ಹಣಕಾಸು ಸಚಿವಾಲಯ
azadi ka amrit mahotsav

ಮೈಕ್ರೋಫೈನಾನ್ಸ್ ಸಂಸ್ಥೆಗಳಿಗೆ ಕ್ರೆಡಿಟ್ ಗ್ಯಾರಂಟಿ ಸ್ಕೀಮ್-2.0 (ಸಿ.ಜಿ.ಎಸ್.ಎಂ.ಎಫ್.ಐ-2.0) ಸವಲತ್ತನ್ನು ಕೇಂದ್ರ ಸರ್ಕಾರ ಒದಗಿಸಲಿದೆ 


ಎಂ.ಎಫ್.ಐ ಗಳಿಗೆ ಸಾಲ ನೀಡುವುದನ್ನು ಬಲಪಡಿಸಲು ಎನ್.ಸಿ.ಜಿ.ಟಿ.ಸಿ. ಮೂಲಕ ಕ್ರೆಡಿಟ್ ಗ್ಯಾರಂಟಿ ಬೆಂಬಲವನ್ನು ಒದಗಿಸುವ ಗುರಿಯನ್ನು ಈ ಯೋಜನೆ ಹೊಂದಿದೆ, ಎನ್.ಬಿ.ಎಫ್.ಸಿ.- ಎಂ.ಎಫ್.ಐ ಗಳಿಗೆ ಒಟ್ಟಾರೆ ₹20,000 ಕೋಟಿಗಳವರೆಗೆ ಸಾಲದ ಹರಿವನ್ನು ಹೆಚ್ಚಿಸಲು ಅನುಕೂಲವಾಗುತ್ತದೆ

ಈ ಯೋಜನೆಯಿಂದ ಸುಮಾರು 36 ಲಕ್ಷ ಎಂ.ಎಫ್.ಐ ಸಾಲಗಾರರು ಪ್ರಯೋಜನ ಪಡೆಯುತ್ತಾರೆಂದು ಅಂದಾಜಿಸಲಾಗಿದೆ

ಪ್ರಕಟಣಾ ದಿನಾಂಕ: 21 MAR 2026 2:00PM by PIB Bengaluru

ಭಾರತ ಸರ್ಕಾರವು ಮೈಕ್ರೋಫೈನಾನ್ಸ್ ಸಂಸ್ಥೆಗಳಿಗೆ ಕ್ರೆಡಿಟ್ ಗ್ಯಾರಂಟಿ ಸ್ಕೀಮ್-2.0 (ಸಿ.ಜಿ.ಎಸ್.ಎಂ.ಎಫ್.ಐ-2.0) ಅನ್ನು ಪರಿಚಯಿಸಿದೆ. ಈ ಯೋಜನೆಯು ಬ್ಯಾಂಕೇತರ ಹಣಕಾಸು ಕಂಪನಿ-ಮೈಕ್ರೋಫೈನಾನ್ಸ್ ಸಂಸ್ಥೆಗಳು (ಎನ್.ಬಿ.ಎಫ್.ಸಿ-ಎಂ.ಎಫ್.ಐ-2.0) ಮತ್ತು ಸಣ್ಣ ಸಾಲಗಾರರಿಗೆ ಸಾಲ ನೀಡುವಾಗ ಎಂ.ಎಫ್.ಐ ಗಳಿಗೆ ನೀಡುವ ಹಣಕಾಸಿನ ನೆರವಿನ ನಿರೀಕ್ಷಿತ ಮುಂಬರುವ ನಷ್ಟಗಳ ಪರಿಹಾರ ಸುರಕ್ಷತೆಯಾಗಿ ಬ್ಯಾಂಕ್‌ ಗಳು/ಎಫ್.ಐ ಗಳಿಗೆ ನ್ಯಾಷನಲ್ ಕ್ರೆಡಿಟ್ ಗ್ಯಾರಂಟಿ ಟ್ರಸ್ಟಿ ಕಂಪನಿ ಲಿಮಿಟೆಡ್ (ಎನ್.ಸಿ.ಜಿ.ಟಿ.ಸಿ) ಮೂಲಕ ಗ್ಯಾರಂಟಿ ಕವರ್ ಒದಗಿಸುವ ಗುರಿಯನ್ನು ಹೊಂದಿದೆ.

ಯೋಜನೆಯ ಪ್ರಮುಖ ಲಕ್ಷಣಗಳು:

  • ಅರ್ಹ ಸಾಲಗಾರರು: ಆರ್.ಬಿ.ಐ. ಕಾಲಕಾಲಕ್ಕೆ ಸೂಚಿಸಿದಂತೆ ಮೈಕ್ರೋ ಫೈನಾನ್ಸ್‌ ನ ನಿಯಂತ್ರಕ ವ್ಯಾಖ್ಯಾನದೊಳಗೆ ಅಸ್ತಿತ್ವದಲ್ಲಿರುವ ಅಥವಾ ಹೊಸ ಸಣ್ಣ ಸಾಲಗಾರರು.
  • ಖಾತರಿ ವ್ಯಾಪ್ತಿ: ಸಣ್ಣ ಸಾಲಗಾರರಿಗೆ ಡೀಫಾಲ್ಟ್ ಮೊತ್ತದ 80%, ಮಧ್ಯಮ ಸಾಲಗಾರರಿಗೆ 75% ಮತ್ತು ದೊಡ್ಡ ಎನ್.ಬಿ.ಎಫ್.ಸಿ - ಎಂ.ಎಫ್.ಐಗಳು/ಎಂ.ಎಫ್.ಐಗಳಿಗೆ 70%.ಆಗಿರುತ್ತದೆ
  • ಖಾತರಿ ಶುಲ್ಕ: ಅನುಮೋದಿತ ಮೊತ್ತದ ಮೇಲೆ (ಮೊದಲ ವರ್ಷ) ಮತ್ತು ಬಾಕಿ ಮೊತ್ತದ ಮೇಲೆ (ನಂತರ) ವಾರ್ಷಿಕ 0.50% ರಷ್ಟು ಆಗಿರುತ್ತದೆ 
  • ಬಡ್ಡಿ ದರ: ಎನ್.ಬಿ.ಎಫ್.ಸಿ-ಎಂ.ಎಫ್.ಐ.ಗಳು ಅಥವಾ ಎಂ.ಎಫ್.ಐ.ಗಳಿಗೆ ಎಂ.ಎಲ್.ಐ.ಗಳು ನೀಡುವ ಸಾಲಗಳ ಮೇಲೆ ಇ.ಬಿ.ಎಲ್.ಆರ್. ಅಥವಾ ಎಂ.ಸಿ.ಎಲ್.ಆರ್.  + ವರ್ಷಕ್ಕೆ 2% ಮಿತಿಗೊಳಿಸಲಾಗಿದೆ. ಸಣ್ಣ ಸಾಲಗಾರರಿಗೆ ಸಾಲ ನೀಡುವಾಗ, ಈ ಸಾಲದಾತರು ಕಳೆದ 6 ತಿಂಗಳ ಸರಾಸರಿ ಸಾಲದ ದರಕ್ಕಿಂತ 1% ಕಡಿಮೆ ಬಡ್ಡಿದರವನ್ನು ಮಿತಿಗೊಳಿಸಬೇಕು.
  • 30.06.2026 ರವರೆಗೆ ಮಾನ್ಯ ಅಥವಾ ರೂ. 20,000 ಕೋಟಿಗಳವರೆಗಿನ ಸಾಲಗಳು, ಯಾವುದು ಮೊದಲೋ ಅದನ್ನು ಖಾತರಿಪಡಿಸಲಾಗುತ್ತದೆ.

ಪರಿಣಾಮ:

ಈ ಯೋಜನೆಯು ಎಂ.ಎಫ್.ಐ ವಲಯಕ್ಕೆ ಹೆಚ್ಚಿದ ಸಾಲದ ಹರಿವನ್ನು ಸುಗಮಗೊಳಿಸುತ್ತದೆ.  ಈ ಯೋಜನೆಯು ಎನ್.ಬಿ.ಎಫ್.ಸಿ - ಎಂ.ಎಫ್.ಐಗಳು/ಎಂ.ಎಫ್.ಐಗಳಿಗೆ ಸುಮಾರು 36 ಲಕ್ಷ ಸಣ್ಣ ಸಾಲಗಾರರಿಗೆ ಸಾಲ ನೀಡಲು ಅನುಕೂಲವಾಗಲಿದೆ ಎಂದು ಅಂದಾಜಿಸಲಾಗಿದೆ.

ಹಿನ್ನೆಲೆ:

ಆರ್ಥಿಕ ಪಿರಮಿಡ್‌ ನ ಕೆಳಭಾಗದಲ್ಲಿರುವ ಜನರಿಗೆ ಸಾಲವನ್ನು ತಲುಪಿಸುವ ಮೂಲಕ ಹಣಕಾಸು ಸೇರ್ಪಡೆಯಲ್ಲಿ ಮೈಕ್ರೋಫೈನಾನ್ಸ್ ಪ್ರಮುಖ ಪಾತ್ರ ವಹಿಸುತ್ತದೆ. ಎನ್.ಬಿ.ಎಫ್.ಸಿ - ಎಂ.ಎಫ್.ಐಗಳು ಮತ್ತು ಎಂ.ಎಫ್.ಐಗಳು ಮೈಕ್ರೋಫೈನಾನ್ಸ್ ಸಾಲ ವ್ಯವಹಾರದಲ್ಲಿ ಪ್ರಮುಖ ಭಾಗವಹಿಸುವ ಸಂಸ್ಥೆಗಳಾವೆ. ಮೈಕ್ರೋಫೈನಾನ್ಸ್ ವಲಯದಲ್ಲಿ ನಡೆಯುತ್ತಿರುವ ಆರ್ಥಿಕ ಒತ್ತಡದ ದೃಷ್ಟಿಯಿಂದ, ಬ್ಯಾಂಕುಗಳು ಎಂ.ಎಫ್.ಐ.ಗಳಿಗೆ ಸಾಲ ನೀಡುವುದರಲ್ಲಿ ನಿಧಾನಗತಿ ಕಂಡುಬಂದಿದೆ, ಇದರಿಂದಾಗಿ ಸಣ್ಣ ಎಂ.ಎಫ್.ಐಗಳು ಸಾಲ ಪಡೆಯಲು ಹೆಣಗಾಡುತ್ತಿವೆ. ಭಾರತೀಯ ರಿಸರ್ವ್ ಬ್ಯಾಂಕ್ ಸೂಚಿಸಿದಂತೆ ಮೈಕ್ರೋಫೈನಾನ್ಸ್‌ ನ ನಿಯಂತ್ರಕ ವ್ಯಾಖ್ಯಾನದೊಳಗೆ ಸಣ್ಣ ಸಾಲಗಾರರಿಗೆ ಸಾಲ ನೀಡುವುದಕ್ಕಾಗಿ ಎನ್.ಬಿ.ಎಫ್.ಸಿ - ಎಂ.ಎಫ್.ಐಗಳಿಗೆ ಅಥವಾ ಎಂ.ಎಫ್.ಐಗಳಿಗೆ ಹಣಕಾಸು ಒದಗಿಸಲು ಸಾಲ ನೀಡುವ ಸಂಸ್ಥೆಗಳನ್ನು ಪ್ರೋತ್ಸಾಹಿಸುವ ಗುರಿಯನ್ನು ಕೂಡ ಈ ಯೋಜನೆ ಹೊಂದಿದೆ.

 

*****


(ಪ್ರಕಟಣೆ ಐ.ಡಿ.: 2243359) ವಿಸಿಟರ್ ಕೌಂಟರ್ : 17
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Gujarati