ರಕ್ಷಣಾ ಸಚಿವಾಲಯ
azadi ka amrit mahotsav

ರಕ್ಷಣಾ ಸಚಿವರು ನವದೆಹಲಿಯಲ್ಲಿ ತಮ್ಮ ಇಟಾಲಿಯನ್‌ ಸಹವರ್ತಿಯೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ

ಪ್ರಕಟಣಾ ದಿನಾಂಕ: 29 APR 2026 2:16PM by PIB Bengaluru

ರಕ್ಷಣಾ ಸಚಿವರಾದ ಶ್ರೀ ರಾಜನಾಥ್‌ ಸಿಂಗ್‌ ಅವರು  2026 ರ ಏಪ್ರಿಲ್‌ 30ರಂದು ನವದೆಹಲಿಯಲ್ಲಿ ಇಟಲಿಯ ರಕ್ಷಣಾ ಸಚಿವರಾದ ಶ್ರೀ ಗೈಡೋ ಕ್ರೊಸೆಟ್ಟೊ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಸಭೆಯಲ್ಲಿ, ಸಚಿವರು ಉಭಯ ದೇಶಗಳ ನಡುವಿನ ರಕ್ಷಣಾ ಸಹಕಾರವನ್ನು ಒಳಗೊಂಡ ಹಲವಾರು ವಿಷಯಗಳ ಬಗ್ಗೆ ಚರ್ಚಿಸಲಿದ್ದಾರೆ. ವಿಕಸನಗೊಳ್ಳುತ್ತಿರುವ ಭದ್ರತಾ ಭೂದೃಶ್ಯದ ದೃಷ್ಟಿಯಿಂದ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆ ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ನಿರೀಕ್ಷೆಯಿದೆ.

ರಕ್ಷ ಣಾ ಸಚಿವರು 2023ರ ಅಕ್ಟೋಬರ್‌ನಲ್ಲಿರೋಮ್‌ಗೆ ಭೇಟಿ ನೀಡಿದ ನಂತರ ಭಾರತ ಮತ್ತು ಇಟಲಿ ನಡುವಿನ ರಕ್ಷಣಾ ಸಹಕಾರವು ಮತ್ತಷ್ಟು ವೇಗವನ್ನು ಪಡೆಯಿತು. ರಕ್ಷಣಾ ಸಚಿವರಾದ ಕ್ರೊಸೆಟ್ಟೊ ಅವರ ಚೊಚ್ಚಲ ಭಾರತ ಭೇಟಿಯು ಅಸ್ತಿತ್ವದಲ್ಲಿರುವ ಸಹಕಾರವನ್ನು ಮತ್ತಷ್ಟು ವಿಸ್ತರಿಸಲು ಮತ್ತು ವಿಶೇಷವಾಗಿ ಕೈಗಾರಿಕಾ ಪಾಲುದಾರಿಕೆ ಕ್ಷೇತ್ರದ ಅಡಿಯಲ್ಲಿಸಹಯೋಗದ ಹೊಸ ಕ್ಷೇತ್ರಗಳನ್ನು ಅನ್ವೇಷಿಸುವ ಎರಡೂ ರಾಷ್ಟ್ರಗಳ ಬಯಕೆಯನ್ನು ಒತ್ತಿಹೇಳುತ್ತದೆ.

ಜನವರಿ 2026 ರಲ್ಲಿ ಭಾರತ-ಐರೋಪ್ಯ ಒಕ್ಕೂಟದ ರಕ್ಷಣಾ ಮತ್ತು ಕಾರ್ಯತಂತ್ರದ ಪಾಲುದಾರಿಕೆಗೆ ಸಹಿ ಹಾಕಿರುವುದು ಹೆಚ್ಚುತ್ತಿರುವ ಕಾರ್ಯತಂತ್ರದ ಒಮ್ಮುಖವನ್ನು ಸೂಚಿಸುತ್ತದೆ ಮತ್ತು ಪರಸ್ಪರ ಆಸಕ್ತಿಯ ಕ್ಷೇತ್ರಗಳಲ್ಲಿರಕ್ಷಣಾ ಕೈಗಾರಿಕಾ ಸಹಕಾರಕ್ಕೆ ಮತ್ತಷ್ಟು ಉತ್ತೇಜನವನ್ನು ಒದಗಿಸಿದೆ.

 

******


(ಪ್ರಕಟಣೆ ಐ.ಡಿ.: 2256696) ವಿಸಿಟರ್ ಕೌಂಟರ್ : 3
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Marathi , Bengali , Bengali-TR , Gujarati