ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
“ಭಾರತದಲ್ಲಿ ಸಾರ್ವಜನಿಕ ವೈ-ಫೈ ನೆಟ್‌ವರ್ಕ್‌ಗಳ ಪ್ರಸರಣ’’ ಕುರಿತು ಸಮಾಲೋಚನಾ ದಾಖಲೆ ಬಿಡುಗಡೆ ಮಾಡಿದ ಟ್ರಾಯ್
ಪ್ರಕಟಣಾ ದಿನಾಂಕ:
27 APR 2026 12:28PM by PIB Bengaluru
ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಇಂದು “ಭಾರತದಲ್ಲಿ ಸಾರ್ವಜನಿಕ ವೈ-ಫೈ ನೆಟ್‌ವರ್ಕ್‌ಗಳ ಪ್ರಸರಣ’’ ಕುರಿತು ಸಮಾಲೋಚನಾ ದಾಖಲೆಯನ್ನು ಬಿಡುಗಡೆ ಮಾಡಿದೆ.
ಈ ಸಮಾಲೋಚನಾ ದಾಖಲೆಯು ಹಾಲಿ ಇರುವ ನಿಯಂತ್ರಣ ಚೌಕಟ್ಟನ್ನು ಪರಿಶೀಲಿಸುತ್ತದೆ, ಸಾರ್ವಜನಿಕ ವೈ-ಫೈ ನೆಟ್‌ವರ್ಕ್‌ಗಳ ಪ್ರಸರಣದ ಮೇಲೆ ಪರಿಣಾಮ ಬೀರುವ ಸವಾಲುಗಳನ್ನು ಗುರುತಿಸುತ್ತದೆ ಮತ್ತು ದೇಶಾದ್ಯಂತ ಸಾರ್ವಜನಿಕ ವೈ-ಫೈ ಮೂಲಸೌಕರ್ಯದ ಬೆಳವಣಿಗೆ ವೇಗಗೊಳಿಸುವ ಕ್ರಮಗಳ ಕುರಿತು ಪಾಲುದಾರರಿಂದ ಅಭಿಪ್ರಾಯಗಳನ್ನು ಆಹ್ವಾನಿಸುತ್ತದೆ. ಸಮಾಲೋಚನಾ ದಾಖಲೆಯು ಈ ಕೆಳಗಿನ ಪ್ರಮುಖ ಕ್ಷೇತ್ರಗಳನ್ನು ಒಳಗೊಂಡಿದೆ:
- ಇತರ ದೇಶಗಳಲ್ಲಿನ ಸಾರ್ವಜನಿಕ ವೈ-ಫೈ ಪೂರಕ ವ್ಯವಸ್ಥೆಯ ಅವಲೋಕನ ಮತ್ತು ಅಂತಾರಾಷ್ಟ್ರೀಯ ಅನುಭವಗಳು ಮತ್ತು ಜಾಗತಿಕ ಅತ್ಯುತ್ತಮ ಪದ್ಧತಿಗಳಿಂದ ಪ್ರಮುಖ ಅಂಶಗಳನ್ನು ಪಡೆದುಕೊಳ್ಳುವುದು.
- ನಿಯೋಜನೆ ಪ್ರವೃತ್ತಿಗಳು ಮತ್ತು ಬೇಡಿಕೆ ಮಾದರಿಗಳನ್ನು ಒಳಗೊಂಡಂತೆ ಭಾರತದಲ್ಲಿ ಸಾರ್ವಜನಿಕ ವೈ-ಫೈನ ಪ್ರಸ್ತುತ ಸ್ಥಿತಿಯ ಮೌಲ್ಯಮಾಪನ ಮಾಡುವುದು.
- ದೇಶದಲ್ಲಿ ಸಾರ್ವಜನಿಕ ವೈ-ಫೈ ಪ್ರಸರಣದ ಮೇಲೆ ಪರಿಣಾಮ ಬೀರುವ ಪ್ರಮುಖ ಸಮಸ್ಯೆಗಳು ಮತ್ತು ಸವಾಲುಗಳ ಗುರುತಿಸುವುದು.
- ಗ್ರಾಮೀಣ ಪ್ರದೇಶಗಳು, ನಗರ ಕೇಂದ್ರಗಳು ಮತ್ತು ಜನದಟ್ಟಣೆಯ ಸ್ಥಳಗಳಲ್ಲಿ ಕಾರ್ಯಸಾಧ್ಯವಾದ ಸಾರ್ವಜನಿಕ ವೈ-ಫೈ ಮಾದರಿಗಳನ್ನು ಅಭಿವೃದ್ಧಿಪಡಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಸ್ಥಳೀಯ ಸಂಸ್ಥೆಗಳು, ಟಿಎಸ್‌ಪಿಗಳು/ಐಎಸ್‌ಪಿಗಳು ಮತ್ತು ಖಾಸಗಿ ಸಂಸ್ಥೆಗಳಂತಹ ಪ್ರಮುಖ ಪಾಲುದಾರರ ಪಾತ್ರಗಳನ್ನು ಪರಿಶೀಲಿಸುವುದು.
- ಭಾರತೀಯ ಸಾರ್ವಜನಿಕ ವೈ-ಫೈ ಪೂರಕ ವ್ಯವಸ್ಥೆಯೊಳಗೆ ಅಧಿಕಾರ, ದೃಢೀಕರಣ, ರೋಮಿಂಗ್ ಮತ್ತು ಬಿಲ್ಲಿಂಗ್ ವ್ಯವಸ್ಥೆಗಳಿಗೆ ಸಂಬಂಧಿಸಿದ ಸಮಸ್ಯೆಗಳ ಪರಿಶೀಲನೆ ಮಾಡುವುದು.
- ಭಾರತೀಯ ಸನ್ನಿವೇಶದಲ್ಲಿ ಸಾರ್ವಜನಿಕ ವೈ-ಫೈನ ಸುಸ್ಥಿರತೆಯನ್ನು ಖಾತ್ರಿಪಡಿಸಿಕೊಳ್ಳಲು ಸೂಕ್ತವಾದ ಸಂಭಾವ್ಯ ನೇರ ಮತ್ತು ಪರೋಕ್ಷ ಆದಾಯ ಮಾದರಿಗಳ ವಿಶ್ಲೇಷಣೆ ಮಾಡುವುದು.
ಸಮಾಲೋಚನಾ ದಾಖಲೆಯನ್ನು ಟ್ರಾಯ್ ನ ವೆಬ್‌ಸೈಟ್ www.trai.gov.in ನಲ್ಲಿ ಪ್ರಕಟಿಸಲಾಗಿದೆ. ಸಮಾಲೋಚನಾ ದಾಖಲೆ ಕುರಿತು ಪಾಲುದಾರರಿಂದ ಲಿಖಿತ ಅಭಿಪ್ರಾಯಗಳನ್ನು 2026ರ ಮೇ 25 ರೊಳಗೆ ಮತ್ತು ಪ್ರತಿ-ಅಭಿಪ್ರಾಯಗಳನ್ನು ಜೂನ್2026ರ 8 ರೊಳಗೆ ಆಹ್ವಾನಿಸಲಾಗಿದೆ.
ಟಿಪ್ಪಣಿಗಳನ್ನು ಎಲೆಕ್ಟ್ರಾನಿಕ್ ರೂಪದಲ್ಲಿ advbbpa@trai.gov.in ಗೆ ಕಳುಹಿಸಬಹುದು ಮತ್ತು ಅದರ ಪ್ರತಿಯನ್ನು jtadvbbpa-1@trai.gov.in ಗೆ ಕಳುಹಿಸಬಹುದು. ಯಾವುದೇ ಸ್ಪಷ್ಟೀಕರಣ/ಮಾಹಿತಿಗಾಗಿ, ಟ್ರಾಯ್ ನ ಸಲಹೆಗಾರ (ಬ್ರಾಡ್‌ಬ್ಯಾಂಡ್ ಮತ್ತು ನೀತಿ ವಿಶ್ಲೇಷಣೆ) ಡಾ. ಅಬ್ದುಲ್ ಕಯುಮ್ ಅವರನ್ನು ದೂರವಾಣಿ ಸಂಖ್ಯೆ +91-11 20907757 ಮೂಲಕ ಸಂಪರ್ಕಿಸಬಹುದು.
*****
(ಪ್ರಕಟಣೆ ಐ.ಡಿ.: 2255854)
ವಿಸಿಟರ್ ಕೌಂಟರ್ : 24