ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಗುಜರಾತ್ ನ ಸೋಮನಾಥ ದೇವಾಲಯದಲ್ಲಿ ಮಹಾಪೂಜೆ ಮತ್ತು ಕುಂಭಾಭಿಷೇಕ ನೆರವೇರಿಸಿದ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 11 MAY 2026 3:49PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗುಜರಾತ್ ನ ಸೋಮನಾಥ ದೇವಾಲಯದಲ್ಲಿ ಮಹಾಪೂಜೆ ಮತ್ತು ಕುಂಭಾಭಿಷೇಕ ನೆರವೇರಿಸಿದರು.

ಈ ಮಹಾನ್ ಅವಕಾಶ ಪಡೆಯುವುದು ತನ್ನ ಜೀವನದ ಅತ್ಯಂತ ಭಾವನಾತ್ಮಕ ಮತ್ತು ಮರೆಯಲಾಗದ ಕ್ಷಣಗಳಲ್ಲಿ ಒಂದಾಗಿದೆ ಎಂದು ಪ್ರಧಾನಮಂತ್ರಿಯವರು ಮನದಾಳ ವ್ಯಕ್ತಪಡಿಸಿದರು. ಪುನರ್ನಿರ್ಮಿಸಲಾದ ಸೋಮನಾಥ ದೇವಾಲಯವು ಬಾಗಿಲು ತೆರೆದು 75 ವರ್ಷಗಳನ್ನು ಗುರುತಿಸುವ ವಿಶೇಷ ಸಂದರ್ಭದಲ್ಲಿ ಮಹಾದೇವನಿಗೆ ಪ್ರಾರ್ಥಿಸುವುದು ಮರೆಯಲಾಗದ ಅನುಭವವಾಗಿದೆ ಎಂದು ಅವರು ಹೇಳಿದರು, ದರ್ಶನ ಮತ್ತು ಪೂಜೆಯು ಅಪರಿಮಿತ ಆಧ್ಯಾತ್ಮಿಕ ಶಕ್ತಿಯ ಮೂಲವಾಗಿದೆ ಎಂದು ಹೇಳಿದರು.

ಎಕ್ಸ್‌ ತಾಣದ ಸರಣಿ ಸಂದೇಶದಲ್ಲಿ, ಪ್ರಧಾನಮಂತ್ರಿಯವರು ಈ ರೀತಿ ಬರೆದಿದ್ದಾರೆ:

"सोमनाथ की भव्य और दिव्य पावन धरा पर महादेव के चरणों में महापूजा और कुंभाभिषेक का परम सौभाग्य प्राप्त करना जीवन के अत्यंत भावपूर्ण और अविस्मरणीय क्षणों में से एक है। ईश्वर रूपी जनता जनार्दन का स्मरण करते हुए महादेव के दर्शन और पूजन का यह अलौकिक अवसर, हृदय को अनंत आध्यात्मिक ऊर्जा, श्रद्धा और शिवमय चेतना से अभिभूत कर गया है।"

"ಮರುನಿರ್ಮಾಣಗೊಂಡ ಸೋಮನಾಥ ದೇವಾಲಯವು ತನ್ನ ಬಾಗಿಲು ತೆರೆದು 75 ವರ್ಷಗಳಾದ ವಿಶೇಷ ಸಂದರ್ಭದಲ್ಲಿ ಮಹಾದೇವನನ್ನು ಪ್ರಾರ್ಥಿಸುವುದು ನಾನು ಎಂದಿಗೂ ಮರೆಯಲಾಗದ ಅನುಭವವಾಗಿದೆ. ಮಹಾದೇವನ ದರ್ಶನ ಮತ್ತು ಪೂಜೆಯು ಅಪರಿಮಿತ ಆಧ್ಯಾತ್ಮಿಕ ಶಕ್ತಿಯ ಮೂಲವಾಗಿದೆ."


 

*****


(ಪ್ರಕಟಣೆ ಐ.ಡಿ.: 2259834) ವಿಸಿಟರ್ ಕೌಂಟರ್ : 5