ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಬಲ್ಗೇರಿಯಾ ಸಂಸದೀಯ ಚುನಾವಣೆಯಲ್ಲಿ ಜಯಗಳಿಸಿದ್ದಕ್ಕಾಗಿ ಶ್ರೀ ರುಮೆನ್ ರಾದೇವ್ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 21 APR 2026 10:00PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇತ್ತೀಚೆಗೆ ಮುಕ್ತಾಯಗೊಂಡ ಬಲ್ಗೇರಿಯಾ ಸಂಸದೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಕ್ಕಾಗಿ ಶ್ರೀ ರುಮೆನ್ ರಾದೇವ್ ಮತ್ತು ಅವರ ಪಕ್ಷ ಪ್ರೋಗ್ರೆಸ್ಸಿವ್ ಬಲ್ಗೇರಿಯಾವನ್ನು ಅಭಿನಂದಿಸಿದ್ದಾರೆ. ”ಭಾರತ ಮತ್ತು ಬಲ್ಗೇರಿಯಾ ನಡುವಿನ ಸ್ನೇಹಪರ ಮತ್ತು ಬಹುಮುಖಿ ಸಂಬಂಧಗಳನ್ನು ಹಾಗೂ ಈ ಪ್ರದೇಶದಲ್ಲಿ ನಮ್ಮ ವಿಶಾಲ ಸಹಕಾರವನ್ನು ಮತ್ತಷ್ಟು ಬಲಪಡಿಸಲು ಒಗ್ಗೂಡಿ ಕಾರ್ಯನಿರ್ವಹಿಸಲು ನಾನು ಎದುರು ನೋಡುತ್ತಿದ್ದೇನೆ’’ ಎಂದು ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ.

ಪ್ರಧಾನಮಂತ್ರಿ ತಮ್ಮ X ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ:

”ಇತ್ತೀಚೆಗೆ ಮುಕ್ತಾಯಗೊಂಡ ಬಲ್ಗೇರಿಯಾ ಸಂಸದೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಕ್ಕಾಗಿ ಶ್ರೀ ರುಮೆನ್ ರಾದೇವ್ ಮತ್ತು ಅವರ ಪಕ್ಷ ಬಲ್ಗೇರಿಯಾ ಪ್ರೋಗ್ರೆಸ್ಸಿವ್ ಗೆ ಹೃತ್ಪೂರ್ವಕ ಅಭಿನಂದನೆಗಳು.

ಭಾರತ ಮತ್ತು ಬಲ್ಗೇರಿಯಾ ನಡುವಿನ ಸ್ನೇಹಪರ ಮತ್ತು ಬಹುಮುಖಿ ಸಂಬಂಧಗಳನ್ನು ಹಾಗೂ ಈ ಪ್ರದೇಶದಲ್ಲಿ ನಮ್ಮ ವಿಶಾಲ ಸಹಕಾರವನ್ನು ಮತ್ತಷ್ಟು ಬಲಪಡಿಸಲು ಒಗ್ಗೂಡಿ ಕಾರ್ಯನಿರ್ವಹಿಸಲು ನಾನು ಎದುರು ನೋಡುತ್ತಿದ್ದೇನೆ.’’

 

*****


(ಪ್ರಕಟಣೆ ಐ.ಡಿ.: 2254424) ವಿಸಿಟರ್ ಕೌಂಟರ್ : 10
ಪ್ರಕಟಣೆಯನ್ನು ಇದರಲ್ಲಿ ಓದಿ: English , हिन्दी , Manipuri , Bengali , Bengali-TR , Malayalam