ಗ್ರಾಮೀಣಾಭಿವೃದ್ಧಿ ಸಚಿವಾಲಯ
azadi ka amrit mahotsav

‘ಸಮೃದ್ಧ್ ದೀದಿ ಸೆ ಸಮೃದ್ಧ್ ರಾಷ್ಟ್ರ: ಗಣರಾಜ್ಯೋತ್ಸವದ ಅಭಿನಂದನಾ ಕಾರ್ಯಕ್ರಮ 2026’ ನಲ್ಲಿ ಭಾಗವಹಿಸಿದ ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಕೃಷಿ ಹಾಗು ರೈತರ ಕಲ್ಯಾಣ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್


ದೀದಿಗಳು ತಾವು ಅಸಹಾಯಕರಲ್ಲ, ಬದಲಾಗಿ ನಿಜವಾಗಿಯೂ ಸಬಲೀಕರಣಗೊಂಡವರು ಎಂದು ಸಾಬೀತುಪಡಿಸಿದ್ದಾರೆ: ಶ್ರೀ ಶಿವರಾಜ್ ಸಿಂಗ್ ಚೌಹಾಣ್

ಪ್ರಧಾನಮಂತ್ರಿ 3 ಕೋಟಿ ಮಹಿಳೆಯರನ್ನು 'ಲಖ್ಪತಿ ದೀದಿ'ಗಳನ್ನಾಗಿ ಮಾಡುವ ಗುರಿಯನ್ನು ನಮಗೆ ನೀಡಿದ್ದಾರೆ, ಈ ಗುರಿ ನಮಗೆ ಒಂದು ಮಂತ್ರವಾಗಿದೆ ಮತ್ತು ನಾವು ಅದನ್ನು ಶೀಘ್ರದಲ್ಲೇ ಸಾಧಿಸುತ್ತೇವೆ: ಶ್ರೀ ಶಿವರಾಜ್ ಸಿಂಗ್ ಚೌಹಾಣ್

ಮಹಿಳಾ ಉದ್ಯಮಶೀಲತೆಯನ್ನು ಉತ್ತೇಜಿಸಲು, ಸಚಿವಾಲಯವು ಸ್ವ-ಸಹಾಯ ಗುಂಪುಗಳ ಮಹಿಳೆಯರಿಗೆ ಸಕಾಲದಲ್ಲಿ ಮತ್ತು ಸುಗಮವಾಗಿ ಸಾಲಗಳನ್ನು ಒದಗಿಸಲು ಸಮಗ್ರ ಆನ್‌ಲೈನ್ ಸಾಲ ವ್ಯವಸ್ಥೆಯನ್ನು ರೂಪಿಸಿದೆ: ಶ್ರೀ ಶಿವರಾಜ್ ಸಿಂಗ್ ಚೌಹಾಣ್

ಜೀವನೋಪಾಯ ಮಿಷನ್ ಈಗ ಕೇವಲ ಒಂದು ಯೋಜನೆಯಲ್ಲ, ಬದಲಾಗಿ ಒಂದು ಕ್ರಾಂತಿ ಮತ್ತು ಚಳುವಳಿಯಾಗಿದೆ: ಶ್ರೀ ಶಿವರಾಜ್ ಸಿಂಗ್ ಚೌಹಾಣ್

ನಾವು ದಿಲ್ಲಿಯಲ್ಲಿ ಮಾತ್ರವಲ್ಲದೆ ದೇಶದ ಇತರ ಭಾಗಗಳಲ್ಲಿಯೂ ಸರಸ್ ಮೇಳಗಳನ್ನು ಆಯೋಜಿಸುತ್ತೇವೆ: ಶ್ರೀ ಶಿವರಾಜ್ ಸಿಂಗ್ ಚೌಹಾಣ್

प्रविष्टि तिथि: 25 JAN 2026 7:23PM by PIB Bengaluru

ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಕೃಷಿ ಹಾಗು ರೈತರ ಕಲ್ಯಾಣ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಇಂದು ಹೊಸದಿಲ್ಲಿಯ ಪುಸಾದಲ್ಲಿ ಆಯೋಜಿಸಲಾದ 'ಸಮೃದ್ದ  ದೀದಿ ಸೆ ಸಮೃದ್ದ ರಾಷ್ಟ್ರ: ಗಣರಾಜ್ಯೋತ್ಸವದ ಅಭಿನಂದನಾ ಕಾರ್ಯಕ್ರಮ 2026' ಎಂಬ ವಿಶೇಷ ಕಾರ್ಯಕ್ರಮದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ದೇಶಾದ್ಯಂತದಿಂದ ಬಂದಿದ್ದ ಸುಮಾರು 400 'ಜೀವಿಕ ದೀದಿ'ಗಳನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ, ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಸಂವಹನ ಸಹಾಯಕ ಸಚಿವರಾದ ಡಾ. ಚಂದ್ರಶೇಖರ್ ಪೆಮ್ಮಸಾನಿ ಕೂಡ ಉಪಸ್ಥಿತರಿದ್ದರು.

ಸಂದರ್ಭದಲ್ಲಿ ತಮ್ಮ ಭಾಷಣದಲ್ಲಿ, 'ಜೀವಿಕ ದೀದಿ'ಗಳನ್ನು ಸನ್ಮಾನಿಸುತ್ತಾ, ಶ್ರೀ ಚೌಹಾಣ್ ಅವರು "ದೀದಿಗಳು ಜೀವಂತ ಮತ್ತು ಜಾಗೃತ ದೇವತೆಗಳು, ಮತ್ತು ಅವರು ಸಂಕಲ್ಪ ಮಾಡಿದಾಗ, ಅವರು ಪವಾಡಗಳನ್ನು ಮಾಡುತ್ತಾರೆ" ಎಂದು ಹೇಳಿದರು. ಈ ದೀದಿಗಳು ತಾವು ಅಸಹಾಯಕರಲ್ಲ, ಆದರೆ ವಾಸ್ತವಿಕ ಅರ್ಥದಲ್ಲಿ ನಿಜವಾಗಿಯೂ ಸಬಲರು ಎಂದು ಸಾಬೀತುಪಡಿಸಿದ್ದಾರೆ ಎಂದು ಅವರು ಹೇಳಿದರು. 'ಜೀವಿಕ ದೀದಿ'ಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಅವರು "ದುರ್ಗಾ, ಲಕ್ಷ್ಮಿ, ಸರಸ್ವತಿ, ಅವರು ಅತ್ಯಂತ ಶ್ರೇಷ್ಠ ಪವಾಡಗಳನ್ನು ಮಾಡಬಲ್ಲರು" ಮತ್ತು "ನೀವು ಇಲ್ಲಿಗೆ ಬಂದಿರುವುದರಿಂದ, ಈ ಸ್ಥಳವು ನಿಜವಾಗಿಯೂ ತಾಯಿಯ ಮನೆಯಂತೆ ಮಾರ್ಪಟ್ಟಿದೆ" ಎಂದು ಹೇಳಿದರು. ಸಹೋದರಿಯರ ಉಪಸ್ಥಿತಿಯು ಸಹೋದರರ ಅಂಗಳವನ್ನು ಸಂತೋಷದಿಂದ ತುಂಬುತ್ತದೆ ಎಂದರು.

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದ ಶ್ರೀ ಚೌಹಾಣ್ ಭಾರತದ ಸಹೋದರಿಯರು, ಹೆಣ್ಣುಮಕ್ಕಳು ಮತ್ತು ದೀದಿಗಳ ಬಗ್ಗೆ ಅವರು ಕಾಳಜಿ ವಹಿಸಿದ್ದಾರೆ ಎಂದು ಹೇಳಿದರು. ಪ್ರಧಾನಮಂತ್ರಿಗಳು ಮಹಿಳೆಯರ ಶಕ್ತಿಯನ್ನು ಗುರುತಿಸಿದ್ದಾರೆ ಮತ್ತು 'ಅಜೀವಿಕಾ ಮಿಷನ್' (ಜೀವನೋಪಾಯ ಮಿಷನ್) ಪವಾಡಗಳನ್ನು ಮಾಡಿದೆ ಎಂದವರು ನುಡಿದರು.

ಇಂದು 10 ಕೋಟಿ ಸಹೋದರಿಯರು ಸ್ವಸಹಾಯ ಗುಂಪುಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಹೇಳಿದರು. 3 ಕೋಟಿ ದೀದಿಗಳನ್ನು 'ಲಖ್ಪತಿ ದೀದಿ'ಗಳನ್ನಾಗಿ ಮಾಡುವ ಗುರಿಯನ್ನು ಪ್ರಧಾನಿ ನಮಗೆ ನೀಡಿದ್ದಾರೆ. ಮತ್ತು ಗುರಿ ನಮಗೆ ಒಂದು ಮಂತ್ರವಾಗಿದೆ ಮತ್ತು ನಾವು ಅದನ್ನು ಶೀಘ್ರದಲ್ಲೇ ಸಾಧಿಸುತ್ತೇವೆ ಎಂದು ನಾನು ಹೆಮ್ಮೆಯಿಂದ ಹೇಳುತ್ತೇನೆ. 'ಅಜೀವಿಕಾ ಮಿಷನ್' ಈಗ ಕೇವಲ ಒಂದು ಯೋಜನೆಯಾಗಿಲ್ಲ, ಬದಲು ಒಂದು ಕ್ರಾಂತಿ ಮತ್ತು ಚಳುವಳಿಯಾಗಿ ಮಾರ್ಪಟ್ಟಿದೆ ಎಂದು ಅವರು ಹೇಳಿದರು. ಇದು ನಮ್ಮನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಿದೆ ಮಾತ್ರವಲ್ಲದೆ, ಮಹಿಳೆಯರನ್ನು ಹಿಡಿದಿಟ್ಟುಕೊಂಡಿದ್ದ ಎಲ್ಲಾ ಸಂಕೋಲೆಗಳನ್ನು ಮುರಿದಿದೆ ಎಂದೂ ಹೇಳಿದರು.

ತಮ್ಮ ಭಾಷಣದಲ್ಲಿ, ಅವರು, ಇಂದು ದೀದಿಗಳು ಸ್ವಾವಲಂಬಿಗಳು ಮತ್ತು ಆತ್ಮವಿಶ್ವಾಸದಿಂದ ತುಂಬಿದ್ದಾರೆ ಎಂದು ಹೇಳಿದರು. ಯಾವುದೇ ದೀದಿ ವೈಯಕ್ತಿಕವಾಗಿ ಸಾಲ ಪಡೆಯಲು ಬಯಸಿದರೆ, ನಾವು ಮಾರ್ಗವನ್ನು ಸುಲಭಗೊಳಿಸುತ್ತೇವೆ, ಇದರಿಂದ ದೀದಿಯರ ಆರ್ಥಿಕ ಬಲವು ಇನ್ನಷ್ಟು ದೃಢಗೊಳ್ಳುತ್ತದೆ. ಇದರ ಅಡಿಯಲ್ಲಿ, ಮಹಿಳಾ ಉದ್ಯಮಶೀಲತೆಯನ್ನು ಉತ್ತೇಜಿಸಲು, ಗ್ರಾಮೀಣಾಭಿವೃದ್ಧಿ ಸಚಿವಾಲಯವು ಆದಿಯಿಂದ ಕೊನೆಯವರೆಗೆ ಆನ್‌ಲೈನ್ ಸಾಲ ವ್ಯವಸ್ಥೆಯನ್ನು ರಚಿಸಿದೆ, ಇದರ ಮೂಲಕ ಸ್ವ-ಸಹಾಯ ಗುಂಪುಗಳ ಮಹಿಳೆಯರು ಸಕಾಲದಲ್ಲಿ ಮತ್ತು ಸುಲಭ ರೀತಿಯಲ್ಲಿ ಸಾಲಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಈಗ, ಸ್ವ-ಸಹಾಯ ಗುಂಪು ಸದಸ್ಯರು ಯಾವುದೇ ಬ್ಯಾಂಕಿನಲ್ಲಿ ಸಾಲಗಳಿಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತದೆ ಮತ್ತು ಬ್ಯಾಂಕುಗಳು ಡಿಜಿಟಲ್ ರೂಪದಲ್ಲಿ ಸಾಲಗಳನ್ನು ಅನುಮೋದಿಸಿ ವಿತರಿಸುತ್ತವೆ. ಈ ಉಪಕ್ರಮವು ಮಹಿಳಾ ಉದ್ಯಮಿಗಳಿಗೆ ಸಾಲ ಸೌಲಭ್ಯಗಳನ್ನು ಪಡೆಯುವಲ್ಲಿ ಒಂದು ಮೈಲಿಗಲ್ಲು ಎಂಬುದನ್ನು ಸಾಬೀತುಪಡಿಸುತ್ತದೆ ಮತ್ತು ಡಿಜಿಟಲ್ ಸಬಲೀಕರಣಗೊಂಡ ಭಾರತದ ವಿಶಾಲ ಗುರಿಯನ್ನು ಮುನ್ನಡೆಸುತ್ತದೆ.

ಸರಸ್ ಮೇಳಗಳು ಪ್ರಸ್ತುತ ಸೀಮಿತ ಸಂಖ್ಯೆಯಲ್ಲಿ ನಡೆಯುತ್ತಿವೆ, ಆದರೆ ಅವುಗಳ ಉಪಯುಕ್ತತೆ ಬಹಳ ಉತ್ತಮವಾಗಿದೆ ಎಂದು ಅವರು ಹೇಳಿದರು. ಆದ್ದರಿಂದ, ಈಗ ಈ ಕೆಲಸವು ದಿಲ್ಲಿಗೆ ಮಾತ್ರ ಸೀಮಿತವಾಗಿರುವುದಿಲ್ಲ; "ದೇಶದ ಇತರ ಭಾಗಗಳಲ್ಲಿಯೂ ನಾವು ಸರಸ್ ಮೇಳಗಳನ್ನು ಆಯೋಜಿಸುತ್ತೇವೆ, ಇದರಿಂದಾಗಿ ದೀದಿಗಳು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಸರಿಯಾದ ಮತ್ತು ದೊಡ್ಡ ಮಾರುಕಟ್ಟೆಯನ್ನು ಪಡೆಯುತ್ತಾರೆ" ಎಂದವರು ನುಡಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಹಾಯಕ ಸಚಿವರಾದ ಶ್ರೀ ಚಂದ್ರಶೇಖರ್ ಪೆಮ್ಮಸಾನಿ ತಮ್ಮ ಭಾಷಣದಲ್ಲಿ, ಇತ್ತೀಚೆಗೆ ಆಂಧ್ರಪ್ರದೇಶದ ಗುಂಟೂರಿನಲ್ಲಿ ನಡೆದ ಸರಸ್ ಮೇಳದಲ್ಲಿ ಮಹಿಳೆಯರ ಉದ್ಯಮಶೀಲತೆ ಸ್ಪಷ್ಟವಾಗಿ ಗೋಚರಿಸಿತ್ತು ಎಂದು ಹೇಳಿದರು. ಇಲ್ಲಿ, ಸಮೃದ್ಧಿಯು ಜಿಡಿಪಿಗೆ ಮಾತ್ರ ಸಂಬಂಧಿಸಿದೆ, ಆದರೆ ದೇಶದ ನಿಜವಾದ ಶಕ್ತಿಯನ್ನು ಅದರ ಮಹಿಳೆಯರು ನಿರ್ಧರಿಸುತ್ತಾರೆ. ಭಾರತದ ಜಿಡಿಪಿಗೆ ಮಹಿಳೆಯರ ಕೊಡುಗೆ ಶೇ. 18 ಇದೆ; ಅದೇ ರೀತಿ, ಶೇ. 10 ರಷ್ಟು ನವೋದ್ಯಮಗಳು ಮಹಿಳೆಯರಿಂದ ನಡೆಸಲ್ಪಡುತ್ತವೆ ಮತ್ತು ಮಹಿಳೆಯರು ದೇಶದ ಅಭಿವೃದ್ಧಿಯಲ್ಲಿ ಸಕ್ರಿಯ ಪಾತ್ರವನ್ನು ವಹಿಸುತ್ತಾರೆ ಎಂದರು.

ದೀನದಯಾಳ್ ಅಂತ್ಯೋದಯ ಯೋಜನೆ - ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (ಡಿ.ಎ.ವೈ-ಎನ್.ಆರ್.ಎಲ್.ಎಂ.-DAY-NRLM) ಅಡಿಯಲ್ಲಿ ಮಾರ್ಕೆಟಿಂಗ್ ತಂತ್ರದ ಪ್ರಮುಖ ಅಂಶಗಳು
 

  • ಸ್ವ-ಸಹಾಯ ಗುಂಪುಗಳ ಉತ್ಪನ್ನಗಳಿಗಾಗಿ ರಚನಾತ್ಮಕ, ಸ್ಕೇಲೆಬಲ್ (ವಿಶಾಲ ವ್ಯಾಪ್ತಿಯ)  ಮತ್ತು ಸುಸ್ಥಿರ ಮಾರುಕಟ್ಟೆ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲಾಗುವುದು.
  • ಸಾರಸ್ ಬ್ರ್ಯಾಂಡ್ ಅನ್ನು ಬಲಪಡಿಸಲು ಉತ್ತಮ ಗುಣಮಟ್ಟದ, ಮೌಲ್ಯವರ್ಧಿತ, ಪ್ರೀಮಿಯಂ ಮತ್ತು ರಫ್ತು-ಆಧಾರಿತ ಉತ್ಪನ್ನಗಳ ಶ್ರೇಣಿಯನ್ನು ಅಭಿವೃದ್ಧಿಪಡಿಸಲಾಗುವುದು.
  • ರಾಜ್ಯ ಮಟ್ಟದ ಸಂಗ್ರಾಹಕರನ್ನು ರೂಪಿಸುವುದು ಮತ್ತು ಬಲಪಡಿಸುವುದು ಆದ್ಯತೆಯಾಗಿರುತ್ತದೆ.
  • ಸ್ವ-ಸಹಾಯ ಗುಂಪು ಉದ್ಯಮಿಗಳು, ಸಿ.ಎಲ್.ಎಫ್. ಗಳು ಮತ್ತು ಸಿ.ಆರ್.ಪಿ-ಇ.ಪಿ. ಕೇಡರ್‌ಗಳ ಸಾಮರ್ಥ್ಯ ವೃದ್ಧಿಗೆ ವಿಶೇಷ ಗಮನ ನೀಡಲಾಗುವುದು.
  • ಜೆಮ್ (GeM) ಪೋರ್ಟಲ್,  ಒ.ಎನ್.ಡಿ.ಸಿ. (ONDC) , ಇ ಸರಸ್ (eSARAS)  ಮತ್ತು ಪ್ರಮುಖ ಖಾಸಗಿ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸ್ವ-ಸಹಾಯ ಗುಂಪು ಉತ್ಪನ್ನಗಳ ವ್ಯವಸ್ಥಿತ ಆನ್‌ಬೋರ್ಡಿಂಗ್ ಅನ್ನು ಮಾಡಲಾಗುತ್ತದೆ.
  • ಇ-ಕಾಮರ್ಸ್ ಮಾರಾಟವನ್ನು ಬೆಂಬಲಿಸಲು ಪೂರೈಕೆ ಮತ್ತು ಲಾಜಿಸ್ಟಿಕ್ಸ್ ಮೂಲಸೌಕರ್ಯವನ್ನು ಬಲಪಡಿಸಲಾಗುತ್ತದೆ.
  • ರಾಷ್ಟ್ರೀಯ ಮಟ್ಟದಲ್ಲಿ 5 ಸರಸ್ ಮೇಳಗಳನ್ನು ಆಯೋಜಿಸಲಾಗುವುದು.
  • ರಾಜ್ಯ ಗ್ರಾಮೀಣ ಜೀವನೋಪಾಯ ಮಿಷನ್‌ಗಳು (SRLM ಗಳು) ರಾಜ್ಯ ಮಟ್ಟದಲ್ಲಿ ಸರಸ್ ಮೇಳಗಳ ಸಂಖ್ಯೆಯನ್ನು ಹೆಚ್ಚಿಸುತ್ತವೆ.
  • ಕ್ಲಸ್ಟರ್ ಮಟ್ಟದಲ್ಲಿ, ವಿಶೇಷವಾಗಿ ಕೃಷಿ-ಕ್ಲಸ್ಟರ್‌ಗಳಲ್ಲಿ, ನಿಯಮಿತ ಮಾರುಕಟ್ಟೆಗಳನ್ನು ಒದಗಿಸಲು  ಶೀ ಮಾರ್ಟ್ (SHE-Mart)  ಗಳನ್ನು ಸ್ಥಾಪಿಸಲಾಗುವುದು.
  • ದೇಶೀಯ ಮಾರುಕಟ್ಟೆ ಮತ್ತು ರಫ್ತುಗಳನ್ನು ಉತ್ತೇಜಿಸಲು ವರ್ಷದಲ್ಲಿ 50 ಖರೀದಿದಾರ-ಮಾರಾಟಗಾರರ ಸಭೆಗಳನ್ನು ಆಯೋಜಿಸಲಾಗುವುದು.
  • ಈ ಉಪಕ್ರಮಗಳು ಸ್ವ-ಸಹಾಯ ಗುಂಪುಗಳ ಉದ್ಯಮಗಳನ್ನು ಮುಖ್ಯವಾಹಿನಿಯ ಮೌಲ್ಯ ಸರಪಳಿಗಳಲ್ಲಿ ಉತ್ತಮವಾಗಿ ಸಂಯೋಜಿಸಲು ಸಹಾಯ ಮಾಡುತ್ತವೆ.
  • ಸ್ವ-ಸಹಾಯ ಗುಂಪುಗಳ ಮಹಿಳೆಯರಿಗೆ ಸುಸ್ಥಿರ ಆದಾಯದ ಬೆಳವಣಿಗೆಯನ್ನು ಖಚಿತಪಡಿಸಿಕೊಳ್ಳಲಾಗುವುದು.

 

*****


(रिलीज़ आईडी: 2218743) आगंतुक पटल : 13
इस विज्ञप्ति को इन भाषाओं में पढ़ें: English , हिन्दी , Assamese , Gujarati