ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಭಾರತಾದ್ಯಂತ ಎ.ವಿ.ಜಿ.ಸಿ-ಎಕ್ಸ್.ಆರ್. ಪರಿಸರ ವ್ಯವಸ್ಥೆಯನ್ನು ಮುನ್ನಡೆಸಲಿರುವ ಐಐಸಿಟಿ; ಈ ಹಬ್-ಅಂಡ್-ಸ್ಪೋಕ್ ಮಾದರಿ ರಾಷ್ಟ್ರವ್ಯಾಪಿ ಸಹಯೋಗವನ್ನು ಸುಗಮಗೊಳಿಸಲಿದೆ
ಪ್ರಕಟಣಾ ದಿನಾಂಕ:
27 MAR 2026 5:17PM by PIB Bengaluru
ಎ.ವಿ.ಜಿ.ಸಿ-ಎಕ್ಸ್.ಆರ್. ವಲಯದ ಬೆಳವಣಿಗೆಗೆ ಸಮಗ್ರ ಕಾರ್ಯತಂತ್ರ ಮತ್ತು ನೀತಿ ಕ್ರಮಗಳನ್ನು ರೂಪಿಸಲು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಏಪ್ರಿಲ್ 2022ರಲ್ಲಿ ಎ.ವಿ.ಜಿ.ಸಿ. ಪ್ರಚಾರ ಕಾರ್ಯಪಡೆಯನ್ನು ರಚಿಸಿತ್ತು. ಎ.ವಿ.ಜಿ.ಸಿ-ಎಕ್ಸ್.ಆರ್. ಪರಿಸರ ವ್ಯವಸ್ಥೆಯನ್ನು ಉತ್ತೇಜಿಸುವಲ್ಲಿ ರಾಜ್ಯಗಳನ್ನು ಬೆಂಬಲಿಸಲು ಕಾರ್ಯಪಡೆ ತನ್ನ ವರದಿಯಲ್ಲಿ ಮಾದರಿ ರಾಜ್ಯ ನೀತಿ ಚೌಕಟ್ಟನ್ನು ಸಹ ಸಿದ್ಧಪಡಿಸಿತ್ತು.
ಭಾರತವನ್ನು ಎ.ವಿ.ಜಿ.ಸಿ-ಎಕ್ಸ್.ಆರ್.ಗಾಗಿ ಜಾಗತಿಕ ಕೇಂದ್ರವನ್ನಾಗಿ ಮಾಡುವ ಮಹತ್ವದ ಹೆಜ್ಜೆಯಲ್ಲಿ, ಎ.ವಿ.ಜಿ.ಸಿ-ಎಕ್ಸ್.ಆರ್.ಗಾಗಿ ರಾಷ್ಟ್ರೀಯ ಶ್ರೇಷ್ಠತಾ ಕೇಂದ್ರ (ಎನ್. ಸಿ. ಒ .ಇ.) ಸ್ಥಾಪನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಕೇಂದ್ರವನ್ನು ಮುಂಬೈನಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕ್ರಿಯೇಟಿವ್ ಟೆಕ್ನಾಲಜಿ (ಐ.ಐ.ಸಿ.ಟಿ.) ಎಂದು ಹೆಸರಿಸಲಾಗಿದೆ.
ರಾಜ್ಯಗಳೊಂದಿಗೆ ಸಹಯೋಗವನ್ನು ಸುಗಮಗೊಳಿಸಲು ಮತ್ತು ಸಾಮರ್ಥ್ಯ ನಿರ್ಮಾಣ ಪ್ರಯತ್ನಗಳನ್ನು ಬೆಂಬಲಿಸಲು ಐಐಸಿಟಿ ರಾಷ್ಟ್ರೀಯ ಕೇಂದ್ರವಾಗಿ ಕಾರ್ಯನಿರ್ವಹಿಸಲು ಉದ್ದೇಶಿಸಲಾಗಿದೆ. ಇದು ಎ.ವಿ.ಜಿ.ಸಿ ಕ್ಷೇತ್ರದ ವಲಯದಲ್ಲಿ ಪ್ರಾದೇಶಿಕ ಸಾಮರ್ಥ್ಯಗಳು ಮತ್ತು ಶ್ರೇಷ್ಠತಾ ಕೇಂದ್ರಗಳ ಅಭಿವೃದ್ಧಿಗೆ ಕೊಡುಗೆ ನೀಡಬಹುದಾದ ಸಂಸ್ಥೆಗಳೊಂದಿಗೆ ತೊಡಗಿಸಿಕೊಳ್ಳಲು ಸಹಾಯ ಮಾಡುತ್ತದೆ. ದೇಶಾದ್ಯಂತ ಉದ್ಯಮ, ಶೈಕ್ಷಣಿಕ ಮತ್ತು ಇತರ ಪಾಲುದಾರರೊಂದಿಗೆ ಸಹಯೋಗವನ್ನು ಸುಲಭಗೊಳಿಸಲು ಈ ಸಂಸ್ಥೆಯನ್ನು ಹಬ್-ಅಂಡ್-ಸ್ಪೋಕ್ ಮಾದರಿಯಡಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ.
ಐ.ಐ.ಸಿ.ಟಿ. ಜಾಗತಿಕ ತಂತ್ರಜ್ಞಾನ ಕಂಪನಿಗಳು, ಕೈಗಾರಿಕಾ ಪಾಲುದಾರರು ಮತ್ತು ಶೈಕ್ಷಣಿಕ ಸಂಸ್ಥೆಗಳೊಂದಿಗೆ ಸಹಕರಿಸುತ್ತದೆ. ಈ ಸಹಯೋಗಗಳು ಪಠ್ಯಕ್ರಮ ಅಭಿವೃದ್ಧಿ, ವಿಶೇಷ ತರಬೇತಿ ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸುವುದು, ಸಂಶೋಧನೆ ಮತ್ತು ಅಭಿವೃದ್ಧಿ, ಇಂಟರ್ನ್ಶಿಪ್ ಗಳು, ವಿದ್ಯಾರ್ಥಿವೇತನಗಳು ಮತ್ತು ಸ್ಟಾರ್ಟ್ಅಪ್ ಇನ್ಕ್ಯುಬೇಷನ್, ಇದರಿಂದಾಗಿ ಉದ್ಯಮ-ಶೈಕ್ಷಣಿಕ ಪಾಲುದಾರಿಕೆಗಳನ್ನು ಬಲಪಡಿಸುವುದು ಮತ್ತು ಎ.ವಿ.ಜಿ.ಸಿ-ಎಕ್ಸ್.ಆರ್. ಕ್ಷೇತ್ರದ ವಲಯದಲ್ಲಿ ಪ್ರತಿಭೆಗಳ ಅಭಿವೃದ್ಧಿಯನ್ನು ಬೆಂಬಲಿಸುತ್ತದೆ.
ಈ ಸಂಸ್ಥೆಯು ದೇಶಾದ್ಯಂತ ವಿವಿಧ ರಾಜ್ಯಗಳಿಂದ ವಿದ್ಯಾರ್ಥಿಗಳು ಮತ್ತು ಪ್ರಶಿಕ್ಷಣಾರ್ಥಿಗಳನ್ನು ಆಕರ್ಷಿಸುತ್ತಿದೆ ಮತ್ತು ಎ.ವಿ.ಜಿ.ಸಿ-ಎಕ್ಸ್.ಆರ್ಡೊಮೇನ್ನಲ್ಲಿ ಪ್ಯಾನ್-ಇಂಡಿಯಾ ಪ್ರತಿಭಾ ಪೂಲ್ ಅನ್ನು ಬೆಳೆಸುತ್ತಿದೆ.
ಸಚಿವಾಲಯವು ಎ.ವಿ.ಜಿ.ಸಿ-ಎಕ್ಸ್.ಆರ್. ವಲಯದ ಪ್ರಚಾರ ಸೇರಿದಂತೆ ವಿವಿಧ ವಿಷಯಗಳ ಕುರಿತು ರಾಜ್ಯಗಳೊಂದಿಗೆ ಕಾರ್ಯಾಗಾರಗಳು, ಸಮ್ಮೇಳನಗಳು ಮತ್ತು ವೆಬಿನಾರ್ ಗಳನ್ನು ನಿಯಮಿತವಾಗಿ ನಡೆಸುತ್ತದೆ.
ಶ್ರೀ ಸನಾ ಸತೀಶ್ ಬಾಬು ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಾ ಕೇಂದ್ರ ವಾರ್ತಾ ಮತ್ತು ಪ್ರಸಾರ ರಾಜ್ಯ ಖಾತೆ ಸಚಿವರಾದ ಡಾ. ಎಲ್. ಮುರುಗನ್ ಅವರು ಇಂದು ರಾಜ್ಯಸಭೆಯಲ್ಲಿ ಈ ಮಾಹಿತಿಯನ್ನು ಸಲ್ಲಿಸಿದ್ದಾರೆ.
*****
(ಪ್ರಕಟಣೆ ಐ.ಡಿ.: 2246150)
ವಿಸಿಟರ್ ಕೌಂಟರ್ : 7