ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ವೇವ್‌ಎಕ್ಸ್ ನಿಂದ ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ 2026ಕ್ಕೆ ಅರ್ಜಿಗಳ ಆಹ್ವಾನ


ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ 2026: ಮಾಧ್ಯಮ, ಮನರಂಜನೆ ಮತ್ತು ಉದಯೋನ್ಮುಖ ತಂತ್ರಜ್ಞಾನಗಳಲ್ಲಿನ ಎಐ ಪರಿಹಾರಗಳ ಮೇಲೆ ಬೆಳಕು ಚೆಲ್ಲಲಿದೆ

ಎಐ ನವೋದ್ಯಮಗಳಿಗೆ ವ್ಯಾಪಾರ ನೆಟ್‌ವರ್ಕಿಂಗ್ ಮತ್ತು ಪ್ರದರ್ಶನ ಸ್ಥಳಾವಕಾಶ ಕಲ್ಪಿಸಲಿರುವ ವೇವ್‌ಎಕ್ಸ್

प्रविष्टि तिथि: 30 JAN 2026 4:18PM by PIB Bengaluru

ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು 2026ರ ಫೆಬ್ರವರಿ 16ರಿಂದ 20ರವರೆಗೆ ನವದೆಹಲಿಯ ಭಾರತ ಮಂಟಪದಲ್ಲಿ ಆಯೋಜಿಸಲಿರುವ ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ 2026ರಲ್ಲಿ ಭಾಗವಹಿಸಲು ವೇವ್‌ಎಕ್ಸ್ ನವೋದ್ಯಮಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ಶೃಂಗಸಭೆಯು ನವೀನ ಕೃತಕ ಬುದ್ಧಿಮತ್ತೆ (ಎಐ) ಪರಿಹಾರಗಳನ್ನು ಪ್ರದರ್ಶಿಸಲು ಮತ್ತು ಭಾರತದ ವೇಗವಾಗಿ ಬೆಳೆಯುತ್ತಿರುವ ಎಐ ಪರಿಸರ ವ್ಯವಸ್ಥೆಯಲ್ಲಿ ಸಹಯೋಗವನ್ನು ಉತ್ತೇಜಿಸಲು ಒಂದು ಪ್ರಮುಖ ರಾಷ್ಟ್ರೀಯ ವೇದಿಕೆಯಾಗಿ ಕಾರ್ಯನಿರ್ವಹಿಸಲಿದೆ.

ಶೃಂಗಸಭೆಯ ಭಾಗವಾಗಿ, ವೇವ್‌ಎಕ್ಸ್ ಒಂದು ಮೀಸಲಾದ ನವೋದ್ಯಮ ಪ್ರದರ್ಶನ ಕಾರ್ಯಕ್ರಮವನ್ನು ಸುಗಮಗೊಳಿಸುತ್ತದೆ, ಇದು ಆಯ್ದ ನವೋದ್ಯಮಗಳಿಗೆ ತಮ್ಮ ಎಐ-ಚಾಲಿತ ಉತ್ಪನ್ನಗಳು ಮತ್ತು ಪರಿಹಾರಗಳನ್ನು ವೈವಿಧ್ಯಮಯ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರೇಕ್ಷಕರಿಗೆ ಪ್ರದರ್ಶಿಸಲು ಅನುವು ಮಾಡಿಕೊಡುತ್ತದೆ. ಎವಿಜಿಸಿ-ಎಕ್ಸ್‌ ಆರ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಮತ್ತು ಎಐ-ಚಾಲಿತ ಉತ್ಪನ್ನಗಳ ಮೇಲೆ ಕೆಲಸ ಮಾಡುತ್ತಿರುವ ನವೋದ್ಯಮಗಳಿಗೆ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿನ ಎಂಐಬಿ ಪೆವಿಲಿಯನ್ ನಲ್ಲಿ ವಿಶೇಷ ಪ್ರದರ್ಶನ ಮತ್ತು ವ್ಯಾಪಾರ ನೆಟ್‌ವರ್ಕಿಂಗ್ ಅವಕಾಶಗಳನ್ನು ಒದಗಿಸಲಾಗುತ್ತದೆ.

ಎಂಐಬಿ ಪೆವಿಲಿಯನ್ ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರದಲ್ಲಿ ಅತ್ಯಾಧುನಿಕ ಮತ್ತು ಉದಯೋನ್ಮುಖ ಎಐ ತಂತ್ರಜ್ಞಾನಗಳನ್ನು ಪ್ರದರ್ಶಿಸುವ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ. ಇದು ಸಂಶೋಧಕರಿಗೆ ನೀತಿ ನಿರೂಪಕರು, ಉದ್ಯಮದ ಮುಖಂಡರು, ಹೂಡಿಕೆದಾರರು ಮತ್ತು ಜಾಗತಿಕ ಪಾಲುದಾರರೊಂದಿಗೆ ತೊಡಗಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ ಮತ್ತು ಸೃಜನಶೀಲ ಹಾಗೂ ತಂತ್ರಜ್ಞಾನದ ಪರಿಸರ ವ್ಯವಸ್ಥೆಯಾದ್ಯಂತ ಸಹಯೋಗವನ್ನು ಉತ್ತೇಜಿಸುತ್ತದೆ.

ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ 2026, ನವೋದ್ಯಮಗಳು ಮತ್ತು ಪ್ರಮುಖ ಪಾಲುದಾರರ ನಡುವೆ ವ್ಯವಸ್ಥಿತ ಸಂವಹನವನ್ನು ಸುಗಮಗೊಳಿಸುವ ಮೂಲಕ ಭಾರತದ ಎಐ ನಾವೀನ್ಯತೆ ಪರಿಸರ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಮಹತ್ವದ ಪಾತ್ರ ವಹಿಸುವ ನಿರೀಕ್ಷೆಯಿದೆ.

ವೇವ್‌ಎಕ್ಸ್ ಬಗ್ಗೆ

ವೇವ್‌ಎಕ್ಸ್ ಎಂಬುದು ವಾರ್ತಾ ಮತ್ತು ಪ್ರಸಾರ ಸಚಿವಾಲಯದ ವೇವ್ಸ್ ಉಪಕ್ರಮದ ಅಡಿಯಲ್ಲಿ ಮೀಸಲಾದ ನವೋದ್ಯಮ ವೇಗವರ್ಧಕ ವೇದಿಕೆಯಾಗಿದ್ದು, ಮಾಧ್ಯಮ, ಮನರಂಜನೆ ಮತ್ತು ಭಾಷಾ ತಂತ್ರಜ್ಞಾನದ ಪರಿಸರ ವ್ಯವಸ್ಥೆಯಲ್ಲಿ ನಾವೀನ್ಯತೆಯನ್ನು ಉತ್ತೇಜಿಸುವತ್ತ ಗಮನ ಹರಿಸಿದೆ. ಭಾರತದ ಮುಂದಿನ ಪೀಳಿಗೆಯ ಸೃಜನಶೀಲ ಮತ್ತು ತಂತ್ರಜ್ಞಾನ ಆಧಾರಿತ ನವೋದ್ಯಮಗಳನ್ನು ಬೆಂಬಲಿಸಲು ಪ್ರಾರಂಭಿಸಲಾದ ವೇವ್‌ಎಕ್ಸ್, ಸಂಶೋಧಕರು, ಸರ್ಕಾರಿ ಸಂಸ್ಥೆಗಳು ಮತ್ತು ಉದ್ಯಮದ ಮುಖಂಡರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ. ವೇವ್‌ಎಕ್ಸ್ ಕೇಂದ್ರೀಕೃತ ಹ್ಯಾಕಥಾನ್‌ ಗಳು, ವ್ಯವಸ್ಥಿತ ಇನ್ಕ್ಯುಬೇಷನ್ ಕಾರ್ಯಕ್ರಮಗಳು, ಮಾರ್ಗದರ್ಶನ ಮತ್ತು ರಾಷ್ಟ್ರೀಯ ವೇದಿಕೆಗಳೊಂದಿಗೆ ಸಂಯೋಜನೆಯ ಮೂಲಕ ಅದ್ಭುತ ಆಲೋಚನೆಗಳನ್ನು ಬೆಂಬಲಿಸುವುದನ್ನು ಮುಂದುವರೆಸಿದೆ. ಬಲವಾದ ಮತ್ತು ತಡೆರಹಿತ ಇನ್ಕ್ಯುಬೇಷನ್ ಪರಿಸರ ವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಲು, ವೇವ್‌ಎಕ್ಸ್ ಹೈದರಾಬಾದ್‌ನ ಟಿ-ಹಬ್ ಮತ್ತು ಐಐಟಿ ದೆಹಲಿಯೊಂದಿಗೆ ಪಾಲುದಾರಿಕೆ ಹೊಂದಿದ್ದು, ಭಾರತದ ಒಂಬತ್ತು ಇನ್ಕ್ಯುಬೇಷನ್ ಕೇಂದ್ರಗಳಲ್ಲಿ ಅಂದರೆ, ಐಐಸಿಟಿ ಮುಂಬೈ, ಎಫ್‌ ಟಿ ಐ ಐ ಪುಣೆ, ಎಸ್‌ ಆರ್‌ ಎಫ್‌ ಟಿ ಐ ಕೋಲ್ಕತ್ತಾ, ಐಐಎಂಸಿ ದೆಹಲಿ, ಐಐಎಂಸಿ ಐಜ್ವಾಲ್, ಐಐಎಂಸಿ ಐಐಎಂಸಿ ಅಮರಾವತಿ, ಐಐಎಂಸಿ ಧೆಂಕನಲ್, ಐಐಎಂಸಿ ಕೊಟ್ಟಾಯಂ ಮತ್ತು ಐಐಎಂಸಿ ಜಮ್ಮುವಿನಲ್ಲಿ ಕಾರ್ಯನಿರ್ವಹಿಸುತ್ತಿದೆ.

ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ: https://wavex.wavesbazaar.com/

 

*****


(रिलीज़ आईडी: 2220891) आगंतुक पटल : 19
इस विज्ञप्ति को इन भाषाओं में पढ़ें: Malayalam , English , Urdu , हिन्दी , Bengali , Gujarati