ಹಣಕಾಸು ಸಚಿವಾಲಯ
azadi ka amrit mahotsav

ಸಹಕಾರಿ ಬ್ಯಾಂಕುಗಳ ಆರ್ಥಿಕ ಆರೋಗ್ಯ, ಸುಧಾರಣೆ, ಆಡಳಿತ ಮತ್ತು ಡಿಜಿಟಲ್ ಸೇರ್ಪಡೆಯನ್ನು ಬಲಪಡಿಸಲು ಆರ್.ಬಿ.ಐ. ನೂತನ ಕ್ರಮಪದ್ದತಿಗಳನ್ನು ಜಾರಿಗೊಳಿಸಿದೆ


ಜನವರಿ 19, 2026 ರಿಂದ ಅನ್ವಯವಾಗುವ ಆಯಾ ವರ್ಗಗಳ ಅಡಿಯಲ್ಲಿ ಆದ್ಯತೆಯ ವಲಯ ಸಾಲವಾಗಿ ವರ್ಗೀಕರಿಸಲು ಅರ್ಹವಾಗಿರುವ ಸಹಕಾರಿ ಸಂಘಗಳಿಗೆ ಮುಂಗಡ-ಸಾಲ ನೀಡಲು ಬ್ಯಾಂಕುಗಳು ಎನ್.ಸಿ.ಡಿ.ಸಿ.ಗೆ ಸಾಲ ಮಂಜೂರು ಮಾಡುತ್ತವೆ 

ಸುಧಾರಣೆಗಳಲ್ಲಿ ಪರಿಷ್ಕೃತ ಆದ್ಯತಾ ವಲಯ ಸಾಲ ನೀಡುವ ಮಾನದಂಡಗಳ ಅಡಿಯಲ್ಲಿ ಎನ್.ಸಿ.ಡಿ.ಸಿ. ಮೂಲಕ ಸಹಕಾರಿ ಸಂಘಗಳಿಗೆ ಹೆಚ್ಚಿನ ಸಾಲದ ಹರಿವನ್ನು ಸುಗಮಗೊಳಿಸುವ ಉಪಕ್ರಮವು ಕೂಡಾ ಸೇರಿದೆ

ಗ್ರಾಮೀಣ ಸಹಕಾರಿ ಬ್ಯಾಂಕುಗಳಿಗೆ ತಾಂತ್ರಿಕ ಸೇವೆಗಳನ್ನು ಒದಗಿಸಲು ಹಂಚಿಕೆಯ ಸೇವೆಗಳ ಘಟಕವಾಗಿ 'ಸಹಕಾರ ಸಾರಥಿ' ಸ್ಥಾಪಿಸಲಾಗಿದೆ

ಪ್ರಕಟಣಾ ದಿನಾಂಕ: 10 FEB 2026 4:26PM by PIB Bengaluru

ಭಾರತ ಸರ್ಕಾರದೊಂದಿಗೆ ಸಮಾಲೋಚಿಸಿ, ಜನವರಿ 19, 2026 ರಿಂದ ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮಕ್ಕೆ (ಎನ್.ಸಿ.ಡಿ.ಸಿ.) ಬ್ಯಾಂಕ್ ಗಳು ಮಂಜೂರು ಮಾಡಿದ ಸಾಲಗಳನ್ನು ಸಹಕಾರಿ ಸಂಘಗಳಿಗೆ ಮುಂಗಡ-ಸಾಲವಾಗಿ ನೀಡುವ ವ್ಯವಸ್ಥೆಯು ಜನವರಿ 19, 2026 ರಿಂದ ಅನ್ವಯವಾಗುತ್ತದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್.ಬಿ.ಐ.) ತಿಳಿಸಿದೆ. ಇವು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು, ನಗರ ಸಹಕಾರಿ ಬ್ಯಾಂಕುಗಳು, ಸಣ್ಣ ಹಣಕಾಸು ಬ್ಯಾಂಕುಗಳು ಮತ್ತು ಸ್ಥಳೀಯ ಪ್ರದೇಶ ಬ್ಯಾಂಕುಗಳನ್ನು ಹೊರತುಪಡಿಸಿ ಇತರ ಬ್ಯಾಂಕುಗಳಿಗೆ ಅನ್ವಯಿಸುತ್ತವೆ. ಈ ಸಾಲಗಳು 2025 ರ ಆದ್ಯತಾ ವಲಯ ಸಾಲ ನೀಡುವ ಮಾಸ್ಟರ್ ನಿರ್ದೇಶನದಲ್ಲಿ ನಿಗದಿಪಡಿಸಿದ ಉದ್ದೇಶಗಳು ಮತ್ತು ಚಟುವಟಿಕೆಗಳಿಗಾಗಿವೆ.

ಕೇಂದ್ರ ಸಹಕಾರ ಸಚಿವಾಲಯದ ಆಡಳಿತ ನಿಯಂತ್ರಣದಲ್ಲಿರುವ ಶಾಸನಬದ್ಧ ನಿಗಮವಾದ ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ (ಎನ್.ಸಿ.ಡಿ.ಸಿ), ಸಹಕಾರಿ ಸಂಸ್ಥೆಗಳಿಗೆ ಹಣಕಾಸಿನ ನೆರವು ನೀಡುತ್ತದೆ ಮತ್ತು ಸಹಕಾರಿ ಚಳುವಳಿಯ ಬೆಳವಣಿಗೆಯನ್ನು ವೇಗಗೊಳಿಸಲು ನೇರವಾಗಿ ಕೊಡುಗೆ ನೀಡುತ್ತದೆ.

ಸಹಕಾರ ಬ್ಯಾಂಕುಗಳ ಆರ್ಥಿಕ ಆರೋಗ್ಯ, ಆಡಳಿತ ಮತ್ತು ಡಿಜಿಟಲ್ ಸೇರ್ಪಡೆಯನ್ನು ಬಲಪಡಿಸಲು ಭಾರತ ಸರ್ಕಾರ ಮತ್ತು ಆರ್.ಬಿ.ಐ ವಿವಿಧ ಕ್ರಮಗಳನ್ನು ತೆಗೆದುಕೊಂಡಿವೆ, ಜೊತೆಗೆ ಠೇವಣಿ ಭದ್ರತೆ, ಸಾಲ ಲಭ್ಯತೆ ಮತ್ತು ವಿವೇಚನಾಯುಕ್ತ ನಿಯಂತ್ರಣವನ್ನು ಹೆಚ್ಚಿಸುತ್ತವೆ, ಅವುಗಳ ನಡುವೆ ಇವು ಸೇರಿವೆ:

  • ನಗರ ಸಹಕಾರಿ ಬ್ಯಾಂಕುಗಳು (ಯು.ಸಿ.ಬಿ.) ಹೊಸ ಶಾಖೆಗಳನ್ನು ತೆರೆಯಲು ಅನುಮತಿಸಲಾಗಿದೆ
  • ವಸತಿ ಸಾಲದ ಮಿತಿಗಳನ್ನು ನಗರ ಸಹಕಾರಿ ಬ್ಯಾಂಕುಗಳು (ಯು.ಸಿ.ಬಿ.) ಗಳಿಗೆ ಅವುಗಳ ಒಟ್ಟು ಸಾಲಗಳು ಮತ್ತು ಮುಂಗಡಗಳಲ್ಲಿ 10% ರಿಂದ 25% ಕ್ಕೆ ಹೆಚ್ಚಿಸಲಾಗಿದೆ
  • ಸಹಕಾರ ಬ್ಯಾಂಕುಗಳ ನಿರ್ದೇಶಕರ ಅವಧಿಯನ್ನು 8 ರಿಂದ 10 ವರ್ಷಗಳಿಗೆ ಹೆಚ್ಚಿಸಲು ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯನ್ನು ತಿದ್ದುಪಡಿ ಮಾಡಲಾಗಿದೆ
  • ಸಹಕಾರ ಬ್ಯಾಂಕುಗಳನ್ನು ಆಧಾರ್ ಆಧಾರಿತ ಪಾವತಿ ವ್ಯವಸ್ಥೆಗೆ (ಎ.ಇ.ಪಿ.ಎಸ್.) ಸೇರಿಸಲು ಪರವಾನಗಿ ಶುಲ್ಕವನ್ನು ಕಡಿಮೆ ಮಾಡಲಾಗಿದೆ
  • ಠೇವಣಿ ತೆಗೆದುಕೊಳ್ಳದ ಬ್ಯಾಂಕೇತರ ಹಣಕಾಸು ಕಂಪನಿ(ಎನ್.ಬಿ.ಎಫ್.ಸಿ.)ಯಾದ ರಾಷ್ಟ್ರೀಯ ನಗರ ಸಹಕಾರಿ ಹಣಕಾಸು ಮತ್ತು ಅಭಿವೃದ್ಧಿ ನಿಗಮ ಲಿಮಿಟೆಡ್ (ಎನ್.ಯು.ಸಿ.ಎಫ್.ಡಿ.ಸಿ.), ಮಾಹಿತಿ ತಂತ್ರಜ್ಞಾನ (ಐಟಿ) ಮೂಲಸೌಕರ್ಯ ಮತ್ತು ಕಾರ್ಯಾಚರಣೆಯ ಬೆಂಬಲವನ್ನು ಒದಗಿಸಲು ನಗರ ಸಹಕಾರಿ ಬ್ಯಾಂಕುಗಳಿಗೆ ಒಂದು ಏಕೀಕೃತ ಸಂಸ್ಥೆಯಾಗಿ ಸ್ಥಾಪಿಸಲಾಗಿದೆ.
  • ಗ್ರಾಮೀಣ ಸಹಕಾರಿ ಬ್ಯಾಂಕುಗಳಿಗೆ ತಾಂತ್ರಿಕ ಸೇವೆಗಳನ್ನು ಒದಗಿಸಲು ನೂತನ “ಸಹಕಾರ ಸಾರಥಿ” ಎಂಬ ಹಂಚಿಕೆಯ ಸೇವೆಗಳ ಘಟಕವನ್ನು (ಎಸ್. ಎಸ್.ಇ) ಸ್ಥಾಪಿಸಲಾಗಿದೆ.
  • ಗ್ರಾಮೀಣ ಸಹಕಾರಿ ಬ್ಯಾಂಕುಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್.ಬಿ.ಐ.) ಏಕೀಕೃತ ಪರಿಹಾರ (ಇಂಟಿಗ್ರೇಟೆಡ್ ಓಂಬುಡ್ಸ್ಮನ್ ) ಯೋಜನೆಯಲ್ಲಿ ಸೇರಿಸಲಾಗಿದೆ.
  • ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (ಡಿಐಸಿಜಿಸಿ) ಎಲ್ಲಾ ಸಹಕಾರಿ ಬ್ಯಾಂಕುಗಳಿಗೆ ಪ್ರತಿ ಬ್ಯಾಂಕಿನ ಪ್ರತಿ ಠೇವಣಿದಾರರಿಗೆ ₹ 5,00,000 ವರೆಗಿನ ವಿವಿಧ ರೀತಿಯ ಠೇವಣಿಗಳನ್ನು (ಅಸಲು ಮತ್ತು ಬಡ್ಡಿ ಸೇರಿದಂತೆ) ವಿಮೆ ಮಾಡುತ್ತದೆ.

ಈ ಮಾಹಿತಿಯನ್ನು ಹಣಕಾಸು ಸಚಿವಾಲಯದ ರಾಜ್ಯ ಸಚಿವರಾದ ಶ್ರೀ ಪಂಕಜ್ ಚೌಧರಿ ಅವರು ಇಂದು ರಾಜ್ಯಸಭೆಯಲ್ಲಿ ನೀಡಿದ್ದಾರೆ.

 

*****


(ಪ್ರಕಟಣೆ ಐ.ಡಿ.: 2226078) ವಿಸಿಟರ್ ಕೌಂಟರ್ : 36
ಪ್ರಕಟಣೆಯನ್ನು ಇದರಲ್ಲಿ ಓದಿ: English , Gujarati , Urdu , हिन्दी , Telugu