ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಎನ್ ಎಫ್ ಡಿ ಸಿ ಮೂಲಕ ಚಲನಚಿತ್ರ ಪೂರಕ ವ್ಯವಸ್ಥೆ ಬಲಪಡಿಸುತ್ತಿರುವ ಸರ್ಕಾರ; ಪಿಪಿಪಿ ಮಾದರಿ ಮತ್ತು ಸುಧಾರಿತ ಚಲನಚಿತ್ರ ನಿರ್ಮಾಣ ಪದ್ಧತಿಗಳ ಉತ್ತೇಜನ
ತಾಂತ್ರಿಕ ಬೆಂಬಲವನ್ನು ಒದಗಿಸಲು ಮತ್ತು ಸ್ಥಳೀಯ ಚಲನಚಿತ್ರ ಕಂಟೆಂಟ್ ಸಂರಕ್ಷಿಸಲು ರಾಜ್ಯ ಚಲನಚಿತ್ರ ಅಭಿವೃದ್ಧಿ ನಿಗಮಗಳೊಂದಿಗೆ ಸಹಭಾಗಿತ್ವ ಹೊಂದಲಿರುವ ಎನ್ ಎಫ್ ಡಿ ಸಿ
ಪ್ರಕಟಣಾ ದಿನಾಂಕ:
01 APR 2026 3:27PM by PIB Bengaluru
ಸರ್ಕಾರವು ಚಲನಚಿತ್ರ ಕಂಟೆಂಟ್ ಅಭಿವೃದ್ಧಿ, ಸಂವಹನ ಮತ್ತು ಪ್ರಸರಣ (ಡಿಸಿಡಿಎಫ್ ಸಿ) ಯೋಜನೆಯ ಮೂಲಕ ಚಲನಚಿತ್ರ ನಿರ್ಮಾಣ ಪೂರಕ ವ್ಯವಸ್ಥೆಯನ್ನು ಸಕ್ರಿಯವಾಗಿ ಬೆಂಬಲಿಸುತ್ತದೆ.
ಡಿ ಸಿ ಡಿ ಎಫ್ ಸಿ (DCDFC) ಯೋಜನೆಯು ಕೇಂದ್ರ ಸರ್ಕಾರದಿಂದ ಶೇ.100ರ ಧನಸಹಾಯ ಪಡೆದ ಕೇಂದ್ರ ವಲಯದ ಯೋಜನೆಯಾಗಿದ್ದು, ಇದರಲ್ಲಿ ಸರ್ಕಾರವು ಸಿನಿಮೀಯ ಶ್ರೇಷ್ಠತೆಯನ್ನು ಬೆಳೆಸಲು ನೇರ ಆರ್ಥಿಕ ಬೆಂಬಲವನ್ನು ನೀಡುತ್ತದೆ.
ಡಿ ಸಿ ಡಿ ಎಫ್ ಸಿ (DCDFC) ಯೋಜನೆಯಡಿಯಲ್ಲಿ, ಸರ್ಕಾರವು ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (NFDC) ಮೂಲಕ ಚಲನಚಿತ್ರ ನಿರ್ಮಾಣವನ್ನು ಸಹ ಸುಗಮಗೊಳಿಸುತ್ತದೆ. ಇದು ಪ್ರಾದೇಶಿಕ ಸಿನಿಮಾ ಮತ್ತು ಸಾಕ್ಷ್ಯಚಿತ್ರಗಳನ್ನು ಒಳಗೊಂಡಿದೆ. ಇದು ದೇಶಾದ್ಯಂತ ಸ್ಥಳೀಯ ತಂತ್ರಜ್ಞರು, ಕಲಾವಿದರು ಮತ್ತು ಸೇವಾ ಪೂರೈಕೆದಾರರಿಗೆ ಉದ್ಯೋಗವನ್ನು ಸೃಷ್ಟಿಸುತ್ತದೆ.
ಸರ್ಕಾರವು ಮುಂಬೈನಲ್ಲಿ ವಿಶ್ವ ಆಡಿಯೋ ದೃಶ್ಯ ಮತ್ತು ಮನರಂಜನಾ ಶೃಂಗಸಭೆಯನ್ನು (ವೇವ್ಸ್ 2025) ಆಯೋಜಿಸಿತು. "ಕ್ರಿಯೇಟ್ ಇನ್ ಇಂಡಿಯಾ, ಕ್ರಿಯೇಟ್ ಫಾರ್ ದಿ ವರ್ಲ್ಡ್" ಉಪಕ್ರಮದ ಅಡಿಯಲ್ಲಿ ಭಾರತವನ್ನು ಕಂಟೆಂಟ್ ಸೃಷ್ಟಿಗೆ ಜಾಗತಿಕ ಕೇಂದ್ರವನ್ನಾಗಿ ಮಾಡುವ ಸರ್ಕಾರದ ದೂರದೃಷ್ಟಿಗೆ ಅನುಗುಣವಾಗಿ ನಡೆಯಿತು. ಈ ಶೃಂಗಸಭೆಯು ಭಾರತೀಯ ನಿರ್ದೇಶಕರು, ನಿರ್ಮಾಪಕರು ಮತ್ತು ನವೋದ್ಯಮಗಳು 100ಕ್ಕೂ ಅಧಿಕ ದೇಶಗಳ ಜಾಗತಿಕ ಖರೀದಿದಾರರು, ಹೂಡಿಕೆದಾರರು, OTT ಪ್ಲಾಟ್‌ಫಾರ್ಮ್‌ಗಳು ಮತ್ತು ತಂತ್ರಜ್ಞಾನ ನಾಯಕರೊಂದಿಗೆ ತೊಡಗಿಸಿಕೊಳ್ಳಲು ಒಂದು ಸಂಯೋಜಿತ ವೇದಿಕೆಯನ್ನು ಒದಗಿಸಿತ್ತು.
ಅಲ್ಲದೆ, ಸರ್ಕಾರವು ಆಡಿಯೋ-ವಿಶುವಲ್ ಸಹ-ನಿರ್ಮಾಣ ಒಪ್ಪಂದಗಳ ಮೂಲಕ ಅಂತಾರಾಷ್ಟ್ರೀಯ ಮತ್ತು ದೇಶೀಯ ಸಹಯೋಗಗಳನ್ನು ಪ್ರೋತ್ಸಾಹಿಸುತ್ತದೆ. ಈ ಯೋಜನೆಗಳು ಸರ್ಕಾರಿ ಬೆಂಬಲದ ಜೊತೆಗೆ ಖಾಸಗಿ ನಿರ್ಮಾಪಕರ ಭಾಗವಹಿಸುವಿಕೆಯನ್ನು ಒಳಗೊಂಡಿರುವುದರಿಂದ, ಅವು ಭಾರತೀಯ ಆಡಿಯೋವಿಶುವಲ್ ಪೂರಕ ವ್ಯವಸ್ಥೆಗೆ ಹೂಡಿಕೆ ಮತ್ತು ಮುಂದುವರಿದ ಚಲನಚಿತ್ರ ನಿರ್ಮಾಣ ಪದ್ದತಿಗಳನ್ನು ತರುವ ಗುರಿಯನ್ನು ಹೊಂದಿರುವ ಸಾರ್ವಜನಿಕ-ಖಾಸಗಿ ಸಹಭಾಗಿತ್ವಗಳಿಗೆ ಅನುಗುಣವಾದ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತವೆ.
ದೇಶೀಯ ಚಲನಚಿತ್ರೋತ್ಸವಗಳನ್ನು ನಡೆಸಲು ಸಹಾಯ ನೀಡುವ ಭಾಗವಾಗಿ ರಾಜ್ಯ ಸರ್ಕಾರಗಳು ಶಿಫಾರಸು ಮಾಡಿದ ಅಂತಹ ಚಲನಚಿತ್ರೋತ್ಸವಗಳಿಗೆ ಅನುದಾನಗಳನ್ನು ನೀಡಲಾಗುತ್ತದೆ. ಅಂತಹ ಉತ್ಸವಗಳನ್ನು ಕ್ಯುರೇಟೆಡ್ ಚಲನಚಿತ್ರ ಪ್ಯಾಕೇಜ್‌ಗಳನ್ನು ಒದಗಿಸುವ ಮೂಲಕ ಮಾಸ್ಟರ್‌ಕ್ಲಾಸ್‌ಗಳು ಮತ್ತು ಕಾರ್ಯಾಗಾರಗಳನ್ನು ನಡೆಸುವ ಮೂಲಕವೂ ಬೆಂಬಲಿಸಲಾಗುತ್ತದೆ. NFDC ಇಡೀ ಚಲನಚಿತ್ರ ಪೂರಕ ವ್ಯವಸ್ಥೆಯಲ್ಲಿ ತಾಂತ್ರಿಕ ಜ್ಞಾನವನ್ನು ನೀಡುವ ಮೂಲಕ ಹಲವು ರಾಜ್ಯ ಚಲನಚಿತ್ರ ಅಭಿವೃದ್ಧಿ ನಿಗಮಗಳೊಂದಿಗೆ ಸಹಕರಿಸುತ್ತದೆ. ರಾಜ್ಯ ಸರ್ಕಾರಗಳ ಸ್ಥಳೀಯ ಚಲನಚಿತ್ರ ವಿಷಯವನ್ನು ಸಂರಕ್ಷಿಸಲು NFDC ಸಹ ಬೆಂಬಲವನ್ನು ನೀಡುತ್ತದೆ. ಅನೇಕ ರಾಜ್ಯಗಳು ತಮ್ಮ ಕೈಗಾರಿಕಾ ಅಭಿವೃದ್ಧಿ ನೀತಿಗಳ ಅಡಿಯಲ್ಲಿ ಸಾರ್ವಜನಿಕ ಖಾಸಗಿ ಪಾಲುದಾರಿಕೆ ಮಾದರಿಗಳ ಅಡಿಯಲ್ಲಿ ಚಲನಚಿತ್ರ ನಿರ್ಮಾಣ ಸ್ಟುಡಿಯೋಗಳ ಅಭಿವೃದ್ಧಿಯನ್ನು ಪ್ರೋತ್ಸಾಹಿಸುತ್ತವೆ
ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಡಾ. ತಿರುಮಾವಲವನ್ ತೋಲ್ಕಪ್ಪಿಯನ್ ಅವರ ಪ್ರಶ್ನೆಗೆ ಸದನದಲ್ಲಿ ಮಂಡಿಸಿದ ಉತ್ತರದಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾರೆ.
*****
(ಪ್ರಕಟಣೆ ಐ.ಡಿ.: 2247755)
ವಿಸಿಟರ್ ಕೌಂಟರ್ : 14