ಕೃಷಿ ಸಚಿವಾಲಯ
azadi ka amrit mahotsav

ತಮಿಳುನಾಡಿನಲ್ಲಿ ರೈತ ಉತ್ಪಾದಕ ಸಂಸ್ಥೆ (ಎಫ್.ಪಿ.ಒ.)ಗಳನ್ನು ಬಲಪಡಿಸಲು ಕೇಂದ್ರ ಕೃಷಿ ಸಚಿವಾಲಯವು ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ: ಶ್ರೀ ಶಿವರಾಜ್ ಸಿಂಗ್ ಚೌಹಾಣ್


ರೈತ ಉತ್ಪಾದಕ ಸಂಸ್ಥೆ(ಎಫ್.ಪಿ.ಒ.)ಗಳ ಆಡಳಿತ, ಮಾರುಕಟ್ಟೆ ಸಂಪರ್ಕಗಳು ಮತ್ತು ಮೌಲ್ಯವರ್ಧನೆಯನ್ನು ಪರಿಶೀಲಿಸಲು ಸಮಿತಿ ರಚಿಸಲಾಗಿದೆ

ಎರಡು ತಿಂಗಳೊಳಗೆ ವರದಿಯನ್ನು ಸಲ್ಲಿಸಲಾಗುವುದು; ಐ.ಸಿ.ಎ.ಆರ್.-ಎನ್.ಆರ್.ಸಿ.ಬಿ. ಸಾಂಸ್ಥಿಕ ಬೆಂಬಲವನ್ನು ಒದಗಿಸಲಿದೆ

प्रविष्टि तिथि: 28 JAN 2026 3:19PM by PIB Bengaluru

ತಮಿಳುನಾಡಿನಲ್ಲಿ ರೈತ ಉತ್ಪಾದಕ ಸಂಸ್ಥೆ(ಎಫ್.ಪಿ.ಒ.)ಗಳನ್ನು ಬಲಪಡಿಸಲು, ಅವುಗಳ ಕಾರ್ಯನಿರ್ವಹಣೆಯನ್ನು ಪರಿಶೀಲಿಸಲು ಮತ್ತು ಪ್ರಮಾಣ ಮತ್ತು ವ್ಯಾಪ್ತಿಯನ್ನು ಸುಧಾರಿಸುವ ಮಾರ್ಗಗಳನ್ನು ಶಿಫಾರಸು ಮಾಡಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ. ಈ ಉಪಕ್ರಮವು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರ ಮಾರ್ಗಸೂಚನೆಗಳನ್ನು ಅನುಸರಿಸುತ್ತದೆ. ಅವರು ಇತ್ತೀಚೆಗೆ ತಮಿಳುನಾಡಿನ ಈರೋಡ್ ಗೆ ಭೇಟಿ ನೀಡಿದ ಸಂದರ್ಭದಲ್ಲಿ ರೈತ ಉತ್ಪಾದಕ ಸಂಸ್ಥೆ(ಎಫ್.ಪಿ.ಒ.)ಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಗಮನಿಸಿದರು ಮತ್ತು ಸಮಗ್ರ ಮತ್ತು ಕ್ಷೇತ್ರ-ಆಧಾರಿತ ಮೌಲ್ಯಮಾಪನದ ಮೂಲಕ ಸಮಸ್ಯೆಗಳನ್ನು ಪರಿಹರಿಸಲು ಸಕಾಲಿಕ ಕ್ರಮಕ್ಕೆ ಅವರು ನಿರ್ದೇಶನ ನೀಡಿದರು. 

ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಇತ್ತೀಚೆಗೆ ಈರೋಡ್ ಗೆ ಭೇಟಿ ನೀಡಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ, ಈ ಸಂದರ್ಭದಲ್ಲಿ ರೈತ ಉತ್ಪಾದಕ ಸಂಸ್ಥೆ (ಎಫ್.ಪಿ.ಒ.)ಗಳು ಎದುರಿಸುತ್ತಿರುವ ಕಾರ್ಯಾಚರಣೆ, ತಾಂತ್ರಿಕ ಮತ್ತು ಮಾರುಕಟ್ಟೆ ಸಂಬಂಧಿತ ಸವಾಲುಗಳನ್ನು ರೈತರು ಮತ್ತು ಪಾಲುದಾರರೊಂದಿಗೆ ಚರ್ಚಿಸಲಾಯಿತು. ಈ ಮಾಹಿತಿಗಳ ಮೇಲೆ ತ್ವರಿತವಾಗಿ ಕಾರ್ಯನಿರ್ವಹಿಸುವ ಮೂಲಕ, ಸಚಿವಾಲಯವು ರಾಜ್ಯದಲ್ಲಿ ರೈತ ಉತ್ಪಾದಕ ಸಂಸ್ಥೆ (ಎಫ್.ಪಿ.ಒ.)ಗಳ ಕಾರ್ಯಕ್ಷಮತೆಯನ್ನು ಅಧ್ಯಯನ ಮಾಡಲು ಮತ್ತು ಸೂಕ್ತ ಸರಿಪಡಿಸುವ ಕ್ರಮಗಳನ್ನು ಸೂಚಿಸಲು ನೂತನ ಸಮಿತಿಯ ರಚನೆಯನ್ನು ಅನುಮೋದಿಸಿದೆ.

ಸಮಿತಿಯು ನಬಾರ್ಡ್, ನಫೆಡ್, ಎಸ್ಫಾಕ್- ತಮಿಳುನಾಡು, ಐಕಾರ್- ರಾಷ್ಟ್ರೀಯ ಬಾಳೆಹಣ್ಣು ಸಂಶೋಧನಾ ಕೇಂದ್ರ (ಎನ್.ಆರ್.ಸಿ.ಬಿ)ದ ಪ್ರತಿನಿಧಿಗಳು, ರೈತ ಉತ್ಪಾದಕ ಸಂಸ್ಥೆ(ಎಫ್.ಪಿ.ಒ.) ಪ್ರತಿನಿಧಿಗಳು, ಎನ್.ಜಿ.ಒ.ಗಳು ಮತ್ತು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡಿದ್ದು, ಸಮಗ್ರ ಮತ್ತು ಕ್ಷೇತ್ರ-ಆಧಾರಿತ ಮೌಲ್ಯಮಾಪನವನ್ನು ಖಚಿತಪಡಿಸುತ್ತದೆ. ಸಾಂಸ್ಥಿಕ ಆಡಳಿತ ಮತ್ತು ನಿರ್ವಹಣಾ ಅಭ್ಯಾಸಗಳು, ವ್ಯವಹಾರ ಕಾರ್ಯಾಚರಣೆಗಳು ಮತ್ತು ಸುಸ್ಥಿರತೆ, ತಾಂತ್ರಿಕ ಬೆಂಬಲ ಮತ್ತು ವಿಸ್ತರಣಾ ಸಂಪರ್ಕಗಳು, ಒಟ್ಟುಗೂಡಿಸುವಿಕೆ, ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಸವಾಲುಗಳು, ಹಾಗೆಯೇ ಸಾಮರ್ಥ್ಯ-ನಿರ್ಮಾಣ ಮತ್ತು ಕೈ ಹಿಡಿಯುವ ಅವಶ್ಯಕತೆಗಳು ಸೇರಿದಂತೆ ರೈತ ಉತ್ಪಾದಕ ಸಂಸ್ಥೆ (ಎಫ್.ಪಿ.ಒ.)ಗಳ ಮೇಲೆ ಪರಿಣಾಮ ಬೀರುವ ಪ್ರಮುಖ ಸಮಸ್ಯೆಗಳನ್ನು ಇದು ಪರಿಶೀಲಿಸುತ್ತದೆ.

ಇದಲ್ಲದೆ, ಸಮಿತಿಯು ಸುಧಾರಿತ ವ್ಯವಹಾರ ಮತ್ತು ಕಾರ್ಯಾಚರಣೆಯ ಮಾದರಿಗಳು, ವರ್ಧಿತ ತಾಂತ್ರಿಕ ಬ್ಯಾಕ್ಸ್ಟಾಪಿಂಗ್ ಮತ್ತು ಸಲಹಾ ಬೆಂಬಲ, ಸಾಂಸ್ಥಿಕ ಒಮ್ಮುಖ ಮತ್ತು ಸಮನ್ವಯ, ಮತ್ತು ಬಲವಾದ ಮಾರುಕಟ್ಟೆ ಸಂಪರ್ಕಗಳು ಮತ್ತು ಪ್ರಚಾರ ಚಟುವಟಿಕೆಗಳ ಮೂಲಕ ರೈತ ಉತ್ಪಾದಕ ಸಂಸ್ಥೆಗಳ (ಎಫ್.ಪಿ.ಒ.) ಕಾರ್ಯಾಚರಣೆಗಳನ್ನು ಬಲಪಡಿಸಲು ಕ್ರಮಗಳನ್ನು ಶಿಫಾರಸು ಮಾಡುತ್ತದೆ. ಬಾಳೆಹಣ್ಣು, ಅರಿಶಿನ, ತೆಂಗಿನಕಾಯಿ, ಮರಗೆಣಸು(ಟಪಿಯೋಕಾ) ಮತ್ತು ನೈಸರ್ಗಿಕ ಮತ್ತು ಸಾವಯವ ಕೃಷಿ ವ್ಯವಸ್ಥೆಗಳು ಸೇರಿದಂತೆ ತಮಿಳುನಾಡಿಗೆ ಪ್ರಾಮುಖ್ಯತೆಯ ಬೆಳೆಗಳು ಮತ್ತು ಕೃಷಿ ವ್ಯವಸ್ಥೆಗಳಿಗೆ ವಿಶೇಷ ಗಮನ ನೀಡಲಾಗುವುದು.

ಸಮಿತಿಯು ಕ್ಷೇತ್ರ ಭೇಟಿಗಳನ್ನು ಕೈಗೊಳ್ಳುತ್ತದೆ ಮತ್ತು ರೈತ ಉತ್ಪಾದಕ ಸಂಸ್ಥೆ (ಎಫ್.ಪಿ.ಒ.)ಗಳು, ಸದಸ್ಯ ರೈತರು, ಮಾರುಕಟ್ಟೆ ಮಾರ್ಗಗಳು, ಸಂಸ್ಕರಣಾಕಾರರು ಮತ್ತು ಇತರ ಪಾಲುದಾರರೊಂದಿಗೆ ಸಮಾಲೋಚನೆಗಳನ್ನು ನಡೆಸುತ್ತದೆ ಮತ್ತು ಅದರ ಶಿಫಾರಸುಗಳು ವಾಸ್ತವಿಕ ವಾಸ್ತವಗಳಲ್ಲಿ ನೆಲೆಗೊಂಡಿವೆ ಎಂದು ಖಚಿತಪಡಿಸುತ್ತದೆ. ಇದು ಕೇಂದ್ರ ಮತ್ತು ರಾಜ್ಯ ಸರ್ಕಾರಿ ಇಲಾಖೆಗಳು, ಐಕಾರ್ ಸಂಸ್ಥೆಗಳು, ಸರಕು ಮಂಡಳಿಗಳು, ಖಾಸಗಿ ವಲಯದ ಸಂಸ್ಥೆಗಳು ಮತ್ತು ಇತರ ಸಂಬಂಧಿತ ಸಂಸ್ಥೆಗಳಿಂದ ಮಾಹಿತಿ ಒಳಹರಿವು (ಇನ್ಪುಟ್)ಗಳನ್ನು ಸಂಗ್ರಹಿಸಿ ಸಮಗ್ರವಾಗಿ ಸಂಕಲಿಸುತ್ತದೆ.

ಸಮಿತಿಯು ಎರಡು ತಿಂಗಳೊಳಗೆ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಗೆ ತನ್ನ ಅಂತಿಮ ವರದಿಯನ್ನು ಸಲ್ಲಿಸುವ ಜವಾಬ್ದಾರಿಯನ್ನು ಹೊಂದಿದೆ. ಐಕಾರ್ –ರಾಷ್ಟ್ರೀಯ ಬಾಳೆಹಣ್ಣು ಸಂಶೋಧನಾ ಕೇಂದ್ರ (ಎನ್.ಆರ್.ಸಿ.ಬಿ.), ತಿರುಚಿರಾಪಲ್ಲಿ, ಮತ್ತು ಐಕಾರ್–ಎ.ಟಿ.ಎ.ಆರ್.ಐ, ಹೈದರಾಬಾದ್ ಮೂಲಕ ಕೆ.ವಿ.ಕೆ.ಗಳು ಈ ಉಪಕ್ರಮದ ಆತಿಥೇಯ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಸಭೆಗಳು, ಕ್ಷೇತ್ರ ಭೇಟಿಗಳು ಮತ್ತು ವರದಿಯ ಸಂಕಲನಕ್ಕೆ ಅಗತ್ಯವಾದ ಸಾಗಣಿಕೆ (ಲಾಜಿಸ್ಟಿಕಲ್) ಮತ್ತು ಕಾರ್ಯದರ್ಶಿಯ ಬೆಂಬಲವನ್ನು ಒದಗಿಸುತ್ತವೆ.

ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರ ನೇತೃತ್ವದ ಭಾರತ ಸರ್ಕಾರದ ರೈತ-ಕೇಂದ್ರಿತ ವಿಧಾನವನ್ನು ಮತ್ತು ರೈತರ ಆದಾಯವನ್ನು ಹೆಚ್ಚಿಸಲು ಹಾಗೂ ತಮಿಳುನಾಡಿನ ಕೃಷಿ ವಲಯದಲ್ಲಿ ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಏಕೀಕರಣವನ್ನು ಉತ್ತೇಜಿಸಲು ಬಲವಾದ, ಸ್ವಾವಲಂಬಿ ಮತ್ತು ಸುಸ್ಥಿರ “ರೈತ ಉತ್ಪಾದಕ ಸಂಸ್ಥೆ(ಎಫ್.ಪಿ.ಒ.)”ಗಳನ್ನು ನಿರ್ಮಿಸುವತ್ತ ಈ ಉಪಕ್ರಮವು ವಿಶೇಷವಾಗಿ ಗಮನಹರಿಸುತ್ತದೆ.

 

*****


(रिलीज़ आईडी: 2219617) आगंतुक पटल : 16
इस विज्ञप्ति को इन भाषाओं में पढ़ें: English , Urdu , हिन्दी , Punjabi , Gujarati , Tamil