ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ
azadi ka amrit mahotsav

ಅನಿಲ ಪೂರೈಕೆಯನ್ನು ಹೆಚ್ಚಿಸಿದ ಸರಕಾರ; ಯೂರಿಯಾ ಉತ್ಪಾದನೆಯು ಶೇ. 23 ರಷ್ಟು ಹೆಚ್ಚಳ


2026ರ ಮುಂಗಾರು ಸುರಕ್ಷಿತ: ಭಾರತೀಯ ರೈತರಿಗೆ ಶಕ್ತಿ ತುಂಬಲು ರಸಗೊಬ್ಬರ ಆಮದು ವೈವಿದ್ಯೀಕರಣ

ಮಾರ್ಚ್-ಅಂತ್ಯದ ಮೊದಲು ಭಾರತೀಯ ಗೋದಾಮುಗಳಲ್ಲಿ ಹೆಚ್ಚಿನ ಪ್ರಮಾಣದ ರಸಗೊಬ್ಬರ ಲಭ್ಯತೆ ಖಾತ್ರಿ

ಪ್ರಕಟಣಾ ದಿನಾಂಕ: 19 MAR 2026 7:06PM by PIB Bengaluru

ಪಶ್ಚಿಮ ಏಷ್ಯಾದಲ್ಲಿನ ಇತ್ತೀಚಿನ ಬೆಳವಣಿಗೆಗಳ ನಡುವೆಯೇ 2026 ರ ಮುಂಗಾರು ಋತುವಿಗೆ ಮುಂಚಿತವಾಗಿ ರಸಗೊಬ್ಬರ ಲಭ್ಯತೆಯನ್ನು ಸ್ಥಿರಗೊಳಿಸಲು ಮತ್ತು ಹೆಚ್ಚಿಸಲು ಭಾರತ ಸರ್ಕಾರವು ಬಹು-ಹಂತದ ಕಾರ್ಯತಂತ್ರವನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಿದೆ. ದೇಶೀಯ ಉತ್ಪಾದನೆ ಹೆಚ್ಚಳ ಮತ್ತು ಅತ್ಯಾಧುನಿಕ ಜಾಗತಿಕ ಖರೀದಿ ತಂತ್ರದ ಸಂಯೋಜನೆಯ ಮೂಲಕ ರಸಗೊಬ್ಬರ ಇಲಾಖೆಯು ಜಾಗತಿಕ ಪೂರೈಕೆ ಸರಣಿ ವ್ಯತ್ಯಯಗಳಿಂದ ಭಾರತೀಯ ರೈತರನ್ನು ರಕ್ಷಿಸಲು ಮುಂದಾಗಿದೆ.

ಜಾಗತಿಕ ಟೆಂಡರ್ ಮೂಲಕ ಅನಿಲ ಪೂರೈಕೆ

ನೈಸರ್ಗಿಕ ಅನಿಲಕ್ಕಾಗಿ ಸರ್ಕಾರವು ಇಪಿಎಂಸಿ (ಎಂಪವರ್ಡ್ ಪೂಲ್ ಮ್ಯಾನೇಜ್ಮೆಂಟ್ ಕಮಿಟಿ) ಬಿಡ್ಡಿಂಗ್ ಅನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿದೆ. ಇದು ನೇರವಾಗಿ ಹೆಚ್ಚಿನ ಯೂರಿಯಾವನ್ನು ತಳಮಟ್ಟದಲ್ಲಿ ಉತ್ಪಾದಿಸುತ್ತದೆ. ಹೆಚ್ಚುವರಿ 7.31 MMSCMD (ದಿನಕ್ಕೆ ಮಿಲಿಯನ್ ಮೆಟ್ರಿಕ್ ಸ್ಟ್ಯಾಂಡರ್ಡ್ ಕ್ಯೂಬಿಕ್ ಮೀಟರ್) ಅನಿಲವನ್ನು ಸ್ಥಳದಲ್ಲೇ ಪಡೆಯುವ ಮೂಲಕ ಯೂರಿಯಾ ಸ್ಥಾವರಗಳಿಗೆ ಒಟ್ಟು ಪೂರೈಕೆಯು ಶೇ.23 ರಷ್ಟು (32 MMSCMD ಯಿಂದ 39.31 MMSCMD ಗೆ) ಏರಿಕೆಯಾಗಿದೆ.

ಈ ತಾಂತ್ರಿಕ ಹಸ್ತಕ್ಷೇಪವು ತಕ್ಷಣದ ಫಲಿತಾಂಶಗಳನ್ನು ನೀಡಲು ಸಿದ್ಧವಾಗಿದೆ: ದೇಶೀಯ ಯೂರಿಯಾ ಉತ್ಪಾದನೆಯು ಸುಮಾರು ಶೇ.23 ರಷ್ಟು ಅಂದರೆ ದಿನಕ್ಕೆ 54,500 ಎಂಟಿಯಿಂದ 67,000 ಎಂಟಿಗೆ  ಏರಿಕೆಯಾಗುವ ನಿರೀಕ್ಷೆಯಿದೆ. ಇದು  ನಿರ್ಣಾಯಕವಾಗಿ ಸ್ಥಾವರಗಳ ಅನಿಲ ಅಗತ್ಯ ಪೂರೈಕೆಯನ್ನು ಅವುಗಳ ಸರಾಸರಿ ಅಗತ್ಯಗಳ ಶೇ.76 ಕ್ಕೆ ಹೆಚ್ಚಿಸುತ್ತದೆ, ಇದು ಹಿಂದಿನ ಶೇ.62 ಕ್ಕಿಂತ ಗಮನಾರ್ಹವಾಗಿ ಹೆಚ್ಚಾಗಿದೆ.

ಆರಾಮದಾಯಕ ದಾಸ್ತಾನು ಸ್ಥಿತಿಗತಿ

ಸರ್ಕಾರದ ಸಕ್ರಿಯ ನಿಲುವಿನಿಂದಾಗಿ ಸದ್ಯ ದಾಸ್ತಾನು ಮಟ್ಟಗಳಿಂದ ಮತ್ತಷ್ಟು ದೃಢೀಕರಿಸಲಾಗಿದ್ದು, ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಗಮನಾರ್ಹವಾಗಿ ಸದೃಢ ಸ್ಥಿತಿಗತಿಯನ್ನು ತೋರಿಸುತ್ತದೆ. ಒಟ್ಟು ಯೂರಿಯಾ ದಾಸ್ತಾನು ಪ್ರಸ್ತುತ 61.14 ಎಲ್ ಎಂಟಿಯಲ್ಲಿದೆ, ಇದು ಮಾರ್ಚ್ 2025ರಲ್ಲಿ 55.22 ಎಲ್ ಎಂಟಿ ಆಗಿತ್ತು. ಮುಖ್ಯವಾಗಿ, ಡಿಎಪಿ ದಾಸ್ತಾನುಗಳು ದ್ವಿಗುಣಗೊಂಡು 24.24 ಎಲ್ ಎಂಟಿ ಗೆ ತಲುಪಿದ್ದು, ಮುಂಬರುವ ಬಿತ್ತನೆ ಹಂಗಾಮಿಗೆ ಗಣನೀಯವಾಗಿ ಲಭ್ಯವಾಗಲಿದೆ.  

ಉತ್ಪನ್ನ (ಲಕ್ಷ ಮೆಟ್ರಿಕ್ ಟನ್ ಗಳಲ್ಲಿ)

19.03.2026 ರಲ್ಲಿದ್ದ ದಾಸ್ತಾನು

19.03.2025ರಲ್ಲಿದ್ದ ದಾಸ್ತಾನು

ಯೂರಿಯಾ

61.14

55.22

ಡಿಎಪಿ

24.24

11.85

ಎನ್ ಪಿಕೆ

57.21

34.44

ಎಸ್ಎಸ್ ಪಿ

24.80

23.15

ಎಂಒಪಿ

12.65

14.13

ರಾಜತಾಂತ್ರಿಕ ಅನುಕೂಲಗಳು

ಅಂತರ ಸಚಿವಾಲಯದ ಪತ್ರಿಕಾಗೋಷ್ಠಿಯ ವೇಳೆ, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಶ್ರೀ ರಣಧೀರ್ ಜೈಸ್ವಾಲ್ ಅವರು ಸರ್ಕಾರದ ಕಾರ್ಯತಂತ್ರವನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು ಮತ್ತು ಈ ವೈವಿಧ್ಯಮಯ ವಿಧಾನವನ್ನು ಒತ್ತಿ ಹೇಳಿದರು:

"ಈ ಸಮಯದಲ್ಲಿ ನಮ್ಮ ರಸಗೊಬ್ಬರ ಪರಿಸ್ಥಿತಿಗೆ ಸಂಬಂಧಿಸಿದಂತೆ ವಿಶೇಷವಾಗಿ 2026ರ ಮುಂಗಾರಿಗೆ ನಮ್ಮಲ್ಲಿ ಸಾಕಷ್ಟು ದಾಸ್ತಾನುಗಳಿವೆ; ನಾವು ಆರಾಮವಾಗಿದ್ದೇವೆ. ಪ್ರಸ್ತುತ ಪರಿಸ್ಥಿತಿಯ ನಿರೀಕ್ಷೆಯಲ್ಲಿ ರಸಗೊಬ್ಬರ ಇಲಾಖೆಯು ಜಾಗತಿಕ ಟೆಂಡರ್‌ಗಳನ್ನು ಮುಂಚಿತವಾಗಿಯೇ ಪ್ರಕಟಿಸಿದೆ ಮತ್ತು ಅವುಗಳಿಗೆ ಉತ್ತಮ ಪ್ರತಿಕ್ರಿಯೆಗಳು ಬಂದಿವೆ. ಮಾರ್ಚ್ ಅಂತ್ಯದ ವೇಳೆಗೆ ವಿವಿಧ ಮೂಲಗಳಿಂದ ಬೇಡಿಕೆ ಸಲ್ಲಿಸಲಾದ ಪ್ರಮಾಣಗಳಲ್ಲಿ ಬಹುತೇಕ ಬರುವ ನಿರೀಕ್ಷೆಯಿದೆ. ಹಾಗೆ ಹೇಳುವ ಜತೆಗೆ ಹೌದು, ರಸಗೊಬ್ಬರ ಆಮದುಗಳನ್ನು ಖರೀದಿಸುವ ಕಡೆಗೆ ನಾವು ವೈವಿಧ್ಯಮಯ ವಿಧಾನವನ್ನು ಹೊಂದಿದ್ದೇವೆ ಮತ್ತು ಆ ನಿಟ್ಟಿನಲ್ಲಿ ನಾವು ಹಲವು ದೇಶಗಳೊಂದಿಗೆ ಸಂಪರ್ಕದಲ್ಲಿದ್ದೇವೆ.’’

ಜಾಗತಿಕ ಟೆಂಡರ್‌ಗಳನ್ನು ಆಕ್ರಮಣಕಾರಿಯಾಗಿ ಅನುಸರಿಸುವ ಮೂಲಕ ಮತ್ತು ಬಹು ಪೂರೈಕೆದಾರ ರಾಷ್ಟ್ರಗಳೊಂದಿಗೆ ಉನ್ನತ ಮಟ್ಟದ ರಾಜತಾಂತ್ರಿಕ ಒಳಗೊಳ್ಳುವಿಕೆಗಳನ್ನು ನಿರ್ವಹಿಸುವ ಮೂಲಕ ಇಲಾಖೆಯು ತಿಂಗಳಾಂತ್ಯದ ಮೊದಲು ಹೆಚ್ಚಿನ ಪ್ರಮಾಣಗಳು ಭಾರತೀಯ ಗೋದಾಮುಗಳಲ್ಲಿರುವುದನ್ನು ಖಚಿತಪಡಿಸಿದೆ, ಇದು ಸಕ್ರಿಯ ಆಡಳಿತಕ್ಕೆ ಗಮನಾರ್ಹ ಗೆಲುವಾಗಿದೆ.

 

*****


(ಪ್ರಕಟಣೆ ಐ.ಡಿ.: 2242728) ವಿಸಿಟರ್ ಕೌಂಟರ್ : 40
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Marathi , Gujarati , Telugu