ರೈಲ್ವೇ ಸಚಿವಾಲಯ
ರದ್ದಿಯಿಂದ ನಿರಂತರ ಗಳಿಕೆ ಮತ್ತು ಪ್ರಯಾಣ ದರವಲ್ಲದ ಆದಾಯದಲ್ಲಿನ ಸುಧಾರಣೆಯು ಪ್ರಯಾಣಿಕರ ದರವನ್ನು ಹೆಚ್ಚಿಸದೆ ರೈಲ್ವೆ ನಿಲ್ದಾಣದ ಅನುಭವ ಸುಧಾರಿಸಲು ಸಹಾಯ
ಭಾರತೀಯ ರೈಲ್ವೆ 2025–26 ಹಣಕಾಸು ವರ್ಷದಲ್ಲಿ ರದ್ದಿ ಮಾರಾಟದಿಂದ ₹6813.86 ಕೋಟಿ ಗಳಿಕೆ, ನಿಷ್ಕ್ರಿಯ ಆಸ್ತಿಗಳನ್ನು ಬಳಸುವ ಅಥವಾ ಮಾರಾಟ ಮಾಡುವ ಮೂಲಕ ₹6000 ಕೋಟಿ ಗುರಿ ದಾಟಿದೆ
ಡಿಪೋಗಳು, ಯಾರ್ಡ್‌ಗಳು ಮತ್ತು ಕಾರ್ಯಾಗಾರಗಳಲ್ಲಿ ನಿರ್ಣಾಯಕ ಸ್ಥಳ ಮುಕ್ತಗೊಳಿಸಲಾಗಿದೆ, 'ಮರುಬಳಕೆ' ಮತ್ತು ತ್ಯಾಜ್ಯ ಸಂಗ್ರಹ 'ಕಡಿಮೆ' ಮಾಡುವ ಮೂಲಕ ರೈಲ್ವೆಗಳನ್ನು ಹಸಿರೀಕರಿಣಕ್ಕೆ ಒತ್ತು
ಕಳೆದ 5 ವರ್ಷಗಳಲ್ಲಿ ಶೇ.168 ಬೆಳವಣಿಗೆಯೊಂದಿಗೆ, ರೈಲ್ವೆಯ ಶುಲ್ಕವಲ್ಲದ ಆದಾಯವು ಸುಮಾರು 290 ಕೋಟಿಯಿಂದ 777 ಕೋಟಿಗೆ ಏರಿಕೆ
120 ಜನೌಷಧಿ ಕೇಂದ್ರಗಳು ಮತ್ತು 22 ಪ್ರೀಮಿಯಂ ಬ್ರಾಂಡ್ ಔಟ್‌ಲೆಟ್‌ಗಳು ವಿವಿಧ ರೈಲು ನಿಲ್ದಾಣಗಳಲ್ಲಿ ಬೆಳವಣಿಗೆಯಲ್ಲಿ ಮುಂಚೂಣಿಯಲ್ಲಿ
ಸ್ವಚ್ಛ ನಿಲ್ದಾಣಗಳು, ಆಧುನಿಕ ಮೂಲಸೌಕರ್ಯ, ನವೀಕರಿಸಿದ ಸೌಲಭ್ಯಗಳು ಮತ್ತು ವರ್ಧಿತ ಸುರಕ್ಷತಾ ವ್ಯವಸ್ಥೆಗಳು ಪ್ರಯಾಣಿಕರ ಅನುಭವ ಹೆಚ್ಚಳ
ಸಹ-ಕಾರ್ಯ ಡಿಜಿಟಲ್ ಲೌಂಜ್‌ಗಳು, ವೈದ್ಯಕೀಯ ಕೇಂದ್ರಗಳು, ಬಹು-ಹಂತದ ಕಾರ್ ಪಾರ್ಕಿಂಗ್, ಗೇಮಿಂಗ್ ವಲಯ ಇತ್ಯಾದಿಗಳನ್ನು ವಲಯಗಳಿಂದ ಅಭಿವೃದ್ಧಿಪಡಿಸಲಾಗುತ್ತಿದ್ದು, ಪ್ರಯಾಣ ದರದವಲ್ಲದ ಆದಾಯ ಬಳಕೆ
ಪ್ರಕಟಣಾ ದಿನಾಂಕ:
19 APR 2026 6:59PM by PIB Bengaluru
ರದ್ದಿಯ(ಸ್ಕ್ಯಾರ್ಪ್ ) ನಗದೀಕರಣದಿಂದ ಸುಸ್ಥಿರ ಆದಾಯಗಳಿಕೆ ಹಾಗೂ ಪ್ರಯಾಣಿಕರ ಟಿಕೆಟ್ ದರದಲ್ಲಿ ಯಾವುದೇ ಹೆಚ್ಚಳ ಮಾಡದೆ ದರಯೇತರ ಆದಾಯ ಮೂಲಗಳ ಸ್ಥಿರ ಪ್ರಗತಿಯ ಮೂಲಕ ಭಾರತೀಯ ರೈಲ್ವೆ ತನ್ನ ಹಣಕಾಸು ಸ್ಥಿತಿ ಸ್ಥಾಪಕತ್ವವನ್ನು ಬಲವರ್ಧನೆಗೊಳಿಸಿಕೊಂಡಿದೆ. ತಟಸ್ಥ ಸ್ವತ್ತುಗಳ ಮೌಲ್ಯವನ್ನು ಸಮರ್ಪಕವಾಗಿ ಬಳಸಿಕೊಳ್ಳುವುದು ಮತ್ತು ದರಗಳನ್ನು ಹೊರತುಪಡಿಸಿ, ನವೀನ ಆದಾಯ ಮಾರ್ಗಗಳನ್ನು ವಿಸ್ತರಿಸುವುದು, ಆ ಮೂಲಕ ರೈಲ್ವೆ ನಿಲ್ದಾಣಗಳಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವುದು, ಸ್ವಚ್ಛತೆ ಕಾಯ್ದುಕೊಳ್ಳುವುದು, ಡಿಜಿಟಲ್ ಸೇವೆಗಳು ಮತ್ತು ಪ್ರಯಾಣಿಕರ ಸೌಕರ್ಯಗಳನ್ನು ಒದಗಿಸುವ ಮೂಲಕ ಹಣಕಾಸು ಸುಸ್ಥಿರತೆಯನ್ನು ಸಾಧಿಸಿದೆ. ಈ ಸಮತೋಲಿತ ಮನೋಭಾವ, ದಕ್ಷ ರೀತಿಯಲ್ಲಿ ಆಸ್ತಿ ನಿರ್ವಹಣೆ, ಗ್ರಾಹಕಸ್ನೇಹಿ ಹೂಡಿಕೆಗಳು ಮತ್ತು ಪರಿಸರ ಸುಸ್ಥಿರ ಪದ್ಧತಿಗಳು ಮೂಲಕ ಭಾರತೀಯ ರೈಲ್ವೆ ಹೆಚ್ಚು ಆರಾಮದಾಯಕ, ಆಧುನಿಕ ಮತ್ತು ವಿಶ್ವಾಸಾರ್ಹ ಪ್ರಯಾಣದ ಅನುಭವವನ್ನು ಒದಗಿಸುವ ಬದ್ಧತೆಯನ್ನು ಪುನರ್ ಪ್ರತಿಪಾದಿಸಿದೆ.
ಭಾರತೀಯ ರೈಲ್ವೆಯಿಂದ ರದ್ದಿ ನಗದೀಕರಣ ಸಾಮರ್ಥ್ಯ ಸಮರ್ಪಕ ಬಳಕೆ
ಭಾರತೀಯ ರೈಲ್ವೆ ರದ್ದಿ ವಿಲೇವಾರಿಯಲ್ಲಿ ಅತ್ಯಂತ ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸಿದ್ದು, 2025-26ನೇ ಹಣಕಾಸು ವರ್ಷದಲ್ಲಿ ಉತ್ಕೃಷ್ಟ ಪ್ರಗತಿಯನ್ನು ದಾಖಲಿಸಿದೆ. 6000 ಕೋಟಿ ರೂ.ಗಳ ಗುರಿ ಹೊಂದಲಾಗಿತ್ತು, ಆದರೆ ರೈಲ್ವೆ ದಕ್ಷತೆಯಿಂದ ಹಿಂದಿನ ದಾಖಲೆಯನ್ನು ಅಳಿಸಿ, 6813.86 ಕೋಟಿ ರೂ.ಗಳನ್ನು ರದ್ದಿ ಮಾರಾಟದಿಂದ ಗಳಿಸಿ, ಹೊಸ ಮಾನದಂಡ ಸ್ಥಾಪಿಸಿದೆ.
ಈ ಸಾಧನೆಗೆ 2024-25ನೇ ಸಾಲಿನ ಹಣಕಾಸು ವರ್ಷದ ಸಾಧನೆ ಆಧಾರವಾಗಿದೆ. ಆ ವರ್ಷ ಭಾರತೀಯ ರೈಲ್ವೆಗೆ ರದ್ದಿ ಮಾರಾಟದಿಂದ 5400 ಕೋಟಿ ರೂ.ಗಳ ಗುರಿಯಿತ್ತು. ಆದರೆ ಅದನ್ನು ಮೀರಿ 6641.78 ಕೋಟಿ ರೂ.ಗಳಿಸಿತ್ತು.
ರದ್ದಿ ನಗದೀಕರಣದಲ್ಲಿನ ಸುಸ್ಥಿರ ಪ್ರಗತಿ ಭಾರತೀಯ ರೈಲ್ವೆ ತನ್ನ ಆಸ್ತಿಗಳ ದಕ್ಷ ನಿರ್ವಹಣೆ ಮತ್ತು ಪಾರದರ್ಶಕ ವಿಲೇವಾರಿ ಕಾರ್ಯತಂತ್ರಗಳಿಗೆ ಹೊಂದಿರುವ ದೃಢ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಅತ್ಯಂತ ವ್ಯವಸ್ಥಿತವಾಗಿ ಸರ್ವೀಸ್ ಮಾಡಲಾಗದ ವಸ್ತುಗಳನ್ನು ವಿಲೇವಾರಿ ಮಾಡಲಾಗಿದೆ. ತಟಸ್ಥ ಆಸ್ತಿಗಳ ಮೂಲಕ ತನ್ನ ಆಸ್ತಿಗಳ ಮೌಲ್ಯವನ್ನು ಕಂಡುಕೊಳ್ಳುವ ಜೊತೆಗೆ ಡಿಪೋ, ಯಾರ್ಡ್ ಮತ್ತು ಕಾರ್ಯಾಗಾರಗಳಾದ್ಯಂತ ನಿರ್ಣಾಯಕ ಸ್ಥಳವನ್ನು ತೆರವುಗೊಳಿಸಲಾಗುತ್ತಿದೆ.
ಈ ಉಪಕ್ರಮದಿಂದ ಪರಿಸರ ಸುಸ್ಥಿರತೆಗೆ ಗಮನಾರ್ಹ ಕೊಡುಗೆ ದೊರಕುವುದಲ್ಲದೆ, ಮರು ಸಂಸ್ಕರಣೆಯನ್ನು ಉತ್ತೇಜಿಸಲಾಗುತ್ತಿದೆ ಮತ್ತು ಅನಗತ್ಯ ತ್ಯಾಜ್ಯ ಸಂಗ್ರಹ ತಗ್ಗಿದೆ.
ದರಯೇತರ ಆದಾಯದಿಂದ ರೈಲ್ವೆ ಬಲವರ್ಧನೆ ಮತ್ತು ಪ್ರಯಾಣಿಕರ ಅನುಭವ ವೃದ್ಧಿ
ಭಾರತೀಯ ರೈಲ್ವೆಯಲ್ಲಿ ನಾನ್-ಫೇರ್ ರೆವಿನ್ಯು(ಎನ್ಎಫ್ಆರ್) ಪ್ರಯಾಣದರ ಹೆಚ್ಚಳ ಮಾಡದೇ ಇರುವುದು, ಆರ್ಥಿಕ ಸುಸ್ಥಿರತೆಯನ್ನು ಬಲವರ್ಧನೆಗೊಳಿಸುವಲ್ಲಿ ಅತ್ಯಂತ ಪ್ರಮುಖ ಆಧಾರಸ್ತಂಭವಾಗಿದ್ದು, ಇದು ನೇರವಾಗಿ ರೈಲ್ವೆ ಜಾಲದುದ್ದಕ್ಕೂ ಪ್ರಯಾಣಿಕರಿಗೆ ಪ್ರಯೋಜನವಾಗುತ್ತಿದೆ. ನಿಲ್ದಾಣಗಳ ಮರು ಅಭಿವೃದ್ಧಿ, ಜಾಹಿರಾತು ಪ್ರದರ್ಶನ, ರೈಲ್ವೆಯ ಸ್ವತ್ತು ವಾಣಿಜ್ಯ ಉದ್ದೇಶಗಳಿಗೆ ಬಳಕೆ ಮತ್ತು ಇತರ ನವೀನ ಉಪಕ್ರಮಗಳ ಮೂಲಕ ಆದಾಯವನ್ನು ಸೃಷ್ಟಿಸಲಾಗುತ್ತಿದೆ. ಎನ್ಎಫ್ಆರ್ ನಿಂದ ಪ್ರಯಾಣದರ ಮತ್ತು ಸರಕು ಸಾಗಾಣೆ ದರ ಹೆಚ್ಚಳದ ಅವಲಂಬನೆ ಗಣನೀಯವಾಗಿ ತಗ್ಗಿದೆ. ಈ ಹೆಚ್ಚುವರಿ ಆದಾಯ ಭಾರತೀಯ ರೈಲ್ವೆ ಅದನ್ನು ಆಧುನಿಕ ಮೂಲಸೌಕರ್ಯ, ನಿಲ್ದಾಣಗಳ ಸೌಕರ್ಯ ಉನ್ನತೀಕರಣ, ಸ್ವಚ್ಛತೆ ಹೆಚ್ಚಳ ಮತ್ತು ಪ್ರಯಾಣಿಕರ ಸೌಕರ್ಯವೃದ್ಧಿ, ಡಿಜಿಟಲ್ ಸೇವೆಗಳ ಸುಧಾರಣೆ ಮತ್ತು ಹೆಚ್ಚಿನ ರೈಲುಗಳ ಆರಂಭ ಮತ್ತು ಸುರಕ್ಷತಾ ಕ್ರಮಗಳಿಗೆ ಹೂಡಿಕೆ ಮಾಡಲು ಅನುಕೂಲವಾಗಿದೆ. ಇದು ಅಂತಿಮವಾಗಿ ಪ್ರಯಾಣಿಕರಿಗೆ ಹೆಚ್ಚು ಆರಾಮದಾಯಕ, ಸೂಕ್ತ ಮತ್ತು ವಿಶ್ವಾಸಾರ್ಹ ಪ್ರಯಾಣದ ಅನುಭವವನ್ನು ಒದಗಿಸುತ್ತದೆ.
ಎನ್ಎಫ್ಆರ್ ಗಳಿಕೆಯಲ್ಲಿ ಸ್ಥಿರ ಪ್ರಗತಿಯನ್ನು ಕಾಣಲಾಗುತ್ತಿದ್ದು, 2021–22ನೇ ಸಾಲಿನ ಹಣಕಾಸು ವರ್ಷದಲ್ಲಿ 290 ಕೋಟಿಯಿಂದ 2025–26ನೇ ಸಾಲಿನಲ್ಲಿ 777.76 ಕೋಟಿ ರೂ.ಗಳನ್ನು ಗಳಿಸಲಾಗಿದ್ದು, ಇದು ಉತ್ಕೃಷ್ಟ ಏರುಮುಖಿ ಯಶೋಗಾಥೆಯನ್ನು ಪ್ರತಿಬಿಂಬಿಸುತ್ತದೆ. ಒಟ್ಟಾರೆ ಐದು ವರ್ಷಗಳಲ್ಲಿ ಶೇ. 168ರಷ್ಟು ಹೆಚ್ಚಳವನ್ನು ದಾಖಲಿಸಿದೆ. 2025–26 ಸಾಲಿಗೆ ಎನ್ಎಫ್ಆರ್ ಗುರಿ ಅಂದಾಜು 720.85 ಕೋಟಿ ರೂ. ಮಾಡಲಾಗಿದ್ದು, ಅದು ಈಗಾಗಲೇ 777.76 ಕೋಟಿ ರೂ.ಗಳನ್ನು ತಲುಪಿದ್ದು, ಒಟ್ಟಾರೆ ಪ್ರಗತಿಯನ್ನು ಶೇ. 107.9ಕ್ಕೆ ತಲುಪಿಸಿದೆ. ಒಟ್ಟು ಹೋಲಿಕೆಯಲ್ಲಿ ಎನ್ಎಫ್ಆರ್ ಗಳಿಕೆ 2024–25ರಲ್ಲಿ 686.86 ಕೋಟಿ ರೂ. ಆಗಿದೆ. ಈ ಪ್ರವೃತ್ತಿ ಭಾರತೀಯ ರೈಲ್ವೆಯ ಹಣಕಾಸು ಸ್ಥಿತಿ ಬಲವರ್ಧನೆಯ ಉಪಕ್ರಮಗಳಲ್ಲಿ ಕಾರ್ಯತಂತ್ರ ನಗದೀಕರಣಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವುದು ಕಂಡುಬಂದಿದೆ.
ಈ ಸಂಬಂಧ ಕೆಳಗಿನ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ :
ಪ್ರೀಮಿಯಂ ಬ್ರಾಂಡ್ ಮಳಿಗೆಗಳು
ಎನ್ಎಫ್ಆರ್ ವೃದ್ಧಿಸುವ ಸಲುವಾಗಿ ಪ್ರಮುಖ ನಿಲ್ದಾಣಗಳಲ್ಲಿ ಕಂಪನಿ ಮಾಲಿಕತ್ವದ ಸಿಂಗಲ್ ಬ್ರಾಂಡ್ ಪ್ರೀಮಿಯಂ ಔಟ್ ಲೆಟ್ ಗಳನ್ನು ಸ್ಥಾಪಿಸಲು ಗುತ್ತಿಗೆಗಳನ್ನು ನೀಡಲು ವಲಯ ರೈಲ್ವೆಗಳು ಮಾರ್ಗಸೂಚಿಗಳನ್ನು ಹೊರಡಿಸಿವೆ. ಈ ನೀತಿಯಡಿ ರೈಲ್ವೆ ಕೆಲವು ನವೀನ ಬ್ರಾಂಡೆಡ್ ಔಟ್ ಲೆಟ್ ಗಳನ್ನು ಆರಂಭಿಸಿದೆ ಮತ್ತು ಪ್ರಯಾಣಿಕರ ಅನುಭವವನ್ನು ಹೆಚ್ಚಿಸಲು ಅದೇ ರೀತಿಯ ಬ್ರಾಂಡೆಡ್ ಮಳಿಗೆಗಳನ್ನು ತೆರೆಯಲಾಗಿದೆ. 22 ಪ್ರೀಮಿಯಂ ಬ್ರಾಂಡ್ ಗಳಿಗೆ ಎನ್ಎಫ್ಆರ್ ಮೂಲಕ ಭಾರತೀಯ ರೈಲ್ವೆ ಮಳಿಗೆಗಳನ್ನು ಹಂಚಿಕೆ ಮಾಡಿದೆ.
ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರ(ಪಿಎಂಬಿಜೆಕೆ)ಗಳ ಆರಂಭ
ರೈಲ್ವೆ ನಿಲ್ದಾಣಗಳ ಮೂಲಕ ಪ್ರಯಾಣಿಸುವ ಪ್ರಯಾಣಿಕರ ಕಲ್ಯಾಣ ಮತ್ತು ಯೋಗಕ್ಷೇಮವನ್ನು ಖಾತ್ರಿಪಡಿಸಲು ಭಾರತೀಯ ರೈಲ್ವೆ, ರೈಲು ನಿಲ್ದಾಣಗಳ ಆವರಣದಲ್ಲಿ 50 ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳನ್ನು ಸ್ಥಾಪಿಸಲು ನೀತಿ ಚೌಕಟ್ಟನ್ನು ಪ್ರಕಟಿಸಿ, ಅದನ್ನು ಜಾರಿಗೊಳಿಸಿದೆ. ಈ ಪಿಎಂಬಿಜೆಕೆ ಮಳಿಗೆಗಳು ಭಾರತೀಯ ಫಾರ್ಮಸಿಟಿಕಲ್ಸ್ ಮತ್ತು ವೈದ್ಯಕೀಯ ಸಾಧನಗಳ ಬ್ಯೂರೋ ಹೊರಡಿಸಿರುವ ಮಾರ್ಗಸೂಚಿಗಳ ಪ್ರಕಾರ ಕಾರ್ಯ ನಿರ್ವಹಿಸಲಿವೆ. 2024ರ ಮಾರ್ಚ್ 12ರ ವೇಳೆಗೆ ಎಲ್ಲಾ 50 ಪಿಎಂಬಿಜೆಕೆಗಳನ್ನು ಗೌರವಾನ್ವಿತ ಪ್ರಧಾನಮಂತ್ರಿ ಅವರು ಉದ್ಘಾಟಿಸಿದ್ದಾರೆ. ಅಲ್ಲದೆ ಈ ಉಪಕ್ರಮಗಳ ಯಶಸ್ಸನ್ನು ಆಧರಿಸಿ, ಕಲ್ಯಾಣ ಕಾರ್ಯಕ್ರಮಗಳನ್ನು ಮತ್ತಷ್ಟು ವಿಸ್ತರಿಸಲಾಗುತ್ತಿದೆ. ಭಾರತೀಯ ರೈಲ್ವೆಗೆ ಮತ್ತೆ ಹೆಚ್ಚುವರಿಯಾಗಿ 100 ಪಿಎಂಬಿಜೆಕೆಗಳನ್ನು ಸ್ಥಾಪಿಸಲು ಸೂಚನೆ ನೀಡಲಾಗಿದೆ. ಈ 100 ಪಿಎಂಬಿಜೆಕೆಗಳ ಪೈಕಿ 18 ಪಿಎಂಬಿಜೆಕೆಗಳನ್ನು ಗೌರವಾನ್ವಿತ ಪ್ರಧಾನಮಂತ್ರಿ ಅವ್ರು 2024ರ ನವೆಂಬರ್ 13ರಂದು ಉದ್ಘಾಟಿಸಿದ್ದಾರೆ. ಈವರೆಗೆ ಭಾರತೀಯ ರೈಲ್ವೆ 150ರ ಪೈಕಿ 120 ಪಿಎಂಬಿಜೆಕೆಗಳನ್ನು ತೆರೆದಿದೆ. ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರ(ಪಿಎಂಬಿಜೆಕೆ) ಮಳಿಗೆಗಳನ್ನು ಮತ್ತಷ್ಟು ತೆರೆಯಲು ಆ ಮೂಲಕ ವಿಸ್ತರಿಸಲು ಭಾರತೀಯ ರೈಲ್ವೆ ವಲಯಗಳ ವ್ಯವಸ್ಥಾಪಕ ನಿರ್ದೇಶಕರುಗಳಿಗೆ ತನ್ನ ಅಧಿಕಾರವನ್ನು ನಿಯೋಜಿಸಿದೆ. ಅವರು ಪಿಎಂಬಿಜೆಕೆ ಯೋಜನೆಯನ್ನು ವೇಗವಾಗಿ ಅನುಷ್ಠಾನಗೊಳಿಸುವ ಮೂಲಕ ಹೆಚ್ಚಿನ ಆದಾಯ ಸೃಷ್ಟಿಸುವುದಲ್ಲದೆ, ಪ್ರಯಾಣಿಕರ ಅನುಕೂಲವನ್ನು ಖಾತ್ರಿಪಡಿಸಲಾಗುತ್ತಿದೆ.
ವಲಯ ರೈಲ್ವೆಗಳಿಂದ ಗಮನಾರ್ಹ ಉಪಕ್ರಮಗಳು
ನಾನ್ ಫೇರ್ ರೆವಿನ್ಯು (ಎನ್ಎಫ್ಆರ್) ದರ ಹೆಚ್ಚಳ ಮಾಡದೆ ಆದಾಯ ವೃದ್ಧಿಯನ್ನು ಉತ್ತೇಜಿಸಲು ಮತ್ತು ಪ್ರಯಾಣಿಕರ ಅನುಭವವನ್ನು ಹೆಚ್ಚಿಸಲು ನವೀನ ಚಿಂತನೆಗಳು ಮತ್ತು ಅವುಗಳ ಪರಿಣಾಮಕಾರಿ ಅನುಷ್ಠಾನದ ಮೂಲಕ ರೈಲ್ವೆ ನಿರಂತರ ಪ್ರಯತ್ನಗಳನ್ನು ಕೈಗೊಂಡಿದೆ.
ಕೆಲವು ಉಲ್ಲೇಖಾರ್ಹ ಉಪಕ್ರಮಗಳನ್ನು ಕೈಗೊಳ್ಳಲಾಗಿದ್ದು, ಅವುಗಳಲ್ಲಿ, ಬಹುಹಂತದ ಕಾರ್ ಪಾರ್ಕಿಂಗ್, ವೈದ್ಯಕೀಯ ಆರೈಕೆ ಕೇಂದ್ರ, ನರ್ಸಿಂಗ್ ಪಾಡ್ ಗಳು, ವ್ಯಾಘನ್ ಕ್ಲೀನಿಂಗ್ ಗುತ್ತಿಗೆ, ಈ ಗಾಲಿ ಖುರ್ಚಿಗೆ ಪಾವತಿ ಸೇವೆ ಸೌಕರ್ಯ, ಹೆಲ್ತ್ ಕಿಯೋಸ್, ಗೇಮಿಂಗ್ ಝೋನ್, ಪ್ಲಾಸ್ಟಿಕ್ ಬಾಟಲ್ ಕ್ರಶ್ಶಿಂಗ್ ಮಿಷನ್, ಪ್ಲಾಟ್ ಫಾರ್ಮ ಬ್ರಾಂಡಿಂಗ್, ಖಾಲಿ ಸ್ಥಳವನ್ನು ಪ್ರಯಾಣಿಕರ ಮತ್ತು ಸಾರ್ವಜನಿಕರ ಸೌಕರ್ಯಕ್ಕಾಗಿ ಬಳಕೆ ಮತ್ತಿತರವು ಸೇರಿವೆ.
ಪ್ರೀಮಿಯಂ ಕೋ-ವರ್ಕಿಂಗ್ ಸ್ಪೇಸ್/ಡಿಜಿಟಲ್ ಲಾಂಜ್ ಎನ್ನುವ ನವೀನ ಉಪಕ್ರಮವನ್ನು ಪಶ್ಚಿಮ ರೈಲ್ವೆ ವಿನ್ಯಾಸಗೊಳಿಸಿದ್ದು, ಇದು ಪ್ರಯಾಣಿಕರಿಗೆ ಹೈಸ್ಪೀಡ್ ವೈ-ಫೈ ಸೇವೆ, ವರ್ಕ್ ಸ್ಟೇಷನ್ ಗಳು, ಚಾರ್ಜಿಂಗ್ ಪಾಯಿಂಟ್ ಗಳು, ಸಮ್ಮೇಳನ ಸೌಕರ್ಯಗಳು ಮತ್ತು ಆರಾಮಾಗಿ ಕುಳಿತುಕೊಳ್ಳುವ ಸೌಕರ್ಯಗಳನ್ನು ಒದಗಿಸುತ್ತಿದೆ. ಅಲ್ಲದೆ ಹೆಚ್ಚುವರಿಯಾಗಿ ಪ್ರಿಂಟಿಂಗ್, ಸ್ಕ್ಯಾನಿಂಗ್, ರಿಫ್ರೆಶ್ ಮೆಂಟ್ ಮತ್ತು ದುಡಿಯುವ ಸ್ಥಳವನ್ನು ಬಳಕೆ ಹಾಗು ಪ್ಯಾಕೇಜ್ ಗಳನ್ನು ಒಳಗೊಂಡಿದೆ. ಈ ಉಪಕ್ರಮ ರೈಲ್ವೆ ನಿಲ್ದಾಣಗಳಲ್ಲಿ ಕಾಯುವವರು ಆಧುನಿಕ ಮತ್ತು ಆರಾಮದಾಯಕವಾಗಿ ತಮ್ಮ ಸಮಯವನ್ನು ಸದುಪಯೋಗ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಮಹತ್ವದ ಉಪಕ್ರಮಗಳಾಗಿವೆ. ಇಂತಹ ಉತ್ತಮ ಚಿಂತನೆಗಳನ್ನು ಪ್ರಚುರಪಡಿಸಲು ರೈಲ್ವೆ, ಇತರೆ ವಲಯ ರೈಲ್ವೆಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡಿದೆ.
ಮೇಲಿನ ಎಲ್ಲ ಉಪಕ್ರಮಗಳನ್ನು ಕೈಗೊಳ್ಳುವ ಮೂಲಕ ಭಾರತೀಯ ರೈಲ್ವೆ ದರ ಹೆಚ್ಚಳ ಮಾಡದೆ ಆದಾಯವನ್ನು ವೃದ್ಧಿಸಿಕೊಂಡಿದ್ದು, ಪ್ರಯಾಣಿಕರಿಗೆ ಹೆಚ್ಚು ಆರಾಮದಾಯಕ ಹಾಗೂ ಸೂಕ್ತ ಪ್ರಯಾಣ ಸೇವೆಯನ್ನು ಒದಗಿಸಲಿದೆ.
*****
(ಪ್ರಕಟಣೆ ಐ.ಡಿ.: 2253595)
ವಿಸಿಟರ್ ಕೌಂಟರ್ : 7