ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ
azadi ka amrit mahotsav

"ಭಾಗಿದಾರಿ ಸೇ ಭಾಗ್ಯೋದಯ" ಎಂಬ ದೃಷ್ಟಿಕೋನದ ಅಡಿಯಲ್ಲಿ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು "ಅಲ್ಪಸಂಖ್ಯಾತರ ಕಲ್ಯಾಣ -  ವಿಕಸಿತ ಭಾರತಕ್ಕಾಗಿ ಎಐ ಮೂಲಕ ಎಲ್ಲವನ್ನೊಳಗೊಂಡ ಅಭಿವೃದ್ಧಿ" ಎನ್ನುವ  ವಿಷಯದ ಕುರಿತು ರಾಷ್ಟ್ರೀಯ ಸಮಾವೇಶವನ್ನು ಆಯೋಜಿಸುತ್ತಿದೆ

ಪ್ರಕಟಣಾ ದಿನಾಂಕ: 13 MAY 2026 1:37PM by PIB Bengaluru

"ಭಾಗಿದಾರಿ ಸೇ ಭಾಗ್ಯೋದಯ" ಎಂಬ ದೃಷ್ಟಿಕೋನದಡಿಯಲ್ಲಿ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು 2026 ರ ಮೇ 14 ರಂದು "ಅಲ್ಪಸಂಖ್ಯಾತರ ಕಲ್ಯಾಣ - ವಿಕಸಿತ ಭಾರತಕ್ಕಾಗಿ ಎಐ ಮೂಲಕ ಎಲ್ಲವನ್ನೊಳಗೊಂಡ ಅಭಿವೃದ್ಧಿ" ಎಂಬ ವಿಷಯದ ಕುರಿತು ರಾಷ್ಟ್ರೀಯ ಸಮಾವೇಶವನ್ನು ಆಯೋಜಿಸುತ್ತಿದೆ. ಈ ಸಮಾವೇಶವು ದೇಶಾದ್ಯಂತ ಅಲ್ಪಸಂಖ್ಯಾತ ಸಮುದಾಯಗಳಿಗೆ ಎಲ್ಲವನ್ನೊಳಗೊಂಡ ಆಡಳಿತವನ್ನು ಬಲಪಡಿಸುವುದು, ನೀತಿಯ ಸಂಪರ್ಕವನ್ನು ಹೆಚ್ಚಿಸುವುದು ಮತ್ತು ತಂತ್ರಜ್ಞಾನ ಆಧಾರಿತ ಕಲ್ಯಾಣ ಯೋಜನೆಗಳ ಮಧ್ಯಸ್ಥಿಕೆಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಈ ಕಾರ್ಯಕ್ರಮವು ವಿಕಸಿತಾ ಭಾರತದ ದೃಷ್ಟಿಕೋನಕ್ಕೆ ಅನುಗುಣವಾಗಿ ಎಲ್ಲರ ಭಾಗವಹಿಸುವಿಕೆಯಿಂದಾಗುವ ಅಭಿವೃದ್ಧಿ ಮತ್ತು ಸಹಕಾರಿ ಒಕ್ಕೂಟವಾದದ ಕಡೆಗೆ ಸಚಿವಾಲಯದ ಬದ್ಧತೆಯನ್ನು ತೋರಿಸುತ್ತದೆ.

ಈ ರಾಷ್ಟ್ರೀಯ ಸಮಾವೇಶಕ್ಕಾಗಿ, ಭಾರತ ಸರ್ಕಾರದ ವಿವಿಧ ಸಚಿವಾಲಯಗಳು ಮತ್ತು ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾರ್ಯದರ್ಶಿಗಳು ಮತ್ತು ಪ್ರತಿನಿಧಿಗಳು ಸೇರಿದಂತೆ ಹಿರಿಯ ಅಧಿಕಾರಿಗಳನ್ನು ಸಚಿವಾಲಯದ ಕಲ್ಯಾಣ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದ ಕುರಿತು ಪಾಲುದಾರರ ಸಮಾಲೋಚನೆ ಮತ್ತು ಚರ್ಚೆಗಳಿಗಾಗಿ ಈ ಸಮಾವೇಶದಲ್ಲಿ ಭಾಗವಹಿಸಲು ಆಹ್ವಾನಿಸಲಾಗಿದೆ.  ಈ ಸಮಾವೇಶವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಸಮನ್ವಯ, ಉತ್ತಮ ಕಾರ್ಯವಿಧಾನಗಳ ವಿನಿಮಯ ಮತ್ತು ಸಹಯೋಗದ ಚರ್ಚೆಗಳಿಗೆ ಅವಕಾಶ ಕಲ್ಪಿಸಲಿದೆ. ಇದು ದೇಶಾದ್ಯಂತ ಇರುವ ಅಲ್ಪಸಂಖ್ಯಾತ ಜನರಿಗೆ ಸಚಿವಾಲಯದ ಯೋಜನೆಗಳ ಗರಿಷ್ಠ ತಲುಪುವಿಕೆ, ಪಾರದರ್ಶಕತೆ ಮತ್ತು ಪ್ರಯೋಜನಗಳನ್ನು ಖಚಿತಪಡಿಸಿಕೊಳ್ಳಲು ಸಹಕಾರಿಯಾಗಲಿದೆ.

ಆಡಳಿತ, ಸೇವಾ ವಿತರಣೆ ಮತ್ತು ಸಾರ್ವಜನಿಕ ನೀತಿಗಳಲ್ಲಿ ಕೃತಕ ಬುದ್ಧಿಮತ್ತೆಯ ಪರಿವರ್ತನಾತ್ಮಕ ಪ್ರಭಾವವನ್ನು ಗುರುತಿಸಿ ಸಚಿವಾಲಯವು, ಮುಂಚೂಣಿಯಲ್ಲಿರುವ ಎಐ ಸಂಸ್ಥೆಗಳನ್ನು ಆಹ್ವಾನಿಸಿದೆ. ಈ ಸಂಸ್ಥೆಗಳು ಕಲ್ಯಾಣ ಕಾರ್ಯಕ್ರಮಗಳ ದಕ್ಷತೆ, ಮೇಲ್ವಿಚಾರಣೆ ಮತ್ತು ಅನುಷ್ಠಾನವನ್ನು ಸುಧಾರಿಸುವಲ್ಲಿ ಎಐ  ಪಾತ್ರದ ಕುರಿತು ವಿಶೇಷ ಅವಧಿಗಳನ್ನು ನಡೆಸಲಿವೆ. ಈ ಸಮಾವೇಶದ ಚರ್ಚೆಗಳು ದತ್ತಾಂಶ ಆಧಾರಿತ ಯೋಜನೆ, ಫಲಾನುಭವಿಗಳ ಉತ್ತಮ ಗುರಿಯನ್ನ ಗುರುತಿಸುವಿಕೆ, ಸುಧಾರಿತ ಮೇಲ್ವಿಚಾರಣಾ ಕಾರ್ಯವಿಧಾನಗಳು ಮತ್ತು ಹೆಚ್ಚಿನ  ನಾಗರಿಕ ಕೇಂದ್ರಿತ ಆಡಳಿತಕ್ಕಾಗಿ ಎಐ ಚಾಲಿತ ಪರಿಹಾರಗಳನ್ನು ಬಳಸಿಕೊಳ್ಳುವ ಬಗ್ಗೆ ಗಮನ ಕೇಂದ್ರೀಕರಿಸುತ್ತವೆ.

ಈ ಸಮಾವೇಶವು ಎಲ್ಲರನ್ನೊಳಗೊಳ್ಳುವ ಮತ್ತು ತಂತ್ರಜ್ಞಾನ ಆಧಾರಿತ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ದೂರದೃಷ್ಟಿಯ ಮಾರ್ಗಸೂಚಿಯನ್ನು ಒದಗಿಸುವ ನಿರೀಕ್ಷೆಯಿದೆ. ಇದು ಸಮಾನ ಅಭಿವೃದ್ಧಿ ಮತ್ತು ರಾಷ್ಟ್ರ ನಿರ್ಮಾಣ ಪ್ರಕ್ರಿಯೆಯಲ್ಲಿ ಎಲ್ಲಾ ಸಮುದಾಯಗಳ ಸಬಲೀಕರಣದ ಭಾಗವಹಿಸುವಿಕೆಯ ಕಡೆಗೆ ಭಾರತ ಸರ್ಕಾರದ ಬದ್ಧತೆಯನ್ನು ಬಲಪಡಿಸುತ್ತದೆ.


*****


(ಪ್ರಕಟಣೆ ಐ.ಡಿ.: 2260596) ವಿಸಿಟರ್ ಕೌಂಟರ್ : 2
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी