್ವ ಮತ್ತು ಸುಸ್ಥಿರ ಮೂಲಸೌಕರ್ಯಗಳ ಕಡೆಗೆ ಎರಡೂ ರಾಷ್ಟ್ರಗಳ ಹಂಚಿಕೊಂಡ ಬದ್ಧತೆಯನ್ನು ಒತ್ತಿಹೇಳಿತು. 32 ಕಿಲೋಮೀಟರ್ ಉದ್ದದ ಅಣೆಕಟ್ಟು ಮತ್ತು ಕಾಸ್‌ವೇ (causeway) ಆಗಿರುವ ಅಫ್ಸ್ಲೈಟ್‌ಡೈಕ್, ನೆದರ್ಲ್ಯಾಂಡ್ಸ್‌ನ ಬಹುದೊಡ್ಡ ಭಾಗವನ್ನು ಉತ್ತರ ಸಮುದ್ರದಿಂದ ರಕ್ಷಿಸುವ ಜೊತೆಗೆ ಸಿಹಿನೀರಿನ ಸಂಗ್ರಹಣೆಗೆ ಅನುವು ಮಾಡಿಕೊಡುವ ಮೂಲಕ ಪ್ರವಾಹ ನಿಯಂತ್ರಣ ಮತ್ತು ಭೂ ಸುಧಾರಣೆಯಲ್ಲಿ ಜಾಗತಿಕ ಮಾನದಂಡವಾಗಿದೆ.

ಈ ಅಣೆಕಟ್ಟಿನ ಭೇಟಿಯು ಅಫ್ಸ್ಲೈಟ್‌ಡೈಕ್ ಮತ್ತು ಭಾರತದ ಗುಜರಾತ್ ರಾಜ್ಯದ ಮಹತ್ವಾಕಾಂಕ್ಷೆಯ ಕಲ್ಪಸರ್ ಯೋಜನೆಯ ನಡುವಿನ ಸಾಮ್ಯತೆಗಳ ಮೇಲೆ ಬೆಳಕು ಚೆಲ್ಲಿದೆ. ಕಲ್ಪಸರ್ ಯೋಜನೆಯು, ಖಂಭಾತ್ ಕೊಲ್ಲಿಯಾದ್ಯಂತ ಸಿಹಿನೀರಿನ ಜಲಾಶಯವನ್ನು ನಿರ್ಮಿಸುವ ಗುರಿಯನ್ನು ಹೊಂದಿದ್ದು, ಉಬ್ಬರವಿಳಿತದ ವಿದ್ಯುತ್ ಉತ್ಪಾದನೆ (tidal power generation), ನೀರಾವರಿ ಮತ್ತು ಸಾರಿಗೆ ಮೂಲಸೌಕರ್ಯಗಳನ್ನು ಸಂಯೋಜಿಸುತ್ತದೆ. ಈ ನಿಟ್ಟಿನಲ್ಲಿ, ಕಲ್ಪಸರ್ ಯೋಜನೆಯ ತಾಂತ್ರಿಕ ಸಹಕಾರಕ್ಕಾಗಿ ಭಾರತದ ಜಲಶಕ್ತಿ ಸಚಿವಾಲಯ ಮತ್ತು ನೆದರ್ಲ್ಯಾಂಡ್ಸ್‌ನ ಮೂಲಸೌಕರ್ಯ ಮತ್ತು ಜಲ ನಿರ್ವಹಣಾ ಸಚಿವಾಲಯದ ನಡುವೆ ಉದ್ದೇಶ ಪತ್ರಕ್ಕೆ ಸಹಿ ಹಾಕಿರುವುದನ್ನು ಉಭಯ ದೇಶಗಳು ಸ್ವಾಗತಿಸಿದವು.

ಹೈಡ್ರಾಲಿಕ್ ಇಂಜಿನಿಯರಿಂಗ್‌ನಲ್ಲಿ ಡಚ್ ಪರಿಣತಿ ಮತ್ತು ಭಾರತದ ಅನುಷ್ಠಾನದ ವ್ಯಾಪ್ತಿಯು ಪರಸ್ಪರ ಪ್ರಯೋಜನಕಾರಿ ಪಾಲುದಾರಿಕೆಗೆ ಹೆಚ್ಚಿನ ಅವಕಾಶಗಳನ್ನು ಒದಗಿಸುತ್ತವೆ ಎಂದು ಉಭಯ ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಭೇಟಿಯು ನೀರಿನ ಕುರಿತಾದ ಭಾರತ-ನೆದರ್‌ಲ್ಯಾಂಡ್ಸ್ ಆಯಕಟ್ಟಿನ ಪಾಲುದಾರಿಕೆಯನ್ನು ಮರುಸ್ಥಾಪಿಸಿದೆ, ಜೊತೆಗೆ ನಾವೀನ್ಯತೆ ಮತ್ತು ಸುಸ್ಥಿರತೆಗೆ ಎರಡೂ ದೇಶಗಳ ಹಂಚಿಕೆಯ ಬದ್ಧತೆಯನ್ನು ಉಲ್ಲೇಖಿಸುತ್ತದೆ.


*****


(ಪ್ರಕಟಣೆ ಐ.ಡಿ.: 2262014) ವಿಸಿಟರ್ ಕೌಂಟರ್ : 4
ಪ್ರಕಟಣೆಯನ್ನು ಇದರಲ್ಲಿ ಓದಿ: English , हिन्दी , Gujarati , Tamil