ಗೃಹ ವ್ಯವಹಾರಗಳ ಸಚಿವಾಲಯ
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಗುಜರಾತ್‌ನ ಮಾನ್ಸಾ ಪುರಸಭೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ಗುಜರಾತ್ ಸೇರಿದಂತೆ ದೇಶಾದ್ಯಂತ ಅಭಿವೃದ್ಧಿಯ ಹೊಸ ಯುಗ ಮತ್ತು ಆಧುನಿಕ ಮೂಲಸೌಕರ್ಯಗಳ ನಿರ್ಮಾಣ ಪ್ರಾರಂಭವಾಗಿದೆ
ಸೋಮನಾಥ ದೇವಾಲಯವನ್ನು ಧ್ವಂಸ ಮಾಡಿದವರು ಇಂದು ಯಾವುದೇ ಕುರುಹು ಇಲ್ಲದೆ ನಾಶವಾಗಿದ್ದಾರೆ. ಆದರೆ ಸೋಮನಾಥ ದೇವಾಲಯ ಸಾವಿರಾರು ವರ್ಷಗಳ ಬಳಿಕವೂ ಇನ್ನೂ ಹೆಚ್ಚಿನ ವೈಭವದಿಂದ ನಿಂತಿದೆ
ಸೋಮನಾಥ ದೇವಾಲಯವು ಸನಾತನ ಧರ್ಮ, ಸಂಸ್ಕೃತಿ ಮತ್ತು ಜನರ ನಂಬಿಕೆಯನ್ನು ಅಳಿಸಿಹಾಕುವುದು ಸುಲಭವಲ್ಲಎಂಬ ಸಂದೇಶವನ್ನು ಇಡೀ ಜಗತ್ತಿಗೆ ರವಾನಿಸುತ್ತದೆ - ಅವು ಸೂರ್ಯ ಮತ್ತು ಚಂದ್ರನಂತೆ ಶಾಶ್ವತ ಮತ್ತು ಅವಿನಾಶಿ
ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಈ 11 ಅಂತಸ್ತಿನ ಹೊಸ ಸಿವಿಲ್ ಆಸ್ಪತ್ರೆ ಮಾನ್ಸಾ ಪ್ರದೇಶದಲ್ಲಿ ಪೂರ್ಣಗೊಂಡ ನಂತರ, ಯಾರೂ ವೈದ್ಯಕೀಯ ಚಿಕಿತ್ಸೆಗಾಗಿ ಮಾನ್ಸಾದಿಂದ ಹೊರಗೆ ಹೋಗಬೇಕಾಗಿಲ್ಲ
ಅಹಮದಾಬಾದ್‌ಅನ್ನು ಕ್ರೀಡಾ ನಗರವಾಗಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಅದು ಭಾರತದಲ್ಲಿ ಮಾತ್ರವಲ್ಲದೆ, ಇಡೀ ಪ್ರಪಂಚದಾದ್ಯಂತ ವಿಶಿಷ್ಟ ಗುರುತನ್ನು ಸೃಷ್ಟಿಸುತ್ತಿದೆ
ಈ ಕ್ರೀಡಾ ಸೌಲಭ್ಯಗಳನ್ನು ಬಳಸುವ ಮೂಲಕ, ಶಾಲೆ ಮತ್ತು ಕಾಲೇಜು ಕ್ರೀಡಾಪಟುಗಳು ತಮ್ಮ ದೇಹ, ಮನಸ್ಸು ಮತ್ತು ಆತ್ಮವಿಶ್ವಾಸವನ್ನು ಬಲಪಡಿಸುವುದು ಮಾತ್ರವಲ್ಲದೆ, ಪ್ರಪಂಚದಾದ್ಯಂತ ತಮ್ಮ ಹೆಸರನ್ನು ಬೆಳಗುವಂತೆ ಮಾಡಬೇಕು
प्रविष्टि तिथि:
13 JAN 2026 9:17PM by PIB Bengaluru
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಗುಜರಾತ್‌ನ ಮಾನಸಾ ಪುರಸಭೆಯ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮೆಹ್ಸಾನಾ ಸಂಸದೀಯ ಕ್ಷೇತ್ರದ ಸಂಸದ ಶ್ರೀ ಹರಿಭಾಯ್ ಪಟೇಲ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ತಮ್ಮ ಭಾಷಣದಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಗುಜರಾತ್ ಸೇರಿದಂತೆ ದೇಶಾದ್ಯಂತ ಅಭಿವೃದ್ಧಿಯ ಹೊಸ ಯುಗ ಮತ್ತು ಆಧುನಿಕ ಮೂಲಸೌಕರ್ಯಗಳ ನಿರ್ಮಾಣ ಪ್ರಾರಂಭವಾಗಿದೆ ಎಂದು ಹೇಳಿದರು. ಮಾನಸಾ ಪ್ರದೇಶವು ಅತ್ಯಂತ ಪ್ರಮುಖ ಕಾರ್ಯತಂತ್ರದ ಸ್ಥಳದಲ್ಲಿದೆ ಮತ್ತು ಅದರ ಒಟ್ಟಾರೆ ಅಭಿವೃದ್ಧಿಗೆ ನಿರಂತರ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಅವರು ಹೇಳಿದರು. ಗುಜರಾತ್ ಸರ್ಕಾರವು ಮಾನ್ಸಾ ಪ್ರದೇಶದಲ್ಲಿ ಬ್ಯಾರೇಜ್ ನಿರ್ಮಾಣದ ಕೆಲಸವನ್ನು ಪ್ರಾರಂಭಿಸಿದೆ ಎಂದು ಅವರು ಹೇಳಿದರು. ಇದಲ್ಲದೆ, ರಾಂಪುರ-ಮಾನ್ಸಾ ಪ್ರದೇಶದಲ್ಲಿಎರಡನೇ ಬ್ಯಾರೇಜ್ ಮತ್ತು ಗಾಂಧಿನಗರ ಬಳಿ ಮೂರನೇ ಬ್ಯಾರೇಜ್‌ಅನ್ನು ನಿರ್ಮಿಸಲು ಅವಕಾಶ ಕಲ್ಪಿಸಲಾಗಿದೆ. ಇದರಿಂದಾಗಿ ಸುಧಾರಿತ ನೀರಿನ ನಿರ್ವಹಣೆಯಡಿಯಲ್ಲಿ, ಸಾರ್ವಜನಿಕರನ್ನು ಹಾನಿಕಾರಕ ಫ್ಲೋರೈಡ್ - ಕಲುಷಿತ ನೀರಿನಿಂದ ಮುಕ್ತಗೊಳಿಸಬಹುದು ಮತ್ತು ಭವಿಷ್ಯದ ಪೀಳಿಗೆಗೂ ಪ್ರಯೋಜನವಾಗಬಹುದು.
ಮಾನಸಾ ಪ್ರದೇಶದಲ್ಲಿ ಹೊಸ ಸಿವಿಲ್ ಆಸ್ಪತ್ರೆಯನ್ನು ನಿರ್ಮಿಸಲಾಗುವುದು ಎಂದು ಶ್ರೀ ಅಮಿತ್ ಶಾ ಹೇಳಿದರು. ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಈ 11 ಅಂತಸ್ತಿನ ಆಸ್ಪತ್ರೆ 2030ರ ವೇಳೆಗೆ ಪೂರ್ಣಗೊಂಡ ನಂತರ, ಯಾರೂ ವೈದ್ಯಕೀಯ ಚಿಕಿತ್ಸೆಗಾಗಿ ಮಾನ್ಸಾದಿಂದ ಹೊರಗೆ ಹೋಗಬೇಕಾಗಿಲ್ಲ. ಹೊಸ ಸಿವಿಲ್ ಆಸ್ಪತ್ರೆ ನಿರ್ಮಾಣದ ಬಳಿಕ ಎಸ್‌ಡಿ ಆರ್ಟ್ಸ್ ಮತ್ತು ಬಿ.ಆರ್. ಕಾಮರ್ಸ್ ಕಾಲೇಜಿನ ಆವರಣದಲ್ಲಿ ವೈದ್ಯಕೀಯ ಕಾಲೇಜು ಆರಂಭವಾಗಲಿದೆ ಎಂದರು. ಮಾನಸಾ ಮತ್ತು ಪಿಲ್ವಾಯಿ ನಡುವೆ 110 ಕೋಟಿ ರೂ.ಗಳ ವೆಚ್ಚದಲ್ಲಿ ಹೆದ್ದಾರಿ ನಿರ್ಮಿಸಲಾಗುವುದು ಮತ್ತು 100 ಕೋಟಿ ರೂ.ಗಳ ವೆಚ್ಚದಲ್ಲಿ ಬಲ್ವಾದಿಂದ ಗೋಚಾರಿಯಾದವರೆಗೆ ರಸ್ತೆಯನ್ನು ನಿರ್ಮಿಸಲಾಗುವುದು ಎಂದು ಶ್ರೀ ಅಮಿತ್ ಶಾ ಹೇಳಿದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 11ನೇ ತಾರೀಖಿನಿಂದ ಇಡೀ ವರ್ಷಕ್ಕೆ ಸೋಮನಾಥ ಸ್ವಾಭಿಮಾನ್ ಪರ್ವ ಆರಂಭ ನೀಡಿದ್ದಾರೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಸಾವಿರ ವರ್ಷಗಳ ಹಿಂದೆ, ಭವ್ಯವಾದ ಸೋಮನಾಥ ದೇವಾಲಯವನ್ನು ಘಜ್ನಿಯ ಮಹಮೂದ್ ಧ್ವಂಸಗೊಳಿಸಿದರು ಮತ್ತು ನಂತರ ಅಲ್ಲಾವುದ್ದೀನ್ ಖಿಲ್ಜಿ, ಅಹ್ಮದ್ ಶಾ, ಮುಹಮ್ಮದ್ ಬೇಗಡಾ, ಔರಂಗಜೇಬ್ ಮತ್ತು ಇತರರು ದೇವಾಲಯವನ್ನು ಮತ್ತೆ ಮತ್ತೆ ನಾಶಪಡಿಸುತ್ತಲೇ ಇದ್ದರು. ಆದರೆ ನಮ್ಮ ಪೂರ್ವಜರು ಅದನ್ನು ಪುನರ್ ನಿರ್ಮಿಸುತ್ತಲೇ ಇದ್ದರು. ನಾಶಮಾಡಿದವರು ವಿನಾಶವನ್ನು ನಂಬಿದ್ದರು; ನಿರ್ಮಿಸಿದವರು ಸೃಷ್ಟಿಯಲ್ಲಿನಂಬಿಕೆ ಇಟ್ಟರು. ಸಾವಿರ ವರ್ಷಗಳ ನಂತರ, ವಿನಾಶಕಾರಿಗಳು ಎಲ್ಲೋ ಕಣ್ಮರೆಯಾಗಿವೆ. ಆದರೆ ಸೋಮನಾಥ ದೇವಾಲಯವು ಇನ್ನೂ ಸಮುದ್ರ ತೀರದಲ್ಲಿ ದೃಢವಾಗಿ ನಿಂತಿದೆ ಎಂದು ಹೇಳಿದರು.
ಈ ಸೋಮನಾಥ ದೇವಾಲಯವನ್ನು ಸರ್ದಾರ್ ಪಟೇಲ್, ಕೆ.ಎಂ. ಮುನ್ಷಿ, ಜಾಮ್ ಸಾಹೇಬ್ ಮತ್ತು ನಮ್ಮ ಮೊದಲ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರಂತಹ ಮಹಾನ್ ನಾಯಕರು ಸಂಕಲ್ಪದಿಂದ ಪುನರ್ ನಿರ್ಮಿಸಿದರು. ಆ ದೃಢ ನಿರ್ಧಾರದ ಹಿಂದಿನ ಅರ್ಥ ಎಂದರೆ ಸೋಮನಾಥ ಮೇಲೆ ನಡೆದ ದಾಳಿ ಬರೇ ದೇವಾಲಯದ ಮೇಲಿನ ದಾಳಿಯಲ್ಲ, ಅದು ನಮ್ಮ ನಂಬಿಕೆ, ನಮ್ಮ ಧರ್ಮ ಮತ್ತು ನಮ್ಮ ಸ್ವಾಭಿಮಾನದ ಮೇಲಿನ ದಾಳಿ. ಅದಕ್ಕೆ ಉತ್ತರ ಪ್ರತೀಕಾರದ ಮೂಲಕ ಅಲ್ಲ, ಆದರೆ ಸ್ವಾಭಿಮಾನವನ್ನು ರಕ್ಷಿಸುವ ಮೂಲಕ ಮಾತ್ರ. ಮತ್ತು ಇಂದು, ಒಂದು ಸಾವಿರ ವರ್ಷಗಳಲ್ಲಿ16 ಬಾರಿ ನಾಶವಾದ ನಂತರವೂ ಸೋಮನಾಥ ದೇವಾಲಯವು ತನ್ನ ಅತ್ಯುನ್ನತ ಕೇಸರಿ ಧ್ವಜದೊಂದಿಗೆ ನಿಂತಿದೆ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಅಲ್ಲಿಭವ್ಯವಾದ ಸೋಮನಾಥ ಕಾರಿಡಾರ್ ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.
ಸನಾತನ ಧರ್ಮ, ಭಾರತೀಯ ಸಂಸ್ಕೃತಿ ಮತ್ತು ಭಾರತದ ಜನರ ನಂಬಿಕೆಯನ್ನು ಅಳಿಸಿಹಾಕುವುದು ಅಷ್ಟು ಸುಲಭವಲ್ಲ- ಅವು ಸೂರ್ಯ ಮತ್ತು ಚಂದ್ರನಂತೆ ಶಾಶ್ವತ ಮತ್ತು ಅವಿನಾಶಿ ಎಂಬ ಸಂದೇಶವನ್ನು ಇಡೀ ಜಗತ್ತಿಗೆ ರವಾನಿಸುತ್ತದೆ. ಸೋಮನಾಥ ದೇವಾಲಯವು ಭಾರತದ ನಂಬಿಕೆ, ನಂಬಿಕೆ ಮತ್ತು ಹೆಮ್ಮೆಯ ಸಂಕೇತವಾಗಿದೆ. ನಾವು ಮುಂಬರುವ ಇಡೀ ವರ್ಷವನ್ನು ಸೋಮನಾಥ ಸ್ವಾಭಿಮಾನ್ ಪರ್ವ ಎಂದು ಆಚರಿಸಲಿದ್ದೇವೆ, ಭಾರತದ ಆತ್ಮವನ್ನು ಕಲಕಲು, ಪ್ರಜ್ಞೆಯನ್ನು ಜಾಗೃತಗೊಳಿಸಲು ಮತ್ತು ಸನಾತನ ಧರ್ಮದ ಬೇರುಗಳನ್ನು ನೆಲದ ಆಳಕ್ಕೆ ಕೊಂಡೊಯ್ಯಲು ಅನೇಕ ಕಾರ್ಯಕ್ರಮಗಳೊಂದಿಗೆ ಆಚರಿಸಲಿದ್ದೇವೆ. ಈ ಸೋಮನಾಥ ಸ್ವಾಭಿಮಾನ್ ವರ್ಷ ನಮ್ಮೆಲ್ಲರಿಗೂ ಮಹತ್ವದ್ದಾಗಿದೆ ಎಂದು ಸಚಿವರು ತಿಳಿಸಿದರು.
ಆಧುನಿಕ ಮೂಲಸೌಕರ್ಯಗಳನ್ನು ಹೊಂದಿರುವ ಕ್ರೀಡಾ ಸಂಕೀರ್ಣವನ್ನು ನಿರ್ಮಿಸಿದ್ದಕ್ಕಾಗಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಗುಜರಾತ್ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದರು ಮತ್ತು ಈ ಅತ್ಯುತ್ತಮ ಜಿಮ್‌ಅನ್ನು ಆಟಗಾರರಿಗೆ ಮಾತ್ರವಲ್ಲದೆ ಮಾನ್ಸಾದ ನಾಗರಿಕರಿಗೂ ತೆರೆಯುವಂತೆ ಸಂಬಂಧಪಟ್ಟ ಜಿಕ್ಟರ್‌ಗೆ ನಿರ್ದೇಶನ ನೀಡಿದರು. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿಗುಜರಾತ್ ಸೇರಿದಂತೆ ದೇಶಾದ್ಯಂತ ಕ್ರೀಡೆ ಮತ್ತು ಕ್ರೀಡಾ ಸಂಕೀರ್ಣಗಳಿಗೆ ರೋಮಾಂಚಕ ವಾತಾವರಣವನ್ನು ಸೃಷ್ಟಿಸಲಾಗಿದೆ ಎಂದು ಅವರು ಹೇಳಿದರು. ಅಹಮದಾಬಾದ್‌ಅನ್ನು ಕ್ರೀಡಾ ನಗರವಾಗಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಅದು ಭಾರತದಲ್ಲಿಮಾತ್ರವಲ್ಲದೆ, ಇಡೀ ವಿಶ್ವದಾದ್ಯಂತ ವಿಶಿಷ್ಟ ಗುರುತನ್ನು ಸ್ಥಾಪಿಸುತ್ತಿದೆ.
2030ರಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕಾಗಿ 117 ದೇಶಗಳ ಕ್ರೀಡಾಪಟುಗಳು ಅಹಮದಾಬಾದ್‌ಗೆಬರಲಿದ್ದಾರೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಇದಲ್ಲದೆ, 2029ರಲ್ಲಿಅಹಮದಾಬಾದ್‌ನಲ್ಲಿವಿಶ್ವ ಪೊಲೀಸ್ ಮತ್ತು ಅಗ್ನಿಶಾಮಕ ಸೇವಾ ಕ್ರೀಡಾಕೂಟವೂ ನಡೆಯಲಿದೆ. 2036ರ ಒಲಿಂಪಿಕ್ ಕ್ರೀಡಾಕೂಟವನ್ನು ಅಹಮದಾಬಾದ್‌ನಲ್ಲಿಆಯೋಜಿಸುವ ಪ್ರಯತ್ನಗಳೂ ನಡೆಯುತ್ತಿವೆ ಎಂದು ಅವರು ಹೇಳಿದರು. ಹತ್ತಿರದ ಶಾಲೆಗಳು ಮತ್ತು ಕಾಲೇಜುಗಳ ಆಟಗಾರರು ತಮ್ಮ ದೇಹ, ಮನಸ್ಸು ಮತ್ತು ಆತ್ಮವಿಶ್ವಾಸವನ್ನು ಬಲಪಡಿಸಲು ಮಾತ್ರವಲ್ಲದೆ, ಗುಜರಾತ್, ದೇಶ ಮತ್ತು ವಿಶ್ವದಲ್ಲಿತಮ್ಮ ಹೆಸರನ್ನು ಬೆಳಗಿಸಲು ಈ ಕ್ರೀಡಾ ಸೌಲಭ್ಯಗಳನ್ನು ಬಳಸುವುದನ್ನು ಖಚಿತಪಡಿಸಿಕೊಳ್ಳುವಂತೆ ಗೃಹ ಸಚಿವರು ಮಾನ್ಸಾ ಪ್ರದೇಶದ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳಿಗೆ ತಿಳಿಸಿದರು.
ಅಹಮದಾಬಾದ್‌ನ ಆಧುನಿಕ ಅಗ್ನಿಶಾಮಕ ಕೇಂದ್ರದ ಮಾದರಿಯಲ್ಲಿ, ಮಾನ್ಸಾದಲ್ಲಿಯೂ ಈಗ ಹೊಸ ಅಗ್ನಿಶಾಮಕ ಠಾಣೆ ಪೂರ್ಣಗೊಂಡಿದೆ ಎಂದು ಗೃಹ ಸಚಿವರು ಹೇಳಿದರು. ಇದಲ್ಲದೆ, ಗುಜರಾತ್ ಸರ್ಕಾರವು ಮಾನ್ಸಾಗೆ ಹೊಸ ಸಕ್ರ್ಯೂಟ್ ಹೌಸ್ ಮತ್ತು ಪೊಲೀಸ್ ಠಾಣೆಯನ್ನು ಉಡುಗೊರೆಯಾಗಿ ನೀಡಿದೆ. ಕಳೆದ ನಾಲ್ಕು ವರ್ಷಗಳಲ್ಲಿ13 ಕೆರೆಗಳನ್ನು ಪರಸ್ಪರ ಜೋಡಿಸಲಾಗಿದೆ ಮತ್ತು ವರ್ಷವಿಡೀ ನೀರಿನ ಲಭ್ಯತೆಯನ್ನು ಖಾತ್ರಿಪಡಿಸುವ ವ್ಯವಸ್ಥೆಯನ್ನು ರೂಪಿಸಲಾಗಿದೆ ಎಂದರು. ಚಂದ್ರಸರ್ ಸರೋವರದ ಅಭಿವೃದ್ಧಿಯನ್ನು ಶ್ಲಾಘಿಸಿದ ಶ್ರೀ ಅಮಿತ್ ಶಾ ಅವರು, ಅಂತಹ ವ್ಯವಸ್ಥೆಗಳನ್ನು ನಿರ್ವಹಿಸಲು ಸಾರ್ವಜನಿಕರ ಭಾಗವಹಿಸುವಿಕೆ ಬಹಳ ಮುಖ್ಯ ಎಂದು ಹೇಳಿದರು. ನಮ್ಮ ಗ್ರಾಮಗಳು ಮತ್ತು ಪಟ್ಟಣಗಳನ್ನು ಸ್ವಚ್ಛವಾಗಿಡಲು ನಾವು ಪ್ರತಿಜ್ಞೆ ಮಾಡಬೇಕು ಮತ್ತು ಇದಕ್ಕಾಗಿ ನಮ್ಮ ಯುವಕರು ಮುಂದೆ ಬರಬೇಕು ಎಂದು ಅವರು ಕಿವಿ ಮಾತು ಹೇಳಿದರು.
2047 ರಲ್ಲಿದೇಶದ ಸ್ವಾತಂತ್ರ್ಯದ ಶತಮಾನೋತ್ಸವವನ್ನು ಆಚರಿಸಿದಾಗ, ಭಾರತವು ವಿಶ್ವದಾದ್ಯಂತ ಪ್ರತಿಯೊಂದು ಕ್ಷೇತ್ರದಲ್ಲೂ ಮೊದಲ ಸ್ಥಾನದಲ್ಲಿರುತ್ತದೆ ಎಂದು ಭಾರತದ ಜನರು ಪ್ರತಿಜ್ಞೆ ಮಾಡಿದ್ದಾರೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ಮುಂಬರುವ ಯುಗವು ಭಾರತದ ಯುವಕರಿಗೆ ಸೇರಿದೆ ಎಂಬ ವಿಶ್ವಾಸವಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ತಮ್ಮ ದೃಢ ನಿಶ್ಚಯ, ಬುದ್ಧಿವಂತಿಕೆ ಮತ್ತು ಧೈರ್ಯದಿಂದ, ಭಾರತದ ಯುವಜನರು ದೇಶವನ್ನು ವಿಶ್ವದ ಅತ್ಯುನ್ನತ ಸ್ಥಾನಕ್ಕೆ ಕೊಂಡೊಯ್ಯಬೇಕು ಮತ್ತು ಮಾನಸಾ ಇಡೀ ರಾಷ್ಟ್ರದೊಂದಿಗೆ ಈ ಪ್ರಯತ್ನಕ್ಕೆ ಕೊಡುಗೆ ನೀಡಬೇಕು ಎಂದು ಅವರು ಹೇಳಿದರು.
*****
(रिलीज़ आईडी: 2214363)
आगंतुक पटल : 8