ಇಂಧನ ಸಚಿವಾಲಯ
azadi ka amrit mahotsav

ಇಂಧನ ಸಚಿವಾಲಯದ ವರ್ಷಾಂತ್ಯದ ವಿಮರ್ಶೆ - 2025

प्रविष्टि तिथि: 16 JAN 2026 11:41AM by PIB Bengaluru

2025ನೇ ವರ್ಷವು ಭಾರತದ ಇಂಧನ ವಲಯಕ್ಕೆ ಒಂದು ಹೆಗ್ಗುರುತಿನ ಅವಧಿಯಾಗಿದ್ದು, ಇಂಧನ ಉತ್ಪಾದನೆ, ಪ್ರಸರಣ ಮತ್ತು ವಿತರಣೆಯಲ್ಲಿ ಐತಿಹಾಸಿಕ ಪ್ರಗತಿಯನ್ನು ಕಂಡಿದೆ. 242.49 ಗಿಗಾವ್ಯಾಟ್ ಗರಿಷ್ಠ ವಿದ್ಯುತ್ ಬೇಡಿಕೆಯನ್ನು ಪೂರೈಸುವುದರಿಂದ ಹಿಡಿದು 2025-26ರ ಹಣಕಾಸು ವರ್ಷದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಇಂಧನ ಕೊರತೆಯನ್ನು ಕೇವಲ ಶೇ.0.03ಕ್ಕೆ ಇಳಿಕೆ ಮಾಡುವವರೆಗೆ, ಈ ವಲಯವು ಸುಸ್ಥಿರ ಬೆಳವಣಿಗೆಗೆ ಸ್ಥಿತಿಸ್ಥಾಪಕತ್ವ ಮತ್ತು ಬದ್ಧತೆಯನ್ನು ಪ್ರದರ್ಶಿಸಿದೆ. ಇಂಧನ ಸಂರಕ್ಷಣೆ, ಗ್ರಾಹಕ ಸಬಲೀಕರಣ ಮತ್ತು ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಗಮನಾರ್ಹ ಪ್ರಗತಿಗಳು ಎಲ್ಲರಿಗೂ ವಿಶ್ವಾಸಾರ್ಹ, ಕೈಗೆಟುಕುವ ಮತ್ತು ಶುದ್ಧ ಇಂಧನವನ್ನು ಖಾತ್ರಿಪಡಿಸಿಕೊಳ್ಳಲು ಸರ್ಕಾರದ ಪ್ರಯತ್ನಗಳನ್ನು ಒತ್ತಿಹೇಳುತ್ತವೆ. ಸಾರ್ವತ್ರಿಕ ವಿದ್ಯುದೀಕರಣ, ಗ್ರಾಮೀಣ ವಿದ್ಯುತ್ ಲಭ್ಯತೆಯಲ್ಲಿ ವೇಗ ಮತ್ತು ಅತ್ಯಾಧುನಿಕ ತಂತ್ರಜ್ಞಾನಗಳ ಅಳವಡಿಕೆಯಂತಹ ತಳಮಟ್ಟದ ಉಪಕ್ರಮಗಳೊಂದಿಗೆ, ಭಾರತವು ಜಾಗತಿಕ ಇಂಧನ ನಾಯಕನಾಗುವ ಹಾದಿಯಲ್ಲಿ ದೃಢವಾಗಿ ಸಾಗಿದೆ.

ವಿದ್ಯುತ್ ಸರಬರಾಜು ಸ್ಥಾನದಲ್ಲಿ ಸುಧಾರಣೆ:

1. ದಾಖಲೆಯ ಬೇಡಿಕೆ ಈಡೇರಿಕೆ: ಭಾರತವು 2025-26ನೇ ಹಣಕಾಸು ವರ್ಷದಲ್ಲಿ 242.49 ಗಿಗಾವ್ಯಾಟ್ ಗರಿಷ್ಠ ವಿದ್ಯುತ್ ಬೇಡಿಕೆಯನ್ನು ಯಶಸ್ವಿಯಾಗಿ ಪೂರೈಸಿದೆ.

2. ವಿದ್ಯುತ್ ಕೊರತೆಯಲ್ಲಿ ತೀವ್ರ ಇಳಿಕೆ: ಉತ್ಪಾದನೆ ಮತ್ತು ಪ್ರಸರಣ ಸಾಮರ್ಥ್ಯಗಳಲ್ಲಿನ ಗಮನಾರ್ಹ ಸೇರ್ಪಡೆಗಳಿಂದ ರಾಷ್ಟ್ರೀಯ ಮಟ್ಟದಲ್ಲಿ ಇಂಧನ ಕೊರತೆಯು 2025-26ನೇ ಹಣಕಾಸು ವರ್ಷದಲ್ಲಿ ಕೇವಲ ಶೇ.0.03 ಕ್ಕೆ ಇಳಿದಿದೆ, ಇದು 2013-14ನೇ ಹಣಕಾಸು ವರ್ಷದಲ್ಲಿ ಶೇ.4.2ರಷ್ಟಿದ್ದಿದು ಪ್ರಮುಖ ಸುಧಾರಣೆಯಾಗಿದೆ.

3. ತಲಾ ವಿದ್ಯುತ್ ಬಳಕೆಯಲ್ಲಿ ಏರಿಕೆ: ಭಾರತದಲ್ಲಿ ತಲಾ ವಿದ್ಯುತ್ ಬಳಕೆ 2024-25ರಲ್ಲಿ 1460 kWh ಗೆ ಏರಿದೆ, ಇದು 2013-14ರಲ್ಲಿ 957 kWh ನಿಂದ ಶೇ.52.6 ಹೆಚ್ಚಳ (503 kWh) ಎಂದು ಗುರುತಿಸಲಾಗಿದೆ.

4. ಸುಧಾರಿತ ವಿದ್ಯುತ್ ಲಭ್ಯತೆ: ಗ್ರಾಮೀಣ ಪ್ರದೇಶಗಳಲ್ಲಿ ಸರಾಸರಿ ವಿದ್ಯುತ್ ಲಭ್ಯತೆಯು 2014 ರಲ್ಲಿ 12.5 ಗಂಟೆಗಳಿಂದ 22.6 ಗಂಟೆಗಳಿಗೆ ಹೆಚ್ಚಾಗಿದೆ, ಆದರೆ ನಗರ ಪ್ರದೇಶಗಳು ಈಗ 2014 ರಲ್ಲಿ 22.1 ಗಂಟೆಗಳಿಗೆ ಹೋಲಿಸಿದರೆ 23.4 ಗಂಟೆಗಳವರೆಗೆ ವಿದ್ಯುತ್ ಸರಬರಾಜನ್ನು ಅನುಭವಿಸುತ್ತಿವೆ, ಇದು ವಿದ್ಯುತ್ ಸೇವೆಗಳ ವಿಶ್ವಾಸಾರ್ಹತೆ ಮತ್ತು ವ್ಯಾಪ್ತಿಯಲ್ಲಿ ಗಣನೀಯ ಸುಧಾರಣೆಗಳನ್ನು ಪ್ರತಿಬಿಂಬಿಸುತ್ತದೆ.

ಉತ್ಪಾದನೆ:

5. ಸ್ಥಾಪಿತ ಸಾಮರ್ಥ್ಯದಲ್ಲಿ ಗಮನಾರ್ಹ ಪ್ರಗತಿ: ಭಾರತದ ಒಟ್ಟು ಸ್ಥಾಪಿತ ವಿದ್ಯುತ್ ಉತ್ಪಾದನಾ ಸಾಮರ್ಥ್ಯವು ಶೇ.104.4 ರಷ್ಟು ಏರಿಕೆಯಾಗಿದ್ದು,2014ರ ಮಾರ್ಚ್ 31ರ ವೇಳೆಗೆ 249 ಗಿಗಾವ್ಯಾಟ್ ನಿಂದ 2025ರ ನವೆಂಬರ್ 30 ರವೇಳೆಗೆ 509.743 ಗಿಗಾವ್ಯಾಟ್ ಗೆ ಹೆಚ್ಚಾಗಿದೆ. 2025ರ ಜನವರಿ-ನವೆಂಬರ್  ಅವಧಿಯಲ್ಲಿ ಉತ್ಪಾದನಾ ಸಾಮರ್ಥ್ಯದ ಸೇರ್ಪಡೆ 55.57 ಗಿಗಾವ್ಯಾಟ್ ಆಗಿದೆ.

6. ನವೀಕರಿಸಬಹುದಾದ ಇಂಧನದಲ್ಲಿ ಪ್ರಮುಖ ವಿಸ್ತರಣೆ: 2014ರ ಏಪ್ರಿಲ್ ನಿಂದ ದೊಡ್ಡ ಜಲವಿದ್ಯುತ್ ಸೇರಿದಂತೆ 178 GW ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಸೇರ್ಪಡೆ ಮಾಡಲಾಗಿದೆ. ಇದರಲ್ಲಿ 130 GW ಸೌರಶಕ್ತಿ, 33 GW ಪವನಶಕ್ತಿ, 3.4 GW ಬಯೋಮಾಸ್, 1.35 GW ಸಣ್ಣ ಜಲವಿದ್ಯುತ್ ಮತ್ತು ಸರಿಸುಮಾರು 9.9 GW ದೊಡ್ಡ ಜಲವಿದ್ಯುತ್ ಉತ್ಪಾದನಾ ಸಾಮರ್ಥ್ಯ ಸೇರಿವೆ, ಇದು ಶುದ್ಧ ಇಂಧನಕ್ಕೆ ಭಾರತದ ದೃಢ ಬದ್ಧತೆಯನ್ನು ಪ್ರದರ್ಶಿಸುತ್ತದೆ.

7. ಉಷ್ಣ ವಿದ್ಯುತ್ ಯೋಜನೆಗಳ ಅನುಮೋದನೆ: ಭಾರತದ ವೇಗವಾಗಿ ವಿಸ್ತರಿಸುತ್ತಿರುವ ಆರ್ಥಿಕತೆಯ ಯೋಜಿತ ವಿದ್ಯುತ್ ಬೇಡಿಕೆಯನ್ನು ಪೂರೈಸಲು 2025-26ನೇ ಹಣಕಾಸು ವರ್ಷದಲ್ಲಿ (30.11.2025 ರವರೆಗೆ) 13.32 GW ಹೊಸ ಕಲ್ಲಿದ್ದಲು ಆಧಾರಿತ ಉಷ್ಣ ಸಾಮರ್ಥ್ಯದ ಯೋಜನೆಗಳನ್ನು ಅನುಮೋದನೆ ನೀಡಲಾಗಿದೆ. ಅಲ್ಲದೆ, 2025-26ನೇ ಹಣಕಾಸು ವರ್ಷದಲ್ಲಿ (30.11.2025 ರವರೆಗೆ) 7.21 GW ಸಾಮರ್ಥ್ಯವನ್ನು ನಿಯೋಜಿಸಲಾಗಿದೆ. ಕಲ್ಲಿದ್ದಲು ಮತ್ತು ಲಿಗ್ನೈಟ್ ಆಧಾರಿತ ಉಷ್ಣ ಸ್ಥಾವರಗಳ ಒಟ್ಟು ಸ್ಥಾಪಿತ ಸಾಮರ್ಥ್ಯವು ಈಗ 226.23 GW ಆಗಿದೆ. ಹೆಚ್ಚುವರಿ 40.35 GW ಸಾಮರ್ಥ್ಯವು ನಿರ್ಮಾಣ ಹಂತದಲ್ಲಿದೆ, 2025-26ನೇ ಹಣಕಾಸು ವರ್ಷದಲ್ಲಿ 7.03 GW ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ. ಇನ್ನೂ 24.02 GW ಸಾಮರ್ಥ್ಯವು ಯೋಜನೆ, ಅನುಮತಿಗಳು ಮತ್ತು ಬಿಡ್ಡಿಂಗ್‌ನ ವಿವಿಧ ಹಂತಗಳಲ್ಲಿದೆ.

8. ಕಲ್ಲಿದ್ದಲು ದಾಸ್ತಾನು ಸ್ಥಿತಿಗತಿ: 2025ರ ಮಾರ್ಚ್ ವೇಳೆಗೆ ದೇಶೀಯ ಕಲ್ಲಿದ್ದಲು ಆಧಾರಿತ (ಡಿಸಿಬಿ) ವಿದ್ಯುತ್ ಸ್ಥಾವರಗಳು 55.48 MT ಕಲ್ಲಿದ್ದಲು ದಾಸ್ತಾನು ಹೊಂದಿದ್ದವು. 2025ರ ಡಿಸೆಂಬರ್ 21ರ ವೇಳೆಗೆ ಈ ಸ್ಥಾವರಗಳು 51.7 MT ಕಲ್ಲಿದ್ದಲನ್ನು ಹೊಂದಿದ್ದು, ಅದನ್ನು ಮಾರ್ಚ್ 2026 ರ ವೇಳೆಗೆ 66 MT ಗೆ ಹೆಚ್ಚಿಸುವ ಗುರಿಯನ್ನು ಹೊಂದಿವೆ. 2026 ರ ಹಣಕಾಸು ವರ್ಷದ Q1 ಮತ್ತು Q2 ರಲ್ಲಿ ಸುಸ್ಥಿರ ಕಲ್ಲಿದ್ದಲು ಪೂರೈಕೆಯು ಜೂನ್ 2025 ರಲ್ಲಿ 242.49 GW ನ ಗರಿಷ್ಠ ಬೇಡಿಕೆ ಪೂರೈಸುವುದನ್ನು ಖಾತ್ರಿಪಡಿಸಿತು. ಸುಧಾರಿತ ದೇಶೀಯ ಕಲ್ಲಿದ್ದಲು ಲಭ್ಯತೆಯೊಂದಿಗೆ ವಿದ್ಯುತ್ ಸಚಿವಾಲಯವು 2024ರ ಅಕ್ಟೋಬರ್ 15 ರ ನಂತರ ಆಮದು ಮಾಡಿಕೊಂಡ ಕಲ್ಲಿದ್ದಲನ್ನು ಮಿಶ್ರಣ ಮಾಡುವ ತನ್ನ ಸಲಹೆಯನ್ನು ನಿಲ್ಲಿಸಿತು.

9. ಶಕ್ತಿ ನೀತಿಯ ಪರಿಷ್ಕರಣೆ: ಆರ್ಥಿಕ ವ್ಯವಹಾರಗಳ ಕುರಿತಾದ ಸಂಪುಟ ಸಮಿತಿಯು 2025ರ ಮೇ ತಿಂಗಳಲ್ಲಿ ವಿದ್ಯುತ್ ವಲಯಕ್ಕೆ ಕಲ್ಲಿದ್ದಲು ಹಂಚಿಕೆಗಾಗಿ ಪರಿಷ್ಕೃತ ಶಕ್ತಿ (ಭಾರತದಲ್ಲಿ ಕೊಯಾಲವನ್ನು ಪಾರದರ್ಶಕವಾಗಿ ಬಳಸಿಕೊಳ್ಳುವ ಮತ್ತು ಹಂಚಿಕೆ ಮಾಡುವ ಯೋಜನೆ) ನೀತಿಯನ್ನು ಅನುಮೋದಿಸಿತು. ಇದು ವಿದ್ಯುತ್ ವಲಯಕ್ಕೆ ಕಲ್ಲಿದ್ದಲು ಸಂಪರ್ಕ ಕಾರ್ಯವಿಧಾನಗಳನ್ನು ಸುಗಮಗೊಳಿಸಿತು. ಪರಿಷ್ಕೃತ ಶಕ್ತಿ ನೀತಿಯ ಜಾರಿಯೊಂದಿಗೆ ಕಲ್ಲಿದ್ದಲು ಹಂಚಿಕೆಗಾಗಿ ಶಕ್ತಿ ನೀತಿಯ ಅಸ್ತಿತ್ವದಲ್ಲಿರುವ ಎಂಟು ಪ್ಯಾರಾಗಳನ್ನು ಕೇವಲ ಎರಡು ಏಕಗವಾಕ್ಷಿಗಳಿಗೆ ಮ್ಯಾಪ್ ಮಾಡಲಾಗಿದೆ. ಸುಲಭ ವ್ಯಾಪಾರ ಮಾಡುವುದು, ಕಲ್ಲಿದ್ದಲು ಲಭ್ಯತೆವನ್ನು ಹೆಚ್ಚಿಸುವುದು, ಕಾರ್ಯಾಚರಣೆಯ ಸರಳತೆ ಮತ್ತು ಸ್ಪರ್ಧೆಯ ಉತ್ಸಾಹದಲ್ಲಿ ಇವುಗಳನ್ನು ಒಳಗೊಂಡಿದೆ. ಇದು ಉಷ್ಣ ಸಾಮರ್ಥ್ಯದ ಅತ್ಯುತ್ತಮ ಬಳಕೆಯನ್ನು ಖಾತ್ರಿಪಡಿಸುತ್ತದೆ, ಕೈಗೆಟುಕುವ ಇಂಧನವನ್ನು ಉತ್ತೇಜಿಸುತ್ತದೆ, ಆಮದು ಅವಲಂಬನೆಯನ್ನು ತಗ್ಗಿಸುತ್ತದೆ ಮತ್ತು ಭಾರತದ ಇಂಧನ ಭದ್ರತೆಯನ್ನು ಬಲಪಡಿಸುತ್ತದೆ.

10. ಜಲ ವಿದ್ಯುತ್ ಯೋಜನೆಗಳು. 2025ರ ಆಗಸ್ಟ್ ನಲ್ಲಿ ಕೇಂದ್ರ ಸರ್ಕಾರವು ಅರುಣಾಚಲ ಪ್ರದೇಶದಲ್ಲಿ ಟಾಟೊ-II ಜಲ ವಿದ್ಯುತ್ ಯೋಜನೆಯನ್ನು (700 MW) ಅನುಮೋದಿಸಿದೆ. ಈ ಯೋಜನೆಯು 72 ತಿಂಗಳಲ್ಲಿ 8146.21 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಳ್ಳುತ್ತದೆ. ಇದಲ್ಲದೆ, NHPC 15.04.2025 ರಂದು ಪರ್ಬತಿ-II ಜಲ ವಿದ್ಯುತ್ ಯೋಜನೆಯನ್ನು (800 MW) ಸಂಪೂರ್ಣವಾಗಿ ನಿಯೋಜಿಸಿದೆ.

11. ಪಂಪ್ ಶೇಖರಣಾ ಯೋಜನೆಗಳು (PSP): ಭಾರತವು ಸುಮಾರು 258 GW PSP ಗಳ ಸಾಮರ್ಥ್ಯವನ್ನು ಹೊಂದಿದ್ದು, ಈವರೆಗೆ ಸುಮಾರು 7 GW (ಶೇ.2.7ರಷ್ಟು) ಅಭಿವೃದ್ಧಿಪಡಿಸಲಾಗಿದೆ. 2031-32 ರ ವೇಳೆಗೆ 57 GW PSP ಸಾಮರ್ಥ್ಯವನ್ನು ಸೇರಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು ಸರ್ಕಾರ ನಿಗದಿಪಡಿಸಿದೆ, ಅದರಲ್ಲಿ 12 GW ನಿರ್ಮಾಣ ಹಂತದಲ್ಲಿದೆ ಮತ್ತು ಉಳಿದವು ಅಭಿವೃದ್ಧಿ ಹಂತದಲ್ಲಿದೆ.

12. ಬ್ಯಾಟರಿಯಲ್ಲಿ ಇಂಧನ ಸಂಗ್ರಹ ವ್ಯವಸ್ಥೆ (BESS): ಬಿಇಎಸ್ ಎಸ್ ಅಭಿವೃದ್ಧಿಗಾಗಿ ಕಾರ್ಯಸಾಧ್ಯತಾ ಅಂತರ ನಿಧಿ (VGF) ಯೋಜನೆಗಳ ಅಡಿಯಲ್ಲಿ, 43,220 MWh ಸಾಮರ್ಥ್ಯವನ್ನು ಸೇರ್ಪಡೆ ಮಾಡುವ ಗುರಿಯನ್ನು ಹೊಂದಿದೆ.

ಪ್ರಸರಣೆ:

13. ರಾಷ್ಟ್ರೀಯ ವಿದ್ಯುತ್ ಯೋಜನೆ: 2032ರ ವೇಳೆಗೆ 458 ಗಿಗಾವ್ಯಾಟ್ ಗರಿಷ್ಠ ಬೇಡಿಕೆಯನ್ನು ಪೂರೈಸಲು ಕೇಂದ್ರ ಮತ್ತು ರಾಜ್ಯ ಪ್ರಸರಣ ವ್ಯವಸ್ಥೆಗಳಿಗಾಗಿ ಭಾರತ ಸರ್ಕಾರ 2023 ರಿಂದ 2032 ರವರೆಗಿನ ರಾಷ್ಟ್ರೀಯ ವಿದ್ಯುತ್ ಯೋಜನೆಯನ್ನು ಅಂತಿಮಗೊಳಿಸಿದೆ. ಯೋಜನೆಯ ಒಟ್ಟು ವೆಚ್ಚ 9.16 ಲಕ್ಷ ಕೋಟಿ ರೂಪಾಯಿ. ಹಿಂದಿನ ಯೋಜನೆ 2017-22 ರ ಅಡಿಯಲ್ಲಿ, ಸುಮಾರು 17,700 ಸರ್ಕ್ಯೂಟ್ ಕಿಲೋಮೀಟರ್ (ckm) ಮಾರ್ಗಗಳು ಮತ್ತು 73 GVA ರೂಪಾಂತರ ಸಾಮರ್ಥ್ಯವನ್ನು ವಾರ್ಷಿಕವಾಗಿ ಸೇರಿಸಲಾಯಿತು. ಹೊಸ ಯೋಜನೆಯಡಿಯಲ್ಲಿ ದೇಶದಲ್ಲಿ ಪ್ರಸರಣ ಜಾಲವನ್ನು 2025ರ ನವೆಂಬರ್ 2025 ನಲ್ಲಿ 4.98 ಲಕ್ಷ ckm ನಿಂದ 2032 ರಲ್ಲಿ 6.48 ಲಕ್ಷ ckm ಗೆ ವಿಸ್ತರಿಸಲಾಗುವುದು. ಅದೇ ಅವಧಿಯಲ್ಲಿ ಪರಿವರ್ತನಾ ಸಾಮರ್ಥ್ಯವು 1,398 ಗಿಗಾ ವೋಲ್ಟ್ ಆಂಪಿಯರ್ (GVA) ನಿಂದ 2,345 GVA ಗೆ ಹೆಚ್ಚಾಗುತ್ತದೆ. ಅಂತರ-ಪ್ರಾದೇಶಿಕ ವರ್ಗಾವಣೆ ಸಾಮರ್ಥ್ಯವು 120 GW ನಿಂದ 168 GW ಗೆ ಹೆಚ್ಚಾಗುತ್ತದೆ. ಈ ಯೋಜನೆಯು 220 kV ಮತ್ತು ಅದಕ್ಕಿಂತ ಹೆಚ್ಚಿನ ಜಾಲವನ್ನು ಒಳಗೊಂಡಿದೆ. ಈ ಯೋಜನೆಯು ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಯನ್ನು ಪೂರೈಸಲು, ನವೀಕರಿಸಬಹುದಾದ ಇಂಧನ ಏಕೀಕರಣ ಮತ್ತು ಗ್ರಿಡ್‌ಗೆ ಹಸಿರು ಹೈಡ್ರೋಜನ್ ಲೋಡ್‌ಗಳನ್ನು ಸುಗಮಗೊಳಿಸಲು ಸಹಾಯ ಮಾಡುತ್ತದೆ.

14. 25.8 GW ISTS ಸಾಮರ್ಥ್ಯದ ಅನುಮೋದನೆ: 2025ರ ಜನವರಿ 25 ರಿಂದ ನವೆಂಬರ್ 25 ರವರೆಗೆ 38,849 ಕೋಟಿ ರೂ. ವೆಚ್ಚದ 25.8 ಗಿಗಾ ವ್ಯಾಟ್‌ನ ನವೀಕರಿಸಬಹುದಾದ ಇಂಧನ ಸಂಪರ್ಕಿತ ಅಂತರ ರಾಜ್ಯ ಪ್ರಸರಣ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. 2030ರ ವೇಳೆಗೆ 280 GW ವೇರಿಯಬಲ್ ನವೀಕರಿಸಬಹುದಾದ ಇಂಧನ (ವಿಆರ್ ಇ) ಅನ್ನು ಅಂತರ ರಾಜ್ಯ ಪ್ರಸರಣ ವ್ಯವಸ್ಥೆ (ISTS) ಗೆ ಸಂಪರ್ಕಿಸಲು ಸುಮಾರು 335 GW ಪ್ರಸರಣ ಜಾಲದ ಅಗತ್ಯವಿದೆ. ಇದರಲ್ಲಿ 48 ಗಿಗಾವ್ಯಾಟ್  ಈಗಾಗಲೇ ಪೂರ್ಣಗೊಂಡಿದೆ, 172 GW ನಿರ್ಮಾಣ ಹಂತದಲ್ಲಿದೆ ಮತ್ತು 18.5 GW ಬಿಡ್ಡಿಂಗ್ ಹಂತದಲ್ಲಿದೆ. ಉಳಿದ 96.5 GW ಅನ್ನು ಸರಿಯಾದ ಸಮಯದಲ್ಲಿ ಅನುಮೋದಿಸಲಾಗುವುದು.

15. ಪ್ರಸರಣ ವ್ಯವಸ್ಥೆಯಲ್ಲಿ ಸುಧಾರಣೆ: 2025 ರಲ್ಲಿ 6,511 ckm ಪ್ರಸರಣ ಮಾರ್ಗಗಳು (220 kV ಮತ್ತು ಅದಕ್ಕಿಂತ ಹೆಚ್ಚಿನ), 1,00,368 MVA ಪರಿವರ್ತನ ಸಾಮರ್ಥ್ಯ (220 kV ಮತ್ತು ಅದಕ್ಕಿಂತ ಹೆಚ್ಚಿನ) ಮತ್ತು 1600 MW ಅಂತರ-ಪ್ರಾದೇಶಿಕ ವರ್ಗಾವಣೆ ಸಾಮರ್ಥ್ಯವನ್ನು ಸೇರ್ಪಡೆ ಮಾಡಲಾಗಿದೆ.

16. ರೈಟ್ ಆಫ್ ವೇ (RoW) ಪರಿಹಾರ ಮಾರ್ಗಸೂಚಿಗಳು: 2030ರ ವೇಳೆಗೆ 500 GW ನವೀಕರಿಸಬಹುದಾದ ಇಂಧನವನ್ನು ಸ್ಥಳಾಂತರಿಸಲು ವಿದ್ಯುತ್ ಪ್ರಸರಣ ಮೂಲಸೌಕರ್ಯದ ಸಕಾಲಿಕ ಅಭಿವೃದ್ಧಿಯನ್ನು ಖಾತ್ರಿಪಡಿಸಿಕೊಳ್ಳಲು ಇಂಧನ ಸಚಿವಾಲಯವು 2024ರ ಜೂನ್ ನಲ್ಲಿ ರೈಟ್ ಆಫ್ ವೇ (RoW) ಮಾರ್ಗಸೂಚಿಗಳನ್ನು ಪರಿಷ್ಕರಿಸಿತು, ಪರಿಹಾರವನ್ನು ಭೂಮಿಯ ಮಾರುಕಟ್ಟೆ ಮೌಲ್ಯಕ್ಕೆ ಜೋಡಿಸಿತು. ಟವರ್ ಬೇಸ್ ಪ್ರದೇಶಕ್ಕೆ ಪರಿಹಾರವನ್ನು ಭೂ ಮೌಲ್ಯದ ಶೇ.85 ರಿಂದ ಶೇ.200 ಕ್ಕೆ ಹೆಚ್ಚಿಸಲಾಗಿದೆ. ಆರ್ ಒಡಬ್ಲೂ ಕಾರಿಡಾರ್‌ಗೆ ಪರಿಹಾರವನ್ನು ಭೂ ಮೌಲ್ಯದ ಶೇ.15 ರಿಂದ ಶೇ.30 ಕ್ಕೆ ಹೆಚ್ಚಿಸಲಾಗಿದೆ.

ಅಲ್ಲದೆ, ಇಂಧನ ಸಚಿವಾಲಯವು 21.03.2025 ರಂದು RoW ಗೆ ಸಂಬಂಧಿಸಿದಂತೆ ಪರಿಹಾರ ಪಾವತಿಗಾಗಿ ಪೂರಕ ಮಾರ್ಗಸೂಚಿಗಳನ್ನು ಹೊರಡಿಸಿತು. ಈ ಪೂರಕ ಮಾರ್ಗಸೂಚಿಗಳು RoW ಪರಿಹಾರ ಪಾವತಿಗಾಗಿ ಸ್ವತಂತ್ರ ಭೂ ಮೌಲ್ಯಮಾಪಕರ ಮೌಲ್ಯಮಾಪನದ ಆಧಾರದ ಮೇಲೆ ಮಾರುಕಟ್ಟೆ ದರ ಸಮಿತಿ (MRC) ನಿರ್ಧರಿಸುವ ಭೂಮಿಯ ಮಾರುಕಟ್ಟೆ ದರದ ಮೌಲ್ಯಮಾಪನವನ್ನು ಒದಗಿಸುತ್ತದೆ. ISTS ಲೈನ್‌ಗಳಿಗೆ RoW ಕಾರಿಡಾರ್‌ಗೆ ಪರಿಹಾರದ ಮೊತ್ತವನ್ನು ಗ್ರಾಮೀಣ ಪ್ರದೇಶಗಳಲ್ಲಿ ಭೂ ಮೌಲ್ಯದ ಶೇ.30ರಷ್ಟು, ರಾಜ್ಯ ಸರ್ಕಾರವು ಸೂಚಿಸಿದ ಪುರಸಭೆ ನಿಗಮಗಳು ಮತ್ತು ಮಹಾನಗರ ಪ್ರದೇಶಗಳಲ್ಲಿ ಭೂ ಮೌಲ್ಯದ ಶೇ.60ರಷ್ಟು ಮತ್ತು ಪುರಸಭೆಗಳು, ನಗರ ಪಂಚಾಯತ್‌ಗಳು ಮತ್ತು ರಾಜ್ಯ ಸರ್ಕಾರವು ಸೂಚಿಸಿದ ಎಲ್ಲಾ ಇತರ ನಗರ ಯೋಜನಾ ಪ್ರದೇಶಗಳಿಗೆ ಭೂ ಮೌಲ್ಯದ ಶೇ.45 ರಂತೆ ಪರಿಷ್ಕರಿಸಲಾಗಿದೆ

ವಿತರಣೆ:

17. ಪರಿಷ್ಕೃತ ವಿತರಣಾ ವಲಯ ಯೋಜನೆ (ಆರ್ಡಿಎಸ್ ಎಸ್): ಡಿಸ್ಕಾಮ್‌ಗಳ ಕಾರ್ಯಾಚರಣೆಯ ದಕ್ಷತೆ ಮತ್ತು ಆರ್ಥಿಕ ಸುಸ್ಥಿರತೆಯನ್ನು ಸುಧಾರಿಸುವ ಗುರಿಯನ್ನು ಹೊಂದಿರುವ ಆರ್‌ ಡಿಎಸ್ ಎಸ್ ಅಡಿಯಲ್ಲಿ 1,30,671 ಕೋಟಿ ರೂ.ವೆಚ್ಚದಲ್ಲಿ 19,79,30,131 ಪ್ರಿಪೇಯ್ಡ್ ಸ್ಮಾರ್ಟ್ ಮೀಟರ್‌ಗಳು, 52,52,692 DT ಮೀಟರ್‌ಗಳು ಮತ್ತು 2,05,475 ಫೀಡರ್ ಮೀಟರ್‌ಗಳನ್ನು ಮಂಜೂರು ಮಾಡಲಾಗಿದೆ. 1,52,854 ಕೋಟಿ ರೂ.ನಷ್ಟ ಕಡಿತ ಕಾಮಗಾರಿಗಳನ್ನು ಮಂಜೂರು ಮಾಡಲಾಗಿದೆ ಮತ್ತು ಆರ್‌ ಡಿಎಸ್ ಎಸ್ ಅಡಿಯಲ್ಲಿ 38,187 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. 31.12.2025 ರ ವೇಳೆಗೆ ಆರ್‌ ಡಿಎಸ್ ಎಸ್ ಅಡಿಯಲ್ಲಿ 3.76 ಗ್ರಾಹಕ ಮೀಟರ್‌ಗಳು, 12.56 DT ಮೀಟರ್‌ಗಳು ಮತ್ತು 1.58 ಫೀಡರ್ ಮೀಟರ್‌ಗಳನ್ನು ಸ್ಥಾಪಿಸಲಾಗಿದೆ. ಯೋಜನೆಯಡಿಯಲ್ಲಿ ತೆಗೆದುಕೊಂಡ ಸುಧಾರಣಾ ಕ್ರಮಗಳ ಪರಿಣಾಮವಾಗಿ. AT&C ನಷ್ಟಗಳು ಶೇ.16.16% (ತಾತ್ಕಾಲಿಕ) ಕ್ಕೆ ಇಳಿದಿವೆ ಮತ್ತು ACS-ARR ಅಂತರವು ರೂ.ಗೆ ಇಳಿದಿದೆ. 2021 ರ ಹಣಕಾಸು ವರ್ಷದಲ್ಲಿ ಕ್ರಮವಾಗಿ 21.91% ಮತ್ತು ರೂ. 0.69/kWh ನಿಂದ 2025 ರ ಹಣಕಾಸು ವರ್ಷದಲ್ಲಿ 0.11/kWh (ಅಂದಾಜು) ಇಳಿಕೆಯಾಗಿದೆ.

18. ಪಿಎಂ-ಜನ್ ಮನ್ (ಪ್ರಧಾನ ಮಂತ್ರಿ ಜನಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ) ಅಡಿಯಲ್ಲಿ ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪುಗಳಿಂದ (PVTGs) ಗುರುತಿಸಲಾದ ಎಲ್ಲಾ ಮನೆಗಳು, DA-JGUA (ಧರ್ತಿ ಆಬಾ ಜನಜಾತಿಯಾ ಗ್ರಾಮ ಉತ್ಕರ್ಷ್ ಅಭಿಯಾನ) ಅಡಿಯಲ್ಲಿ ಬುಡಕಟ್ಟು ಮನೆಗಳು ಮತ್ತು ಪ್ರಧಾನ ಮಂತ್ರಿ ಅನುಶುಚಿತ್ ಜಾತಿ ಅಭ್ಯುದಯ ಯೋಜನೆ (ಪಿಎಂ-ಎಜೆಎವೈ) ಅಡಿಯಲ್ಲಿ ಗುರುತಿಸಲಾದ ಮನೆಗಳಿಗೆ RDSS ಅಡಿಯಲ್ಲಿ ಆನ್-ಗ್ರಿಡ್ ವಿದ್ಯುತ್ ಸಂಪರ್ಕಗಳನ್ನು ಒದಗಿಸಲಾಗುತ್ತಿದೆ. ಈವರೆಗೆ ಪಿಎಂ-ಜನ್ ಮನ್ ಮತ್ತು DA-JGUA ಉಪಕ್ರಮದ ಅಡಿಯಲ್ಲಿ ಗುರುತಿಸಲಾದ ಸಾರ್ವಜನಿಕ ಸ್ಥಳಗಳ ಜೊತೆಗೆ RDSS ಅಡಿಯಲ್ಲಿ 13,65,139 ಮನೆಗಳ ವಿದ್ಯುದ್ದೀಕರಣಕ್ಕಾಗಿ ಒಟ್ಟು 6,522 ಕೋಟಿ ರೂ. ಮಂಜೂರು ಮಾಡಲಾಗಿದೆ

ಇಂಧನ ಸಂರಕ್ಷಣೆ ಮತ್ತು ದಕ್ಷತೆ:

19. ಭಾರತೀಯ ಇಂಗಾಲ ಮಾರುಕಟ್ಟೆ: ಇಂಧನ ಸಚಿವಾಲಯವು ಕಾರ್ಬನ್ ಕ್ರೆಡಿಟ್ ಟ್ರೇಡಿಂಗ್ ಸ್ಕೀಮ್ ಅನ್ನು ಸೂಚಿಸಿದೆ, ಇದು ಕೈಗಾರಿಕೆಗಳಿಗೆ ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ತಗ್ಗಿಸಲು ಮತ್ತು ಇಂಗಾಲದ ಕ್ರೆಡಿಟ್ ಗಳನ್ನು ಗಳಿಸಲು ಅಧಿಕಾರ ನೀಡುತ್ತದೆ. ಈ ಉಪಕ್ರಮವು ಪರಿವರ್ತಕ ತಂತ್ರಜ್ಞಾನಗಳಲ್ಲಿ ಹೂಡಿಕೆಗಳನ್ನು ಉತ್ತೇಜಿಸುತ್ತದೆ, ಭಾರತವನ್ನು ಜಾಗತಿಕ ಹಸಿರು ಹಣಕಾಸಿನಲ್ಲಿ ನಾಯಕನನ್ನಾಗಿ ಮಾಡುತ್ತದೆ. ಸಿಸಿಟಿಎಸ್ ನ ಆಯಾಮವು ವಿಶಾಲವಾಗಿ ಎರಡು ಕಾರ್ಯವಿಧಾನಗಳನ್ನು ಒಳಗೊಂಡಿದೆ - ಎ.) ಅನುಸರಣೆ ಮತ್ತು ಬಿ.) ಆಫ್‌ಸೆಟ್.

ಎ. ಅನುಸರಣೆ ಕಾರ್ಯವಿಧಾನದ ಅಡಿಯಲ್ಲಿ ಬಾಧ್ಯತೆ ಹೊಂದಿರುವ ಘಟಕಗಳು ಕೇಂದ್ರ ಸರ್ಕಾರವು ನಿಗದಿಪಡಿಸಿದ ಹಸಿರುಮನೆ ಹೊರಸೂಸುವಿಕೆ ತೀವ್ರತೆ (GEI) ಗುರಿಗಳನ್ನು ಅನುಸರಿಸಬೇಕು. ಅಲ್ಲದೆ ತಮ್ಮ ನಿಗದಿತ ಮಾನದಂಡಗಳಿಗಿಂತ ಕಡಿಮೆ GHG ಹೊರಸೂಸುವಿಕೆಯ ತೀವ್ರತೆಯನ್ನು ಕಡಿಮೆ ಮಾಡುವ ಬಾಧ್ಯತೆ ಹೊಂದಿರುವ ಘಟಕಗಳಿಗೆ ಕಾರ್ಬನ್ ಕ್ರೆಡಿಟ್ ಪ್ರಮಾಣಪತ್ರಗಳನ್ನು (ಸಿಸಿಸಿಗಳು) ನೀಡಲಾಗುತ್ತದೆ, ಆದರೆ ತಮ್ಮ ಗುರಿ ಜಿಎಚ್ ಜಿ ಹೊರಸೂಸುವಿಕೆಯ ತೀವ್ರತೆಯನ್ನು ಪೂರೈಸಲು ಸಾಧ್ಯವಾಗದ ಘಟಕಗಳು ಭಾರತೀಯ ಇಂಗಾಲದ ಮಾರುಕಟ್ಟೆಯಿಂದ ಸಿಸಿಸಿ ಗಳನ್ನು ಖರೀದಿಸುವ ಮೂಲಕ ತಮ್ಮ ಕೊರತೆಯನ್ನು ಪೂರೈಸಬಹುದು. ಅಲ್ಯೂಮಿನಿಯಂ, ಸಿಮೆಂಟ್, ಕ್ಲೋರ್-ಕ್ಷಾರ ಮತ್ತು ತಿರುಳು ಮತ್ತು ಕಾಗದ ಎಂಬ ನಾಲ್ಕು ವಲಯಗಳಿಗೆ ಹಸಿರುಮನೆ ಅನಿಲ ಹೊರಸೂಸುವಿಕೆ ತೀವ್ರತೆ (GEI) ಗುರಿ ಅಧಿಸೂಚನೆಯನ್ನು 282 ಬಾಧ್ಯತೆ ಹೊಂದಿರುವ ಘಟಕಗಳನ್ನು ಒಳಗೊಂಡಂತೆ ಕೇಂದ್ರ ಸರ್ಕಾರವು ಅಕ್ಟೋಬರ್ 2025 ರಲ್ಲಿ ಅಧಿಸೂಚನೆ ಹೊರಡಿಸಿತು.

ಬಿ. ಸ್ವಯಂಪ್ರೇರಿತ ಯೋಜನೆ ಆಧಾರಿತ ಮೂಲ ಮತ್ತು ಸಾಲ ಕಾರ್ಯವಿಧಾನವಾದ ಆಫ್‌ಸೆಟ್ ಕಾರ್ಯವಿಧಾನದ ಅಡಿಯಲ್ಲಿ, ಬಾಧ್ಯತೆ ಇಲ್ಲದ ಘಟಕಗಳು ಇಂಗಾಲದ ಕ್ರೆಡಿಟ್ ಪ್ರಮಾಣಪತ್ರಗಳನ್ನು ನೀಡುವುದಕ್ಕಾಗಿ GHG ಹೊರಸೂಸುವಿಕೆ ಕಡಿತ ಅಥವಾ ತೆಗೆದುಹಾಕುವಿಕೆ ಅಥವಾ ತಪ್ಪಿಸಲು ತಮ್ಮ ಯೋಜನೆಗಳನ್ನು ನೋಂದಾಯಿಸಿಕೊಳ್ಳಬಹುದು. ಈ ಕಾರ್ಯವಿಧಾನವು ದೇಶವು ಅನುಸರಣೆ ಕಾರ್ಯವಿಧಾನದ ಅಡಿಯಲ್ಲಿ ಒಳಗೊಳ್ಳದ ವಲಯಗಳಿಂದ ತಗ್ಗಿಸುವಿಕೆಯನ್ನು ಪಡೆಯಲು ಅನುವು ಮಾಡಿಕೊಡುತ್ತದೆ ಮತ್ತು ಅಂತಹ ವಲಯಗಳಲ್ಲಿ ಕ್ರಮಗಳನ್ನು ಉತ್ತೇಜಿಸುತ್ತದೆ. ಆಫ್‌ಸೆಟ್ ಕಾರ್ಯವಿಧಾನದ ಅಡಿಯಲ್ಲಿ, 9 ವಿಧಾನಗಳು ಮತ್ತು ವಿವರವಾದ ಕಾರ್ಯವಿಧಾನಗಳನ್ನು ಪ್ರಕಟಿಸಲಾಗಿದೆ.

20. ಮಾನದಂಡಗಳು ಮತ್ತು ಲೇಬಲಿಂಗ್ ಕಾರ್ಯಕ್ರಮ: ಅಪ್ಲಯನ್ಸ್‌ ವಲಯದಲ್ಲಿ, ಬಿಇಇ ಯ ಮಾನದಂಡಗಳು ಮತ್ತು ಲೇಬಲಿಂಗ್ (ಎಸ್&ಎಲ್) ಕಾರ್ಯಕ್ರಮವು ಗ್ರಾಹಕರಿಗೆ ಇಂಧನ ಕಡಿಮೆ ಬಳಸುವ ಉಪಕರಣಗಳು ಮತ್ತು ಸಾಧನಗಳ ಬಗ್ಗೆ ತಿಳುವಳಿಕೆಯುಳ್ಳ ಆಯ್ಕೆಯನ್ನು ಒದಗಿಸುವಲ್ಲಿ ಬಹಳ ಯಶಸ್ವಿಯಾಗಿದೆ. 2025-26ರ ಹಣಕಾಸು ವರ್ಷದಲ್ಲಿ ಇವಿ ಚಾರ್ಜರ್ ಮತ್ತು ಎವಪರೇಟಿವ್ ಏರ್ ಕೂಲರ್‌ಗಾಗಿ ಸ್ವಯಂಪ್ರೇರಿತ ಸ್ಟಾರ್ ಲೇಬಲಿಂಗ್ ಕಾರ್ಯಕ್ರಮವನ್ನು ಪರಿಚಯಿಸಲಾಗಿದೆ. ಈ ಸೇರ್ಪಡೆಗಳೊಂದಿಗೆ ಈ ಕಾರ್ಯಕ್ರಮವು ಈಗ 41 ಸಾಧನಗಳನ್ನು ಒಳಗೊಳ್ಳುತ್ತದೆ, ಅದರಲ್ಲಿ 18 ಸಾಧನಗಳು ಕಡ್ಡಾಯ ಹಂತದಲ್ಲಿವೆ ಮತ್ತು ಉಳಿದ 23 ಸಾಧನಗಳು ಸ್ವಯಂಪ್ರೇರಿತ ಹಂತದಲ್ಲಿವೆ.

21. ಎಂಎಸ್‌ಎಂಇ ಗಳಲ್ಲಿ ಇಂಧನ ದಕ್ಷತೆಯನ್ನು ಬಲಪಡಿಸಲು, ADEETIE (ಕೈಗಾರಿಕೆಗಳು ಮತ್ತು ಸ್ಥಾಪನೆಗಳಲ್ಲಿ ಇಂಧನ ದಕ್ಷ ತಂತ್ರಜ್ಞಾನವನ್ನು ನಿಯೋಜಿಸುವಲ್ಲಿ ಸಹಾಯ)2025ರ ಜುಲೈನಲ್ಲಿ 1,000 ಕೋಟಿ ರೂಪಾಯಿ ವೆಚ್ಚದೊಂದಿಗೆ ಆರಂಭಿಸಲಾಯಿತು. ಇದು ಹೂಡಿಕೆ-ದರ್ಜೆಯ ಆಡಿಟ್ ಬೆಂಬಲ, ಹ್ಯಾಂಡ್‌ಹೋಲ್ಡಿಂಗ್ ಮತ್ತು ಬಡ್ಡಿ ರಿಯಾಯಿತಿ (ಅತಿ ಸಣ್ಣ /ಸಣ್ಣ ಉದ್ಯಮಗಳಿಗೆ ಶೇ.5; ಮಧ್ಯಮ ಕೈಗಾರಿಕೆಗಳಿಗೆ ಶೇ.3ರಷ್ಟ) ಅನ್ನು ಒದಗಿಸುತ್ತದೆ. ಇದು ಇಂಧನ ದಕ್ಷತೆ ಮತ್ತು ಸ್ಪರ್ಧಾತ್ಮಕತೆಯನ್ನು ಉತ್ತೇಜಿಸುವ 14 ವಲಯಗಳಲ್ಲಿ 60 ಕ್ಲಸ್ಟರ್‌ಗಳನ್ನು ಒಳಗೊಂಡಿದೆ.

ಸುಧಾರಣೆಗಳು ಮತ್ತು ಉಪಕ್ರಮಗಳು

22. ವಿಳಂಬ ಪಾವತಿ ಸರ್ಚಾರ್ಜ್ ನಿಯಮಗಳು, 2022: ವಿದ್ಯುತ್ ಉತ್ಪಾದನಾ ಕಂಪನಿಗಳು ಮತ್ತು ಇತರ ಘಟಕಗಳ ಹೆಚ್ಚುತ್ತಿರುವ ಸ್ವೀಕೃತಿಗಳಿಂದಾಗಿ ಬಹಳ ಹಿಂದಿನಿಂದಲೂ ಕಳವಳಕಾರಿಯಾಗಿದ್ದ ವಿದ್ಯುತ್ ವಲಯದ ಮೌಲ್ಯ ಸರಣಿಯಾದ್ಯಂತ ಪಾವತಿ ಶಿಸ್ತನ್ನು ಉತ್ತೇಜಿಸಲು, ಕೇಂದ್ರ ಸರ್ಕಾರವು 2022ರ ಜೂನ್ 3 ರಂದು ವಿದ್ಯುತ್ (ವಿಳಂಬವಾಗಿ ಪಾವತಿ ಸರ್ಚಾರ್ಜ್ ಮತ್ತು ಸಂಬಂಧಿತ ವಿಷಯಗಳು) ನಿಯಮಗಳು, 2022 ಅನ್ನು ಅಧಿಸೂಚನೆ ಹೊರಡಿಸಿದೆ. ಅವುಗಳ ಅನುಷ್ಠಾನದ ನಂತರ ಗಮನಾರ್ಹ ಪ್ರಗತಿಯನ್ನು ಸಾಧಿಸಲಾಗಿದೆ- 03.06.2022 ರಂತೆ ರೂ.1,39,947 ಕೋಟಿ ರೂಪಾಯಿಗಳ ಬಾಕಿಗಳಿಗೆ ವಿರುದ್ಧವಾಗಿ, 13 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು 39 ಇಎಂಐಗಳು, ಪೂರ್ವಪಾವತಿಗಳು ಮತ್ತು ಸಮನ್ವಯಗಳ ಮೂಲಕ ರೂ.1,31,942 ಕೋಟಿಗಳನ್ನು ಪಾವತಿಸಿವೆ. ಪರಿಣಾಮವಾಗಿ ಬಾಕಿ ಪ್ರಮಾಣ 8,005 ಕೋಟಿ ರೂ.ಗೆ ಇಳಿದಿವೆ ಮತ್ತು ಡಿಸ್ಕಾಮ್‌ಗಳು ಈಗ ತಮ್ಮ ಪ್ರಸ್ತುತ ಬಾಕಿಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸುತ್ತಿವೆ, ಇದು ವಲಯದ ಆರ್ಥಿಕ ಶಿಸ್ತಿನಲ್ಲಿ ಗಮನಾರ್ಹ ಸುಧಾರಣೆಯನ್ನು ಪ್ರತಿಬಿಂಬಿಸುತ್ತದೆ.

ಇಂಧನ ಸಚಿವಾಲಯವು 2025ರ ಮೇ 2 ರಂದು ವಿದ್ಯುತ್ (ವಿಳಂಬ ಪಾವತಿ ಸರ್‌ಚಾರ್ಜ್ ಮತ್ತು ಸಂಬಂಧಿತ ವಿಷಯಗಳು) ನಿಯಮಗಳಿಗೆ ತಿದ್ದುಪಡಿಯನ್ನು ಪ್ರಕಟಿಸಿತು. ಇದು ನಿಯಮಗಳಲ್ಲಿ ಸೂಚಿಸಲಾದ ಪಾವತಿ ಭದ್ರತಾ ಕಾರ್ಯವಿಧಾನದ ಅಡಿಯಲ್ಲಿ ರಾಜ್ಯದೊಳಗಿನ ಪ್ರಸರಣ ಪರವಾನಗಿದಾರರನ್ನು ತರುತ್ತದೆ. ಈ ಸೇರ್ಪಡೆಯು ಸಕಾಲಿಕ ಪಾವತಿಗಳನ್ನು ಖಾತ್ರಿಪಡಿಸಿಕೊಳ್ಳಲು ಮತ್ತು ರಾಜ್ಯದೊಳಗಿನ ಪ್ರಸರಣ ಪರವಾನಗಿದಾರರಿಗೆ ಪಾವತಿ ಭದ್ರತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ಇದರಿಂದಾಗಿ ರಾಜ್ಯದೊಳಗಿನ ಪ್ರಸರಣ ಜಾಲಗಳನ್ನು ಬಲಪಡಿಸಲು ನಿರ್ಣಾಯಕ ಹೂಡಿಕೆಗಳನ್ನು ಆಕರ್ಷಿಸುತ್ತದೆ. ಇದರಿಂದ ನವೀಕರಿಸಬಹುದಾದ ಉತ್ಪಾದನಾ ಸಾಮರ್ಥ್ಯ ವಿಸ್ತರಣೆಯಿಂದ ವಿದ್ಯುತ್ ಅನ್ನು ಸಮಪರ್ಕವಾಗಿ ಬಳಸಿಕೊಳ್ಳಲು ಇದು ಅತ್ಯಗತ್ಯ.

23. ವಿದ್ಯುತ್ (ತಿದ್ದುಪಡಿ) ನಿಯಮಗಳು 2025: ಗ್ರಾಹಕ-ಮಾಲೀಕತ್ವದ ಇಂಧನ ಸಂಗ್ರಹಣೆಯನ್ನು ಅನುಮತಿಸಲು ವಿದ್ಯುತ್ ನಿಯಮಗಳು 2005 ಅನ್ನು ತಿದ್ದುಪಡಿ ಮಾಡಲಾಗಿದೆ. ಈ ತಿದ್ದುಪಡಿಗಳು ಭಾರತದ ವಿದ್ಯುತ್ ವ್ಯವಸ್ಥೆಯಲ್ಲಿ ಇಂಧನ ಸಂಗ್ರಹಣೆಯನ್ನು ಸಂಯೋಜಿಸಲು ಅನುಕೂಲವಾಗುವಂತೆ ನಿಯಂತ್ರಕ ಚೌಕಟ್ಟನ್ನು ಬಲಪಡಿಸುತ್ತವೆ, ವಿಶ್ವಾಸಾರ್ಹತೆ, ಸರಳತೆ ಮತ್ತು ನವೀಕರಿಸಬಹುದಾದ ಇಂಧನ ಬಳಕೆಯನ್ನು ಹೆಚ್ಚಿಸುತ್ತವೆ.

24. ಭಾರತ ಸರ್ಕಾರವು 01.08.2025ರ ಅಧಿಸೂಚನೆಯ ಮೂಲಕ ಜಲವಿದ್ಯುತ್ ಉತ್ಪಾದನಾ ಕೇಂದ್ರಗಳನ್ನು ಸ್ಥಾಪಿಸಲು ಸಂಬಂಧಿಸಿದ ಯೋಜನೆಗಳಿಗೆ ಬಂಡವಾಳ ವೆಚ್ಚದ ಮಿತಿಯನ್ನು 3,000 ಕೋಟಿ ರೂಪಾಯಿಗೆ ಪರಿಷ್ಕರಿಸಿದೆ, ಅದಕ್ಕೆ ಸಿಇಎ ಯ ಒಪ್ಪಿಗೆ ಅಗತ್ಯವಾಗಿದೆ. ಅಲ್ಲದೆ, ಸರ್ಕಾರವು ಆಫ್-ಸ್ಟ್ರೀಮ್ ಕ್ಲೋಸ್ಡ್-ಲೂಪ್ ಪಂಪ್ಡ್ ಸ್ಟೋರೇಜ್ ಯೋಜನೆಗಳನ್ನು, ಬಂಡವಾಳ ವೆಚ್ಚದ ಪ್ರಮಾಣವನ್ನು ಲೆಕ್ಕಿಸದೆ ಸಿಇಎ ಯ ಒಪ್ಪಿಗೆಯ ಅವಶ್ಯಕತೆಯಿಂದ ವಿನಾಯಿತಿ ನೀಡಿದೆ.

25. ಇಂಧನ ಪರಿವರ್ತನೆ ಮತ್ತು ಎನ್ ಡಿಸಿ ಸಾಧನೆ: ಭಾರತವು ತನ್ನ ರಾಷ್ಟ್ರೀಯವಾಗಿ ನಿರ್ಧರಿಸಿದ ಕೊಡುಗೆ (ಎನ್ ಡಿಸಿ) ಗುರಿಯಾದ ಶೇ.50ರಷ್ಟು ಸಂಚಿತ ಬಳಸಿದರೆ ಬರಿದಾಗುವ ಇಂಧನ ಬಳಕೆ ವಿದ್ಯುತ್ ಸಾಮರ್ಥ್ಯವನ್ನು ನಿಗದಿತ ಸಮಯಕ್ಕಿಂತ ಸುಮಾರು ಐದು ವರ್ಷಗಳ ಮುಂಚಿತವಾಗಿ ಸಾಧಿಸಿದೆ. ಬಳಸಿದರೆ ಬರಿದಾಗದೇ ಇರುವ ಸಾಮರ್ಥ್ಯದ ಪಾಲು 2014ರಲ್ಲಿ ಶೇ.32 ರಿಂದ ಅಕ್ಟೋಬರ್ 2025ರ ವೇಳೆಗೆ ಶೇ.51ಕ್ಕೆ ಏರಿದೆ, ಇದು ಭಾರತದ ಶುದ್ಧ ಇಂಧನದತ್ತ ತ್ವರಿತ ಪರಿವರ್ತನೆ ಮತ್ತು ಜಾಗತಿಕ ಹವಾಮಾನ ಗುರಿಗಳಿಗೆ ಅದರ ಬದ್ಧತೆಯನ್ನು ಪ್ರದರ್ಶಿಸುತ್ತದೆ.

 

*****

 


(रिलीज़ आईडी: 2215291) आगंतुक पटल : 11
इस विज्ञप्ति को इन भाषाओं में पढ़ें: English , हिन्दी , Bengali , Tamil , Malayalam