ಲೋಕಸಭಾ ಸಚಿವಾಲಯ
azadi ka amrit mahotsav

ಚೈತ್ರ ಶುಕ್ಲಾದಿ, ಯುಗಾದಿ, ಗುಡಿ ಪಡ್ವಾ ಮತ್ತು ಚೆಟಿ ಚಾಂದ್ ಹಬ್ಬದ ಮುನ್ನಾದಿನದಂದು ಶುಭಾಶಯ ಕೋರಿದ ಲೋಕಸಭಾ ಸ್ಪೀಕರ್ 

प्रविष्टि तिथि: 18 MAR 2026 6:47PM by PIB Bengaluru

ಲೋಕಸಭಾ ಸ್ಪೀಕರ್ ಶ್ರೀ ಓಂ ಬಿರ್ಲಾ ಅವರು ಚೈತ್ರ ಶುಕ್ಲಾದಿ, ಯುಗಾದಿ, ಗುಡಿ ಪಡ್ವಾ ಮತ್ತು ಚೇಟಿ ಚಾಂದ್ ಹಬ್ಬದ ಮುನ್ನಾದಿನದಂದು ಜನತೆಗೆ ಶುಭಾಶಯ ಕೋರಿದ್ದಾರೆ

ಶ್ರೀ ಬಿರ್ಲಾ ಅವರು ತಮ್ಮ ಸಂದೇಶದಲ್ಲಿ ಹೀಗೆ ಹೇಳಿದ್ದಾರೆ:

"ನವ ಸಂವತ್ಸರ, ಚೈತ್ರ ನವರಾತ್ರಿ, ಚೇಟಿ ಚಾಂದ್, ಗುಡಿ ಪಡ್ವಾ ಮತ್ತು ಯುಗಾದಿ ಸಂದರ್ಭದಲ್ಲಿ ಎಲ್ಲಾ ದೇಶವಾಸಿಗಳಿಗೆ ಹೃತ್ಪೂರ್ವಕ ಶುಭಾಶಯಗಳು!

ಇಂದು, ಈ ಹಬ್ಬಗಳನ್ನು ದೇಶಾದ್ಯಂತ ನಂಬಿಕೆ, ಉತ್ಸಾಹ ಮತ್ತು ಸಂತೋಷದಿಂದ ಆಚರಿಸಲಾಗುತ್ತಿದೆ, ಇದು ನಮ್ಮ ಶ್ರೀಮಂತ ಸಾಂಸ್ಕೃತಿಕ ವೈವಿಧ್ಯತೆ ಮತ್ತು ಏಕತೆಯನ್ನು ಪ್ರದರ್ಶಿಸುತ್ತದೆ.

ಹೊಸ ವರ್ಷ ಹೊಸ ಕ್ಯಾಲೆಂಡರಿನ ಆರಂಭ ಮಾತ್ರವಲ್ಲ, ಅದು ಹೊಸ ಚಿಂತನೆ,  ನಿರ್ಧಾರ, ಮತ್ತು ಹೊಸ ಹುಮ್ಮಸ್ಸಿನೊಂದಿಗೆ ಮುಂದೆ ಸಾಗುವ ಅವಕಾಶ ಕೂಡಾ ಆಗಿದೆ. ನಾನು ಭಗವತಿ ದೇವಿಯ ಆಶೀರ್ವಾದ ನಮ್ಮ‌ಬದುಕನ್ನು ತುಂಬಲಿ, ಶಕ್ತಿ, ಭಕ್ತಿ ಮತ್ತು ಧನಾತ್ಮಕತೆಯನ್ನು ತರಲಿ ಎಂದು ಪ್ರಾರ್ಥಿಸುತ್ತೇನೆ.

 

*****


(रिलीज़ आईडी: 2242228) आगंतुक पटल : 53
इस विज्ञप्ति को इन भाषाओं में पढ़ें: English , Urdu , हिन्दी , Gujarati