ಪಶು ಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಸಚಿವಾಲಯ
"ಭಾರತದ ಸಮುದ್ರಾಹಾರ ರಫ್ತು ಕ್ಷೇತ್ರದ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಬಲವಾದ ಅಂತಾರಾಷ್ಟ್ರೀಯ ಸಹಯೋಗದ ಅಗತ್ಯವಿದೆ": ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವರಾದ ಶ್ರೀ ರಾಜೀವ್ ರಂಜನ್ ಸಿಂಗ್
ಸಮುದ್ರ ಆಹಾರ ರಫ್ತು ಪ್ರಚಾರದ ಕುರಿತು ರಾಯಭಾರಿಗಳು ಮತ್ತು ಹೈಕಮಿಷನರ್ ಗಳೊಂದಿಗೆ ದುಂಡು ಮೇಜಿನ ಸಭೆ ನವದೆಹಲಿಯಲ್ಲಿ ಯಶಸ್ವಿಯಾಗಿ ನಡೆಯಿತು
प्रविष्टि तिथि:
21 JAN 2026 11:48PM by PIB Bengaluru
ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ಮೀನುಗಾರಿಕೆ ಇಲಾಖೆಯು ಸಮುದ್ರಾಹಾರ ರಫ್ತು ಪ್ರಚಾರದ ಕುರಿತು ದುಂಡು ಮೇಜಿನ ಸಮ್ಮೇಳನವನ್ನು ಇಂದು ನವದೆಹಲಿಯ ಸುಷ್ಮಾ ಸ್ವರಾಜ್ ಭವನದಲ್ಲಿ ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಮತ್ತು ಪಂಚಾಯತ್ ರಾಜ್ ಸಚಿವರಾದ ಶ್ರೀ ರಾಜೀವ್ ರಂಜನ್ ಸಿಂಗ್ ಅಲಿಯಾಸ್ ಲಲನ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ಆಯೋಜಿಸಿತು. ಈ ಅಧಿವೇಶನವು ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ರಾಜ್ಯ ಖಾತೆ ಸಚಿವರಾದ ಶ್ರೀ ಜಾರ್ಜ್ ಕುರಿಯನ್ ಮತ್ತು ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಮತ್ತು ಪಂಚಾಯತ್ ರಾಜ್ ಸಚಿವಾಲಯದ ರಾಜ್ಯ ಖಾತೆ ಸಚಿವರಾದ ಪ್ರೊ. ಎಸ್. ಪಿ. ಸಿಂಗ್ ಬಘೇಲ್ ಅವರ ಸಮ್ಮುಖದಲ್ಲಿ ದುಂಡು ಮೇಜಿನ ಸಮ್ಮೇಳನವು ನಡೆಯಿತು.

ದುಂಡು ಮೇಜಿನ ಸಮ್ಮೇಳನದಲ್ಲಿ ಅಲ್ಬೇನಿಯಾ, ಅಂಗೋಲಾ, ಚೀನಾ, ಕೊಲಂಬಿಯಾ, ಈಕ್ವೆಡಾರ್, ಫಿಜಿ, ಘಾನಾ, ಗ್ವಾಟೆಮಾಲಾ, ಐಸ್ಲ್ಯಾಂಡ್, ಇರಾನ್, ಜಮೈಕಾ, ಜೋರ್ಡಾನ್, ಮಲೇಷ್ಯಾ, ಮಾಲ್ಡೀವ್ಸ್, ಮೊರಾಕೊ, ಪನಾಮ, ಪೆರು, ಸೀಶೆಲ್ಸ್, ಸಿಂಗಾಪುರ, ಶ್ರೀಲಂಕಾ, ಉರುಗ್ವೆ, ಸೆನೆಗಲ್, ಮೊಲ್ಡೊವಾ, ಟೋಗೊ, ಬೆನಿನ್, ಕತಾರ್, ಮೆಕ್ಸಿಕೊ, ವೆನೆಜುವೆಲಾ, ವಿಯೆಟ್ನಾಂ, ಈಜಿಪ್ಟ್, ಫ್ರಾನ್ಸ್, ಇಂಡೋನೇಷ್ಯಾ, ಇರಾಕ್, ಮಾಲಿ, ನಾರ್ವೆ, ಗಿನಿಯಾ ಗಣರಾಜ್ಯ, ರಷ್ಯಾ, ಸ್ಪೇನ್, ಟುನೀಶಿಯಾ ಮತ್ತು ಸೌದಿ ಅರೇಬಿಯಾ; ಏಷ್ಯಾ, ಆಫ್ರಿಕಾ, ಯುರೋಪ್, ಉತ್ತರ ಅಮೆರಿಕಾ, ಓಷಿಯಾನಿಯಾ ಮತ್ತು ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್ ದೇಶಗಳ ರಾಯಭಾರಿಗಳು, ಹೈಕಮಿಷನರ್ ಗಳು ಮತ್ತು ಇತರ ಹಿರಿಯ ಮಿಷನ್ ಅಧಿಕಾರಿಗಳು ಸೇರಿದಂತೆ 40 ದೇಶಗಳ ರಾಜತಾಂತ್ರಿಕರು ಭಾಗವಹಿಸಿದ್ದರು. ಆಹಾರ ಮತ್ತು ಕೃಷಿ ಸಂಸ್ಥೆ (ಎಫ್.ಎ.ಒ.), ಏಜೆನ್ಸ್ ಫ್ರಾಂಚೈಸ್ ಡಿ ಡೆವಲಪ್ಮೆಂಟ್ (ಎ.ಎಫ್.ಡಿ.), ಡಾಯ್ಚ ಗೆಸೆಲ್ಸ್ಚಾಫ್ಟ್ ಫರ್ ಇಂಟರ್ನ್ಯಾಷನಲ್ ಜುಸಮ್ಮೆನಾರ್ಬೀಟ್ (ಜಿ.ಐ.ಝೆಡ್.), ಬಂಗಾಳ ಕೊಲ್ಲಿ ಕಾರ್ಯಕ್ರಮ (ಬಿ.ಒ.ಬಿ.ಪಿ.), ಏಷ್ಯನ್ ಅಭಿವೃದ್ಧಿ ಬ್ಯಾಂಕ್ (ಎ.ಡಿ.ಬಿ.), ಮತ್ತು ಕೃಷಿ ಅಭಿವೃದ್ಧಿಗಾಗಿ ಅಂತರರಾಷ್ಟ್ರೀಯ ನಿಧಿ (ಐ.ಎಫ್.ಎ.ಡಿ.) ಮುಂತಾದ ಅಂತಾರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಕೇಂದ್ರ ಮೀನುಗಾರಿಕೆ ಇಲಾಖೆ ಮತ್ತು ಭಾರತ ಸರ್ಕಾರದ ವಿವಿಧ ಪೂರಕ ಸಚಿವಾಲಯಗಳ ಹಿರಿಯ ಅಧಿಕಾರಿಗಳು ಸಹ ದುಂಡು ಮೇಜಿನ ಸಮ್ಮೇಳನದಲ್ಲಿ ಉಪಸ್ಥಿತರಿದ್ದರು.

ಮೀನುಗಾರಿಕೆ ಮತ್ತು ಸಮುದ್ರಾಹಾರ ವಲಯದಲ್ಲಿ ಭಾರತದ ಅಂತಾರಾಷ್ಟ್ರೀಯ ಪಾಲುದಾರಿಕೆಗಳ ಬೆಳೆಯುತ್ತಿರುವ ಬಲವನ್ನು ವ್ಯಾಪಕ ಪ್ರಾತಿನಿಧ್ಯವು ಒತ್ತಿಹೇಳಿತು. ಹವಾಮಾನ ಬದಲಾವಣೆ ಮತ್ತು ಸಾಗರ ಆರೋಗ್ಯ, ಸುಸ್ಥಿರತೆ, ಜವಾಬ್ದಾರಿಯುತ ಮೀನುಗಾರಿಕೆ, ತಂತ್ರಜ್ಞಾನ ವರ್ಗಾವಣೆ, ಹಸಿರು ನಾವೀನ್ಯತೆ, ಸಾಮರ್ಥ್ಯ ವೃದ್ಧಿ, ಪೂರೈಕೆ-ಸರಪಳಿ ಅಭಿವೃದ್ಧಿ, ಮತ್ತು ಅಲಂಕಾರಿಕ ಮೀನುಗಾರಿಕೆ ಮತ್ತು ಕಡಲಕಳೆ ಕೃಷಿಯಂತಹ ಉದಯೋನ್ಮುಖ ಕ್ಷೇತ್ರಗಳು ವರ್ಧಿತ ಸಹಯೋಗಕ್ಕೆ ಪ್ರಮುಖ ಸ್ತಂಭಗಳಾಗಿ ಸಮ್ಮೇಳನದಲ್ಲಿ ಹೊರಹೊಮ್ಮಿದವು.
X50U.jpeg)
ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಮತ್ತು ಪಂಚಾಯತಿ ರಾಜ್ ಸಚಿವರಾದ ಶ್ರೀ ರಾಜೀವ್ ರಂಜನ್ ಸಿಂಗ್ ಅವರು ತಮ್ಮ ಭಾಷಣದಲ್ಲಿ, ಬಲವಾದ ನೀತಿಗಳು, ಸಂಸ್ಕರಣಾ ಸಾಮರ್ಥ್ಯ ಮತ್ತು ಉತ್ತಮ ಲಾಜಿಸ್ಟಿಕ್ಸ್ ವ್ಯವಸ್ಥೆಗಳಿಂದ ಬೆಂಬಲಿತವಾದ ಪ್ರಮುಖ ಜಾಗತಿಕ ಮೀನುಗಾರಿಕೆ ಮತ್ತು ಜಲಚರ ಸಾಕಣೆ ಆಟಗಾರನಾಗಿ ಭಾರತದ ಹೊರಹೊಮ್ಮುವಿಕೆಯನ್ನು ವಿವರಿಸಿದರು, ಕಳೆದ ದಶಕದಲ್ಲಿ ಸಮುದ್ರಾಹಾರ ರಫ್ತು ಮೌಲ್ಯಗಳು ದ್ವಿಗುಣಗೊಂಡಿವೆ. ಅಂಡಮಾನ್ ಮತ್ತು ನಿಕೋಬಾರ್ ಮತ್ತು ಲಕ್ಷದ್ವೀಪ ದ್ವೀಪಗಳಲ್ಲಿ ಸುಸ್ಥಿರ, ರಫ್ತು-ಆಧಾರಿತ ಬೆಳವಣಿಗೆಯ ಮೇಲೆ ಕೇಂದ್ರೀಕರಿಸಿ, ಭಾರತವು ರಾಷ್ಟ್ರೀಯ ಟ್ರೇಸೆಬಿಲಿಟಿ ಚೌಕಟ್ಟು (2025), ಇ.ಇ.ಝಡ್. ನಿಯಮಗಳು (2025) ಮತ್ತು ನವೀಕರಿಸಿದ ಹೈ ಸೀ ಮೀನುಗಾರಿಕೆ ಮಾರ್ಗಸೂಚಿಗಳು (2025) ಮೂಲಕ ಅನುಸರಣೆ ಮತ್ತು ಪಾರದರ್ಶಕತೆಯನ್ನು ಬಲಪಡಿಸುತ್ತಿದೆ ಎಂದು ಅವರು ಹೇಳಿದರು. ಅಭಿವೃದ್ಧಿಗೊಂಡು ಮುಂದುವರಿದ ಜಲಚರ ಸಾಕಣೆ ಮತ್ತು ಸಾಗರ ಸಾಕಣೆ ತಂತ್ರಜ್ಞಾನಗಳು, ಸಂಸ್ಕರಣೆ, ಶೀತಲ ಸರಪಳಿಗಳು, ಹಡಗು ವಿನ್ಯಾಸ, ಡಿಜಿಟಲ್ ಮೇಲ್ವಿಚಾರಣೆ, ಜಂಟಿ ಸಂಶೋಧನೆ ಮತ್ತು ಅಭಿವೃದ್ಧಿ, ತಂತ್ರಜ್ಞಾನ ವರ್ಗಾವಣೆ, ಹವಾಮಾನ ಸ್ಥಿತಿಸ್ಥಾಪಕತ್ವ, ಸುಸ್ಥಿರ ಮೀನುಗಾರಿಕೆ ನಿರ್ವಹಣೆ, ವ್ಯಾಪಾರ ವಿಸ್ತರಣೆ ಮತ್ತು ಖಾಸಗಿ ವಲಯದ ಪಾಲುದಾರಿಕೆಗಳಲ್ಲಿ ವ್ಯಾಪಕ ಸಹಕಾರ ಅವಕಾಶಗಳನ್ನು ಅವರು ವಿವರಿಸಿ ಹೇಳಿದರು.

ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಮತ್ತು ಪಂಚಾಯತ್ ರಾಜ್ ರಾಜ್ಯ ಖಾತೆ ಸಚಿವರಾದ ಪ್ರೊ. ಎಸ್.ಪಿ. ಸಿಂಗ್ ಬಘೇಲ್ ಅವರು ಮಾತನಾಡುತ್ತಾ, ಸಮುದ್ರಾಹಾರವು ಪೌಷ್ಟಿಕಾಂಶದ ಪ್ರಮುಖ ಮೂಲವಾಗಿದೆ, ಜಾಗತಿಕ ಆಹಾರ ಭದ್ರತೆಗೆ ಗಮನಾರ್ಹವಾಗಿ ಕೊಡುಗೆ ನೀಡುತ್ತದೆ, ದೊಡ್ಡ ಪ್ರಮಾಣದ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಮತ್ತು ರಾಷ್ಟ್ರೀಯ ಆರ್ಥಿಕತೆಯನ್ನು ಬಲಪಡಿಸುತ್ತದೆ. ಭಾರತ ಸರ್ಕಾರದ ಮೀನುಗಾರಿಕೆ ಇಲಾಖೆಯು ಈ ವಲಯದ ಸುಸ್ಥಿರ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಉತ್ಪಾದನೆಯಿಂದ ರಫ್ತಿಗೆ ಸಮಗ್ರ ಮೌಲ್ಯ ಸರಪಳಿ ವಿಧಾನವನ್ನು ಅಳವಡಿಸಿಕೊಳ್ಳುತ್ತಿದೆ ಎಂದು ಹೇಳಿದರು.
ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯ ಖಾತೆ ಸಚಿವರಾದ ಶ್ರೀ ಜಾರ್ಜ್ ಕುರಿಯನ್ ಅವರು ಮಾತನಾಡುತ್ತಾ, ಭಾರತದ ತ್ವರಿತ ಜಲಚರ ಸಾಕಣೆ ಬೆಳವಣಿಗೆಯನ್ನು ಉಲ್ಲೇಖಿಸಿದರು, ಬಲವಾದ ಉತ್ಪಾದನಾ ಲಾಭಗಳು ಮತ್ತು ಸಮುದ್ರಾಹಾರ ರಫ್ತನ್ನು ₹1 ಲಕ್ಷ ಕೋಟಿಗೆ ಹೆಚ್ಚಿಸುವ ಇಲಾಖೆಯ ಆಕಾಂಕ್ಷೆಯನ್ನು ಅವರು ಗಮನಿಸಿದರು. ಕಳೆದ ಏಳು ತಿಂಗಳಲ್ಲಿ ರಫ್ತು ಮೌಲ್ಯಗಳು 21% ರಷ್ಟು ಏರಿಕೆಯಾಗಿದ್ದು, ಇದು ಬಲವಾದ ವಲಯದ ತೀವ್ರ ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಮಾಹಿತಿ ಹಂಚಿಕೊಂಡರು. ಈ ಅರ್ಥಪೂರ್ಣ ಸಂವಾದವನ್ನು ಸಕ್ರಿಯಗೊಳಿಸುವಲ್ಲಿ ಅವರ ಸಹಕಾರ ಮತ್ತು ಪಾಲುದಾರಿಕೆಗಾಗಿ ಭಾಗವಹಿಸುವ ದೇಶಗಳಿಗೆ ಅವರು ಈ ಸಂದರ್ಭದಲ್ಲಿ ಧನ್ಯವಾದಗಳನ್ನು ಅರ್ಪಿಸಿದರು.
ಕೇಂದ್ರ ಮೀನುಗಾರಿಕೆ ಇಲಾಖೆಯ ಕೇಂದ್ರ ಕಾರ್ಯದರ್ಶಿ ಡಾ. ಅಭಿಲಕ್ಷ್ ಲಿಖಿ ಅವರು ಮುಖ್ಯ ಭಾಷಣ ಮಾಡಿ, ಭಾರತದ ಸಮುದ್ರಾಹಾರ ರಫ್ತು ಹೆಚ್ಚುತ್ತಿರುವ ಔಪಚಾರಿಕೀಕರಣ ಮತ್ತು ಡಿಜಿಟಲೀಕರಣದಿಂದ ತ್ವರಿತ ಬೆಳವಣಿಗೆಯನ್ನು ಕಾಣುತ್ತಿದೆ, ಇದು ಉತ್ಪಾದನೆಯಲ್ಲಿ ಹೆಚ್ಚಳ ಮತ್ತು ಸಮುದ್ರಾಹಾರ ರಫ್ತು ಪ್ರಮಾಣದಲ್ಲಿ ಏರಿಕೆಗೆ ಕಾರಣವಾಗಿದೆ. ಇಂದು ಈ ವಲಯವು ಗುಣಮಟ್ಟದ ಪ್ಯಾಕೇಜಿಂಗ್, ನಿಯಂತ್ರಕ ಜೋಡಣೆ ಮತ್ತು ಬಲವಾದ ಪತ್ತೆಹಚ್ಚುವಿಕೆ ವ್ಯವಸ್ಥೆಗಳಿಂದ ವ್ಯಾಖ್ಯಾನಿಸಲ್ಪಟ್ಟಿದೆ ಎಂದು ಹೇಳಿದರು. ಇಂತಹ ಚರ್ಚೆಗಳನ್ನು ಹೆಚ್ಚು ಮೌಲ್ಯಯುತವೆಂದು ಬಣ್ಣಿಸಿದ ಅವರು, ಭಾರತವು ಈಗಾಗಲೇ ಹಲವಾರು ಜಂಟಿ ಕಾರ್ಯ ಗುಂಪುಗಳನ್ನು (ಜೆಡಬ್ಲ್ಯೂಜಿ) ಹೊಂದಿದೆ ಮತ್ತು ಸಹಯೋಗವನ್ನು ಮುಂದಕ್ಕೆ ಕೊಂಡೊಯ್ಯಲು ದ್ವಿಪಕ್ಷೀಯ ಚರ್ಚೆಗಳನ್ನು ಸಹ ಪ್ರಾರಂಭಿಸುತ್ತದೆ ಎಂದು ಹೇಳಿದರು.
ಭಾರತದ ಜಾಗತಿಕ ಸಮುದ್ರಾಹಾರ ಉಪಸ್ಥಿತಿಯನ್ನು ಬಲಪಡಿಸುವ ವಿಷಯವನ್ನು ಜಂಟಿ ಕಾರ್ಯದರ್ಶಿ (ಒಳನಾಡಿನ ಮೀನುಗಾರಿಕೆ) ಶ್ರೀ ಸಾಗರ್ ಮೆಹ್ರಾ ಅವರು ರೂಪಿಸಿದರು ಮತ್ತು ಜಾಗತಿಕ ಗುಣಮಟ್ಟದ ನಿರೀಕ್ಷೆಗಳನ್ನು ಪೂರೈಸಲು ಆಹಾರ ಸುರಕ್ಷತೆ, ಪತ್ತೆಹಚ್ಚುವಿಕೆ ಮತ್ತು ಅಂತಾರಾಷ್ಟ್ರೀಯ ಪ್ರಮಾಣೀಕರಣಗಳಿಗೆ ಇಲಾಖೆಯ ಬಲವಾದ ಬದ್ಧತೆಯನ್ನು ಅವರು ಉಲ್ಲೇಖಿಸಿದರು. ಸುಸ್ಥಿರತೆ, ಹೂಡಿಕೆ ಅವಕಾಶಗಳು ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಕುರಿತು ಅರ್ಥಪೂರ್ಣ ವಿನಿಮಯವನ್ನು ಸುಗಮಗೊಳಿಸುವ ಗುರಿಯನ್ನು ಈ ಸಮ್ಮೇಳನ ಹೊಂದಿದೆ ಎಂದು ಅವರು ಹೇಳಿದರು.
ಭಾಗವಹಿಸಿದ ದೇಶಗಳು ಮೀನುಗಾರಿಕೆ ಮತ್ತು ಜಲಚರ ಸಾಕಣೆಯಾದ್ಯಂತ ಭಾರತದೊಂದಿಗೆ ಆಳವಾದ ಸಹಯೋಗದಲ್ಲಿ ಬಲವಾದ ಆಸಕ್ತಿಯನ್ನು ವ್ಯಕ್ತಪಡಿಸಿದವು. ತಂತ್ರಜ್ಞಾನ ವರ್ಗಾವಣೆ, ಜ್ಞಾನ ವಿನಿಮಯ, ಸಾಮರ್ಥ್ಯ ವೃದ್ಧಿ ಮತ್ತು ಜಂಟಿ ಉದ್ಯಮಗಳಲ್ಲಿನ ಅವಕಾಶಗಳನ್ನು ಹಲವರು ಎತ್ತಿ ತೋರಿಸಿದರು, ಆದರೆ ಚೀನಾ, ಮಲೇಷ್ಯಾ, ಫ್ರಾನ್ಸ್, ಸ್ಪೇನ್, ಸೀಶೆಲ್ಸ್ ಮತ್ತು ಸಿಂಗಾಪುರ ಸೇರಿದಂತೆ ಹಲವಾರು ದೇಶಗಳು ವಿಶ್ವಾಸಾರ್ಹ ಸಮುದ್ರಾಹಾರ ವ್ಯಾಪಾರ ಪಾಲುದಾರ ದೇಶವಾಗಿ ಭಾರತದ ಬೆಳೆಯುತ್ತಿರುವ ಪಾತ್ರವನ್ನು ಒತ್ತಿ ಹೇಳಿದವು. ಸುಸ್ಥಿರತೆ, ಹವಾಮಾನ ಸ್ಥಿತಿಸ್ಥಾಪಕತ್ವ, ಪತ್ತೆಹಚ್ಚುವಿಕೆ ಮತ್ತು ಮೌಲ್ಯವರ್ಧನೆಯಲ್ಲಿ ಬಹು ರಾಷ್ಟ್ರಗಳು ಹಂಚಿಕೆಯ ಆದ್ಯತೆಗಳನ್ನು ಒತ್ತಿಹೇಳಿದವು. ಇತರರು ಸಂಸ್ಕರಣೆ, ಪ್ರಮಾಣೀಕರಣ, ಜಲಚರ ಸಾಕಣೆ ವೈವಿಧ್ಯೀಕರಣ ಮತ್ತು ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಪಾಲುದಾರಿಕೆಯನ್ನು ಈ ದೇಶಗಳು ಬಯಸಿದರು.
ಒಟ್ಟಾರೆಯಾಗಿ, ಮಧ್ಯಸ್ಥಿಕೆಗಳು ಸುಸ್ಥಿರ ಮೀನುಗಾರಿಕೆ ನಿರ್ವಹಣೆ, ಮೌಲ್ಯ ಸರಪಳಿ ಬಲವರ್ಧನೆ, ಆಳ ಸಮುದ್ರ ಸಂಪನ್ಮೂಲ ಅಭಿವೃದ್ಧಿ, ನಿಯಂತ್ರಕ ಸಹಕಾರ ಮತ್ತು ವೈಜ್ಞಾನಿಕ ಸಹಯೋಗದ ಕುರಿತು ಭಾರತದೊಂದಿಗೆ ಕೆಲಸ ಮಾಡುವ ಸ್ಪಷ್ಟ ಬದ್ಧತೆಯನ್ನು ಭಾಗವಹಿಸಿದ ದೇಶಗಳು ಪ್ರತಿಬಿಂಬಿಸುತ್ತವೆ.
SLHK.jpeg)
ಸಹಾಯಕ ಎಫ್.ಎ.ಒ. ಪ್ರತಿನಿಧಿ (ಎಫ್.ಎ.ಒ.ಆರ್) ಶ್ರೀ ಕೊಂಡ ಚಾವ್ವಾ ಅವರು ಮಾತನಾಡುತ್ತಾ, ಐ.ಯು.ಯು. ಮೀನುಗಾರಿಕೆಯನ್ನು ತಡೆಗಟ್ಟುವ ಜಾಗತಿಕ ಪ್ರಯತ್ನಗಳ ಜೊತೆಗೆ, ಡಿಜಿಟಲ್ ಪತ್ತೆಹಚ್ಚುವಿಕೆ, ಪ್ರಮಾಣೀಕರಣ ವ್ಯವಸ್ಥೆಗಳು ಮತ್ತು ಹೆಚ್ಚಿನ ಮೌಲ್ಯದ ಮಾರುಕಟ್ಟೆಗಳಿಗೆ ಪ್ರವೇಶವನ್ನು ಬಲಪಡಿಸುವಲ್ಲಿ ದೇಶಗಳನ್ನು ಬೆಂಬಲಿಸುವ ಎಫ್.ಎ.ಒ. ನ ಬದ್ಧತೆಯನ್ನು ಹೊಂದಿದೆ ಎಂದು ಹೇಳಿದರು. ಭಾರತದ ಮೀನುಗಾರಿಕೆ ಅಭಿವೃದ್ಧಿಯನ್ನು ಮುನ್ನಡೆಸುವ, ರಫ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಮತ್ತು ಭಾರತದ ವಿಶಾಲವಾದ ನೀಲಿ ಆರ್ಥಿಕ ದೃಷ್ಟಿಕೋನಕ್ಕೆ ಹೊಂದಿಕೆಯಾಗುವ ಹೂಡಿಕೆ ಪ್ರಸ್ತಾಪಗಳನ್ನು ಬೆಂಬಲಿಸಲು ಮತ್ತು ಹಣಕಾಸು ಒದಗಿಸಲು ಎಫ್.ಎ.ಒ. ಸಿದ್ಧವಾಗಿದೆ ಎಂದು ಅವರು ತಿಳಿಸಿದರು.
ಸಾಗರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರದ (ಎಂ.ಪಿ.ಇ.ಡಿ.ಎ.) ಅಧ್ಯಕ್ಷರಾದ ಶ್ರೀ ದೊಡ್ಡ ವೆಂಕಟ ಸ್ವಾಮಿ, ಭಾರತದ ಸಮುದ್ರಾಹಾರ ರಫ್ತು ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ವ್ಯಾಪಾರ, ವಿಶ್ವಾಸ ಮತ್ತು ತಂತ್ರಜ್ಞಾನದ ಮೇಲೆ ಎಂ.ಪಿ.ಇ.ಡಿ.ಎ. ಯ ಲಕ್ಷ್ಯವನ್ನು ವಿವರಿಸಿದರು ಮತ್ತು ಜಲಚರ ಸಾಕಣೆಯಲ್ಲಿ ಸುಧಾರಿತ ತಂತ್ರಜ್ಞಾನಗಳ ಕುರಿತು ಭಾರತವು ಹಲವಾರು ರಾಷ್ಟ್ರಗಳೊಂದಿಗೆ ಸಹಕರಿಸುತ್ತಿದೆ ಎಂದು ಾವರು ಮಾಹಿತಿಯನ್ನು ಹಂಚಿಕೊಂಡರು. ನಿಕಟ ಭಾಗವಹಿಸುವಿಕೆ ಮತ್ತು ನಿರಂತರ ಪಾಲುದಾರಿಕೆಗಳ ಮೂಲಕ ಜಾಗತಿಕ ಸಹಯೋಗಗಳನ್ನು ಗಾಢವಾಗಿಸಲು ಎಂ.ಪಿ.ಇ.ಡಿ.ಎ. ಯು ಹೊಂದಿರುವ ಬದ್ಧತೆಯನ್ನು ಅವರು ಈ ಸಂದರ್ಭದಲ್ಲಿ ಪುನರುಚ್ಚರಿಸಿದರು.
ಎನ್.ಎಫ್.ಡಿ.ಬಿ. ಯ ಮುಖ್ಯ ಕಾರ್ಯನಿರ್ವಾಹಕ ಡಾ. ಬಿಜಯ್ ಕುಮಾರ್ ಬೆಹೆರಾ ಅವರು ಧನ್ಯವಾದಗಳನ್ನು ಅರ್ಪಿಸಿದರು, ಹಾಗೂ, ಗೌರವಾನ್ವಿತ ಕೇಂದ್ರ ಸಚಿವರು, ರಾಯಭಾರಿಗಳು, ಹೈಕಮಿಷನರ್ಗಳು, ಕೌನ್ಸಿಲರ್ಗಳು ಮತ್ತು ಇತರ ಗಣ್ಯರಿಗೆ ಅವರ ಉದಾತ್ತ ಉಪಸ್ಥಿತಿ ಮತ್ತು ಕಾರ್ಯಕ್ರಮಕ್ಕೆ ಅಮೂಲ್ಯ ಕೊಡುಗೆಗಳಿಗಾಗಿ ಅವರು ತಮ್ಮ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.
ಸಮ್ಮೇಳನದ ವಿವಿಧ ಸಂವಾದಗಳಲ್ಲಿ ಸಂಗ್ರಹಿಸಲಾದ ಮಾಹಿತಿ, ಸಲಹೆ, ಒಳನೋಟಗಳು ಹೆಚ್ಚು ಸ್ಪರ್ಧಾತ್ಮಕ, ವೈವಿಧ್ಯಮಯ ಮತ್ತು ಸುಸ್ಥಿರ ಸಮುದ್ರಾಹಾರ ರಫ್ತು ಪರಿಸರ ವ್ಯವಸ್ಥೆಯ ಅಭಿವೃದ್ಧಿಯನ್ನು ಬೆಂಬಲಿಸುತ್ತವೆ, ಜೀವನೋಪಾಯವನ್ನು ಹೆಚ್ಚಿಸಲು, ಅಂತಾರಾಷ್ಟ್ರೀಯ ಮಾರುಕಟ್ಟೆ ಸಂಪರ್ಕಗಳನ್ನು ಬಲಪಡಿಸಲು ಮತ್ತು ಭಾರತದ ಮೀನುಗಾರಿಕೆ ಮತ್ತು ಜಲಚರ ಸಾಕಣೆ ಕ್ಷೇತ್ರದ ದೀರ್ಘಕಾಲೀನ ಬೆಳವಣಿಗೆಗೆ ಕೊಡುಗೆ ನೀಡುತ್ತವೆ.
*****
(रिलीज़ आईडी: 2217318)
आगंतुक पटल : 5