ಆಯುಷ್
ಸಾಂಪ್ರದಾಯಿಕ ಔಷಧಗಳಲ್ಲಿ ಸುಸ್ಥಿರ ಬೆಳವಣಿಗೆ ಮತ್ತು ಜಾಗತಿಕ ನಾಯಕತ್ವದ ದೂರದೃಷ್ಟಿಯ ಚೌಕಟ್ಟು ವಿವರಿಸಿದ ಔಷಧೀಯ ಸಸ್ಯಗಳ ಕುರಿತ ಚಿಂತನ ಶಿಬಿರ
ರಾಷ್ಟ್ರೀಯ ಔಷಧೀಯ ಸಸ್ಯ ಮಂಡಳಿ 25 ವರ್ಷ ಪೂರೈಸಿದ ಅಂಗವಾಗಿ ನವದೆಹಲಿಯಲ್ಲಿ ಆಯೋಜಿಸಿದ್ದ ಎನ್ ಎಂ ಪಿ ಬಿ ಚಿಂತನ ಶಿಬಿರ ಉದ್ಘಾಟಿಸಿದ ಕೇಂದ್ರ ಸಚಿವರಾದ ಶ್ರೀ ಪ್ರತಾಪ್‌ರಾವ್ ಜಾಧವ್
ಸುಸ್ಥಿರ ಬೆಳವಣಿಗೆ ಮತ್ತು ಜಾಗತಿಕ ನಾಯಕತ್ವದ ಮೂಲಕ ವಿಕಸಿತ ಭಾರತ 2047 ಅನ್ನು ಮುನ್ನಡೆಸಲಿರುವ ಔಷಧೀಯ ಸಸ್ಯ ವಲಯ: ಕೇಂದ್ರ ಸಚಿವರಾದ ಶ್ರೀ ಪ್ರತಾಪ್‌ರಾವ್ ಜಾಧವ್
ಸ್ಥಿತಿಸ್ಥಾಪಕ ಮತ್ತು ಸುಸ್ಥಿರವಾಗಿ ಬೆಳೆಯುವ ಔಷಧೀಯ ಸಸ್ಯ ವಲಯಕ್ಕೆ ನೀಲನಕ್ಷೆಯನ್ನು ಹಾಕಿಕೊಟ್ಟ ಚಿಂತನ ಶಿಬಿರ : ಕಾರ್ಯದರ್ಶಿ ವೈದ್ಯ ರಾಜೇಶ್ ಕೋಟೆಚಾ
ಹಣಕಾಸಿನ ಶಿಸ್ತು, ರಾಜ್ಯಗಳ ಸಕ್ರಿಯ ಪಾಲ್ಗೊಳ್ಳುವಿಕೆ ಮತ್ತು ಎಂಎನ್ ಪಿಬಿ ಉಪಕ್ರಮಗಳಿಗೆ ನಿರಂತರ ಬೆಂಬಲವನ್ನು ಒತ್ತಿ ಹೇಳಿದ ಆಯುಷ್ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಮತ್ತು ಹಣಕಾಸು ಸಲಹೆಗಾರ ಶ್ರೀ ಹೋವೆಯ್ಡಾ ಅಬ್ಬಾಸ್
ನಾವೀನ್ಯತೆ ಮತ್ತು ಸಹಯೋಗದ ಮೂಲಕ ಔಷಧೀಯ ಸಸ್ಯಗಳ ಮೌಲ್ಯ ಸರಣಿಯನ್ನು ಬಲವರ್ಧನೆಗೊಳಿಸಿದ ಚಿಂತನ ಶಿಬಿರ :ಎನ್ ಎಂ ಪಿ ಬಿ ಸಿಇಒ ಡಾ. ಮಹೇಶ್ ಕುಮಾರ್ ದಧಿಚ್
ಎನ್ ಎಂ ಪಿ ಬಿಯಿಂದ ಸ್ಮರಣಾರ್ಥ ಕಿರುಪುಸ್ತಕಗಳು, ಹೊಸ ಸಸ್ಯ ವೈವಿಧ್ಯ ಉತ್ಪನ್ನಗಳ ಬಿಡುಗಡೆ ಮತ್ತು ಉದ್ಘಾಟನಾ ಗೋಷ್ಠಿಯಲ್ಲಿ ಹಲವು ಒಪ್ಪಂದಗಳಿಗೆ ಸಹಿ
ಪ್ರಕಟಣಾ ದಿನಾಂಕ:
11 FEB 2026 1:41PM by PIB Bengaluru
ಆಯುಷ್ ಸಚಿವಾಲಯದ ರಾಷ್ಟ್ರೀಯ ಔಷಧೀಯ ಸಸ್ಯಗಳ ಮಂಡಳಿ (ಎನ್ ಎಂ ಪಿ ಬಿ) ನವದೆಹಲಿಯ ವಿಜ್ಞಾನ ಭವನದಲ್ಲಿಂದು ಔಷಧೀಯ ಸಸ್ಯಗಳ ಕುರಿತ ಒಂದು ದಿನದ ಚಿಂತನ ಶಿಬಿರವನ್ನು ಆಯೋಜಿಸಿತ್ತು. ಸುಸ್ಥಿರ ಪದ್ಧತಿಗಳು ಮತ್ತು ನಾವೀನ್ಯತೆಗಳ ಮೂಲಕ ಔಷಧೀಯ ಸಸ್ಯಗಳ ವಲಯವನ್ನು ಬಲವರ್ಧನೆಗೊಳಿಸುವ ಗುರಿಯನ್ನು ಹೊಂದಿರುವ ನೀತಿ, ಸಂಶೋಧನೆ ಮತ್ತು ಜಾರಿ ಕಾರ್ಯತಂತ್ರಗಳ ಕುರಿತು ಚರ್ಚಿಸಲು ಹಿರಿಯ ಅಧಿಕಾರಿಗಳು, ವಿಷಯ ತಜ್ಞರು, ಉದ್ಯಮ ಮುಖಂಡರು ಮತ್ತು ರಾಜ್ಯ ಪ್ರತಿನಿಧಿಗಳನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು.
ಆಯುಷ್ ಸಚಿವಾಲಯದ ಕೇಂದ್ರ ಸಹಾಯಕ ಸಚಿವರು (ಸ್ವತಂತ್ರ ಹೊಣೆಗಾರಿಕೆ) ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ರಾಜ್ಯ ಸಚಿವರಾದ ಶ್ರೀ ಪ್ರತಾಪ್‌ರಾವ್ ಜಾಧವ್ ಅವರು ಮುಖ್ಯ ಅತಿಥಿಯಾಗಿ ಚಿಂತನ ಶಿಬಿರವನ್ನು ಉದ್ಘಾಟಿಸಿದರು. ಅವರು ತಮ್ಮ ಭಾಷಣದಲ್ಲಿ, ಔಷಧೀಯ ಸಸ್ಯಗಳು ಭಾರತದ ಸಾಂಪ್ರದಾಯಿಕ ಜ್ಞಾನ ವ್ಯವಸ್ಥೆಗಳ ಅಡಿಪಾಯ ಮಾತ್ರವಲ್ಲ, ಅದರ ಜೈವಿಕ ಮತ್ತು ಆರ್ಥಿಕ ಪರಂಪರೆಯ ಪ್ರಮುಖ ಅಂಶವಾಗಿದೆ ಎಂದು ಅವರು ಹೇಳಿದರು. ಆಯುರ್ವೇದ ಮತ್ತು ಇತರ ಆಯುಷ್ ವ್ಯವಸ್ಥೆಗಳ ಹೆಚ್ಚುತ್ತಿರುವ ಜಾಗತಿಕ ಮನ್ನಣೆಯು ಗುಣಮಟ್ಟದ ಔಷಧೀಯ ಸಸ್ಯಗಳು ಮತ್ತು ಸಸ್ಯ ಆಧಾರಿತ ಸ್ವಾಸ್ಥ್ಯ ಉತ್ಪನ್ನಗಳ ಜಾಗತಿಕ ಪೂರೈಕೆದಾರರಾಗುವ ಭಾರತದ ಸಾಮರ್ಥ್ಯವನ್ನು ಎತ್ತಿ ತೋರಿಸುತ್ತದೆ ಎಂದು ಅವರು ಹೇಳಿದರು.

ಚಿಂತನ ಶಿಬಿರದ ವಿಷಯವು ಸರ್ಕಾರದ ವಿಕಸಿತ ಭಾರತ 2047 ಮತ್ತು ಸುಸ್ಥಿರ ಜೀವನೋಪಾಯದ ಮೂಲಕ ಗ್ರಾಮೀಣ ಸಮುದಾಯಗಳನ್ನು ಸಬಲೀಕರಣಗೊಳಿಸುವ ಮೂಲಕ ಆತ್ಮನಿರ್ಭರ ಭಾರತ ದೂರದೃಷ್ಟಿಗೆ ಸೂಕ್ತವಾಗಿ ಹೊಂದಿಕೆಯಾಗುತ್ತದೆ ಎಂದು ಸಚಿವರು ಉಲ್ಲೇಖಿಸಿದರು. ಔಷಧೀಯ ಸಸ್ಯ ವಲಯವು ರೈತರು, ಉದ್ಯಮಿಗಳು ಮತ್ತು ಸಂಶೋಧಕರಿಗೆ ಆರೋಗ್ಯಕರ, ಸ್ವಾವಲಂಬಿ ಭಾರತಕ್ಕಾಗಿ ಸಹಕರಿಸಲು ಅನನ್ಯ ಅವಕಾಶಗಳನ್ನು ಒದಗಿಸುತ್ತದೆ ಎಂದು ಅವರು ಒತ್ತಿ ಹೇಳಿದರು. ಉದ್ಘಾಟನಾ ಗೋಷ್ಠಿಯ ಭಾಗವಾಗಿ ಅವರು ಎನ್ ಎಂಪಿಬಿಯ 25 ಅದ್ಭುತ ವರ್ಷಗಳನ್ನು ಸ್ಮರಣ ಸ್ಮರಣಿಕೆ ಟೆರೇಸ್ ಗಾರ್ಡನ್ ಬುಕ್‌ಲೆಟ್ ಅನ್ನು ಬಿಡುಗಡೆ ಮಾಡಿದರು ಮತ್ತು ಲಕ್ನೋದ ಸಿಎಸ್ ಐಆರ್-ಸಿಐಎಂಎಪಿ ಅಭಿವೃದ್ಧಿಪಡಿಸಿರುವ ಹೊಸ ವಿಧದ ಅನಾಸೈಕ್ಲಸ್ ಪೈರೆಥ್ರಮ್ ಅನ್ನು ಬಿಡುಗಡೆ ಮಾಡಿದರು. ಸಹಯೋಗದ ಸಂಶೋಧನೆ ಮತ್ತು ನಾವೀನ್ಯತೆಯನ್ನು ಬಲಪಡಿಸಲು ಎನ್ ಎಂಪಿಬಿ ಮತ್ತು ಎಐಐಎ ನಡುವಿನ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕುವ ಕಾರ್ಯಕ್ರಮಕ್ಕೂ ಅವರು ಸಾಕ್ಷಿಯಾದರು.
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಸರ್ಕಾರವು ಔಷಧೀಯ ಸಸ್ಯಗಳ ಕೃಷಿ ಮತ್ತು ಸುಸ್ಥಿರ ಬಳಕೆಯನ್ನು ಉತ್ತೇಜಿಸಲು ಹಲವು ಉಪಕ್ರಮಗಳನ್ನು ಪರಿಚಯಿಸಿದೆ ಎಂದು ಶ್ರೀ ಜಾಧವ್ ಬಲವಾಗಿ ಪ್ರತಿಪಾದಿಸಿದರು,. ಎನ್ ಎಂಪಿಬಿಯಂತಹ ಸಂಸ್ಥೆಗಳು ರೈತರು ಹೆಚ್ಚಿನ ಮೌಲ್ಯದ ಔಷಧೀಯ ಬೆಳೆಗಳನ್ನು, ವಿಶೇಷವಾಗಿ ಮಳೆಯಾಶ್ರಿತ ಮತ್ತು ಮಧ್ಯಮ ಉಳುವರಿ ನೀಡುವ ಭೂಮಿಯಲ್ಲಿ ಬೆಳೆಯಲು ಬೆಂಬಲ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದು ಅವರು ಹೇಳಿದರು. ಈ ಪ್ರಯತ್ನಗಳು ಆದಾಯವನ್ನು ಗಳಿಸುವುದಲ್ಲದೆ ಪರಿಸರ ಸಂರಕ್ಷಣೆ ಮತ್ತು ಸಾರ್ವಜನಿಕ ಆರೋಗ್ಯ ಭದ್ರತೆಗೆ ಕೊಡುಗೆ ನೀಡುತ್ತವೆ ಎಂದು ಅವರು ಹೇಳಿದರು.
ಹಿಂದಿನ ಮತ್ತು ಭವಿಷ್ಯದ ಸಂಪರ್ಕಗಳನ್ನು ಬಲವರ್ಧನೆಗೊಳಿಸುವಲ್ಲಿ, ಮಾರುಕಟ್ಟೆ ಲಭ್ಯತೆಯನ್ನು ವಿಸ್ತರಿಸುವಲ್ಲಿ ಮತ್ತು ಪೂರೈಕೆ ಸರಣಿಯಲ್ಲಿ ಗುಣಮಟ್ಟ ಮತ್ತು ದೃಢೀಕರಣವನ್ನು ಖಚಿತಪಡಿಸಿಕೊಳ್ಳುವಲ್ಲಿ ಎನ್ ಎಂಪಿಬಿಯ ಯ ಬದ್ಧತೆಯ ಪ್ರಯತ್ನಗಳನ್ನು ಅವರು ಶ್ಲಾಘಿಸಿದರು. ದೇಶದ ರೈತರು ಮತ್ತು ಸಮಾಜದ ಆರೋಗ್ಯ ಅಗತ್ಯಗಳನ್ನು ಪೂರೈಸುವ ಜಾಗತಿಕವಾಗಿ ಸ್ಪರ್ಧಾತ್ಮಕ, ಪರಿಸರ ಸುಸ್ಥಿರತೆ ಮತ್ತು ಆರ್ಥಿಕವಾಗಿ ಸಕ್ರಿಯ ಔಷಧೀಯ ಸಸ್ಯ ವಲಯವನ್ನು ಅಭಿವೃದ್ಧಿಪಡಿಸುವತ್ತ ತಮ್ಮ ಸಾಮೂಹಿಕ ಕೆಲಸವನ್ನು ಮುಂದುವರಿಸಲು ಸಚಿವರು ಎಲ್ಲಾ ಪಾಲುದಾರರಿಗೆ ಕರೆ ನೀಡಿದರು.
ಆಯುಷ್ ಸಚಿವಾಲಯದ ಕಾರ್ಯದರ್ಶಿ ವೈದ್ಯ ರಾಜೇಶ್ ಕೋಟೆಚಾ ಅವರು ತಮ್ಮ ಹೇಳಿಕೆಯಲ್ಲಿ ಎಂಎನ್ ಪಿಬಿಯ ಯ ಬೆಳ್ಳಿ ಮಹೋತ್ಸವವು ಕೇವಲ ಸಾಧನೆಯ ಮೈಲಿಗಲ್ಲು ಮಾತ್ರವಲ್ಲ, ಆತ್ಮಾವಲೋಕನ ಮತ್ತು ನಾವೀನ್ಯತೆಗೆ ಒಂದು ಅವಕಾಶವಾಗಿದೆ ಎಂದು ಒತ್ತಿ ಹೇಳಿದರು. ಭಾರತದ ವೈವಿಧ್ಯಮಯ ಔಷಧೀಯ ಸಸ್ಯವರ್ಗವನ್ನು ಸಂರಕ್ಷಿಸಲಾಗಿದೆ ಮತ್ತು ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಅತ್ಯುತ್ತಮವಾಗಿ ಬಳಸಿಕೊಳ್ಳಲಾಗಿದೆಯೆ ಎಂಬುದನ್ನು ಖಾತ್ರಿಪಡಿಸಿಕೊಳ್ಳುವ ಪಯಣದ ಮುಂದಿನ ಹಂತವು ವೈಜ್ಞಾನಿಕ ಪ್ರಮಾಣೀಕರಣ, ಪತ್ತೆ ಹಚ್ಚುವುದು ಮತ್ತು ಹವಾಮಾನ ಸ್ಥಿತಿಸ್ಥಾಪಕತ್ವದ ಮೇಲೆ ಕೇಂದ್ರೀಕರಿಸಬೇಕು ಎಂದು ಅವರು ಹೇಳಿದರು.

ಪ್ರಾದೇಶಿಕ ಸೌಲಭ್ಯ ಕೇಂದ್ರಗಳು, ಸಂಶೋಧನಾ ಪಾಲುದಾರಿಕೆಗಳು ಮತ್ತು ಪಾಲುದಾರರಲ್ಲಿ ಉತ್ತಮ ಸಮನ್ವಯಕ್ಕಾಗಿ ಡಿಜಿಟಲ್ ಸಂಪರ್ಕಗಳನ್ನು ಬಲಪಡಿಸುವತ್ತ ಸಚಿವಾಲಯ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು. ಶೈಕ್ಷಣಿಕ, ಕೈಗಾರಿಕೆ ಮತ್ತು ರೈತರ ನಡುವಿನ ಸಹಯೋಗವನ್ನು ಒತ್ತಿ ಹೇಳಿದ ಅವರು ಈ ಚಿಂತನ ಶಿಬಿರದ ಫಲಿತಾಂಶಗಳು ವಲಯವನ್ನು ಹೆಚ್ಚು ಉತ್ಪಾದಕ, ಎಲ್ಲರನ್ನೂ ಒಳಗೊಳ್ಳುವ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿಸಲು ಐದು ವರ್ಷಗಳ ನೀಲನಕ್ಷೆ ರೂಪಿಸಲು ಮಾರ್ಗದರ್ಶನ ನೀಡುತ್ತವೆ ಎಂದು ಹೇಳಿದರು.

ಆಯುಷ್ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಮತ್ತು ಹಣಕಾಸು ಸಲಹೆಗಾರರಾದ ಶ್ರೀ ಹೊವೆಯ್ಡಾ ಅಬ್ಬಾಸ್, ಎನ್ ಎಂ ಪಿ ಬಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಉತ್ತಮ ಹಣಕಾಸಿನ ಶಿಸ್ತು ಮತ್ತು ಸಮಯಕ್ಕೆ ಸರಿಯಾಗಿ ಹಣವನ್ನು ಬಿಡುಗಡೆ ಮಾಡುವುದನ್ನು ಒತ್ತಿ ಹೇಳಿದರು. ಔಷಧೀಯ ಸಸ್ಯ ಕೃಷಿಯಲ್ಲಿ ತೊಡಗಿರುವ ಸ್ಥಳೀಯ ಸಮುದಾಯಗಳಿಗೆ ಸಂಪರ್ಕವನ್ನು ವಿಸ್ತರಿಸುವಾಗ ಹಣಕಾಸು ನಿರ್ವಹಣೆ ಮತ್ತು ಸುಸ್ಥಿರತೆಯ ನವೀನ ಮಾದರಿಗಳನ್ನು ಅಳವಡಿಸಿಕೊಳ್ಳಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹೆಚ್ಚಿನ ಪ್ರಮಾಣದಲ್ಲಿ ಪಾಲ್ಗೊಳ್ಳುತ್ತಿರುವುದನ್ನು ಪ್ರೋತ್ಸಾಹಿಸಿದರು. ಎನ್ ಎಂ ಪಿ ಬಿಯ ಉಪಕ್ರಮಗಳಿಗೆ ಸಚಿವಾಲಯದ ನಿರಂತರ ಸಾಂಸ್ಥಿಕ ಮತ್ತು ಆರ್ಥಿಕ ಬೆಂಬಲ ನೀಡುವುದಾಗಿ ಅವರು ಭರವಸೆ ನೀಡಿದರು.
ಎನ್ ಎಂ ಪಿ ಬಿಯ ಸಿಇಒ ಡಾ. ಮಹೇಶ್ ಕುಮಾರ್ ದಧಿಚ್, ಸಚಿವರ ಮಾರ್ಗದರ್ಶನಕ್ಕಾಗಿ ಮತ್ತು ಸಚಿವಾಲಯದ ನಿರಂತರ ಬೆಂಬಲಕ್ಕಾಗಿ ಕೃತಜ್ಞತೆಗಳನ್ನು ಸಲ್ಲಿಸಿದರು. ಕಳೆದ 25 ವರ್ಷಗಳ ಸಾಧನೆಗಳನ್ನು ಪರಿಶೀಲಿಸಲು ಮತ್ತು ಕ್ಷೇತ್ರದ ಭವಿಷ್ಯದ ಬೆಳವಣಿಗೆಗೆ ಯೋಜಿಸಲು ಚಿಂತನ ಶಿಬಿರವನ್ನು ಕಲ್ಪಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಸಂರಕ್ಷಣೆ, ಸಾಮರ್ಥ್ಯ ವೃದ್ಧಿ ಮತ್ತು ಸಂಶೋಧನಾ ಪ್ರಚಾರದಲ್ಲಿ ಎನ್ ಎಂ ಪಿ ಬಿಯ ಕಾರ್ಯವನ್ನು ಉಲ್ಲೇಖಿಸಿದ ಅವರು ನಾವೀನ್ಯತೆ, ಪಾಲುದಾರರ ಪಾಲ್ಗೊಳ್ಳುವಿಕೆ ಮತ್ತು ಸುಸ್ಥಿರ ಅಭ್ಯಾಸಗಳ ಮೂಲಕ ಕೃಷಿಯಿಂದ ಮಾರುಕಟ್ಟೆಯವರೆಗೆ ಸಂಪೂರ್ಣ ಮೌಲ್ಯ ಸರಣಿಯನ್ನು ಬಲಪಡಿಸಲು ಮಂಡಳಿಯು ಬದ್ಧವಾಗಿದೆ ಎಂದು ಹೇಳಿದರು.

ಚಿಂತನ ಶಿಬಿರದ ಉದ್ಘಾಟನಾ ಗೋಷ್ಠಿಯಲ್ಲಿ, ರಾಷ್ಟ್ರೀಯ ಔಷಧೀಯ ಸಸ್ಯಗಳ ಮಂಡಳಿಯ (ಎನ್ ಎಂ ಪಿ ಬಿ) 25ನೇ ವಾರ್ಷಿಕೋತ್ಸವವನ್ನು ಗುರುತಿಸಲು ಹಲವಾರು ಪ್ರಮುಖ ಉತ್ಪನ್ನಗಳ ಬಿಡುಗಡೆ ಮತ್ತು ಸಹಯೋಗಗಳನ್ನು ಘೋಷಿಸಲಾಯಿತು. ಔಷಧೀಯ ಸಸ್ಯ ಕೃಷಿಯಲ್ಲಿ ಸಾಧನೆಗಳು ಮತ್ತು ಉತ್ತಮ ಪದ್ಧತಿಗಳನ್ನು ಪ್ರದರ್ಶಿಸಲು ಎನ್ ಎಂ ಪಿ ಬಿ ಯ 25 ವರ್ಷಗಳ ಪಯಣವನ್ನು ಬಿಂಬಿಸುವ ಸ್ಮರಣಾರ್ಥ ಕಿರುಪುಸ್ತಕದ ಇಂಗ್ಲಿಷ್ ಆವೃತ್ತಿ ಮತ್ತು ಟೆರೇಸ್ ಗಾರ್ಡನ್ ಕಿರುಪುಸ್ತಕವನ್ನು ಬಿಡುಗಡೆ ಮಾಡಲಾಯಿತು.


ಅಲ್ಲದೆ, ಹೆಚ್ಚಿನ ಮೌಲ್ಯದ ಔಷಧೀಯ ಬೆಳೆ ಕೃಷಿಯನ್ನು ಬೆಂಬಲಿಸಲು ಲಕ್ನೋದ ಸಿಎಸ್ಐಆರ್-ಸಿಐಎಂಎಪಿ (CSIR-CIMAP) ಅಭಿವೃದ್ಧಿಪಡಿಸಿದ ಹೊಸ ವಿಧದ ಅನಾಸೈಕ್ಲಸ್ ಪೈರೆಥ್ರಮ್ ಅನ್ನು ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಔಷಧೀಯ ಸಸ್ಯಗಳ ವಲಯದಲ್ಲಿ ಸಹಯೋಗದ ಸಂಶೋಧನೆ ಮತ್ತು ನಾವೀನ್ಯತೆ ಬಲಪಡಿಸುವ ಮೂಲಕ ಎನ್ ಎಂ ಪಿ ಬಿ ಮತ್ತು ಅಘರ್ಕರ್ ಸಂಶೋಧನಾ ಸಂಸ್ಥೆ ನಡುವೆ ತಿಳಿವಳಿಕೆ ಒಪ್ಪಂದ (ಎಂಒಯುಗೆ)ಕ್ಕೆ ಸಹಿ ಹಾಕಲಾಯಿತು.


ಚಿಂತನ ಶಿಬಿರ ಸಂಶೋಧನೆ ಮತ್ತು ಅಭಿವೃದ್ಧಿ, ಪತ್ತೆ ಹಚ್ಚುವುದು ಮತ್ತು ಗುಣಮಟ್ಟದ ಭರವಸೆ, ಉದ್ಯಮ ಸಹಯೋಗ ಮತ್ತು ಸಂರಕ್ಷಣೆ ಮತ್ತು ಕೃಷಿಯಲ್ಲಿ ಉತ್ತಮ ಅಭ್ಯಾಸಗಳಂತಹ ವಿಷಯಗಳ ಕುರಿತು ತಾಂತ್ರಿಕ ಗೋಷ್ಠಿಗಳು ಮತ್ತು ತಜ್ಞರ ಫಲಕಗಳನ್ನು ಒಳಗೊಂಡಿರುತ್ತದೆ. ಚರ್ಚೆಗಳು ಭಾರತದಲ್ಲಿ ಔಷಧೀಯ ಸಸ್ಯ ಕ್ಷೇತ್ರದ ಮುಂದಿನ ಹಂತದ ಬೆಳವಣಿಗೆಗೆ ನೀತಿ ಚೌಕಟ್ಟನ್ನು ರೂಪಿಸಲು ಸಹಕಾರಿಯಾಗಲಿವೆ.



*****
(ಪ್ರಕಟಣೆ ಐ.ಡಿ.: 2226372)
ವಿಸಿಟರ್ ಕೌಂಟರ್ : 6