ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
azadi ka amrit mahotsav

ವಿಶ್ವ ಕ್ಷಯರೋಗ ದಿನ 2026 ಇದರ ರಾಷ್ಟ್ರೀಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುವ ಕೇಂದ್ರ ಆರೋಗ್ಯ ಸಚಿವರಾದ ಶ್ರೀ ಜಗತ್ ಪ್ರಕಾಶ್ ನಡ್ಡಾ 


ವಿಶ್ವ ಕ್ಷಯರೋಗ ದಿನ -2026 ಇದರ ಪರಿಕಲ್ಪನೆ 'ಹೌದು! ನಾವು ಕ್ಷಯರೋಗವನ್ನು ಕೊನೆಗೊಳಿಸಬಹುದು!' - ಕ್ಷಯರೋಗವನ್ನು ಕೊನೆಗೊಳಿಸಲು ಸಾಮೂಹಿಕ ಸಂಕಲ್ಪವನ್ನು ಪ್ರತಿಬಿಂಬಿಸುತ್ತದೆ

ಕೇಂದ್ರ ಆರೋಗ್ಯ ಸಚಿವರು ಟಿಬಿ ಮುಕ್ತ ಭಾರತ್ ಮೊಬೈಲ್ ಅಪ್ಲಿಕೇಶನ್ ಮತ್ತು ಅರ್ಬನ್ ವಾರ್ಡ್ ಉಪಕ್ರಮದ ಜೊತೆಗೆ 100 ದಿನಗಳ ವಿಶೇಷ ಅಭಿಯಾನ 'ಕ್ಷಯರೋಗ ಮುಕ್ತ ಭಾರತ ಅಭಿಯಾನʼ ವನ್ನು ಕೂಡಾ ಪ್ರಾರಂಭಿಸಲಿದ್ದಾರೆ

ಪ್ರಕಟಣಾ ದಿನಾಂಕ: 23 MAR 2026 1:14PM by PIB Bengaluru

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು 2026 ರ “ವಿಶ್ವ ಕ್ಷಯರೋಗ ದಿನ”ವನ್ನು ಆಚರಿಸಲು ಮಾರ್ಚ್ 24, 2026 ರಂದು ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ಗೌತಮ್ ಬುದ್ಧ ವಿಶ್ವವಿದ್ಯಾಲಯದಲ್ಲಿ ರಾಷ್ಟ್ರೀಯ ಮಟ್ಟದ ಕಾರ್ಯಕ್ರಮವನ್ನು ಆಯೋಜಿಸಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ಜಗತ್ ಪ್ರಕಾಶ್ ನಡ್ಡಾ ಾವರು ವಹಿಸಲಿದ್ದಾರೆ.

ಈ ಕಾರ್ಯಕ್ರಮವು ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ “ಕ್ಷಯರೋಗ-ಮುಕ್ತ ಭಾರತ” ದೃಷ್ಟಿಕೋನಕ್ಕೆ ಅನುಗುಣವಾಗಿ, ಕ್ಷಯರೋಗ (ಟಿಬಿ) ನಿರ್ಮೂಲನೆಯಲ್ಲಿ ಭಾರತದ ವೇಗವರ್ಧಿತ ಪ್ರಗತಿಯನ್ನು ಉಲ್ಲೇಖಿಸುವ ಗುರಿಯನ್ನು ಹೊಂದಿದೆ. ಇದು ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ (ಎನ್.ಟಿ.ಇ.ಪಿ.) ಅಡಿಯಲ್ಲಿ ಪ್ರಮುಖ ಸಾಧನೆಗಳು, ನವೀನ ತಂತ್ರಗಳು ಮತ್ತು ಬಲವರ್ಧಿತ ಸಮುದಾಯ ತೊಡಗಿಸಿಕೊಳ್ಳುವಿಕೆಯನ್ನು ಪ್ರದರ್ಶಿಸಲು ಒಂದು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.

ಈ ಸಂದರ್ಭದಲ್ಲಿ, ಗೌರವಾನ್ವಿತ ಕೇಂದ್ರ ಆರೋಗ್ಯ ಸಚಿವರು “ಟಿಬಿ ಮುಕ್ತ ಭಾರತ್ ಮೊಬೈಲ್ ಅಪ್ಲಿಕೇಶನ್” ಮತ್ತು “ಟಿಬಿ ಮುಕ್ತ್ ಅರ್ಬನ್ ವಾರ್ಡ್” ಉಪಕ್ರಮಗಳನ್ನು ಪ್ರಾರಂಭಿಸುವುದರ ಜೊತೆಗೆ ಕೇಂದ್ರೀಕೃತ ಮತ್ತು ತೀವ್ರಗೊಳಿಸಿದ 100 ದಿನಗಳ ವಿಶೇಷ ಅಭಿಯಾನ "ಟಿಬಿ ಮುಕ್ತ್ ಭಾರತ್ ಅಭಿಯಾನ್" ವನ್ನು ಉದ್ಘಾಟಿಸಲಿದ್ದಾರೆ. ಈ ಉಪಕ್ರಮಗಳು ವಿಶೇಷವಾಗಿ ಹೆಚ್ಚಿನ ಹೊರೆ ಇರುವ ಪ್ರದೇಶಗಳಲ್ಲಿ, ಕ್ಷಯರೋಗ (ಟಿಬಿ) ಪ್ರಕರಣ ಪತ್ತೆಯನ್ನು ಇನ್ನೂ ವೇಗಗೊಳಿಸುವುದು, ಚಿಕಿತ್ಸೆಯ ಅನುಸರಣೆಯನ್ನು ಸುಧಾರಿಸುವುದು ಮತ್ತು ಕ್ಷಯರೋಗ (ಟಿಬಿ) ನಿಯಂತ್ರಣಾ ಸೇವೆಗಳ ಕೊನೆಯ ಮೈಲಿ ವಿತರಣೆಯನ್ನು ಬಲಪಡಿಸುವ ಗುರಿಯನ್ನು ಹೊಂದಿವೆ.

ಈ ಪ್ರಯತ್ನಗಳು 2026 ರ ವಿಶ್ವ ಟಿಬಿ ದಿನದ ಪರಿಕಲ್ಪನೆ - "ಹೌದು! ನಾವು ಕ್ಷಯರೋಗ (ಟಿಬಿ) ವನ್ನು ಕೊನೆಗೊಳಿಸಬಹುದು!" ನೊಂದಿಗೆ ಬಲವಾಗಿ ಪ್ರತಿಧ್ವನಿಸುತ್ತವೆ ಮತ್ತು ಕ್ಷಯರೋಗ (ಟಿಬಿ) ವಿರುದ್ಧದ ಹೋರಾಟವನ್ನು ತೀವ್ರಗೊಳಿಸುವ ಭಾರತದ ನವೀಕೃತ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ. ಇನ್ನೂ ಮುಖ್ಯವಾಗಿ, ಇವುಗಳು ಕ್ಷಯ ಮುಕ್ತ ಭಾರತವನ್ನು ಸಾಧಿಸುವ ರಾಷ್ಟ್ರದ ಸಂಕಲ್ಪವನ್ನು ನಿರಂತರವಾಗಿ ಒತ್ತಿಹೇಳುವ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ದೃಷ್ಟಿಕೋನ ಮತ್ತು ಕ್ರಮಕ್ಕಾಗಿ ನೀಡಿದ "ಹೌದು, ನಾವು ಕ್ಷಯರೋಗವನ್ನು ಕೊನೆಗೊಳಿಸಬಹುದು" ಕರೆಯನ್ನು ಪ್ರತಿಧ್ವನಿಸುತ್ತದೆ ಎಂದು ಸಚಿವರು ದೃಢಪಡಿಸಿದರು.

ಈ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಖಾತೆ ಸಚಿವರಾದ ಶ್ರೀಮತಿ ಅನುಪ್ರಿಯಾ ಪಟೇಲ್; ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಶ್ರೀ ಬ್ರಜೇಶ್ ಪಾಠಕ್; ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿ; ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಿರಿಯ ಅಧಿಕಾರಿಗಳು, ಸಾರ್ವಜನಿಕ ಆರೋಗ್ಯ ತಜ್ಞರು, ಅಭಿವೃದ್ಧಿ ಪಾಲುದಾರರು, ಆರೋಗ್ಯ ವೃತ್ತಿಪರರು ಮತ್ತು ಸಮುದಾಯ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

2026 ರ ವಿಶ್ವ ಕ್ಷಯರೋಗ ದಿನದ ಆಚರಣೆಯು ಜಾಗತಿಕ ಗುರಿಗಳಿಗಿಂತ ಮುಂಚಿತವಾಗಿ ಕ್ಷಯರೋಗ ನಿರ್ಮೂಲನೆಗೆ ಸಂಬಂಧಿಸಿದ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸುವ ಪ್ರಯತ್ನಗಳನ್ನು ವೇಗಗೊಳಿಸುವ ಭಾರತದ ಸಂಕಲ್ಪವನ್ನು ಒತ್ತಿಹೇಳುತ್ತದೆ. ಈ ಕಾರ್ಯಕ್ರಮವು ಬಹು-ವಲಯ ಸಹಯೋಗವನ್ನು ತೀವ್ರಗೊಳಿಸುವ ಮತ್ತು ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿ ಕ್ಷಯವನ್ನು ತೊಡೆದುಹಾಕಲು ಪುರಾವೆ ಆಧಾರಿತ ತಂತ್ರಗಳನ್ನು ಅಳವಡಿಸಿಕೊಳ್ಳುವ ರಾಷ್ಟ್ರದ ಬದ್ಧತೆಯನ್ನು ಪುನರುಚ್ಚರಿಸುತ್ತದೆ.

 

*****


(ಪ್ರಕಟಣೆ ಐ.ಡಿ.: 2243986) ವಿಸಿಟರ್ ಕೌಂಟರ್ : 8
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Punjabi