ರಸಗೊಬ್ಬರ ಇಲಾಖೆ
azadi ka amrit mahotsav

ಭಾರತ-ಕೆನಡಾ ದ್ವಿಪಕ್ಷೀಯ ಸಂಬಂಧಗಳಲ್ಲಿ ನವೀಕೃತ ತ್ವರಿತ ವೇಗತೆ ಸಾಧ್ಯವಾಯಿತು 


ಪೊಟ್ಯಾಶ್ ಮತ್ತು ರಸಗೊಬ್ಬರ ಭದ್ರತೆಯಲ್ಲಿ ಸಹಕಾರವನ್ನು ಬಲಪಡಿಸುತ್ತದೆ 

ಹೂಡಿಕೆ, ತಂತ್ರಜ್ಞಾನ ಸಹಯೋಗ ಮತ್ತು ಭವಿಷ್ಯದ ಮಾರ್ಗಸೂಚಿ ತಯಾರಿಸಲಾಗಿದೆ 

प्रविष्टि तिथि: 29 JAN 2026 7:20PM by PIB Bengaluru

ಗೌರವಾನ್ವಿತ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವರಾದ ಶ್ರೀ ಜೆ.ಪಿ. ನಡ್ಡಾ ಅವರು ಜನವರಿ 29, 2026 ರಂದು ನವದೆಹಲಿಯಲ್ಲಿ ಕೆನಡಾದ ನೈಸರ್ಗಿಕ ಸಂಪನ್ಮೂಲ ಸಚಿವರಾದ ಶ್ರೀ ಟಿಮ್ ಟಿಮ್ ಹಾಡ್ಗಸನ್ ನೇತೃತ್ವದ ಉನ್ನತ ಮಟ್ಟದ ಕೆನಡಾದ ನಿಯೋಗದೊಂದಿಗೆ ಸಭೆ ನಡೆಸಿದರು. 

ಕೆನಡಾದ ನಿಯೋಗವನ್ನು ಸ್ವಾಗತಿಸಿದ ಶ್ರೀ ನಡ್ಡಾ ಅವರು, ಭಾರತದಲ್ಲಿ ಪೊಟ್ಯಾಶ್ ಲಭ್ಯತೆಯನ್ನು ಬಲಪಡಿಸುವುದು ಭಾರತದ ಸಮಗ್ರ ಪೋಷಕಾಂಶ ನಿರ್ವಹಣಾ ಚೌಕಟ್ಟಿನ ಅಡಿಯಲ್ಲಿ ಮಣ್ಣಿನ ಫಲವತ್ತತೆಯನ್ನು ಪುನಃಸ್ಥಾಪಿಸಲು ಮತ್ತು ಸಮತೋಲಿತ ಪೋಷಕಾಂಶಗಳ ಅನ್ವಯವನ್ನು ಉತ್ತೇಜಿಸಲು ಮುಖ್ಯ ವಿಷಯವಾಗಿದೆ ಎಂದು ಹೇಳಿದರು. ಮ್ಯೂರಿಯೇಟ್ ಆಫ್ ಪೊಟ್ಯಾಶ್ (ಎಂ.ಒ.ಪಿ) ನ ವಿಶ್ವಾಸಾರ್ಹ ಪೂರೈಕೆದಾರರಾಗಿ ಕೆನಡಾದ ಪಾತ್ರವನ್ನು ಶ್ಲಾಘಿಸಿದ ಕೇಂದ್ರ ಸಚಿವರಾದ ಶ್ರೀ ನಡ್ಡಾ ಅವರು, ಭಾರತವು ಕೆನಡಾದಿಂದ ತನ್ನ ಒಟ್ಟು ಎಂ.ಒ.ಪಿ. ರಸಗೊಬ್ಬರ ಅಗತ್ಯದ ಸುಮಾರು 25% ಅನ್ನು ಆಮದು ಮಾಡಿಕೊಳ್ಳುತ್ತದೆ ಎಂದು ಹೇಳಿದರು. ಕೆನಡಾದ ಪೊಟ್ಯಾಶ್ ಅಭಿವೃದ್ಧಿ ಕಂಪನಿಯಾದ ಕಾರ್ನಲೈಟ್ ರಿಸೋರ್ಸಸ್ ಇಂಕ್‌ ನಲ್ಲಿ ಗುಜರಾತ್ ರಾಜ್ಯ ರಸಗೊಬ್ಬರಗಳು ಮತ್ತು ರಾಸಾಯನಿಕಗಳು ಲಿಮಿಟೆಡ್ (ಜಿ.ಎಸ್.ಎಫ್. ಸಿ) 49.68 ಮಿಲಿಯನ್ ಕಾಡ್ ಹೂಡಿಕೆಯನ್ನು ಅವರು ಉಲ್ಲೇಖಿಸಿದರು. ಗುಜರಾತ್ ರಾಜ್ಯ ರಸಗೊಬ್ಬರಗಳು ಮತ್ತು ರಾಸಾಯನಿಕಗಳು ಲಿಮಿಟೆಡ್ (ಜಿ.ಎಸ್.ಎಫ್.ಸಿ) ಪ್ರಸ್ತುತ ಈ ಯೋಜನೆಯಲ್ಲಿ 47.73% ಈಕ್ವಿಟಿ ಪಾಲನ್ನು ಹೊಂದಿದ್ದು, ಈ ಪ್ರಮುಖ ಪೊಟ್ಯಾಶ್ ಆಸ್ತಿ ಯೋಜನೆಯಲ್ಲಿ ಭಾರತಕ್ಕೆ ಗಣನೀಯ ಕಾರ್ಯತಂತ್ರದ ಪಾಲನ್ನು ನೀಡುತ್ತದೆ ಎಂದು ಹೇಳಿದರು.

ಚರ್ಚೆಗಳ ಸಂದರ್ಭದಲ್ಲಿ, ಶ್ರೀ ಟಿಮ್ ಹಾಡ್ಗಸನ್ ಅವರು ಭಾರತದ ಕೃಷಿ ಉತ್ಪಾದಕತೆಯನ್ನು ಬೆಂಬಲಿಸುವ ಕೆನಡಾದ ಬದ್ಧತೆಯನ್ನು ದೃಢಪಡಿಸಿದರು, ಪೊಟ್ಯಾಶ್ ಕೃಷಿಗೆ ನಿರ್ಣಾಯಕ ಖನಿಜವಾಗಿದೆ ಎಂದು ಗಮನಿಸಿದರು. ಕೆನಡಾದ ಹೊಸ ಹೂಡಿಕೆ ವಾತಾವರಣವನ್ನು ಅವರು ವಿವರಿಸಿದರು ಮತ್ತು ನೈಸರ್ಗಿಕ ಸಂಪನ್ಮೂಲಗಳ ವಲಯದಲ್ಲಿ ಭಾರತೀಯ ಪಾಲುದಾರರು ಮಾಡುವ ಯಾವುದೇ ಹೂಡಿಕೆಯನ್ನು ಕೆನಡಾ ಸರ್ಕಾರವು ಹೊಂದಿಸುತ್ತದೆ ಎಂದು ತಿಳಿಸಿದರು.

ಗಣಿಗಾರಿಕೆ ಮತ್ತು ಪರಿಶೋಧನೆಯಲ್ಲಿ ತಾಂತ್ರಿಕ ಸಹಯೋಗದ ಅವಕಾಶಗಳು ಮತ್ತು ಎಂ.ಒ.ಪಿ ಗಾಗಿ ಕೆನಡಾದೊಂದಿಗೆ ಹೆಚ್ಚು ದೀರ್ಘಾವಧಿಯ ಪೂರೈಕೆ ಒಪ್ಪಂದಗಳನ್ನು ಪಡೆಯುವಲ್ಲಿ ಭಾರತದ ಆಸಕ್ತಿ ಸೇರಿದಂತೆ ಪೊಟ್ಯಾಶ್ ಭದ್ರತೆಗಾಗಿ ಭಾರತದ ದೀರ್ಘಕಾಲೀನ ಕಾರ್ಯತಂತ್ರದ ಬಗ್ಗೆಯೂ ಎರಡೂ ಕಡೆಯವರು ಚರ್ಚಿಸಿದರು.

ರಸಗೊಬ್ಬರ ವಲಯದಲ್ಲಿ ಸಹಯೋಗವನ್ನು ಹೆಚ್ಚಿಸಲು ಮತ್ತು ದೀರ್ಘಾವಧಿಯ ಆಹಾರ ಮತ್ತು ಕೃಷಿ ಭದ್ರತೆಗಾಗಿ ಎರಡೂ ರಾಷ್ಟ್ರಗಳ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸಲು ಭಾರತ ಮತ್ತು ಕೆನಡಾದ ಹಂಚಿಕೆಯ ಬದ್ಧತೆಯನ್ನು ಈ ಚರ್ಚೆಗಳು ಉಲ್ಲೇಖಿಸಿದವು. ಈ ಉಪಕ್ರಮದಿಂದ ಎರಡೂ ದೇಶಗಳು ಲಾಭ ಪಡೆಯಲಿವೆ, ಇದು ಆಳವಾದ ಆರ್ಥಿಕ ಸಹಕಾರವನ್ನು ಉತ್ತೇಜಿಸುತ್ತದೆ ಮತ್ತು ರಸಗೊಬ್ಬರ ಕ್ಷೇತ್ರದಲ್ಲಿ ಪರಸ್ಪರ ಪ್ರಯೋಜನಕಾರಿ ಹೂಡಿಕೆಗಳನ್ನು ಬೆಂಬಲಿಸುತ್ತದೆ.

 

*****


(रिलीज़ आईडी: 2220596) आगंतुक पटल : 4
इस विज्ञप्ति को इन भाषाओं में पढ़ें: English , हिन्दी , Gujarati , Malayalam