ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ ಅಡಿಯಲ್ಲಿ ಹಸಿರು ಅಮೋನಿಯಾ ಒಪ್ಪಂದಗಳ ವಿನಿಮಯವು ಭಾರತದ ಇಂಧನ ಭದ್ರತೆಯ ಪ್ರಮುಖ ಹೆಜ್ಜೆ: ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ
ಹಸಿರು ಅಮೋನಿಯಾ ಪರಿಸರ ವ್ಯವಸ್ಥೆಯ ಕಾರ್ಯಗತಗೊಳಿಸುವಿಕೆಯು ರೈತರಿಗೆ ಪ್ರಯೋಜನಕಾರಿಯಾಗಿದೆ ಮತ್ತು ಆತ್ಮನಿರ್ಭರ ಭಾರತವನ್ನು ಬಲಪಡಿಸಲಿದೆ: ಕೇಂದ್ರ ಸಚಿವ ಜೆ.ಪಿ. ನಡ್ಡಾ
ಭಾರತದಲ್ಲಿ ರಸಗೊಬ್ಬರ ವಲಯದಲ್ಲಿ ಹಸಿರು ಅಮೋನಿಯಾ ಬಳಕೆಗೆ ವೇಗ; ದೇಶೀಯ ಸಾಮರ್ಥ್ಯ ಮತ್ತು ಪೂರೈಕೆ ಸರಪಳಿಯ ಸ್ಥಿತಿಸ್ಥಾಪಕತ್ವಕ್ಕೆ ಉತ್ತೇಜನ
ಬೃಹತ್ ಪ್ರಮಾಣದ ಹಸಿರು ಅಮೋನಿಯಾ ಹಂಚಿಕೆಯೊಂದಿಗೆ ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ ನ ಪ್ರಮುಖ ಮೈಲಿಗಲ್ಲು ಸಾಧನೆ
ಪ್ರಕಟಣಾ ದಿನಾಂಕ:
30 MAR 2026 8:09PM by PIB Bengaluru
ಹಸಿರು ಅಮೋನಿಯಾ (ಸಂಪೂರ್ಣವಾಗಿ ಪರಿಸರ ಸ್ನೇಹಿ ಮತ್ತು ಸುಸ್ಥಿರ ವಿಧಾನದಲ್ಲಿ ತಯಾರಾದ ಅಮೋನಿಯಾ) ಖರೀದಿ ಒಪ್ಪಂದಗಳು ಮತ್ತು ಹಸಿರು ಅಮೋನಿಯಾ ಪೂರೈಕೆ ಒಪ್ಪಂದಗಳ ವಿನಿಮಯವು ಭಾರತದ ಇಂಧನ ಭದ್ರತೆಯನ್ನು ಬಲಪಡಿಸುವಲ್ಲಿ ಪ್ರಮುಖ ಹೆಜ್ಜೆಯಾಗಿದೆ, ವಿಶೇಷವಾಗಿ ಜಗತ್ತು ಅನಿಶ್ಚಿತತೆಯನ್ನು ಎದುರಿಸುತ್ತಿರುವ ಈ ಸಮಯದಲ್ಲಿ ಇದು ಅತ್ಯಂತ ಮುಖ್ಯವಾಗಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಪ್ರಲ್ಹಾದ್ ಜೋಶಿ ಅವರು ಇಂದು ಹೇಳಿದರು. ಅಟಲ್ ಅಕ್ಷಯ್ ಊರ್ಜಾ ಭವನದಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾದ ಶ್ರೀ ಜೆ.ಪಿ. ನಡ್ಡಾ ಅವರ ಸಮ್ಮುಖದಲ್ಲಿ ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ ಅಡಿಯಲ್ಲಿ ರಸಗೊಬ್ಬರ ವಲಯಕ್ಕಾಗಿ ಹಸಿರು ಅಮೋನಿಯಾ ಒಪ್ಪಂದಗಳ ವಿನಿಮಯ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ಆರ್ಥಿಕ ಬೆಳವಣಿಗೆ ಮತ್ತು ಹವಾಮಾನ ಕ್ರಮಗಳು ಪ್ರಮಾಣದಲ್ಲಿ ಮತ್ತು ವೇಗದಲ್ಲಿ ಒಟ್ಟಿಗೆ ಸಾಗಬಹುದು ಎಂಬುದನ್ನು ಭಾರತ ಪ್ರದರ್ಶಿಸಿದೆ ಎಂದು ಅವರು ಒತ್ತಿ ಹೇಳಿದರು. ಭಾರತವು ಇಂದು ವಿಶ್ವದ ವೇಗವಾಗಿ ಬೆಳೆಯುತ್ತಿರುವ ನವೀಕರಿಸಬಹುದಾದ ಇಂಧನ ಮಾರುಕಟ್ಟೆಗಳಲ್ಲಿ ಒಂದಾಗಿದೆ ಮತ್ತು 2030ರ ವೇಳೆಗೆ 500 ಗಿಗಾವಾಟ್ ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯವನ್ನು ಸಾಧಿಸುವ ಹಾದಿಯಲ್ಲಿದೆ ಎಂದು ಅವರು ಹೇಳಿದರು.

ಕೈಗಾರಿಕೆಗಳು, ಎಸ್ ಇ ಸಿ ಐ ಮತ್ತು ರಸಗೊಬ್ಬರ ಕಂಪನಿಗಳ ನಡುವಿನ 10 ವರ್ಷಗಳ ಅವಧಿಯ ಈ ಒಪ್ಪಂದಗಳ ವಿನಿಮಯವು ಈ ಯೋಜನೆಗಳನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಪ್ರಮುಖ ಮೈಲಿಗಲ್ಲಾಗಿದೆ ಎಂದು ಸಚಿವರು ಹೇಳಿದರು. ದೀರ್ಘಕಾಲೀನ ಒಪ್ಪಂದಗಳು ಬೇಡಿಕೆಯ ನಿಶ್ಚಿತತೆಯನ್ನು ಒದಗಿಸುತ್ತವೆ, ಹಣಕಾಸಿನ ಹರಿವನ್ನು ಖಚಿತಪಡಿಸಿಕೊಳ್ಳುವುದನ್ನು ಸಕ್ರಿಯಗೊಳಿಸುತ್ತವೆ ಮತ್ತು ಹಸಿರು ಅಮೋನಿಯಾ ಉತ್ಪಾದನೆಯಲ್ಲಿ ದೊಡ್ಡ ಪ್ರಮಾಣದ ಹೂಡಿಕೆಗಳಿಗೆ ಬೆಂಬಲ ನೀಡುತ್ತವೆ ಎಂದು ಅವರು ಹೇಳಿದರು.
ಇಂಧನ ಭದ್ರತೆಯು ರಾಷ್ಟ್ರೀಯ ಭದ್ರತೆಗೆ ನಿಕಟವಾಗಿ ಸಂಬಂಧಿಸಿದೆ ಎಂದು ಸಚಿವರು ಒತ್ತಿ ಹೇಳಿದರು ಮತ್ತು ನಿರ್ಣಾಯಕ ವಲಯಗಳಲ್ಲಿ ಆಮದು ಅವಲಂಬನೆಯನ್ನು ಕಡಿಮೆ ಮಾಡುವ ಪ್ರಾಮುಖ್ಯತೆಯನ್ನು ಅವರು ಎತ್ತಿ ತೋರಿಸಿದರು. ಆಮದು ಮಾಡಿಕೊಳ್ಳುವ ಬೂದು ಅಮೋನಿಯಾವನ್ನು (ಸಾಂಪ್ರದಾಯಿಕ ವಿಧಾನದಲ್ಲಿ ತಯಾರಾದ ಅಮೋನಿಯಾ) ಹಸಿರು ಅಮೋನಿಯಾದೊಂದಿಗೆ ಬದಲಾಯಿಸುವುದರಿಂದ ದೇಶೀಯ ಸಾಮರ್ಥ್ಯ ಬಲಗೊಳ್ಳುತ್ತದೆ ಮತ್ತು ಸ್ಥಿತಿಸ್ಥಾಪಕ ಪೂರೈಕೆ ಸರಪಳಿಗಳನ್ನು ನಿರ್ಮಿಸುತ್ತದೆ ಎಂದು ಅವರು ಹೇಳಿದರು. ಯೂರಿಯಾ ಆಧಾರಿತವಲ್ಲದ ರಸಗೊಬ್ಬರ ಘಟಕಗಳಲ್ಲಿ ಆಮದು ಮಾಡಿಕೊಂಡ ಬೂದು ಅಮೋನಿಯಾವನ್ನು ಬದಲಿಸುವುದರ ಮೂಲಕ 10 ವರ್ಷಗಳ ಅವಧಿಯಲ್ಲಿ ಸುಮಾರು $2.5 ಬಿಲಿಯನ್ ವಿದೇಶಿ ವಿನಿಮಯ ಉಳಿತಾಯವಾಗುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.
ಭಾರತದ ಇಂಧನ ಪರಿವರ್ತನೆಯ ಮುಂದಿನ ಹಂತವು ರಸಗೊಬ್ಬರಗಳು, ರಿಫೈನರಿಗಳು, ಉಕ್ಕು ಮತ್ತು ಸಾರಿಗೆಯಂತಹ ಕಠಿಣ ವಲಯಗಳ ಮೇಲೆ ಕೇಂದ್ರೀಕರಿಸುತ್ತದೆ, ಅಲ್ಲಿ ಹಸಿರು ಹೈಡ್ರೋಜನ್ ಮತ್ತು ಅದರ ಉತ್ಪನ್ನಗಳು ನಿರ್ಣಾಯಕ ಪಾತ್ರ ವಹಿಸುತ್ತವೆ ಎಂದು ಸಚಿವರು ಹೇಳಿದರು. ಹಸಿರು ಅಮೋನಿಯಾವು ಕೇವಲ ಶುದ್ಧ ಕಚ್ಚಾ ವಸ್ತುವಾಗಿ ಮಾತ್ರವಲ್ಲದೆ ಹೊಸ ಕೈಗಾರಿಕಾ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು, ಉದ್ಯೋಗಗಳನ್ನು ಸೃಷ್ಟಿಸಲು ಮತ್ತು ಹೂಡಿಕೆಗಳನ್ನು ಆಕರ್ಷಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.
ರಸಗೊಬ್ಬರ ವಲಯಕ್ಕೆ ಬೃಹತ್ ಪ್ರಮಾಣದ ಹಂಚಿಕೆ
ಕೇಂದ್ರ ಸಚಿವ ಶ್ರೀ ಜೆ.ಪಿ. ನಡ್ಡಾ ಅವರು ಈ ಉಪಕ್ರಮವನ್ನು ದೇಶದಲ್ಲಿ ದೃಢವಾದ ಹಸಿರು ಅಮೋನಿಯಾ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ನಿಟ್ಟಿನಲ್ಲಿ ಒಂದು ಐತಿಹಾಸಿಕ ಮತ್ತು ಮುಂದಾಲೋಚನೆಯ ಹೆಜ್ಜೆ ಎಂದು ಬಣ್ಣಿಸಿದರು. ಈ ಒಪ್ಪಂದಗಳು ಭಾರತದಲ್ಲಿ ಹಸಿರು ಅಮೋನಿಯಾದ ಕಾರ್ಯಗತಗೊಳಿಸುವಿಕೆಯನ್ನು ಸೂಚಿಸುತ್ತವೆ ಮತ್ತು ರಸಗೊಬ್ಬರ ವಲಯದಲ್ಲಿ ಸುಸ್ಥಿರ ಹಾಗೂ ಕೈಗೆಟುಕುವ ಪರಿಹಾರಗಳನ್ನು ಉತ್ತೇಜಿಸುವ ಸರ್ಕಾರದ ಬಲವಾದ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ ಎಂದು ಅವರು ಹೇಳಿದರು.

ಭಾರತದ ಅಭಿವೃದ್ಧಿ ಮಾದರಿಯನ್ನು ಉಲ್ಲೇಖಿಸಿದ ಅವರು, ಪ್ರಧಾನಮಂತ್ರಿ ಮೋದಿ ಅವರ ನಾಯಕತ್ವದಲ್ಲಿ ಬೆಳವಣಿಗೆ ಮತ್ತು ಸುಸ್ಥಿರತೆ ಜೊತೆಜೊತೆಯಾಗಿ ಸಾಗಬಲ್ಲವು ಎಂದು ದೇಶವು ತೋರಿಸಿಕೊಟ್ಟಿದೆ ಎಂದು ಹೇಳಿದರು. ಈ ಉಪಕ್ರಮವು ಆಮದುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ, ದರವನ್ನು ಕೈಗೆಟುಕುವಂತೆ ಮಾಡುತ್ತದೆ ಮತ್ತು ರಸಗೊಬ್ಬರ ವಲಯದಲ್ಲಿ ಸ್ವಾವಲಂಬನೆಯನ್ನು ಬಲಪಡಿಸುತ್ತದೆ, ಇದರಿಂದಾಗಿ ರೈತರು ಯಾವುದಕ್ಕೂ ಚಿಂತಿಸಬೇಕಾಗಿಲ್ಲ ಎಂದು ಅವರು ಒತ್ತಿ ಹೇಳಿದರು. ವರ್ಷಕ್ಕೆ ಸುಮಾರು 7.24 ಲಕ್ಷ ಟನ್ ಹಸಿರು ಅಮೋನಿಯಾ ಹಂಚಿಕೆಯೊಂದಿಗೆ, ದೇಶವು ಆತ್ಮನಿರ್ಭರ ಭಾರತದತ್ತ ದೃಢವಾಗಿ ಸಾಗುತ್ತಿದೆ, ಜೊತೆಗೆ ಈ ವಲಯದಲ್ಲಿ ಬೆಳವಣಿಗೆ ಮತ್ತು ಹೂಡಿಕೆಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ ಎಂದು ಅವರು ತಿಳಿಸಿದರು.
ಕೇಂದ್ರ ವಿದ್ಯುತ್ ಮತ್ತು ಹೊಸ ಹಾಗೂ ನವೀಕರಿಸಬಹುದಾದ ಇಂಧನ ರಾಜ್ಯ ಸಚಿವರಾದ ಶ್ರೀ ಶ್ರೀಪಾದ್ ಯೆಸ್ಸೋ ನಾಯಕ್, ರಸಗೊಬ್ಬರ ಇಲಾಖೆಯ ಕಾರ್ಯದರ್ಶಿ ಶ್ರೀ ರಜತ್ ಕುಮಾರ್ ಮಿಶ್ರಾ ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಕಾರ್ಯದರ್ಶಿ ಶ್ರೀ ಸಂತೋಷ್ ಕುಮಾರ್ ಸಾರಂಗಿ ಮತ್ತು ಈ ಸಚಿವಾಲಯಗಳ ಇತರ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಿನ್ನೆಲೆ
ಭಾರತ ಸರ್ಕಾರವು ₹19,744 ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ ಅನ್ನು ಜಾರಿಗೆ ತರುತ್ತಿದೆ, ಇದು ಹಸಿರು ಹೈಡ್ರೋಜನ್ ಮತ್ತು ಅದರ ಉತ್ಪನ್ನಗಳ ಉತ್ಪಾದನೆ, ಬಳಕೆ ಮತ್ತು ರಫ್ತಿಗೆ ಭಾರತವನ್ನು ಜಾಗತಿಕ ಕೇಂದ್ರವನ್ನಾಗಿ ಮಾಡುವ ಗುರಿಯನ್ನು ಹೊಂದಿದೆ. ಈ ಮಿಷನ್ 2030 ರ ವೇಳೆಗೆ ವರ್ಷಕ್ಕೆ ಕನಿಷ್ಠ 5 ಮಿಲಿಯನ್ ಮೆಟ್ರಿಕ್ ಟನ್ ಹಸಿರು ಹೈಡ್ರೋಜನ್ ಉತ್ಪಾದಿಸುವ ಗುರಿಯನ್ನು ಹೊಂದಿದೆ, ಜೊತೆಗೆ ಪ್ರಮುಖ ವಲಯಗಳ ಇಂಗಾಲೀಕರಣವನ್ನು ಕಡಿಮೆ ಮಾಡುವುದು, ಇಂಧನ ಭದ್ರತೆಯನ್ನು ಹೆಚ್ಚಿಸುವುದು ಮತ್ತು ಹೂಡಿಕೆಗಳನ್ನು ಆಕರ್ಷಿಸುವುದು ಇದರ ಉದ್ದೇಶವಾಗಿದೆ.
ಮಿಷನ್ ಅಡಿಯಲ್ಲಿ, ಹಸಿರು ಹೈಡ್ರೋಜನ್ ಪರಿವರ್ತನೆಗಾಗಿ ಕಾರ್ಯತಂತ್ರದ ಮಧ್ಯಸ್ಥಿಕೆಗಳ (SIGHT) ಕಾರ್ಯಕ್ರಮವನ್ನು ಭಾರತದಲ್ಲಿ ಹಸಿರು ಹೈಡ್ರೋಜನ್ ಉತ್ಪಾದನೆಯನ್ನು ಉತ್ತೇಜಿಸಲು ಮತ್ತು ಪಾರದರ್ಶಕ ಸ್ಪರ್ಧಾತ್ಮಕ ಬಿಡ್ಡಿಂಗ್ ಮೂಲಕ ವೆಚ್ಚದ ಸ್ಪರ್ಧಾತ್ಮಕತೆಯನ್ನು ತರಲು ಜಾರಿಗೊಳಿಸಲಾಗುತ್ತಿದೆ. ಈ ಸಂದರ್ಭದಲ್ಲಿ, ಭಾರತ ಸೌರಶಕ್ತಿ ನಿಗಮ (ಎಸ್ ಇ ಸಿ ಐ) ದೇಶಾದ್ಯಂತದ ರಸಗೊಬ್ಬರ ಘಟಕಗಳಿಗೆ ಹಸಿರು ಅಮೋನಿಯಾ ಪೂರೈಕೆಗಾಗಿ ಸ್ಪರ್ಧಾತ್ಮಕ ಬಿಡ್ಡಿಂಗ್ ನಡೆಸಿದೆ.
ಬಿಡ್ಡಿಂಗ್ ಪ್ರಕ್ರಿಯೆಯು ಸ್ಪರ್ಧಾತ್ಮಕ ಹಸಿರು ಅಮೋನಿಯಾ ಬೆಲೆಗಳ ಆವಿಷ್ಕಾರಕ್ಕೆ ಕಾರಣವಾಗಿದ್ದು, ಕನಿಷ್ಠ ಬೆಲೆ ಕೆಜಿಗೆ ಸುಮಾರು ₹₹49.75 ಮತ್ತು ಒಟ್ಟಾರೆ ಬೆಲೆ ವ್ಯಾಪ್ತಿ ಸುಮಾರು ₹49.75 – 64.74 ರಷ್ಟಿದೆ. ಇದಕ್ಕೆ ಹೋಲಿಸಿದರೆ, ಅಂತಾರಾಷ್ಟ್ರೀಯ ಬೆಲೆಗಳು ಪ್ರತಿ ಟನ್ ಗೆ ಸುಮಾರು 1000 ಯುರೋಗಳು (ಸುಮಾರು ಕೆಜಿಗೆ ₹110) ಎಂದು ವರದಿಯಾಗಿದೆ, ಇದು ಭಾರತದಲ್ಲಿ ಶೋಧಿತ ಬೆಲೆಗಳು ಜಾಗತಿಕ ಮಾನದಂಡಗಳಿಗೆ ಹೋಲಿಸಿದರೆ ಸ್ಪರ್ಧಾತ್ಮಕವಾಗಿವೆ ಎಂದು ಸೂಚಿಸುತ್ತದೆ.
ಈ ಪ್ರಕ್ರಿಯೆಯ ಮೂಲಕ, ಎಸ್ ಇ ಸಿ ಐ ಆಯ್ದ ಡೆವಲಪರ್ ಗಳಿಗೆ ವರ್ಷಕ್ಕೆ ಸುಮಾರು 7,24,000 ಟನ್ (ಟಿಪಿಎ) ಒಟ್ಟು ಸಾಮರ್ಥ್ಯವನ್ನು ಹಂಚಿಕೆ ಮಾಡಿದೆ, ಈ ಪೂರೈಕೆಯು ದೇಶಾದ್ಯಂತದ 13 ರಸಗೊಬ್ಬರ ಘಟಕಗಳಿಗೆ ಲಿಂಕ್ ಆಗಿದೆ. ಸ್ಪರ್ಧಾತ್ಮಕ ಬಿಡ್ಡಿಂಗ್ ಪಾರದರ್ಶಕತೆ, ಸಮರ್ಥ ಬೆಲೆ ಆವಿಷ್ಕಾರ ಮತ್ತು ದೀರ್ಘಕಾಲೀನ ಬೇಡಿಕೆಯ ಭರವಸೆಯನ್ನು ಖಚಿತಪಡಿಸಿದೆ, ಇದರಿಂದಾಗಿ ಹಸಿರು ಅಮೋನಿಯಾ ಉತ್ಪಾದನೆಯಲ್ಲಿ ಪ್ರಮಾಣ ಮತ್ತು ಹೂಡಿಕೆಯನ್ನು ಹೆಚ್ಚಿಸಲು ಸಾಧ್ಯವಾಗಿದೆ.
ಒಪ್ಪಂದಗಳಿಗೆ ಸಹಿ ಹಾಕಿದ ಕಂಪನಿಗಳ ವಿವರಗಳು:
|
ಕ್ರ.ಸಂ.
|
ರಸಗೊಬ್ಬರ ಕಂಪನಿಯ ಹೆಸರು
|
ಉತ್ಪಾದನಾ ಘಟಕ
|
ಹಸಿರು ಅಮೋನಿಯಾ ಪ್ರಮಾಣ (ವರ್ಷಕ್ಕೆ ಮೆಟ್ರಿಕ್ ಟನ್)
|
ಡೆವಲಪರ್ / ವಿಜೇತ
|
ಶೋಧಿತ ಬೆಲೆ (ರೂ/ಕೆಜಿ)
|
|
1.
|
ಇಂಡಿಯನ್ ಫಾರ್ಮರ್ಸ್ ಫರ್ಟಿಲೈಸರ್ ಕೋಆಪರೇಟಿವ್ ಲಿಮಿಟೆಡ್ (ಇಫ್ಕೋ)
|
ಕಾಂಡ್ಲಾ (ಗುಜರಾತ್)
|
1,00,000
|
ಎಸಿಎಂಇ ಕ್ಲೀನ್-ಟೆಕ್
|
54.73
|
|
ಪಾರಾದೀಪ್ (ಒಡಿಶಾ)
|
1,00,000
|
ಎಸಿಎಂಇ ಕ್ಲೀನ್-ಟೆಕ್
|
49.75
|
|
2.
|
ಕೋರಮಂಡಲ್ ಇಂಟರ್ನ್ಯಾಷನಲ್ ಲಿಮಿಟೆಡ್ (ಸಿಐಎಲ್)
|
ಕಾಕಿನಾಡ (ಆಂಧ್ರಪ್ರದೇಶ)
|
85,000
|
ಜ್ಯಾಕ್ಸನ್ ಗ್ರೀನ್ ಮತ್ತು OCIOR
|
50.75
|
|
ವಿಶಾಖಪಟ್ಟಣಂ (ಆಂಧ್ರಪ್ರದೇಶ)
|
50,000
|
ಎಸಿಎಂಇ ಕ್ಲೀನ್-ಟೆಕ್
|
51.89
|
|
3.
|
ಪಾರಾದೀಪ್ ಫಾಸ್ಫೇಟ್ಸ್ ಲಿಮಿಟೆಡ್ (ಪಿಪಿಎಲ್)
|
ಪಾರಾದೀಪ್ (ಒಡಿಶಾ)
|
75,000
|
ಎಸಿಎಂಇ ಕ್ಲೀನ್-ಟೆಕ್
|
55.75
|
|
ಜುವಾರಿನಗರ (ಗೋವಾ)
|
25,000
|
ಎಸಿಎಂಇ ಕ್ಲೀನ್-ಟೆಕ್
|
62.84
|
| |
ಪಾರಾದೀಪ್ ಫಾಸ್ಫೇಟ್ಸ್ ಲಿಮಿಟೆಡ್ (ಪಿಪಿಎಲ್)
|
ಮಂಗಳೂರು
|
15,000
|
ಎಸ್ ಸಿ ಸಿ ಇನ್ಫ್ರಾಸ್ಟ್ರಕ್ಚರ್ ಪ್ರೈ. ಲಿಮಿಟೆಡ್
|
57.65
|
|
4.
|
ಓಸ್ವಾಲ್
|
ಕೃಷ್ಣ ಫಾಸ್ಕೆಮ್ ಲಿಮಿಟೆಡ್, ಮೇಘನಗರ (ಮಧ್ಯಪ್ರದೇಶ)
|
70,000
|
ಎನ್ ಟಿ ಪಿ ಸಿ ರಿನ್ಯೂವಬಲ್ ಎನರ್ಜಿ
|
51.80
|
|
ಮಧ್ಯ ಭಾರತ್ ಆಗ್ರೋ ಪ್ರಾಡಕ್ಟ್ಸ್ ಲಿಮಿಟೆಡ್-II, ಸಾಗರ್ (ಮಧ್ಯಪ್ರದೇಶ)
|
60,000
|
ಓರಿಯಾನಾ ಪವರ್ ಲಿಮಿಟೆಡ್
|
52.25
|
| |
|
ಮಧ್ಯ ಭಾರತ್ ಆಗ್ರೋ ಪ್ರಾಡಕ್ಟ್ಸ್ ಲಿಮಿಟೆಡ್-III, ಧುಲೆ (ಮಹಾರಾಷ್ಟ್ರ)
|
70,000
|
ಎಸ್ ಸಿ ಸಿ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್
|
53.05
|
|
5.
|
ಇಂಡೋರಾಮಾ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಐಐಪಿಎಲ್)
|
ಹಲ್ದಿಯಾ (ಪಶ್ಚಿಮ ಬಂಗಾಳ)
|
20,000
|
ಎಸಿಎಂಇ ಕ್ಲೀನ್-ಟೆಕ್
|
64.74
|
*****
(ಪ್ರಕಟಣೆ ಐ.ಡಿ.: 2247107)
ವಿಸಿಟರ್ ಕೌಂಟರ್ : 18