ರಸಗೊಬ್ಬರ ಇಲಾಖೆ
azadi ka amrit mahotsav

2024-25ರಲ್ಲಿ ರೈತರಿಗೆ ದಾಖಲೆ ಮಟ್ಟದ ರಸಗೊಬ್ಬರ ಲಭ್ಯತೆಯನ್ನು ಖಚಿತಪಡಿಸಿದ ಸರ್ಕಾರ


ರೈತರಿಗೆ ಸಮರ್ಪಕ ರಸಗೊಬ್ಬರ ಪೂರೈಕೆ ಖಚಿತಪಡಿಸಲಾಗಿದೆ

ಸರ್ಕಾರದ ಸಮನ್ವಯದ ಪ್ರಯತ್ನಗಳಿಂದ ದೇಶಾದ್ಯಂತ ದಾಖಲೆ ಮಟ್ಟದ ರಸಗೊಬ್ಬರ ಲಭ್ಯತೆ

प्रविष्टि तिथि: 16 JAN 2026 4:16PM by PIB Bengaluru

ಭಾರತ ಸರ್ಕಾರವು 2024-25ನೇ ಸಾಲಿನಲ್ಲಿ ರೈತರ ಕೃಷಿ ಅಗತ್ಯಗಳನ್ನು ಸಕಾಲದಲ್ಲಿ ಪೂರೈಸಲು ದಾಖಲೆ ಮಟ್ಟದ ರಸಗೊಬ್ಬರ ಲಭ್ಯತೆಯನ್ನು ಖಚಿತಪಡಿಸಿದೆ.

ಅಂದಾಜು 152.50 ಕೋಟಿ ಚೀಲಗಳ (722.04 ಲಕ್ಷ ಟನ್) ರಾಷ್ಟ್ರೀಯ ರಸಗೊಬ್ಬರ ಅಗತ್ಯಕ್ಕೆ ಪ್ರತಿಯಾಗಿ, ಸರ್ಕಾರವು ಒಟ್ಟು ಸುಮಾರು 176.79 ಕೋಟಿ ಚೀಲಗಳ (834.64 ಲಕ್ಷ ಟನ್) ಲಭ್ಯತೆಯನ್ನು ಖಚಿತಪಡಿಸಿದೆ. ಈ ಹೆಚ್ಚುವರಿ ಲಭ್ಯತೆಯು ರೈತರನ್ನು ಬೆಂಬಲಿಸುವ ಮತ್ತು ದೇಶಾದ್ಯಂತ ಅಡೆತಡೆಯಿಲ್ಲದ ಕೃಷಿ ಚಟುವಟಿಕೆಗಳನ್ನು ಕಾಯ್ದುಕೊಳ್ಳುವ ಸರ್ಕಾರದ ಬಲವಾದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

ರೈಲ್ವೇ ಅಧಿಕಾರಿಗಳು, ಬಂದರು ಅಧಿಕಾರಿಗಳು, ರಾಜ್ಯ ಸರ್ಕಾರಗಳು ಮತ್ತು ರಸಗೊಬ್ಬರ ಕಂಪನಿಗಳ ನಡುವಿನ ನಿಕಟ ಸಮನ್ವಯದಿಂದ ಈ ಸಾಧನೆ ಸಾಧ್ಯವಾಗಿದೆ. ವೇಗದ ಸಾಗಣೆಯನ್ನು ಖಚಿತಪಡಿಸಿಕೊಳ್ಳಲು ಭಾರತೀಯ ರೈಲ್ವೆಯು ರಸಗೊಬ್ಬರ ರೇಕ್‌ ಗಳಿಗೆ ಆದ್ಯತೆ ನೀಡಿತು, ಬಂದರುಗಳು ಆಮದು ಮಾಡಿಕೊಂಡ ರಸಗೊಬ್ಬರಗಳನ್ನು ತ್ವರಿತವಾಗಿ ಇಳಿಸುವುದನ್ನು ಮತ್ತು ಸುಗಮವಾಗಿ ರವಾನಿಸುವುದನ್ನು ಖಚಿತಪಡಿಸಿವೆ. ರಸಗೊಬ್ಬರಗಳು ರೈತರಿಗೆ ಸಮಯಕ್ಕೆ ಸರಿಯಾಗಿ ತಲುಪುವಂತೆ ಸರ್ಕಾರವು ಸಂಗ್ರಹಣೆ ಮತ್ತು ವಿತರಣಾ ವ್ಯವಸ್ಥೆಯನ್ನು ಬಲಪಡಿಸಿದೆ.

ಹೆಚ್ಚುವರಿಯಾಗಿ, ಸರ್ಕಾರವು ರಸಗೊಬ್ಬರ ಕಂಪನಿಗಳೊಂದಿಗೆ ನಿಯಮಿತವಾಗಿ ಪರಿಶೀಲನಾ ಸಭೆಗಳನ್ನು ನಡೆಸಿತು, ಬೇಡಿಕೆ ಮತ್ತು ಪೂರೈಕೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಿತು ಮತ್ತು ಪೂರೈಕೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಿತು. ಈ ಪೂರ್ವಭಾವಿ ಕ್ರಮಗಳು ದೇಶದ ಯಾವುದೇ ಪ್ರದೇಶದಲ್ಲಿ ರಸಗೊಬ್ಬರಗಳ ಕೊರತೆಯಾಗದಂತೆ ನೋಡಿಕೊಂಡಿವೆ.

ಈ ಸಮನ್ವಯದ ಮತ್ತು ನಿರಂತರ ಪ್ರಯತ್ನಗಳ ಪರಿಣಾಮವಾಗಿ, 2024-25ರ ಅವಧಿಯಲ್ಲಿ ದೇಶಾದ್ಯಂತ ದಾಖಲೆ ಮಟ್ಟದ ರಸಗೊಬ್ಬರ ಲಭ್ಯತೆಯನ್ನು ಸಾಧಿಸಲಾಗಿದೆ. ಇದು ರೈತರಿಗೆ ಗಮನಾರ್ಹ ಪರಿಹಾರವನ್ನು ನೀಡಿದೆ ಮತ್ತು ಕೃಷಿ ಉತ್ಪಾದನೆಯಲ್ಲಿ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡಿದೆ.

ಸರ್ಕಾರವು ಬೇಡಿಕೆಗಿಂತ ಹೆಚ್ಚಿನ ರಸಗೊಬ್ಬರ ಲಭ್ಯತೆಯನ್ನು ಖಚಿತಪಡಿಸಿದೆ (2024–25):

 

*****


(रिलीज़ आईडी: 2215466) आगंतुक पटल : 13
इस विज्ञप्ति को इन भाषाओं में पढ़ें: हिन्दी , English , Urdu , Marathi