ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸಂಸತ್ತಿನ ಬಜೆಟ್ ಅಧಿವೇಶನ ಆರಂಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣ

प्रविष्टि तिथि: 29 JAN 2026 11:33AM by PIB Bengaluru

ಸ್ನೇಹಿತರೆ ಶುಭಾಶಯಗಳು,

ನಿನ್ನೆ ಗೌರವಾನ್ವಿತ ರಾಷ್ಟ್ರಪತಿಗಳು ಮಾಡಿದ ಭಾಷಣವು 140 ಕೋಟಿ ದೇಶವಾಸಿಗಳ ಆತ್ಮವಿಶ್ವಾಸದ ಅಭಿವ್ಯಕ್ತಿಯಾಗಿತ್ತು, 140 ಕೋಟಿ ಭಾರತೀಯರ ಸಾಮೂಹಿಕ ಪ್ರಯತ್ನದ ವರದಿ ಅದಾಗಿತ್ತು. 140 ಕೋಟಿ ನಾಗರಿಕರ ವಿಶೇಷವಾಗಿ ಯುವಕರ ಆಕಾಂಕ್ಷೆಗಳ ನಿಖರವಾದ ಅಭಿವ್ಯಕ್ತಿಯೂ ಅದಾಗಿತ್ತು. ಇದು ಎಲ್ಲಾ ಸಂಸತ್ ಸದಸ್ಯರಿಗೆ ಹಲವಾರು ಮಾರ್ಗದರ್ಶಿ ಆಲೋಚನೆಗಳನ್ನು ಸಹ ರೂಪಿಸಿತು. ಅಧಿವೇಶನದ ಆರಂಭದಲ್ಲಿ ಮತ್ತು 2026ರ ಆರಂಭದಲ್ಲಿ, ಗೌರವಾನ್ವಿತ ರಾಷ್ಟ್ರಪತಿಗಳು ಸದನದ ಮುಂದೆ ವ್ಯಕ್ತಪಡಿಸಿದ ನಿರೀಕ್ಷೆಗಳು, ಸರಳ ಪದಗಳಲ್ಲಿ ಮತ್ತು ರಾಷ್ಟ್ರದ ಒಬ್ಬ ಮುಖ್ಯಸ್ಥರ ಸಾಮರ್ಥ್ಯದಲ್ಲಿ ಆಳವಾದ ಭಾವನೆಗಳನ್ನು ಪ್ರತಿಬಿಂಬಿಸಿದೆ. ಸಂಸತ್ತಿನ ಎಲ್ಲಾ ಗೌರವಾನ್ವಿತ ಸದಸ್ಯರು ಅವುಗಳನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ. ಈ ಅಧಿವೇಶನವು ಸಹ ಸ್ವತಃ ಬಹಳ ಮುಖ್ಯವಾಗಿದೆ. ಇದು ಬಜೆಟ್ ಅಧಿವೇಶನ.

21ನೇ ಶತಮಾನದ ಕಾಲು ಭಾಗ ಈಗಾಗಲೇ ಕಳೆದಿದ್ದೇವೆ, ನಾವೀಗ 2ನೇ ತ್ರೈಮಾಸಿಕ ಪ್ರಾರಂಭಿಸುತ್ತಿದ್ದೇವೆ. 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತ ನಿರ್ಮಿಸುವ ಗುರಿ ಸಾಧಿಸಲು ಇದು ನಿರ್ಣಾಯಕ 25 ವರ್ಷಗಳ ಅವಧಿಯ ಆರಂಭವನ್ನು ಸೂಚಿಸುತ್ತದೆ. ಇದು ಶತಮಾನದ 2ನೇ ತ್ರೈಮಾಸಿಕದ ಮೊದಲ ಬಜೆಟ್ ಇದಾಗಿದೆ. ಹಣಕಾಸು ಸಚಿವೆ ನಿರ್ಮಲಾ ಜಿ ಅವರು ಸತತ 9ನೇ ಬಾರಿಗೆ ಸಂಸತ್ತಿನಲ್ಲಿ ಬಜೆಟ್ ಮಂಡಿಸುತ್ತಿದ್ದಾರೆ. ದೇಶದ ಮೊದಲ ಮಹಿಳಾ ಹಣಕಾಸು ಸಚಿವರು ಅವರು. ಈ ಕ್ಷಣವನ್ನು ಭಾರತದ ಸಂಸದೀಯ ಇತಿಹಾಸದಲ್ಲಿ ಹೆಮ್ಮೆಯ ವಿಷಯವಾಗಿ ದಾಖಲಾಗಿದೆ.

ಸ್ನೇಹಿತರೆ,

ವರ್ಷವು ತುಂಬಾ ಸಕಾರಾತ್ಮಕವಾಗಿ ಆರಂಭವಾಗಿದೆ. ಆತ್ಮವಿಶ್ವಾಸದ ಭಾರತ ಇಂದು ಜಗತ್ತಿಗೆ ಭರವಸೆಯ ಆಶಾಕಿರಣವಾಗಿದೆ, ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಈ ತ್ರೈಮಾಸಿಕದ ಆರಂಭದಲ್ಲೇ, ಭಾರತ ಮತ್ತು ಐರೋಪ್ಯ ಒಕ್ಕೂಟದ ನಡುವಿನ ಮುಕ್ತ ವ್ಯಾಪಾರ ಒಪ್ಪಂದವು ಮುಂಬರುವ ದಿಕ್ಕುಗಳು ಎಷ್ಟು ಉಜ್ವಲವಾಗುತ್ತದೆ ಮತ್ತು ಭಾರತದ ಯುವಕರ ಭವಿಷ್ಯ ಎಷ್ಟು ಭರವಸೆದಾಯಕವಾಗಿರುತ್ತದೆ ಎಂಬುದನ್ನು ಪ್ರತಿಬಿಂಬಿಸುತ್ತದೆ. ಇದು ಮಹತ್ವಾಕಾಂಕ್ಷೆಯ ಭಾರತಕ್ಕೆ ಮುಕ್ತ ವ್ಯಾಪಾರ, ಮಹತ್ವಾಕಾಂಕ್ಷೆಯ ಯುವಕರಿಗೆ ಮುಕ್ತ ವ್ಯಾಪಾರ ಮತ್ತು ಸ್ವಾವಲಂಬಿ ಭಾರತಕ್ಕೆ ಮುಕ್ತ ವ್ಯಾಪಾರವಾಗಿದೆ. ವಿಶೇಷವಾಗಿ ಭಾರತದ ತಯಾರಕರು ಅಥವಾ ಉತ್ಪಾದಕರು ತಮ್ಮ ಸಾಮರ್ಥ್ಯಗಳನ್ನು ಹೆಚ್ಚಿಸಲು ಅವಕಾಶ ಬಳಸಿಕೊಳ್ಳುತ್ತಾರೆ ಎಂಬ  ಸಂಪೂರ್ಣ ವಿಶ್ವಾಸ ನನಗಿದೆ.

ನಾನು ಎಲ್ಲಾ ಉತ್ಪಾದಕರಿಗೆ ಹೇಳುತ್ತೇನೆ, ಭಾರತ ಮತ್ತು ಐರೋಪ್ಯ ಒಕ್ಕೂಟದ ನಡುವೆ "ಎಲ್ಲಾ ವ್ಯವಹಾರಗಳ ತಾಯಿ" ಎಂದು ಕರೆಯಲ್ಪಡುವ ಈ ಒಂದು ಮುಕ್ತ ವ್ಯಾಪಾರ ಒಪ್ಪಂದವು ಅಂತಿಮವಾದಾಗ, ನಮ್ಮ ಕೈಗಾರಿಕೋದ್ಯಮಿಗಳು ಮತ್ತು ತಯಾರಕರು ಕೇವಲ ಬೃಹತ್ ಮಾರುಕಟ್ಟೆ ತೆರೆದಿದೆ, ಸರಕುಗಳನ್ನು ಈಗ ಅಗ್ಗವಾಗಿ ಕಳುಹಿಸಬಹುದು ಎಂದು ಭಾವಿಸಿ ತೃಪ್ತರಾಗಿ ಉಳಿಯಬಾರದು. ಇದು ಒಂದು ಬಹುದೊಡ್ಡ ಅವಕಾಶ, ಈ ಅವಕಾಶವನ್ನು ಬಳಸಿಕೊಳ್ಳುವ ಪ್ರಮುಖ ಮಂತ್ರವೆಂದರೆ ಗುಣಮಟ್ಟದ ಮೇಲೆ ಗಮನ ಕೇಂದ್ರೀಕರಿಸುವುದು. ಈಗ ಮಾರುಕಟ್ಟೆ ತೆರೆದಿರುವುದರಿಂದ, ನಾವು ಅದನ್ನು ಅತ್ಯುತ್ತಮ ಗುಣಮಟ್ಟದೊಂದಿಗೆ ಪ್ರವೇಶಿಸಬೇಕು. ನಾವು ಉನ್ನತ ದರ್ಜೆಯ ಗುಣಮಟ್ಟದೊಂದಿಗೆ ಹೋದರೆ, ಐರೋಪ್ಯ ಒಕ್ಕೂಟದ 27 ದೇಶಗಳ ಖರೀದಿದಾರರಿಂದ ನಾವು ಆದಾಯ ಗಳಿಸುವುದಲ್ಲದೆ, ಅವರ ಹೃದಯಗಳನ್ನು ಗೆಲ್ಲುತ್ತೇವೆ. ಆ ಪರಿಣಾಮವು ದೀರ್ಘಕಾಲ ಇರುತ್ತದೆ. ವಾಸ್ತವವಾಗಿ ದಶಕಗಳವರೆಗೆ. ಕಂಪನಿಯ ಬ್ರ್ಯಾಂಡ್ ‌ಗಳು, ದೇಶದ ಬ್ರ್ಯಾಂಡ್ ‌ನೊಂದಿಗೆ, ಹೊಸ ಹೆಮ್ಮೆಯ ಪ್ರಜ್ಞೆಯನ್ನು ಸ್ಥಾಪಿಸುತ್ತವೆ.

ಆದ್ದರಿಂದ, 27 ಐರೋಪ್ಯ ದೇಶಗಳೊಂದಿಗಿನ ಒಪ್ಪಂದವು ನಮ್ಮ ಮೀನುಗಾರರು, ನಮ್ಮ ರೈತರು, ನಮ್ಮ ಯುವಕರು ಮತ್ತು ಪ್ರಪಂಚದಾದ್ಯಂತ ಕೆಲಸ ಮಾಡಲು ಉತ್ಸುಕರಾಗಿರುವ ಸೇವಾ ವಲಯದ ಉದ್ಯಮಿಗಳಿಗೆ ಪ್ರಮುಖ ಅವಕಾಶಗಳನ್ನು ತರುತ್ತಿದೆ. ಆತ್ಮವಿಶ್ವಾಸ, ಸ್ಪರ್ಧಾತ್ಮಕತೆ ಮತ್ತು ಉತ್ಪಾದಕ ಭಾರತದತ್ತ ಇದು ಬಹಳ ಮಹತ್ವದ ಹೆಜ್ಜೆಯಾಗಿದೆ ಎಂಬುದರಿಂದ ನನಗೆ ಸಂಪೂರ್ಣ ವಿಶ್ವಾಸವಿದೆ.

ಸ್ನೇಹಿತರೆ,

ದೇಶದ ಗಮನ ಬಜೆಟ್ ಮೇಲೆ ಕೇಂದ್ರೀಕೃತವಾಗುವುದು ಸಹಜ. ಆದರೆ ಸರ್ಕಾರವು ಸುಧಾರಣೆ, ಕಾರ್ಯಕ್ಷಮತೆ ಮತ್ತು ರೂಪಾಂತರದೊಂದಿಗೆ ಗುರುತಿಸಲ್ಪಟ್ಟಿದೆ. ಈಗ ನಾವು ಸುಧಾರಣಾ ಎಕ್ಸ್ ‌ಪ್ರೆಸ್ ‌ನಲ್ಲಿ ಹೆಚ್ಚಿನ ವೇಗದಲ್ಲಿ ಸಾಗುತ್ತಿದ್ದೇವೆ. ಈ ಸುಧಾರಣಾ ಎಕ್ಸ್ ‌ಪ್ರೆಸ್ ಅನ್ನು ಮತ್ತಷ್ಟು ವೇಗಗೊಳಿಸಲು ತಮ್ಮ ಸಕಾರಾತ್ಮಕ ಶಕ್ತಿಯೊಂದಿಗೆ ಕೊಡುಗೆ ನೀಡುತ್ತಿರುವ ಸಂಸತ್ತಿನ ಎಲ್ಲಾ ಸಹೋದ್ಯೋಗಿಗಳಿಗೆ ನಾನು ನನ್ನ ಕೃತಜ್ಞತೆ ಸಲ್ಲಿಸುತ್ತೇನೆ, ಇದರಿಂದಾಗಿಯೇ ಅದು ವೇಗವನ್ನು ಪಡೆಯುತ್ತಲೇ ಇದೆ.

ದೇಶವು ಈಗ ದೀರ್ಘಕಾಲೀನ ಬಾಕಿ ಇರುವ ಸಮಸ್ಯೆಗಳಿಂದ ಹೊರಬಂದು ದೀರ್ಘಕಾಲೀನ ಪರಿಹಾರಗಳ ಹಾದಿಯಲ್ಲಿ ದೃಢವಾಗಿ ಹೆಜ್ಜೆ ಹಾಕುತ್ತಿದೆ. ದೀರ್ಘಾವಧಿಯ ಪರಿಹಾರಗಳು ಜಾರಿಯಲ್ಲಿದ್ದಾಗ, ಭವಿಷ್ಯವಾಣಿಯು ಹೊರಹೊಮ್ಮುತ್ತದೆ, ಇದು ಪ್ರಪಂಚದಾದ್ಯಂತ ನಂಬಿಕೆಯನ್ನು ಸೃಷ್ಟಿಸುತ್ತದೆ. ನಾವು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರದಲ್ಲೂ ರಾಷ್ಟ್ರೀಯ ಪ್ರಗತಿಯೇ ನಮ್ಮ ಉದ್ದೇಶವಾಗಿದೆ, ಆದರೆ ನಮ್ಮ ಎಲ್ಲಾ ನಿರ್ಧಾರಗಳು ಮಾನವ ಕೇಂದ್ರಿತವಾಗಿವೆ. ನಮ್ಮ ಪಾತ್ರ ಮತ್ತು ನಮ್ಮ ಯೋಜನೆಗಳು ಮಾನವ ಕೇಂದ್ರಿತವಾಗಿವೆ. ನಾವು ತಂತ್ರಜ್ಞಾನದೊಂದಿಗೆ ಸ್ಪರ್ಧಿಸುತ್ತೇವೆ, ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತೇವೆ ಮತ್ತು ಅದರ ಸಾಮರ್ಥ್ಯವನ್ನು ಸ್ವೀಕರಿಸುತ್ತೇವೆ, ಆದರೆ ಅದೇ ಸಮಯದಲ್ಲಿ, ಮಾನವ ಕೇಂದ್ರಿತ ವ್ಯವಸ್ಥೆಯನ್ನು ಯಾವುದೇ ರೀತಿಯಲ್ಲಿ ಕುಗ್ಗಿಸಲು ನಾವು ಬಿಡುವುದಿಲ್ಲ. ಸೂಕ್ಷ್ಮತೆಗಳ ಮಹತ್ವವನ್ನು ಅರ್ಥ ಮಾಡಿಕೊಂಡು, ತಂತ್ರಜ್ಞಾನ ಮತ್ತು ಮಾನವತೆಯ ಸಾಮರಸ್ಯದ ಏಕೀಕರಣ ಅಥವಾ ಸಂಯೋಜನೆಯೊಂದಿಗೆ ನಾವು ಮುಂದುವರಿಯುತ್ತೇವೆ.

ನಮ್ಮನ್ನು ಟೀಕಿಸುವವರು, ಯಾರಿಗೋ ನಮ್ಮ ಬಗ್ಗೆ ಇಷ್ಟ ಅಥವಾ ಇಷ್ಟವಿಲ್ಲದಿರಬಹುದು, ಇದು ಪ್ರಜಾಪ್ರಭುತ್ವದಲ್ಲಿ ಸಹಜ. ಆದರೆ ಎಲ್ಲರೂ ಒಪ್ಪಿಕೊಳ್ಳುವ ಒಂದು ವಿಷಯವೆಂದರೆ ಸರ್ಕಾರವು ಕಟ್ಟ ಕಡೆಯ ಜನರಿಗೆ ಸವಲತ್ತುಗಳನ್ನು ತಲುಪಿಸಲು ಒತ್ತು ನೀಡಿದೆ. ಯೋಜನೆಗಳು ಫೈಲ್ ‌ಗಳಿಗೆ ಸೀಮಿತವಾಗಿರದೆ ಜನರ ಜೀವನವನ್ನು ತಲುಪುವಂತೆ ನೋಡಿಕೊಳ್ಳಲು ನಿರಂತರ ಪ್ರಯತ್ನ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಸುಧಾರಣೆಗಳ ಪೈಕಿ ಮುಂದಿನ ಪೀಳಿಗೆಯ ಸುಧಾರಣೆಗಳ ಮೂಲಕ ಸಂಪ್ರದಾಯವನ್ನು ಮುಂದಕ್ಕೆ ಕೊಂಡೊಯ್ಯಲಾಗುವುದು.

ಭಾರತದ ಪ್ರಜಾಪ್ರಭುತ್ವ ಮತ್ತು ಭಾರತದ ಜನಸಂಖ್ಯಾಶಾಸ್ತ್ರವು ಇಂದು ಜಗತ್ತಿಗೆ ಒಂದು ದೊಡ್ಡ ಭರವಸೆಯನ್ನು ಪ್ರತಿನಿಧಿಸುತ್ತಿದೆ. ಪ್ರಜಾಪ್ರಭುತ್ವದ ದೇವಾಲಯದಿಂದ, ನಾವು ಜಾಗತಿಕ ಸಮುದಾಯಕ್ಕೆ ಸಂದೇಶ ರವಾನಿಸಬೇಕು. ನಮ್ಮ ಸಾಮರ್ಥ್ಯಗಳು, ಪ್ರಜಾಪ್ರಭುತ್ವಕ್ಕೆ ನಮ್ಮ ಬದ್ಧತೆ ಮತ್ತು ಪ್ರಜಾಪ್ರಭುತ್ವ ಪ್ರಕ್ರಿಯೆಗಳ ಮೂಲಕ ತೆಗೆದುಕೊಂಡ ನಿರ್ಧಾರಗಳಿಗೆ ನಮ್ಮ ಗೌರವದ ಬಗ್ಗೆ ಇರಬೇಕು, ಜಗತ್ತು ಇದನ್ನು ಸ್ವಾಗತಿಸುತ್ತದೆ ಮತ್ತು ಸ್ವೀಕರಿಸುತ್ತದೆ.

ದೇಶವು ಮುಂದುವರಿಯುತ್ತಿರುವ ಸಮಯದಲ್ಲಿ, ಇದು ಅಡಚಣೆಯ ಯುಗವಲ್ಲ. ಇದು ಪರಿಹಾರಗಳ ಯುಗ. ಇಂದು, ಆದ್ಯತೆಯು ಅಡ್ಡಿಪಡಿಸುವುದಲ್ಲ, ಆದರೆ ಅದು ನಿರ್ಣಯವಾಗಿದೆ. ಇಂದು ಅಡಚಣೆಯ ಮೂಲಕ ಕುಳಿತು ದುಃಖಿಸುವ ಸಮಯವಲ್ಲ. ಇದು ಧೈರ್ಯಶಾಲಿ, ಪರಿಹಾರ-ಆಧಾರಿತ ನಿರ್ಧಾರಗಳನ್ನು ಬೇಡುವ ಅವಧಿಯಾಗಿದೆ. ಎಲ್ಲಾ ಗೌರವಾನ್ವಿತ ಸಂಸತ್ ಸದಸ್ಯರು ಮುಂದೆ ಬಂದು ರಾಷ್ಟ್ರಕ್ಕೆ ಅಗತ್ಯವಾದ ಪರಿಹಾರಗಳನ್ನು ನೀಡುವ ಈ ಹಂತವನ್ನು ವೇಗಗೊಳಿಸಲು, ನಿರ್ಧಾರಗಳನ್ನು ಸಬಲೀಕರಣಗೊಳಿಸಲು ಮತ್ತು ಕೊನೆಯ ಹಂತದ ವಿತರಣೆಯಲ್ಲಿ ಯಶಸ್ವಿಯಾಗಿ ಮುಂದುವರಿಯುವಂತೆ ನಾನು ಎಲ್ಕೋಲರಿಗೂ ರುತ್ತೇನೆ.

ಸಹೋದ್ಯೋಗಿಗಳೆ, ತುಂಬು ಧನ್ಯವಾದಗಳು. ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳು.

 

*****


(रिलीज़ आईडी: 2220071) आगंतुक पटल : 2
इस विज्ञप्ति को इन भाषाओं में पढ़ें: English , Urdu , हिन्दी , Bengali , Assamese , Punjabi , Gujarati , Telugu