ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ನೂರು ಘಟಕಗಳಿಂದ ಆಧಾರ್ ಆಧಾರಿತ ಆಫ್ ಲೈನ್ ಪರಿಶೀಲನೆ ಬಳಕೆ
ಸರ್ಕಾರಿ ಇಲಾಖೆಗಳು, ಫಿನ್ ಟೆಕ್ ಗಳು ಮತ್ತು ಆತಿಥ್ಯ ವಲಯದ ಸಂಸ್ಥೆಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಘಟಕಗಳಿಂದ ಬಳಕೆ
ಪ್ರಕಟಣಾ ದಿನಾಂಕ:
20 APR 2026 3:58PM by PIB Bengaluru
ಆಧಾರ್ ಆಧಾರಿತ ಆಫ್ ಲೈನ್ ಪರಿಶೀಲನಾ ವ್ಯವಸ್ಥೆ ಜಾರಿಗೆ ಬಂದ ಮೂರು ತಿಂಗಳೊಳಗೆ ಕನಿಷ್ಠ 100 ಘಟಕಗಳು / ಸಂಸ್ಥೆಗಳು ಆಫ್‌ಲೈನ್ ಪರಿಶೀಲನೆ ಬಯಸುವ ಘಟಕಗಳಾಗಿ (ಒ ವಿ ಎಸ್ ಇ) ಯಶಸ್ವಿಯಾಗಿ ಸೇರ್ಪಡೆಗೊಂಡಿರುವುದು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ (ಯು ಐ ಡಿ ಎ ಐ) ಗಮನಾರ್ಹ ಸಾಧನೆಯಾಗಿದೆ. ಆಧಾರ್ ಆಫ್‌ಲೈನ್ ಕಾರ್ಯವಿಧಾನದ ಮೂಲಕ ಸುರಕ್ಷಿತ, ಸಮ್ಮತಿ ಸಹಿತ ಮತ್ತು ಕಾಗದರಹಿತ ಪರಿಶೀಲನಾ ಪ್ರಕ್ರಿಯೆಯನ್ನು ಸಕ್ರಿಯಗೊಳಿಸುವಲ್ಲಿ ಈ ಮೈಲಿಗಲ್ಲು ಒಂದು ಪ್ರಮುಖ ಪ್ರಗತಿಯ ಸೂಚಕವಾಗಿದ್ದು, ಸೇವಾ ಪೂರೈಕೆದಾರರು ಮತ್ತು ಜನರು ಇಬ್ಬರನ್ನೂ ಸಮಾನವಾಗಿ ಸಬಲೀಕರಣಗೊಳಿಸಲಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡರ ಇಲಾಖೆಗಳು, ಫಿನ್ ಟೆಕ್ ಸಂಸ್ಥೆಗಳು, ಕಾರ್ಯಕ್ರಮ ನಿರ್ವಹಣಾ (ಈವೆಂಟ್ ಮ್ಯಾನೇಜ್ಮೆಂಟ್) ಮತ್ತು ಆತಿಥ್ಯ ಸಂಸ್ಥೆಗಳು, ಶಿಕ್ಷಣ ಮತ್ತು ಪರೀಕ್ಷೆಗೆ ಸಂಬಂಧಿಸಿದ ಘಟಕಗಳು, ಗುರುತು ಪರಿಶೀಲನೆ, ಹಿನ್ನೆಲೆ ಪರಿಶೀಲನಾ ಸಂಸ್ಥೆಗಳು, ಕಾರ್ಯಪಡೆಯ ಮೌಲ್ಯೀಕರಣ ಕಂಪನಿಗಳು ಹೀಗೆ ವೈವಿಧ್ಯಮಯ ಕ್ಷೇತ್ರಗಳ ಸಂಸ್ಥೆಗಳು ಈ ಸೇವೆಯನ್ನು ಬಳಸಿಕೊಳ್ಳಲು ಮುಂದಾಗಿವೆ.
ಆಧಾರ್ ಆಫ್‌ಲೈನ್ ಪರಿಶೀಲನಾ ವ್ಯವಸ್ಥೆಯೊಂದಿಗಿನ ಸಂಯೋಜನೆಯು ಸೇವಾ ವಿತರಣಾ ಸಮಯಾವಧಿಯನ್ನು ಗಮನಾರ್ಹವಾಗಿ ಸುಧಾರಿಸುವ, ಕಾರ್ಯಾಚರಣೆಯ ಘರ್ಷಣೆಯನ್ನು ಕಡಿಮೆ ಮಾಡುವ ಹಾಗೂ ಭೌತಿಕ ದಾಖಲೆ ನಿರ್ವಹಣೆ ಮತ್ತು ಮಾನವ ಪರಿಶೀಲನಾ ಪ್ರಕ್ರಿಯೆಗಳಿಗೆ ಸಂಬಂಧಿಸಿದ ವೆಚ್ಚಗಳನ್ನು ಕಡಿಮೆ ಮಾಡುವ ನಿರೀಕ್ಷೆ ಇದೆ.
ಈ ಒವಿಎಸ್ಇ ಪಾಲುದಾರರ ಸೇರ್ಪಡೆಯು, ಬಳಕೆದಾರ ನಿಯಂತ್ರಣಕ್ಕೆ ಆದ್ಯತೆ ನೀಡುವ ಜೊತೆಗೆ ಲಭ್ಯತೆ ಖಚಿತಪಡಿಸುತ್ತಾ, ಆಧಾರ್ - ಆಧಾರಿತ ಗೌಪ್ಯತೆಯ ಪ್ರಥಮ ಡಿಜಿಟಲ್ ಪರಿಶೀಲನಾ ಚೌಕಟ್ಟುಗಳಲ್ಲಿ ಹೆಚ್ಚುತ್ತಿರುವ ವಿಶ್ವಾಸವನ್ನು ಪ್ರತಿಬಿಂಬಿಸಿದೆ.
ಕ್ಯೂ ಆರ್ ಕೋಡ್ ಆಧಾರಿತ ಪರಿಶೀಲನೆ ಮತ್ತು ಡಿಜಿಟಲ್ ಸಹಿಯ ದಾಖಲೆಗಳನ್ನು ಸುರಕ್ಷಿತಗೊಳಿಸುವಂತಹ ಆಧಾರ್ ಆಫ್‌ಲೈನ್ ಪರಿಶೀಲನಾ ವಿಧಾನಗಳನ್ನು ಬಳಸಿಕೊಳ್ಳುವ ಮೂಲಕ, ಈ ಘಟಕಗಳು ಈಗ ಯುಐಡಿಎಐ ನ ಪ್ರಧಾನ ದತ್ತಾಂಶಕ್ಕೆ ನೈಜ-ಸಮಯದ ಸಂಪರ್ಕದ ಅಗತ್ಯವಿಲ್ಲದೇ ಗುರುತಿನ ಮಾಹಿತಿಯನ್ನು "ನೋಡಲು, ಹಂಚಿಕೊಳ್ಳಲು ಮತ್ತು ಪರಿಶೀಲಿಸಲು" ಸಾಧ್ಯವಾಗಲಿದೆ.
ಈ ವಿಧಾನವು ದೃಢ ನಿವಾಸಿ-ಕೇಂದ್ರಿತ ಆದ್ಯತೆಯೊಂದಿಗೆ ಆಧಾರ್ ಸಂಖ್ಯೆ ಹೊಂದಿರುವವರ ಕನಿಷ್ಠ ಅಗತ್ಯ ದತ್ತಾಂಶವನ್ನು ಮಾತ್ರ ಹಂಚಿಕೊಳ್ಳುವುದನ್ನು ಖಚಿತಪಡಿಸಲಿದ್ದು, ಗೌಪ್ಯತೆ ಹೆಚ್ಚಿಸಲಿದೆ. ಈ ಸರಳೀಕೃತ ಪರಿಶೀಲನಾ ಪ್ರಕ್ರಿಯೆಯು ಸಂಕೀರ್ಣತೆಯನ್ನು ಕಡಿಮೆ ಮಾಡಲಿದೆ ಹಾಗೂ ಪಾರದರ್ಶಕ ಮತ್ತು ಸಮ್ಮತಿ ಸಹಿತ ಸಂವಹನಗಳ ಮೂಲಕ ವಿಶ್ವಾಸ ನಿರ್ಮಿಸಲಿದೆ.
ಈ ವಿತರಣಾ ಮಾದರಿಯು ಸದೃಢ ಚೇತರಿಕೆಯಾಗಬಲ್ಲ, ಮಾಪನ ಸಾಧ್ಯವಾದ ಮತ್ತು ಸುರಕ್ಷತೆ ಖಾತರಿಪಡಿಸುವ ಸಮಗ್ರ ಮತ್ತು ಭವಿಷ್ಯ ಸಿದ್ಧ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ನಿರ್ಮಿಸುವ ಹಾಗೂ ಜನರು ಯಾರೊಂದಿಗೆ ಮತ್ತು ಯಾವ ಮಾಹಿತಿಯನ್ನು ಸ್ವಯಂಪ್ರೇರಣೆಯಿಂದ ಹಂಚಿಕೊಳ್ಳಲು ಬಯಸುವರು ಎಂಬ ಬಗ್ಗೆ ಮಾಹಿತಿಯ ಮೇಲೆ ನಿಯಂತ್ರಣ ಹೊಂದಲು ಸಬಲೀಕರಣಗೊಳಿಸುವ ಭಾರತದ ವಿಶಾಲ ದೃಷ್ಟಿಕೋನಕ್ಕೆ ಅನುಗುಣವಾಗಿದೆ.
ಆಧಾರ್ ಹೊಂದಿರುವವರ ವೇಗವಾದ ಸೇರ್ಪಡೆ ಸಾಧ್ಯವಾಗಿಸುತ್ತಾ, ದಾಖಲೆಗಳ ಕಡಿಮೆ ಕೆಲಸ ಮತ್ತು ವೈಯಕ್ತಿಕ ಮಾಹಿತಿಯ ಮೇಲೆ ಹೆಚ್ಚಿನ ನಿಯಂತ್ರಣದ ಅನುಕೂಲ ಒದಗಿಸುತ್ತಾ ಸೇವಾ ಪೂರೈಕೆದಾರರೊಂದಿಗೆ ಜನರ ಸಂವಹನವನ್ನು ಸರಳಗೊಳಿಸುವ ಮೂಲಕ “ಸುಲಲಿತ ಜೀವನ” ವರ್ಧಿಸಲು ಯುಐಡಿಎಐ ನಡೆಸುತ್ತಿರುವ ನಿರಂತರ ಪ್ರಯತ್ನಗಳಿಗೆ ಈ ಉಪಕ್ರಮವು ಪೂರಕವಾಗಿದೆ.
*****
(ಪ್ರಕಟಣೆ ಐ.ಡಿ.: 2253836)
ವಿಸಿಟರ್ ಕೌಂಟರ್ : 12