ರೈಲ್ವೇ ಸಚಿವಾಲಯ
ಭಾರತೀಯ ರೈಲ್ವೆ ತನ್ನ ಪಾರ್ಸೆಲ್ ಸರಕು ಸಾಗಣೆ ಲಾಜಿಸ್ಟಿಕ್ಸ್ ಅನ್ನು “ಮೊದಲ ಮೈಲಿ ಪಿಕಪ್, ಕೊನೆಯ ಮೈಲಿ ವಿತರಣೆ ಮತ್ತು ಇದರ ನಡುವೆ ಪ್ಯಾಕೇಜಿಂಗ್” - ಮಿಡ್-ಮೈಲ್ ಸಾಗಣಿಕೆ ಮೂಲಕ ಬಲಪಡಿಸುತ್ತದೆ
ದಕ್ಷಿಣ ಮಧ್ಯ ರೈಲ್ವೆಯು ಹೈದರಾಬಾದ್, ವಿಶಾಖಪಟ್ಟಣಂ, ವಿಜಯವಾಡ, ಗುಂಟೂರು, ರಾಜಮಂಡ್ರಿ, ಬೆಂಗಳೂರು ಮತ್ತು ಚೆನ್ನೈ ಸೇರಿದಂತೆ 7 ನಗರಗಳ 17 ನಿಲ್ದಾಣಗಳಲ್ಲಿ ಮಾದರಿ (ಪೈಲಟ್) ಆಧಾರದ ಮೇಲೆ 'ರೈಲ್ ಪಾರ್ಸೆಲ್' ಅಪ್ಲಿಕೇಶನ್ ಆಧಾರಿತ ಲಾಜಿಸ್ಟಿಕ್ಸ್ ಪ್ಲಾಟ್‌ಫಾರ್ಮ್ ಅನ್ನು ಪ್ರಾರಂಭಿಸಿದೆ
ಜಂಟಿ ಪಾರ್ಸೆಲ್ ಉತ್ಪನ್ನ - ರಾಪಿಡ್ ಕಾರ್ಗೋ ಸರ್ವಿಸ್ (ಜೆಪಿಪಿ-ಆರ್ಸಿಎಸ್) 07 ಜೋಡಿ “ನಿಗದಿತ ಸೇವೆ”ಗಳೊಂದಿಗೆ ಕಾರ್ಯನಿರ್ವಹಿಸುತ್ತಿದೆ, ಫೆಬ್ರವರಿವರೆಗಿನ ಪ್ರಸ್ತುತ ಹಣಕಾಸು ವರ್ಷದಲ್ಲಿ ಸುಮಾರು ₹56 ಕೋಟಿ ಆದಾಯವನ್ನು ಗಳಿಸಿದೆ
ದೇಶಾದ್ಯಂತ ಸರಕು ಮತ್ತು ಪಾರ್ಸೆಲ್ ಟರ್ಮಿನಲ್ ಗಳಲ್ಲಿ ಗ್ರಾಹಕ ಸೌಲಭ್ಯಗಳು ಮತ್ತು ಮೂಲಸೌಕರ್ಯವನ್ನು ಸುಧಾರಿಸಲು ಕಳೆದ 3 ವರ್ಷಗಳಲ್ಲಿ ₹14,500 ಕೋಟಿ ಹಂಚಿಕೆ ಮಾಡಲಾಗಿದೆ
ದೆಹಲಿ-ಕೋಲ್ಕತ್ತಾ ಮತ್ತು ಮುಂಬೈ-ಕೋಲ್ಕತ್ತಾ ಕಾರಿಡಾರ್ ಗಳಲ್ಲಿ ಮನೆ-ಮನೆಗೆ ಪಾರ್ಸೆಲ್ ಸೇವೆಗಳನ್ನು ಒದಗಿಸುವ ಕೊನ್ ಕೋರ್, ಮೊದಲ ಮತ್ತು ಕೊನೆಯ ಮೈಲಿ ಲಾಜಿಸ್ಟಿಕ್ಸ್ ಪರಿಹಾರಗಳನ್ನು ಬಲಪಡಿಸುತ್ತದೆ
ಪ್ರಕಟಣಾ ದಿನಾಂಕ:
12 MAR 2026 4:12PM by PIB Bengaluru
ಭಾರತೀಯ ರೈಲ್ವೆ ಸರಕು ಸಾಗಣೆ ದಕ್ಷತೆಯನ್ನು ಹೆಚ್ಚಿಸಲು, ಸರಕು ಸಾಗಣೆ ವ್ಯವಸ್ಥೆ (ಲಾಜಿಸ್ಟಿಕ್ಸ್) ಮತ್ತು ಪ್ರಾದೇಶಿಕ ಸಂಪರ್ಕವನ್ನು ಬಲಪಡಿಸಲು, ತಡೆರಹಿತ ಪ್ರಾದೇಶಿಕ ಸಂಪರ್ಕವನ್ನು ಖಚಿತಪಡಿಸಿಕೊಳ್ಳಲು ಮತ್ತು ದೃಢವಾದ ಮೊದಲ ಮತ್ತು ಕೊನೆಯ ಮೈಲಿ ಪರಿಹಾರಗಳನ್ನು ಒದಗಿಸಲು ಬಹುಮುಖಿ ಕಾರ್ಯತಂತ್ರವನ್ನು ಜಾರಿಗೆ ತಂದಿದೆ.
ಟರ್ಮಿನಲ್ ಗಳಲ್ಲಿ ರೈಲು ಸರಕು ನಿರ್ವಹಣೆಯ ದಕ್ಷತೆಯನ್ನು ಸುಧಾರಿಸಲು, ಭಾರತೀಯ ರೈಲ್ವೆ ಎರಡು-ಹಂತದ ವಿಧಾನವನ್ನು ಅಳವಡಿಸಿಕೊಂಡಿದೆ: ಗತಿ ಶಕ್ತಿ ಮಲ್ಟಿ-ಮೋಡಲ್ ಕಾರ್ಗೋ ಟರ್ಮಿನಲ್ (ಜಿಸಿಟಿ) ನೀತಿಯ ಅಡಿಯಲ್ಲಿ ಆಧುನಿಕ ರೈಲು ಸರಕು ಟರ್ಮಿನಲ್ ಗಳ ಅಭಿವೃದ್ಧಿಯನ್ನು ಉತ್ತೇಜಿಸುವುದು ಮತ್ತು ರೈಲ್ವೆ ಒಡೆತನದ ಸರಕು ಶೆಡ್ ಗಳಲ್ಲಿ ಮೂಲಸೌಕರ್ಯವನ್ನು ವೃದ್ಧಿಸುವುದು /ಅಪ್‌ಗ್ರೇಡ್ ಮಾಡುವುದು. 05.03.2026 ರವರೆಗೆ, 128 ಜಿಸಿಟಿಗಳನ್ನು ಕಾರ್ಯಾರಂಭ ಮಾಡಲಾಗಿದೆ ಮತ್ತು ಭಾರತೀಯ ರೈಲ್ವೆಯಾದ್ಯಂತ 288 ಜಿಸಿಟಿ ಗಳಿಗೆ ತಾತ್ವಿಕ ಅನುಮೋದನೆಗಳನ್ನು ನೀಡಲಾಗಿದೆ. ಇದಲ್ಲದೆ, ದೇಶಾದ್ಯಂತ ಸರಕು ಮತ್ತು ಪಾರ್ಸೆಲ್ ಟರ್ಮಿನಲ್ ಗಳಲ್ಲಿ ಗ್ರಾಹಕರ ಸೌಲಭ್ಯಗಳ ಸುಧಾರಣೆಗಾಗಿ, 2023-24, 2024-25 ಮತ್ತು 2025-26 ರ ಹಣಕಾಸು ವರ್ಷಕ್ಕೆ ರೂ. 14,500 ಕೋಟಿಗಳನ್ನು ನಿಗದಿಪಡಿಸಲಾಗಿದೆ.
ರೈಲ್ವೆ ಸಚಿವಾಲಯದ ಅಧೀನದಲ್ಲಿರುವ ಪಿಎಸ್ಯು ಆಗಿರುವ ಕೋನ್ ಕೋರ್ ಸಂಸ್ಥೆಯು, ದೆಹಲಿ-ಕೋಲ್ಕತ್ತಾ ಮತ್ತು ಮುಂಬೈ-ಕೋಲ್ಕತ್ತಾ ವಲಯಗಳಲ್ಲಿ ಜೆಪಿಆರ್-ಆರ್.ಸಿ.ಎಸ್ ಅನ್ನು ಬಳಸಿಕೊಂಡು ಡೋರ್-ಟು-ಡೋರ್ ಪಾರ್ಸೆಲ್ ಸೇವೆಗಳನ್ನು ಸಹ ಒದಗಿಸುತ್ತಿದೆ. ಸೋನಿಕ್ ಗೂಡ್ಸ್ ಶೆಡ್ ನಲ್ಲಿ ಪೈಲಟ್ ಯೋಜನೆಯಡಿಯಲ್ಲಿ ಕೋನ್ ಕೋರ್ ಸಂಸ್ಥೆಯಿಂದ ಡೋರ್-ಟು-ಡೋರ್ ಲಾಜಿಸ್ಟಿಕ್ಸ್ ಅನ್ನು ಸಹ ಒದಗಿಸುತ್ತಿದೆ.
ಇಂಡಿಯಾ ಪೋಸ್ಟ್ ನೊಂದಿಗೆ ಜಂಟಿ ಪಾರ್ಸೆಲ್ ಉತ್ಪನ್ನ (ಜೆಪಿಪಿ) ಉಪಕ್ರಮವನ್ನು 2022ರಲ್ಲಿ ಪ್ರಾಯೋಗಿಕ ಆಧಾರದ ಮೇಲೆ ವ್ಯವಹಾರದಿಂದ ಗ್ರಾಹಕರಿಗೆ (ಬಿ2ಸಿ) ಮತ್ತು ವ್ಯವಹಾರದಿಂದ ವ್ಯವಹಾರಕ್ಕೆ (ಬಿ2ಬಿ) ಮಾರುಕಟ್ಟೆಯನ್ನು ಗುರಿಯಾಗಿಟ್ಟುಕೊಂಡು ಕೆಲವು ಮಾರ್ಗಗಳಲ್ಲಿ ಪರಿಚಯಿಸಲಾಯಿತು, ಇ-ಕಾಮರ್ಸ್ ಮತ್ತು ಎಂ.ಎಸ್.ಎಂ.ಇ ಮಾರುಕಟ್ಟೆಯನ್ನು ಕೇಂದ್ರೀಕರಿಸಿ 35 ಕೆಜಿಯಿಂದ 100 ಕೆಜಿ ನಡುವಿನ ತೂಕದ ವರ್ಗದ ಮಾರುಕಟ್ಟೆ ಪ್ರವೃತ್ತಿಗಳ ಪ್ರಕಾರ ಕೈಗೆಟುಕುವ ಬೆಲೆಯೊಂದಿಗೆ. ಈ ಯೋಜನೆಯಡಿಯಲ್ಲಿ ಮೊದಲ ಮತ್ತು ಕೊನೆಯ ಮೈಲಿ ಸೇವೆಗಳನ್ನು ಇಂಡಿಯಾ ಪೋಸ್ಟ್ ಒದಗಿಸಿತು ಮತ್ತು ಭಾರತೀಯ ರೈಲ್ವೆ ಮಧ್ಯಮ ಮೈಲಿ ಸೇವೆಗಳನ್ನು ಒದಗಿಸಿತು.
ಪ್ರಾರಂಭಿಕ ಮಾದರಿ ಯೋಜನೆಯಿಂದ ಪಡೆದ ಅನುಭವದ ಆಧಾರದ ಮೇಲೆ, ಜೆಪಿಪಿ ಯೋಜನೆಯನ್ನು ಇತರ ಪಾರ್ಸೆಲ್ ಸಂಗ್ರಾಹಕರಿಗೂ ಲಭ್ಯವಾಗುವಂತೆ ಮಾಡಲಾಯಿತು ಮತ್ತು ಇದನ್ನು ಜಂಟಿ ಪಾರ್ಸೆಲ್ ಉತ್ಪನ್ನ - ಕ್ಷಿಪ್ರ ಸರಕು ಸೇವೆ (ಜೆಪಿಪಿ –ಆರ್.ಸಿ.ಎಸ್.) ಎಂದು ಮರುನಾಮಕರಣ ಮಾಡಲಾಯಿತು. ಈ ಯೋಜನೆಯಡಿಯಲ್ಲಿ, ಜೆಪಿಪಿ –ಆರ್.ಸಿ.ಎಸ್. (ವಿಪಿ ಗಳ ಘಟಕಗಳಲ್ಲಿ) ನ ಆನ್ಲೈನ್ ಬುಕಿಂಗ್ ಅನ್ನು ಐಆರ್ ಅಭಿವೃದ್ಧಿಪಡಿಸಿದ “ವರ್ಚುವಲ್ ಅಗ್ರಿಗೇಟರ್ ಪ್ಲಾಟ್ಫಾರ್ಮ್” (ವಿಎಪಿ) ಮೂಲಕ ಎಂಪನೇಲ್ಡ್ ಪಾರ್ಸೆಲ್ ಅಗ್ರಿಗೇಟರ್ ಗಳು ಮಾಡುತ್ತಾರೆ. ಪ್ರಸ್ತುತ ಮಾರುಕಟ್ಟೆ ಬೇಡಿಕೆ ಮತ್ತು ಕಾರ್ಯಾಚರಣೆಯ ಕಾರ್ಯಸಾಧ್ಯತೆಯ ಆಧಾರದ ಮೇಲೆ ಯೋಜಿಸಲಾದ ನಿರ್ದಿಷ್ಟ ಸ್ಥಳಗಳ ನಡುವೆ 07 ಜೋಡಿ ನಿಗದಿತ (ಸಮಯ ಕೋಷ್ಟಕ) ಸೇವೆಗಳು ಕಾರ್ಯನಿರ್ವಹಿಸುತ್ತಿವೆ. ಪ್ರಸ್ತುತ ವರ್ಷದಲ್ಲಿ (ಫೆಬ್ರವರಿ 2026 ರವರೆಗೆ) ಜೆಪಿಪಿ -ಆರ್.ಸಿ.ಎಸ್. ನಿಂದ ಉತ್ಪತ್ತಿಯಾಗುವ ಒಟ್ಟು ಆದಾಯವು ಸರಿಸುಮಾರು 56 ಕೋಟಿ ರೂ.
ರೈಲ್ವೆ ಪಾರ್ಸೆಲ್ ಲಾಜಿಸ್ಟಿಕ್ಸ್ ಗಾಗಿ ಸಮಗ್ರ “ಅಪ್ಲಿಕೇಶನ್-ಆಧಾರಿತ ಪ್ಲಾಟ್ ಫಾರ್ಮ್” ಅಭಿವೃದ್ಧಿಗಾಗಿ ಒಂದು ವರ್ಷದ ಅವಧಿಗೆ ದಕ್ಷಿಣ ಮಧ್ಯ ರೈಲ್ವೆ 25.02.2026 ರಂದು ಮಾದರಿ(ಪೈಲಟ್) ಯೋಜನೆಯನ್ನು ಪ್ರಾರಂಭಿಸಲಾಯಿತು. ಈ ಪೈಲಟ್ ಯೋಜನೆಯಡಿಯಲ್ಲಿ, ಲಾಜಿಸ್ಟಿಕ್ಸ್ ಸೇವಾ ಪೂರೈಕೆದಾರರ ಸಹಯೋಗದೊಂದಿಗೆ ಮನೆ-ಮನೆಗೆ ಪಾರ್ಸೆಲ್ ಸೇವೆಯನ್ನು ಒದಗಿಸಲಾಗುತ್ತಿದೆ. ಸಂಯೋಜಿತ ಪಾರ್ಸೆಲ್ ಲಾಜಿಸ್ಟಿಕ್ಸ್ ಅಪ್ಲಿಕೇಶನ್, “ರೈಲ್ ಪಾರ್ಸೆಲ್” ಅನ್ನು ಡಿಜಿಟಲ್ ಮಾರುಕಟ್ಟೆಯಾಗಿ ಅಭಿವೃದ್ಧಿಪಡಿಸಲಾಗಿದೆ, ಇದರಲ್ಲಿ ಆಯ್ದ ಲಾಜಿಸ್ಟಿಕ್ಸ್ ಸೇವಾ ಪೂರೈಕೆದಾರರು ಪಾಲುದಾರರಾಗಿ ಆನ್-ಬೋರ್ಡ್ ಆಗಿದ್ದಾರೆ. ಈ ಲಾಜಿಸ್ಟಿಕ್ಸ್ ಪಾಲುದಾರರು ಮೊದಲ ಮೈಲಿ ಪಿಕಪ್, ಕೊನೆಯ ಮೈಲಿ ವಿತರಣೆ, ಪ್ಯಾಕೇಜಿಂಗ್ನಂತಹ ಮೌಲ್ಯವರ್ಧಿತ ಸೇವೆಗಳನ್ನು ಒಳಗೊಂಡಂತೆ ವಿವಿಧ ಸೇವೆಗಳನ್ನು ಒದಗಿಸುತ್ತಾರೆ, ರೈಲ್ವೆಗಳು ರೈಲು ಸೇವೆಗಳ ಮೂಲಕ ಮಧ್ಯ ಮೈಲಿ ಸಾರಿಗೆಯನ್ನು ಒದಗಿಸುತ್ತವೆ.
ಹೈದರಾಬಾದ್, ವಿಶಾಖಪಟ್ಟಣಂ, ವಿಜಯವಾಡ, ಗುಂಟೂರು, ರಾಜಮಂಡ್ರಿ, ಬೆಂಗಳೂರು ಮತ್ತು ಚೆನ್ನೈ ಸೇರಿದಂತೆ ಏಳು ನಗರಗಳಲ್ಲಿ ಹದಿನೇಳು ನಿಲ್ದಾಣಗಳಲ್ಲಿ ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗುತ್ತಿದೆ. ಪ್ರಸ್ತುತ, ಮೂರು ಖಾಸಗಿ ಲಾಜಿಸ್ಟಿಕ್ಸ್ ಪಾಲುದಾರರನ್ನು ಆಸಕ್ತಿ -ಅಭಿವ್ಯಕ್ತಿ -ಪ್ರಕ್ರಿಯೆಯ ಮೂಲಕ ನೇಮಿಸಲಾಗಿದೆ.
ಎಲ್ಲಾ ರೈಲ್ವೆ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವ್ಯಾಪಾರ ಅಭಿವೃದ್ಧಿ ಘಟಕಗಳು ಸಂಚಾರ ಮತ್ತು ಮೊದಲ ಮತ್ತು ಕೊನೆಯ ಮೈಲಿ ಸೇವೆಗಾಗಿ ಲಾಜಿಸ್ಟಿಕ್ಸ್ ಸೇವಾ ಪೂರೈಕೆದಾರರ ಲಭ್ಯತೆ ಮತ್ತು ಸಿದ್ಧತೆಯನ್ನು ನಿರ್ಣಯಿಸಲು ವಿವಿಧ ಪಾಲುದಾರರೊಂದಿಗೆ ತೊಡಗಿಸಿಕೊಳ್ಳಲು ಸೂಚಿಸಲಾಗಿದೆ.
ಯೋಜನೆಯಿಂದ ಪಡೆದ ಅನುಭವವ ಆಧರಿಸಿ, ದೇಶದಾದ್ಯಂತ (ಪ್ಯಾನ್-ಇಂಡಿಯಾ) ಪ್ರಾಮುಖ್ಯತೆಯ ಆಧಾರದ ಮೇಲೆ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಕೇಂದ್ರ ರೈಲ್ವೆ, ವಾರ್ತಾ ಮತ್ತು ಪ್ರಸಾರ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಲೋಕಸಭೆಯಲ್ಲಿ ಪ್ರಶ್ನೆಗಳಿಗೆ ಉತ್ತರಿಸಿ ಈ ಮಾಹಿತಿಯನ್ನು ನೀಡಿದರು.
*****
(ಪ್ರಕಟಣೆ ಐ.ಡಿ.: 2238995)
ವಿಸಿಟರ್ ಕೌಂಟರ್ : 10