ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav AI Impact Summit 2026

2026ರ ಫೆಬ್ರವರಿ 17ಕ್ಕಾಗಿ ಸಾಮಾನ್ಯ ಸಲಹಾ ಸೂಚಿ


ʻಭಾರತ ಎಐ ಇಂಪ್ಯಾಕ್ಟ್ ಶೃಂಗಸಭೆ-2026, ಭಾರತ್ ಮಂಟಪ, ನವದೆಹಲಿ

ಪ್ರಕಟಣಾ ದಿನಾಂಕ: 17 FEB 2026 8:32AM by PIB Bengaluru

ಫೆಬ್ರವರಿ 17 2026 ರಂದು ಶೃಂಗಸಭೆಯ ಎಲ್ಲಾ ಸ್ಥಳಗಳಲ್ಲಿ ಕೆಳಕಂಡ ಸಮಯಗಳು ಅನ್ವಯವಾಗುತ್ತವೆ.

• ಭಾರತ ಮಂಟಪ ಕನ್ವೆನ್ಷನ್ ಸೆಂಟರ್: ಬೆಳಿಗ್ಗೆ 9:30 ರಿಂದ ಸಂಜೆ 6:00 ಗಂಟೆ

• ಭಾರತ ಮಂಟಪ ಎಕ್ಸ್‌ಪೋ ಅರೇನಾ: ಬೆಳಿಗ್ಗೆ 9:30 ರಿಂದ ಸಂಜೆ 6:00 ಗಂಟೆ

• ಸುಷ್ಮಾ ಸ್ವರಾಜ್ ಭವನ: ಬೆಳಗ್ಗೆ 9:30 ರಿಂದ ಸಂಜೆ 6:00

I. ಭಾರತ ಮಂಟಪ

ಸೀಮಿತ ಪಾರ್ಕಿಂಗ್ ಸ್ಥಳದ ಲಭ್ಯತೆಯ ಹಿನ್ನೆಲೆಯಲ್ಲಿ, ಕಾರ್ಯಕ್ರಮದ ಸ್ಥಳವನ್ನು ತಲುಪಲು ಸಾರ್ವಜನಿಕ ಸಾರಿಗೆ, ಮೆಟ್ರೋ ಸೇವೆಗಳು ಅಥವಾ ಕ್ಯಾಬ್‌ಗಳನ್ನು ಬಳಸುವಂತೆ ನೋಂದಾಯಿತ ಪ್ರತಿನಿಧಿಗಳಿಗೆ ಮೂಲಕ ಸಲಹೆ ನೀಡಲಾಗಿದೆ.

ಗೇಟ್ ಸಂಖ್ಯೆ.4: ಪ್ರವೇಶಕ್ಕೆ ಬೆಳಿಗ್ಗೆ 8:00 ಗಂಟೆಯಿಂದ ಅವಕಾಶ. ಕಾರುಗಳು / ಕ್ಯಾಬ್‌ಗಳ ಮೂಲಕ ಡ್ರಾಪ್ ಸೌಲಭ್ಯಕ್ಕೆ.

ಗೇಟ್ ಸಂಖ್ಯೆ 7: ಪ್ರವೇಶಕ್ಕೆ ಬೆಳಿಗ್ಗೆ 8:00 ಗಂಟೆಯಿಂದ ಅವಕಾಶ. ಕಾರುಗಳು / ಕ್ಯಾಬ್‌ಗಳ ಮೂಲಕ ಡ್ರಾಪ್ ಸೌಲಭ್ಯಕ್ಕೆ.

ಗೇಟ್ ಸಂಖ್ಯೆ.10: ಮೆಟ್ರೊದಲ್ಲಿ ಆಗಮಿಸುವ ಪ್ರತಿನಿಧಿಗಳಿಗೆ ಪ್ರವೇಶಕ್ಕಾಗಿ ತೆರೆದಿರುತ್ತದೆ.

• ಇತರ ಗೊತ್ತುಪಡಿಸಿದ ಗೇಟ್‌ಗಳ ಮೂಲಕ ಪ್ರವೇಶವು ಶಿಷ್ಟಾಚಾರದ ಪ್ರಕಾರ ಭದ್ರತಾ ಅನುಮತಿ ಮತ್ತು ಸಂಚಾರ ನಿರ್ಬಂಧಗಳಿಗೆ ಒಳಪಟ್ಟಿರುತ್ತದೆ.

• ಸ್ವಯಂ ಚಾಲನಾ ವಾಹನಗಳು: ಈ ಕೆಳಗಿನ ಪಾರ್ಕಿಂಗ್ ಸ್ಥಳಗಳಲ್ಲಿ ಸೀಮಿತ ಪಾರ್ಕಿಂಗ್ ಸೌಲಭ್ಯ ಲಭ್ಯವಿರುತ್ತದೆ.

(I) ಪುರಾನಾ ಕಿಲಾ ಪಾರ್ಕಿಂಗ್-1.6 ಕಿ.ಮೀ

(II) ಮೃಗಾಲಯದ ಪಾರ್ಕಿಂಗ್ ಸ್ಥಳ-3 ಕಿ.ಮೀ

(III) ಜವಾಹರ್ ಲಾಲ್ ನೆಹರು ಕ್ರೀಡಾಂಗಣ ಪಾರ್ಕಿಂಗ್ 4.8 ಕಿ.ಮೀ

ಸ್ಥಳಗಳಿಂದ ಭಾರತ ಮಂಟಪ ಗೇಟ್ ಸಂಖ್ಯೆ 04ಕ್ಕೆ ಶಟಲ್ ಬಸ್‌ ಸೇವೆ ಒದಗಿಸಲಾಗಿದೆ.

• ಪ್ರತಿನಿಧಿಗಳು ತಮ್ಮ ಸ್ಥಳಗಳನ್ನು ತಲುಪಲು ಭಾರತ ಮಂಟಪ ಸಂಕೀರ್ಣದಲ್ಲಿ ಒದಗಿಸಲಾದ ಗೊತ್ತುಪಡಿಸಿದ ಗಾಲ್ಫ್ ಬಂಡಿಗಳನ್ನು ಬಳಸಲು ಸೂಚಿಸಲಾಗಿದೆ.

ಸುಷ್ಮಾ ಸ್ವರಾಜ್ ಭವನ

ಸೀಮಿತ ಪಾರ್ಕಿಂಗ್ ಸ್ಥಳದ ಲಭ್ಯತೆ ಕಾರಣದಿಂದಾಗಿ ಸ್ಥಳವನ್ನು ತಲುಪಲು ಸಾರ್ವಜನಿಕ ಸಾರಿಗೆ, ಮೆಟ್ರೋ ಸೇವೆಗಳು ಅಥವಾ ಕ್ಯಾಬ್‌ಗಳನ್ನು ಬಳಸಲು ನೋಂದಾಯಿತ ಪ್ರತಿನಿಧಿಗಳಿಗೆ ಮೂಲಕ ಸಲಹೆ ನೀಡಲಾಗಿದೆ.

ಸುಷ್ಮಾ ಸ್ವರಾಜ್ ಭವನದ ಗೇಟ್ ಸಂಖ್ಯೆ 2 ರಿಂದ   ಪಾದಚಾರಿಗಳು, ಮೆಟ್ರೋ ಬಳಕೆದಾರರು, ಡ್ರಾಪ್ ಆಫ್ ಮತ್ತು ಸ್ವಯಂ ಚಾಲನೆಯ ವಾಹನಗಳಿಗೆ ಪ್ರವೇಶ ಇರುತ್ತದೆ.

ಆಹ್ವಾನಿತರು, ಭಾಷಣಕಾರರು, ಭಾಗವಹಿಸುವವರು ಮತ್ತು ಇತರ ಮಧ್ಯಸ್ಥಗಾರರು ಸೇರಿದಂತೆ ಎಲ್ಲಾ ನೋಂದಾಯಿತ ಪ್ರತಿನಿಧಿಗಳು ಪರಿಷ್ಕೃತ ಪ್ರವೇಶ ಶಿಷ್ಟಾಚಾರವನ್ನು ಗಮನಿಸಲು ಮತ್ತು ಅದಕ್ಕೆ ಅನುಗುಣವಾಗಿ ಅವರ ಆಗಮನವನ್ನು ಯೋಜಿಸಲು ವಿನಂತಿಸಲಾಗಿದೆ.

ಸಂಬಂಧಪಟ್ಟವರೆಲ್ಲರೂ ಭದ್ರತಾ ಮತ್ತು ಸಂಚಾರ ಸಿಬ್ಬಂದಿಯೊಂದಿಗೆ ಸಂಪೂರ್ಣವಾಗಿ ಸಹಕರಿಸಲು ಮತ್ತು ಕಾರ್ಯಕ್ರಮವನ್ನು ಸುಗಮ ಮತ್ತು ಸುರಕ್ಷಿತವಾಗಿ ನಡೆಸುವುದನ್ನು ಖಚಿತಪಡಿಸಿಕೊಳ್ಳಲು ಸ್ಥಳದಲ್ಲಿ ನೀಡಲಾದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ.

ಸಾರ್ವಜನಿಕ ಹಿತದೃಷ್ಟಿಯಿಂದ ಪ್ರಕಟಣೆ ಹೊರಡಿಸಲಾಗಿದೆ.

 

*****

 


(ಪ್ರಕಟಣೆ ಐ.ಡಿ.: 2229025) ವಿಸಿಟರ್ ಕೌಂಟರ್ : 5
ಪ್ರಕಟಣೆಯನ್ನು ಇದರಲ್ಲಿ ಓದಿ: Urdu , English , हिन्दी , Telugu