ಲೋಕಸಭಾ ಸಚಿವಾಲಯ
azadi ka amrit mahotsav

28ನೇ ಕಾಮನ್‌ವೆಲ್ತ್ ಸಂಸತ್ತುಗಳ ಸಭಾಧ್ಯಕ್ಷರು ಮತ್ತು ಅಧ್ಯಕ್ಷೀಯ ಅಧಿಕಾರಿಗಳ ಸಮ್ಮೇಳನ (ಸಿ ಎಸ್‌ ಪಿ ಒ ಸಿ) ನವದೆಹಲಿ, 14-16 ಜನವರಿ 2026

प्रविष्टि तिथि: 12 JAN 2026 6:15PM by PIB Bengaluru

ನವದೆಹಲಿ, 12 ಜನವರಿ 2026: ಭಾರತದ ಸಂಸತ್ತು 28ನೇ ಕಾಮನ್‌ವೆಲ್ತ್ ಸಂಸತ್ತುಗಳ ಸಭಾಧ್ಯಕ್ಷರು ಮತ್ತು ಅಧ್ಯಕ್ಷೀಯ ಅಧಿಕಾರಿಗಳ ಸಮ್ಮೇಳನವನ್ನು (ಸಿ ಎಸ್‌ ಪಿ ಒ ಸಿ) 2026ರ ಜನವರಿ 14 ರಿಂದ 16 ರವರೆಗೆ ನವದೆಹಲಿಯಲ್ಲಿ ಆಯೋಜಿಸುತ್ತಿದೆ.

ಭಾರತದ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 15 ಜನವರಿ 2026 ರಂದು ಬೆಳಿಗ್ಗೆ 10:30ಕ್ಕೆ ನವದೆಹಲಿಯ ಸಂಸತ್ ಭವನದ ಸಂಕೀರ್ಣದಲ್ಲಿರುವ ಸಂವಿಧಾನ ಸದನದ ಐತಿಹಾಸಿಕ ಸೆಂಟ್ರಲ್ ಹಾಲ್‌ ನಲ್ಲಿ ಈ ಸಮ್ಮೇಳನವನ್ನು ಉದ್ಘಾಟಿಸಲು ಸಮ್ಮತಿಸಿದ್ದಾರೆ.

ಗೌರವಾನ್ವಿತ ಪ್ರಧಾನಮಂತ್ರಿಯವರು ಅಕ್ಟೋಬರ್ 2023ರಲ್ಲಿ ಭಾರತದ ಸಂಸತ್ತು ಆಯೋಜಿಸಿದ್ದ ಕೊನೆಯ ಅಂತರ-ಸಂಸದೀಯ ಸಮ್ಮೇಳನವಾದ 9ನೇ ಜಿ20 ಸಂಸದೀಯ ಸಭಾಧ್ಯಕ್ಷರ (ಪಿ20) ಶೃಂಗಸಭೆಯನ್ನು ಸಹ ಉದ್ಘಾಟಿಸಿದ್ದರು.

ಲೋಕಸಭೆಯ ಸ್ಪೀಕರ್ ಶ್ರೀ ಓಂ ಬಿರ್ಲಾ ಅವರು ಈ ಸಮ್ಮೇಳನದ ಅಧ್ಯಕ್ಷರಾಗಿದ್ದಾರೆ.

ಸಿ.ಎಸ್‌.ಪಿ.ಒ.ಸಿ. ನ ಅವಲೋಕನ

ಕಾಮನ್‌ವೆಲ್ತ್ ಸಂಸತ್ತುಗಳ ಸಭಾಧ್ಯಕ್ಷರು ಮತ್ತು ಅಧ್ಯಕ್ಷೀಯ ಅಧಿಕಾರಿಗಳ ಸಮ್ಮೇಳನವನ್ನು (ಸಿ ಎಸ್‌ ಪಿ ಒ ಸಿ) 1969ರಲ್ಲಿ ಕೆನಡಾದ ಹೌಸ್ ಆಫ್ ಕಾಮನ್ಸ್‌ನ ಆಗಿನ ಸ್ಪೀಕರ್ ಗೌರವಾನ್ವಿತ ಲೂಸಿಯನ್ ಲ್ಯಾಮೌರೆಕ್ಸ್ ಅವರ ಉಪಕ್ರಮವಾಗಿ ರಚಿಸಲಾಯಿತು. ಇದರ ಪ್ರಾರಂಭದಿಂದಲೂ, ಕೆನಡಾವು ಸಿ ಎಸ್‌ ಪಿ ಒ ಸಿ ಯ ಚಟುವಟಿಕೆಗಳನ್ನು ಬೆಂಬಲಿಸಲು ಸಚಿವಾಲಯವನ್ನು ಒದಗಿಸಿದೆ.

ಸಿ ಎಸ್‌ ಪಿ ಒ ಸಿ ಕಾಮನ್‌ವೆಲ್ತ್‌ ನ ಸಾರ್ವಭೌಮ ರಾಷ್ಟ್ರಗಳ 53 ರಾಷ್ಟ್ರೀಯ ಸಂಸತ್ತುಗಳ ಸಭಾಧ್ಯಕ್ಷರು ಮತ್ತು ಅಧ್ಯಕ್ಷೀಯ ಅಧಿಕಾರಿಗಳನ್ನು (ಪಟ್ಟಿ ಲಗತ್ತಿಸಲಾಗಿದೆ) ಒಂದೆಡೆ ಸೇರಿಸುತ್ತದೆ. ಸಿ ಎಸ್‌ ಪಿ ಒ ಸಿ ಒಂದು ಸ್ವತಂತ್ರ ಗುಂಪಾಗಿದ್ದು, ಇದು ಕಾಮನ್‌ವೆಲ್ತ್ ಸಂಸದೀಯ ಸಂಘ (ಸಿಪಿಎ), ಕಾಮನ್‌ವೆಲ್ತ್ ಸಚಿವಾಲಯ ಅಥವಾ ಕಾಮನ್‌ವೆಲ್ತ್ ಸರ್ಕಾರಗಳ ಮುಖ್ಯಸ್ಥರ (ಸಿ ಎಚ್‌ ಒ ಜಿ ಎಂM) ಜೊತೆಗೆ ಯಾವುದೇ ಅಧಿಕೃತ ಸಂಬಂಧವನ್ನು ಹೊಂದಿಲ್ಲ. ಆದಾಗ್ಯೂ, ಇದರ ಸದಸ್ಯತ್ವವು ಸಿಪಿಎಯಂತೆಯೇ ಇರುತ್ತದೆ.

ಈ ಸಮ್ಮೇಳನದ ಘೋಷಿತ ಉದ್ದೇಶಗಳು ಹೀಗಿವೆ:

  • ಸಂಸತ್ತಿನ ಸಭಾಧ್ಯಕ್ಷರು ಮತ್ತು ಅಧ್ಯಕ್ಷೀಯ ಅಧಿಕಾರಿಗಳ ಕಡೆಯಿಂದ ನಿಷ್ಪಕ್ಷಪಾತ ಮತ್ತು ನ್ಯಾಯಸಮ್ಮತತೆಯನ್ನು ಕಾಪಾಡಿಕೊಳ್ಳುವುದು, ಪೋಷಿಸುವುದು ಮತ್ತು ಪ್ರೋತ್ಸಾಹಿಸುವುದು.
  • ಸಂಸದೀಯ ಪ್ರಜಾಪ್ರಭುತ್ವದ ವಿವಿಧ ರೂಪಗಳ ಜ್ಞಾನ ಮತ್ತು ತಿಳುವಳಿಕೆಯನ್ನು ಉತ್ತೇಜಿಸುವುದು; ಮತ್ತು
  • ಸಂಸದೀಯ ಸಂಸ್ಥೆಗಳನ್ನು ಅಭಿವೃದ್ಧಿಪಡಿಸುವುದು.

ಸಿ ಎಸ್‌ ಪಿ ಒ ಸಿ ಎರಡು ವರ್ಷಗಳ ಚಕ್ರದಲ್ಲಿ ಕಾರ್ಯನಿರ್ವಹಿಸುತ್ತದೆ, ಪ್ರತಿ ಎರಡು ವರ್ಷಗಳಿಗೊಮ್ಮೆ (ಸಾಮಾನ್ಯವಾಗಿ ಜನವರಿ ಆರಂಭದಲ್ಲಿ) ಪೂರ್ಣ ಸದಸ್ಯತ್ವದ ಸಮ್ಮೇಳನವನ್ನು ಮತ್ತು ವರ್ಷದ ಮಧ್ಯಂತರದಲ್ಲಿ ಸ್ಥಾಯಿ ಸಮಿತಿಯ ಸಭೆಯನ್ನು ನಡೆಸುತ್ತದೆ.

ಭಾರತದಲ್ಲಿ 28ನೇ ಸಿ ಎಸ್‌ ಪಿ ಒ ಸಿ ಆಯೋಜಿಸುವ ನಿರ್ಧಾರ

ಭಾರತದಲ್ಲಿ 28ನೇ ಸಿ ಎಸ್‌ ಪಿ ಒ ಸಿ ಆಯೋಜಿಸುವ ನಿರ್ಧಾರವನ್ನು 2020 ರ ಜನವರಿ 5 ರಿಂದ 9 ರವರೆಗೆ ಒಟ್ಟಾವಾದಲ್ಲಿ ನಡೆದ 25ನೇ ಸಿ ಎಸ್‌ ಪಿ ಒ ಸಿ ಅವಧಿಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಮಾಲೋಚನೆಯೊಂದಿಗೆ ತೆಗೆದುಕೊಳ್ಳಲಾಗಿತ್ತು. ಲೋಕಸಭೆಯ ಗೌರವಾನ್ವಿತ ಸಭಾಧ್ಯಕ್ಷರಾದ ಶ್ರೀ ಓಂ ಬಿರ್ಲಾ ಅವರು ಈ ಸಮ್ಮೇಳನಕ್ಕೆ ಭಾರತೀಯ ಸಂಸದೀಯ ನಿಯೋಗದ (ಐಪಿಡಿ) ನೇತೃತ್ವ ವಹಿಸಿದ್ದರು.

ಉಗಾಂಡದ ಸಂಸತ್ತು 2024 ರ ಜನವರಿ 4-6 ರವರೆಗೆ ಕಂಪಾಲಾದಲ್ಲಿ ಆಯೋಜಿಸಿದ್ದ ಹಿಂದಿನ 27ನೇ ಆವೃತ್ತಿಯ ಸಿ ಎಸ್‌ ಪಿ ಒ ಸಿ ಮುಕ್ತಾಯದ ಸಂದರ್ಭದಲ್ಲಿ, ರಾಜ್ಯಸಭೆಯ ಗೌರವಾನ್ವಿತ ಉಪಸಭಾಪತಿ ಮತ್ತು ಆ ಸಮ್ಮೇಳನದ ಭಾರತೀಯ ನಿಯೋಗದ ನಾಯಕರಾಗಿದ್ದ ಶ್ರೀ ಹರಿವಂಶ್ ಅವರು 2026 ರಲ್ಲಿ ಭಾರತದಲ್ಲಿ ನಡೆಯಲಿರುವ 28ನೇ ಆವೃತ್ತಿಯ ಸಿ ಎಸ್‌ ಪಿ ಒ ಸಿ ನ ಆತಿಥೇಯರಾಗಿ ಉಗಾಂಡದಿಂದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು.

28ನೇ CSPOC ಕಾರ್ಯಕ್ರಮ

ಕಾರ್ಯಕ್ರಮದ ವಿವರಗಳು ಈ ಕೆಳಗಿನಂತಿವೆ:

ಸ್ಥಾಯಿ ಸಮಿತಿ ಸಭೆ – 14 ಜನವರಿ 2026

ಸ್ಥಾಯಿ ಸಮಿತಿಯು ಸಿ ಎಸ್‌ ಪಿ ಒ ಸಿ ಚಟುವಟಿಕೆಗಳ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತದೆ.

ಇದು 15 ಸದಸ್ಯರನ್ನು ಒಳಗೊಂಡಿದ್ದು, 5 ಸದಸ್ಯರು ಕೋರಂ ಅನ್ನು ಪೂರೈಸುತ್ತಾರೆ. 28ನೇ ಸಿ ಎಸ್‌ ಪಿ ಒ ಸಿ ನ ಅಧ್ಯಕ್ಷರಾಗಿ ಲೋಕಸಭಾ ಸ್ಪೀಕರ್ ಅವರು 14 ಜನವರಿ 2026 ರಂದು ಸಂಜೆ 7:30 ಕ್ಕೆ ದೆಹಲಿಯ ಕೆಂಪು ಕೋಟೆಯ ಸಂಗೀತಿ ಸಮ್ಮೇಳನ ಸಭಾಂಗಣದಲ್ಲಿ ಸಿ ಎಸ್‌ ಪಿ ಒ ಸಿ ಸ್ಥಾಯಿ ಸಮಿತಿಯ ಸಭೆಯ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.

ಸಭೆಯ ಮೊದಲು, ಸ್ಥಾಯಿ ಸಮಿತಿಯ ಸದಸ್ಯರಾಗಿರುವ ಸಭಾಧ್ಯಕ್ಷರು ಮತ್ತು ಅಧ್ಯಕ್ಷೀಯ ಅಧಿಕಾರಿಗಳಿಗೆ ಹಾಗೂ ಅಷ್ಟರೊಳಗೆ ದೆಹಲಿಗೆ ತಲುಪಿರುವವರಿಗೆ (ಸುಮಾರು 40 ಮಂದಿ) ಕೆಂಪು ಕೋಟೆಯ ಸುತ್ತಲೂ ಪ್ರವಾಸ ಏರ್ಪಡಿಸಲಾಗಿದೆ.

ಅವರಿಗಾಗಿ ಕೆಂಪು ಕೋಟೆಯಲ್ಲಿ ಧ್ವನಿ ಮತ್ತು ಬೆಳಕು ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸ್ಥಾಯಿ ಸಮಿತಿಯ ಸಭೆಯ ನಂತರ, ಲೋಕಸಭಾ ಸ್ಪೀಕರ್ ಅವರು ಕೆಂಪು ಕೋಟೆಯ ಆವರಣದಲ್ಲಿ ಸಂಜೆ 7:30ಕ್ಕೆ ಅವರ ಗೌರವಾರ್ಥವಾಗಿ ಔತಣಕೂಟವನ್ನು ಆಯೋಜಿಸಲಿದ್ದಾರೆ.

28ನೇ ಸಿ ಎಸ್‌ ಪಿ ಒ ಸಿ ಯ ಉದ್ಘಾಟನೆ – 15 ಜನವರಿ 2026

28ನೇ ಸಿ ಎಸ್‌ ಪಿ ಒ ಸಿ ಯ ಉದ್ಘಾಟನಾ ಸಮಾರಂಭವು ನವದೆಹಲಿಯ ಸಂಸತ್ ಭವನದ ಸಂಕೀರ್ಣದ ಐತಿಹಾಸಿಕ ಸಂವಿಧಾನ ಸದನದ ಸೆಂಟ್ರಲ್ ಹಾಲ್‌ ನಲ್ಲಿ ಬೆಳಿಗ್ಗೆ 10:30 ಕ್ಕೆ ನಡೆಯಲಿದೆ. ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಈ ಸಮ್ಮೇಳನವನ್ನು ಉದ್ಘಾಟಿಸಲು ಮತ್ತು ಈ ಸಂದರ್ಭದಲ್ಲಿ ಮುಖ್ಯ ಭಾಷಣ ಮಾಡಲು ಸಮ್ಮತಿಸಿದ್ದಾರೆ. ಉದ್ಘಾಟನಾ ಸಮಾರಂಭದ ನಂತರ, ಗೌರವಾನ್ವಿತ ಪ್ರಧಾನ ಮಂತ್ರಿಯವರು ಕಾಮನ್‌ವೆಲ್ತ್ ಮತ್ತು ಸ್ವಾಯತ್ತ ಸಂಸತ್ತುಗಳ ಸಭಾಧ್ಯಕ್ಷರು ಮತ್ತು ಅಧ್ಯಕ್ಷೀಯ ಅಧಿಕಾರಿಗಳೊಂದಿಗೆ ಅನೌಪಚಾರಿಕ ಸಂವಾದ ನಡೆಸಲಿದ್ದಾರೆ ಮತ್ತು ಅವರೊಂದಿಗೆ ಛಾಯಾಚಿತ್ರ ತೆಗೆಸಿಕೊಳ್ಳಲಿದ್ದಾರೆ.

ಸಮ್ಮೇಳನದ ವಿಷಯಗಳು

28ನೇ ಸಿ ಎಸ್‌ ಪಿ ಒ ಸಿ ಈ ಕೆಳಗಿನ ಕಾರ್ಯಸೂಚಿ ವಿಷಯಗಳ ಮೇಲೆ ಗಮನ ಕೇಂದ್ರೀಕರಿಸುತ್ತದೆ:

ನಾಲ್ಕು ಕಾರ್ಯಾಗಾರಗಳ ವಿಷಯಗಳು:

  • ಸಂಸತ್ತಿನಲ್ಲಿ ಕೃತಕಬುದ್ಧಿಮತ್ತೆ (ಎಐ): ನಾವೀನ್ಯತೆ, ಮೇಲ್ವಿಚಾರಣೆ ಮತ್ತು ಹೊಂದಾಣಿಕೆಯ ಸಮತೋಲನ.
  • ಸಾಮಾಜಿಕ ಮಾಧ್ಯಮ ಮತ್ತು ಸಂಸದರ ಮೇಲೆ ಅದರ ಪ್ರಭಾವ.
  • ಸಂಸತ್ತಿನ ಬಗ್ಗೆ ಸಾರ್ವಜನಿಕ ತಿಳುವಳಿಕೆಯನ್ನು ಹೆಚ್ಚಿಸಲು ಮತ್ತು ಮತದಾನವನ್ನು ಮೀರಿ ನಾಗರಿಕರ ಭಾಗವಹಿಸುವಿಕೆಯನ್ನು ಉತ್ತೇಜಿಸಲು ನವೀನ ಕಾರ್ಯತಂತ್ರಗಳು.
  • ಸಂಸತ್ ಸದಸ್ಯರು ಮತ್ತು ಸಂಸದೀಯ ಅಧಿಕಾರಿಗಳ ಭದ್ರತೆ, ಆರೋಗ್ಯ ಮತ್ತು ಯೋಗಕ್ಷೇಮ.

15 ಜನವರಿ 2026 ರಂದು, ಮೊದಲ ಎರಡು ವಿಷಯಗಳ ಬಗ್ಗೆ ಚರ್ಚಿಸಲಾಗುವುದು.

16 ಜನವರಿ 2026 ರಂದು, ಉಳಿದ ಎರಡು ವಿಷಯಗಳ ಬಗ್ಗೆ ಚರ್ಚಿಸಲಾಗುವುದು.

 

ವಿಶೇಷ ಸಮಗ್ರ ಅಧಿವೇಶನದ ವಿಷಯ

 

ಬಲವಾದ ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಕಾಪಾಡಿಕೊಳ್ಳುವಲ್ಲಿ ಸಭಾಧ್ಯಕ್ಷರು ಮತ್ತು ಅಧ್ಯಕ್ಷೀಯ ಅಧಿಕಾರಿಗಳ ಪಾತ್ರ.

15 ಮತ್ತು 16 ಜನವರಿ 2026 ರಂದು ಸಮಗ್ರ ಅಧಿವೇಶನದ ಅಧ್ಯಕ್ಷತೆ ವಹಿಸುವುದರ ಜೊತೆಗೆ, ಲೋಕಸಭಾ ಸ್ಪೀಕರ್ ಅವರು ತ್ವರಿತ ಸಂವಾದ ಅಧಿವೇಶನ, ವಿಶೇಷ ಸಮಗ್ರ ಸಭೆ ಮತ್ತು ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸುವ ಅವಕಾಶವನ್ನು ಹೊಂದಿರುತ್ತಾರೆ. ಅವರು ವಿಶೇಷ ಸಮಗ್ರ ಅಧಿವೇಶನದ ವಿಷಯವಾದ 'ಬಲವಾದ ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಕಾಪಾಡಿಕೊಳ್ಳುವಲ್ಲಿ ಸಭಾಧ್ಯಕ್ಷರು ಮತ್ತು ಅಧ್ಯಕ್ಷೀಯ ಅಧಿಕಾರಿಗಳ ಪಾತ್ರ'ದ ಕುರಿತು ಮುಖ್ಯ ಭಾಷಣವನ್ನೂ ಮಾಡಲಿದ್ದಾರೆ.

ಭಾರತದಲ್ಲಿ ನಡೆದ ಹಿಂದಿನ ಸಿ ಎಸ್‌ ಪಿ ಒ ಸಿ ಗಳು

ಭಾರತದ ಸಂಸತ್ತು ಇಲ್ಲಿಯವರೆಗೆ ಮೂರು ಬಾರಿ ಸಿ ಎಸ್‌ ಪಿ ಒ ಸಿ ಅನ್ನು ಆಯೋಜಿಸಿದೆ:

  • 1971 ರಲ್ಲಿ ನವದೆಹಲಿಯಲ್ಲಿ 2ನೇ ಸಿ ಎಸ್‌ ಪಿ ಒ ಸಿ.
  • 1986 ರ ಜನವರಿ 6 ರಿಂದ 8 ರವರೆಗೆ ನವದೆಹಲಿಯಲ್ಲಿ 8ನೇ ಸಿ ಎಸ್‌ ಪಿ ಒ ಸಿ.
  • 2010 ರ ಜನವರಿ 4 ರಿಂದ 8 ರವರೆಗೆ ನವದೆಹಲಿಯಲ್ಲಿ 20ನೇ ಸಿ ಎಸ್‌ ಪಿ ಒ ಸಿ. ನವದೆಹಲಿಯ ವಿಜ್ಞಾನ ಭವನವು 20ನೇ ಆವೃತ್ತಿಯ ವೇದಿಕೆಯಾಗಿತ್ತು. ಅಂದಿನ ಭಾರತದ ಪ್ರಧಾನ ಮಂತ್ರಿಯವರಾದ ಡಾ. ಮನಮೋಹನ್ ಸಿಂಗ್ ಅವರು 2010ರ ಸಿ ಎಸ್‌ ಪಿ ಒ ಸಿ ಅನ್ನು ಉದ್ಘಾಟಿಸಿ ಮುಖ್ಯ ಭಾಷಣ ಮಾಡಿದ್ದರು.

ಪ್ರತಿನಿಧಿಗಳ ಸ್ವಾಗತ ‌

ಕಾಮನ್‌ವೆಲ್ತ್ ಮತ್ತು ಸ್ವಾಯತ್ತ ಸಂಸತ್ತುಗಳ ಸಭಾಧ್ಯಕ್ಷರು ಮತ್ತು ಅಧ್ಯಕ್ಷೀಯ ಅಧಿಕಾರಿಗಳು ಹಾಗೂ ಅವರೊಂದಿಗೆ ಬರುವ ಪ್ರತಿನಿಧಿಗಳು ದೆಹಲಿಗೆ ಆಗಮಿಸಿದಾಗ ಅವರನ್ನು ಸ್ವಾಗತಿಸಲು ವ್ಯವಸ್ಥೆ ಮಾಡಲಾಗಿದೆ. ನಮ್ಮ 'ಅತಿಥಿ ದೇವೋ ಭವ' ಧ್ಯೇಯವಾಕ್ಯದಂತೆ ಅವರಿಗೆ ಸಾಂಪ್ರದಾಯಿಕ ಸ್ವಾಗತವನ್ನು ನೀಡಲಾಗುವುದು.

 

ಸಿ ಎಸ್‌ ಪಿ ಒ ಸಿ ಅಧ್ಯಕ್ಷರು

 

ಪ್ರತಿ ಸಮ್ಮೇಳನದ ಕೊನೆಯಲ್ಲಿ, ಮುಂದಿನ ಸಮ್ಮೇಳನದ ಸ್ಥಳವನ್ನು ಒಪ್ಪಿಕೊಂಡಾಗ, ಆ ಸಮ್ಮೇಳನದ ಆತಿಥ್ಯ ವಹಿಸುವ ಸ್ಪೀಕರ್ ಅಥವಾ ಅಧ್ಯಕ್ಷೀಯ ಅಧಿಕಾರಿಗಳು ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಾರೆ. ಅದರಂತೆ, ಜನವರಿ 2024 ರಲ್ಲಿ ಉಗಾಂಡದಲ್ಲಿ ನಡೆದ 27ನೇ ಸಿ ಎಸ್‌ ಪಿ ಒ ಸಿ ಯ ಅಂತ್ಯದಿಂದ ಲೋಕಸಭಾ ಸ್ಪೀಕರ್ ಅವರು ಸಿ ಎಸ್‌ ಪಿ ಒ ಸಿ ಯ ಅಧ್ಯಕ್ಷರಾಗಿದ್ದಾರೆ. 16 ಜನವರಿ 2026 ರಂದು ದೆಹಲಿಯಲ್ಲಿ 28ನೇ ಸಿ ಎಸ್‌ ಪಿ ಒ ಸಿ ಮುಕ್ತಾಯಗೊಂಡ ನಂತರ, ಲೋಕಸಭಾ ಸ್ಪೀಕರ್ ಅವರು ಅಧ್ಯಕ್ಷತೆಯನ್ನು ಯುಕೆ ಹೌಸ್ ಆಫ್ ಕಾಮನ್ಸ್‌ನ ಸ್ಪೀಕರ್ ಗೌರವಾನ್ವಿತ ಸರ್ ಲಿಂಡ್ಸೆ ಹಾಯ್ಲ್ ಅವರಿಗೆ ಹಸ್ತಾಂತರಿಸಲಿದ್ದಾರೆ.

 

ಸಿ ಎಸ್‌ ಪಿ ಒ ಸಿ ಯಲ್ಲಿ ಭಾಗವಹಿಸುವವರು

 

ಸಿ ಎಸ್‌ ಪಿ ಒ ಸಿ ಯಲ್ಲಿ 53 ಕಾಮನ್‌ವೆಲ್ತ್ ದೇಶಗಳ ಸಂಸತ್ತುಗಳ ಸಭಾಧ್ಯಕ್ಷರು ಮತ್ತು ಅಧ್ಯಕ್ಷೀಯ ಅಧಿಕಾರಿಗಳು ಭಾಗವಹಿಸುತ್ತಾರೆ (ಪಟ್ಟಿ ಲಗತ್ತಿಸಲಾಗಿದೆ). ಇವುಗಳಲ್ಲಿ 23 ದ್ವಿಸದನ ಸಂಸತ್ತುಗಳು ಮತ್ತು 30 ಏಕಸದನ ಸಂಸತ್ತುಗಳು ಸೇರಿವೆ.

ಸಭಾಧ್ಯಕ್ಷರು/ಅಧ್ಯಕ್ಷೀಯ ಅಧಿಕಾರಿಗಳ ಒಟ್ಟು ಸಂಖ್ಯೆ - 76

 

ಕ್ಲರ್ಕ್‌ಗಳು/ಕಾರ್ಯದರ್ಶಿಗಳ ಒಟ್ಟು ಸಂಖ್ಯೆ - 71

ಇತರ ಭಾಗವಹಿಸುವವರಲ್ಲಿ ಸಾಮಾನ್ಯವಾಗಿ 14 ಅರೆ-ಸ್ವಾಯತ್ತ ಸಂಸತ್ತುಗಳ ಅಧ್ಯಕ್ಷೀಯ ಅಧಿಕಾರಿಗಳು, ಸಿಪಿಎ (ಸಿಪಿಎ) ಪ್ರಧಾನ ಕಾರ್ಯದರ್ಶಿ ಮತ್ತು ಜೊತೆಯಲ್ಲಿ ಬರುವ ಅಧಿಕಾರಿಗಳು ಸೇರಿರುತ್ತಾರೆ. ಪ್ರತಿ ಸಿ ಎಸ್‌ ಪಿ ಒ ಸಿ ಗೆ ವೀಕ್ಷಕರಾಗಿ ನಿಯಮಿತವಾಗಿ ಆಹ್ವಾನಿಸಲಾಗುವ 14 ಅರೆ-ಸ್ವಾಯತ್ತ ಸಂಸತ್ತುಗಳೆಂದರೆ: ಅಲ್ಡರ್ನಿ, ಆಂಗ್ವಿಲ್ಲಾ, ಬ್ರಿಟಿಷ್ ವರ್ಜಿನ್ ಐಲ್ಯಾಂಡ್ಸ್, ಕೇಮನ್ ಐಲ್ಯಾಂಡ್ಸ್, ಕುಕ್ ಐಲ್ಯಾಂಡ್ಸ್, ಫಾಕ್ಲ್ಯಾಂಡ್ ಐಲ್ಯಾಂಡ್ಸ್, ಗಿಬ್ರಾಲ್ಟರ್, ಗುರ್ನಸಿ, ಐಲ್ ಆಫ್ ಮ್ಯಾನ್, ಜರ್ಸಿ, ಮಾಂಟ್ಸೆರಾಟ್, ನಿಯು, ಸೇಂಟ್ ಹೆಲೆನಾ ಸೌತ್ ಅಟ್ಲಾಂಟಿಕ್ ಮತ್ತು ಟರ್ಕ್ಸ್ ಅಂಡ್ ಕೈಕೋಸ್.

ಜನವರಿ 2025 ರಲ್ಲಿ ಗುರ್ನಸಿಯಲ್ಲಿ ನಡೆದ ಸಿ ಎಸ್‌ ಪಿ ಒ ಸಿ ಸ್ಥಾಯಿ ಸಮಿತಿ ಸಭೆಯ ಅಧ್ಯಕ್ಷತೆಯನ್ನು ಲೋಕಸಭಾ ಸ್ಪೀಕರ್ ವಹಿಸಿದ್ದರು

28ನೇ ಸಿ ಎಸ್‌ ಪಿ ಒ ಸಿ ಯ ಆತಿಥೇಯರಾಗಿ, ಲೋಕಸಭಾ ಸ್ಪೀಕರ್ ಅವರು 10 ಜನವರಿ 2025 ರಂದು ಗುರ್ನಸಿಯಲ್ಲಿ ನಡೆದ ಸ್ಥಾಯಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸುವ ಗೌರವವನ್ನು ಹೊಂದಿದ್ದರು. ಜನವರಿ 2026 ರಲ್ಲಿ ಭಾರತದಲ್ಲಿ ನಡೆಯಲಿರುವ 28ನೇ ಸಿ ಎಸ್‌ ಪಿ ಒ ಸಿ ನ ದಿನಾಂಕಗಳು ಮತ್ತು ಕಾರ್ಯಸೂಚಿ ವಿಷಯಗಳನ್ನು ಅಂತಿಮಗೊಳಿಸುವುದು ಈ ಸಭೆಯ ಉದ್ದೇಶವಾಗಿತ್ತು.

28ನೇ ಸಿ ಎಸ್‌ ಪಿ ಒ ಸಿ ದಿನಾಂಕಗಳು

ಜನವರಿ ತಿಂಗಳಲ್ಲಿ ಸಿ ಎಸ್‌ ಪಿ ಒ ಸಿ ಆಯೋಜಿಸುವ ಸಂಪ್ರದಾಯಕ್ಕೆ ಅನುಗುಣವಾಗಿ, 28ನೇ ಸಿ ಎಸ್‌ ಪಿ ಒ ಸಿ ಅನ್ನು ಭಾರತದ ಸಂಸತ್ತು 14-16 ಜನವರಿ 2026 ರವರೆಗೆ ಆಯೋಜಿಸುತ್ತಿದೆ. 28ನೇ ಸಿ ಎಸ್‌ ಪಿ ಒ ಸಿ ಯ ಉದ್ಘಾಟನಾ ಸಮಾರಂಭವು ಗುರುವಾರ, 15 ಜನವರಿ 2026 ರಂದು ನಡೆಯಲಿದೆ.

ಸಮ್ಮೇಳನವು ಈ ಕೆಳಗಿನ ಸಭೆಗಳನ್ನು ಒಳಗೊಂಡಿರುತ್ತದೆ:

 

ದಿನ 1: ಆಗಮನ ಮತ್ತು ಸ್ಥಾಯಿ ಸಮಿತಿಯ ಸಭೆ (15 ಅಧ್ಯಕ್ಷೀಯ ಅಧಿಕಾರಿಗಳನ್ನು ಒಳಗೊಂಡಿರುತ್ತದೆ), ಬುಧವಾರ, 14 ಜನವರಿ 2026.

 

ದಿನ 2: ಉದ್ಘಾಟನಾ ಸಮಾರಂಭ, ನಂತರ ಕಾರ್ಯಾಗಾರ ವಿಷಯ ಎ ಮತ್ತು ಬಿ ಗಾಗಿ ಉದ್ಘಾಟನಾ ಅಧಿವೇಶನ, ನಂತರ ಎ ಮತ್ತು ಬಿ ವಿಷಯಗಳ ಕುರಿತು ಸಮಾನಾಂತರ ಕಾರ್ಯಾಗಾರಗಳು, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಭೇಟಿ ನೀಡುವ ಸಭಾಧ್ಯಕ್ಷರು ಹಾಗೂ ಇತರ ಆಹ್ವಾನಿತರಿಗಾಗಿ ಲೋಕಸಭಾ ಸ್ಪೀಕರ್ ಅವರಿಂದ ಔತಣಕೂಟ, ಗುರುವಾರ, 15 ಜನವರಿ 2026.

 

ದಿನ 3: ಕಾರ್ಯಾಗಾರ ವಿಷಯ ಸಿ ಮತ್ತು ಡಿ ಗಾಗಿ ಉದ್ಘಾಟನಾ ಅಧಿವೇಶನ, ನಂತರ ಸಿ ಮತ್ತು ಡಿ ವಿಷಯಗಳ ಕುರಿತು ಸಮಾನಾಂತರ ಕಾರ್ಯಾಗಾರಗಳು, ಭಾರತದ ಉಪರಾಷ್ಟ್ರಪತಿಗಳಿಂದ ಮಧ್ಯಾಹ್ನದ ಭೋಜನ, ತ್ವರಿತ ಸಂವಾದ ಸಭೆ, ವಿಶೇಷ ಸಮಗ್ರ ಅಧಿವೇಶನ ಮತ್ತು ಸಮಾರೋಪ ಅಧಿವೇಶನ, ಶುಕ್ರವಾರ, 16 ಜನವರಿ 2026.

 

ದಿನ 4 ಮತ್ತು 5: ಸಮ್ಮೇಳನದ ನಂತರದ ಜೈಪುರ ಪ್ರವಾಸ, 17-18 ಜನವರಿ 2026.

 

18 ಜನವರಿ 2026 ರಂದು ದೆಹಲಿಗೆ ಮರಳುವುದು ಮತ್ತು ನಿಯೋಗಗಳು ತಮ್ಮ  ದೇಶಗಳಿಗೆ ನಿರ್ಗಮಿಸುವುದು.

 

28ನೇ ಸಿ ಎಸ್‌ ಪಿ ಒ ಸಿ ಸ್ಥಳ

 

ಸಂಸತ್ ಭವನ ಸಂಕೀರ್ಣ, ನವದೆಹಲಿ.

  • ಉದ್ಘಾಟನಾ ಸಮಾರಂಭ ಮತ್ತು ಸಮಗ್ರ ಸಭೆಗಳು ಸಂವಿಧಾನ ಸದನದ ಐತಿಹಾಸಿಕ ಸೆಂಟ್ರಲ್ ಹಾಲ್‌ನಲ್ಲಿ ನಡೆಯಲಿವೆ.
  • ಕಾರ್ಯಾಗಾರಗಳು ಸಂವಿಧಾನ ಸದನದ ಲೋಕಸಭಾ ಚೇಂಬರ್, ರಾಜ್ಯಸಭಾ ಚೇಂಬರ್ ಮತ್ತು ಚೇಂಬರ್ ಆಫ್ ಪ್ರಿನ್ಸಸ್‌ ನಲ್ಲಿ ನಡೆಯಲಿವೆ.
  • ಜನವರಿ 14 ರಂದು ಸಿ ಎಸ್‌ ಪಿ ಒ ಸಿ ಸ್ಥಾಯಿ ಸಮಿತಿ ಸಭೆಯು ದೆಹಲಿಯ ಕೆಂಪು ಕೋಟೆಯ ಆವರಣದಲ್ಲಿ ನಡೆಯಲಿದ್ದು, ನಂತರ ಔತಣಕೂಟವಿರುತ್ತದೆ. ಸಭೆಯ ಮೊದಲು ಕೆಂಪು ಕೋಟೆಯ ಪ್ರವಾಸ ಮತ್ತು ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಇರುತ್ತದೆ.

28ನೇ ಸಿ ಎಸ್‌ ಪಿ ಒ ಸಿ ಯ ವಿಶೇಷ ಆಹ್ವಾನಿತರು

  • ಅಂತರ-ಸಂಸದೀಯ ಒಕ್ಕೂಟದ (ಐಪಿಯು) ಅಧ್ಯಕ್ಷರಾದ ಗೌರವಾನ್ವಿತ ಡಾ. ತುಲಿಯಾ ಅಕ್ಸನ್.
  • ಕಾಮನ್‌ವೆಲ್ತ್ ಸಂಸದೀಯ ಸಂಘದ (ಸಿಪಿಎ) ಅಧ್ಯಕ್ಷರಾದ ಗೌರವಾನ್ವಿತ ಡಾ. ಕ್ರಿಸ್ಟೋಫರ್ ಕಲಿಲಾ.

ಸಮ್ಮೇಳನದ ನಂತರದ ಜೈಪುರಕ್ಕೆ ಪ್ರವಾಸ

ಸಿ ಎಸ್‌ ಪಿ ಒ ಸಿ ಸಂಪ್ರದಾಯದ ಭಾಗವಾಗಿ, ಭೇಟಿ ನೀಡುವ ಪ್ರತಿನಿಧಿಗಳಿಗಾಗಿ 17-18 ಜನವರಿ 2026 ರಂದು ಜೈಪುರ ಪ್ರವಾಸವನ್ನು ಆಯೋಜಿಸಲಾಗುವುದು. ರಾಜಸ್ಥಾನ ಸರ್ಕಾರದ ಬೆಂಬಲದೊಂದಿಗೆ ಲೋಕಸಭಾ ಸ್ಪೀಕರ್ ಅವರು ಪ್ರತಿನಿಧಿಗಳಿಗಾಗಿ ವ್ಯವಸ್ಥೆಗಳನ್ನು ಮಾಡಿದ್ದಾರೆ. ಪ್ರತಿನಿಧಿಗಳು ಜನವರಿ 17 ರಂದು ವಿಮಾನದ ಮೂಲಕ ಜೈಪುರಕ್ಕೆ ಪ್ರಯಾಣ ಬೆಳೆಸಿ ಜನವರಿ 18 ರಂದು ದೆಹಲಿಗೆ ಮರಳುತ್ತಾರೆ.

ಸಂಖ್ಯೆಗಳಲ್ಲಿ 28ನೇ ಸಿ ಎಸ್‌ ಪಿ ಒ ಸಿ (6 ಜನವರಿ 2026 ರಂತೆ)

  • ಭಾಗವಹಿಸುವಿಕೆಯನ್ನು ಖಚಿತಪಡಿಸಿರುವ ಸಿ ಎಸ್‌ ಪಿ ಒ ಸಿ ದೇಶಗಳು ಮತ್ತು ಸ್ವಾಯತ್ತ ಸಂಸತ್ತುಗಳ ಸಭಾಧ್ಯಕ್ಷರು ಮತ್ತು ಅಧ್ಯಕ್ಷೀಯ ಅಧಿಕಾರಿಗಳ ಒಟ್ಟು ಸಂಖ್ಯೆ: 59
  • ಲೋಕಸಭಾ ಸ್ಪೀಕರ್ ಮತ್ತು ರಾಜ್ಯಸಭೆಯ ಉಪಾಧ್ಯಕ್ಷರನ್ನು ಒಳಗೊಂಡಂತೆ: 61
  • ಭಾಗವಹಿಸುವಿಕೆಯನ್ನು ಖಚಿತಪಡಿಸಿರುವ 61 ಜನರಲ್ಲಿ, 44 ಸಭಾಧ್ಯಕ್ಷರು ಮತ್ತು 15 ಉಪ ಸ್ಪೀಕರ್‌ ಗಳಿದ್ದಾರೆ.
  • 44 ಸಭಾಧ್ಯಕ್ಷರಲ್ಲಿ, 41 ಸಭಾಧ್ಯಕ್ಷರು ಸಿ ಎಸ್‌ ಪಿ ಒ ಸಿ ದೇಶಗಳಿಂದ ಮತ್ತು ನಾಲ್ವರು ಸಭಾಧ್ಯಕ್ಷರು ಸ್ವಾಯತ್ತ ಸಂಸತ್ತುಗಳಿಗೆ ಸೇರಿದ್ದಾರೆ.
  • ಭಾರತವನ್ನು ಒಳಗೊಂಡಂತೆ ಪ್ರತಿನಿಧಿಸಲ್ಪಟ್ಟ ಸಿ ಎಸ್‌ ಪಿ ಒ ಸಿ ದೇಶಗಳ ಒಟ್ಟು ಸಂಖ್ಯೆ: 41 - ಆಂಟಿಗುವಾ ಮತ್ತು ಬಾರ್ಬುಡಾ, ಆಸ್ಟ್ರೇಲಿಯಾ, ಬೆಲೀಜ್, ಬೋಟ್ಸ್ವಾನಾ, ಕ್ಯಾಮರೂನ್, ಕೆನಡಾ, ಡೊಮಿನಿಕಾ, ಫಿಜಿ, ಗಯಾನಾ, ಘಾನಾ, ಗ್ರೆನಡಾ, ಜಮೈಕಾ, ಕೀನ್ಯಾ, ಕಿರಿಬಾಟಿ, ಲೆಸೊಥೊ, ಮಲಾವಿ, ಮಲೇಷ್ಯಾ, ಮಾಲ್ಡೀವ್ಸ್, ಮಾಲ್ಟಾ, ಮಾರಿಷಸ್, ಮೊಜಾಂಬಿಕ್, ನಮೀಬಿಯಾ, ನೌರು, ನೈಜೀರಿಯಾ, ಪಪುವಾ ನ್ಯೂ ಗಿನಿ, ರುವಾಂಡಾ, ಸೇಂಟ್ ಕಿಟ್ಸ್ ಮತ್ತು ನೆವಿಸ್, ಸೀಶೆಲ್ಸ್, ಸಿಯೆರಾ ಲಿಯೋನ್, ಸಿಂಗಾಪುರ, ಸೊಲೊಮನ್ ದ್ವೀಪಗಳು, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಸೇಂಟ್ ಲೂಸಿಯಾ, ಟಾಂಜಾನಿಯಾ, ಬಹಾಮಾಸ್, ಟೊಂಗಾ, ಟ್ರಿನಿಡಾಡ್ ಮತ್ತು ಟೊಬಾಗೊ, ಟುವಾಲು, ಯುನೈಟೆಡ್ ಕಿಂಗ್‌ಡಮ್, ಜಾಂಬಿಯಾ.
  • ಪ್ರತಿನಿಧಿಸುವ ಅರೆ-ಸ್ವಾಯತ್ತ ಸಂಸತ್ತುಗಳ ಸಂಖ್ಯೆ: 4 - ಗುರ್ನಸಿ, ಐಲ್ ಆಫ್ ಮ್ಯಾನ್, ಜರ್ಸಿ, ಮಾಂಟ್ಸೆರಾಟ್.
  • ವಿಶೇಷ ಆಹ್ವಾನಿತರು - ಭಾಗವಹಿಸುವಿಕೆ ಖಚಿತಪಡಿಸಿದವರು:

o ಗೌರವಾನ್ವಿತ ಡಾ. ತುಲಿಯಾ ಅಕ್ಸನ್, ಅಧ್ಯಕ್ಷರು, ಐಪಿಯು

o ಗೌರವಾನ್ವಿತ ಡಾ. ಕ್ರಿಸ್ಟೋಫರ್ ಕಲಿಲಾ, ಅಧ್ಯಕ್ಷರು, ಸಿಪಿಎ

  • ಪ್ರತಿನಿಧಿಸದ ಸಿ ಎಸ್‌ ಪಿ ಒ ಸಿ ದೇಶಗಳು:
  1. ಬಾರ್ಬಡೋಸ್
  2. ಬರ್ಮುಡಾ
  3. ಸೈಪ್ರಸ್
  4. ನ್ಯೂಜಿಲೆಂಡ್
  5. ಉಗಾಂಡಾ
  6. ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್
  7. ವನುವಾಟು
  8. ಎಸ್ವಾಟಿನಿ
  • ದೃಢೀಕರಕ್ಕಾಗಿ ಕಾಯಲಾಗುತ್ತಿರುವ ದೇಶಗಳು:
  1. ಸಮೋವಾ

ಪ್ರತಿನಿಧಿಸದ ಅರೆ-ಸ್ವಾಯತ್ತ ಸಂಸತ್ತುಗಳು:

  1. ಬ್ರಿಟಿಷ್ ವರ್ಜಿನ್ ಐಲ್ಯಾಂಡ್ಸ್
  2. ಫಾಕ್ಲ್ಯಾಂಡ್ ಐಲ್ಯಾಂಡ್ಸ್
  3. ಗಿಬ್ರಾಲ್ಟರ್
  4. ನಿಯು
  5. ಸೇಂಟ್ ಹೆಲೆನಾ

 ದೃಢೀಕರಣಕ್ಕಾಗಿ ಕಾಯುತ್ತಿರುವ ಅರೆ-ಸ್ವಾಯತ್ತ ಸಂಸತ್ತುಗಳು:

      1. ಅಲ್ಡರ್ನಿ
      2. ಆಂಗ್ವಿಲ್ಲಾ
      3. ಕೇಮನ್ ಐಲ್ಯಾಂಡ್ಸ್
      4. ಕುಕ್ ಐಲ್ಯಾಂಡ್ಸ್
      5. ಟರ್ಕ್ಸ್ ಅಂಡ್ ಕೈಕೋಸ್

 

  • ಪ್ರತಿನಿಧಿಗಳ ಒಟ್ಟು ಸಂಖ್ಯೆ - 229
  • ಪ್ರಧಾನ ಕಾರ್ಯದರ್ಶಿಗಳ ಸಂಖ್ಯೆ - 40
  • ಸಂಸತ್ ಸದಸ್ಯರು – 11
  • ರಾಜತಾಂತ್ರಿಕರು – 8
  • ಜೊತೆಯಲ್ಲಿ ಬರುವ ಅಧಿಕಾರಿಗಳು - 96
  • ಸಮ್ಮೇಳನದ ನಂತರದ ಪ್ರವಾಸವನ್ನು ಆಯ್ಕೆ ಮಾಡಿದ ಪ್ರತಿನಿಧಿಗಳು – 184

ಭಾರತದ ಸಂಸತ್ತು ಆಯೋಜಿಸಿದ ಕೊನೆಯ ಅಂತರ-ಸಂಸದೀಯ ಸಮ್ಮೇಳನ

  • ಅಕ್ಟೋಬರ್ 2023 ರಲ್ಲಿ ನಡೆದ 9ನೇ ಜಿ20 ಸಂಸದೀಯ ಸ್ಪೀಕರ್‌ಗಳ ಶೃಂಗಸಭೆಯು (P20) ಭಾರತದ ಸಂಸತ್ತು ಆಯೋಜಿಸಿದ ಕೊನೆಯ ಅಂತರ-ಸಂಸದೀಯ ಸಮ್ಮೇಳನವಾಗಿದೆ.
  • ಇದನ್ನು ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉದ್ಘಾಟಿಸಿದರು.
  • ನವದೆಹಲಿಯ ದ್ವಾರಕಾದಲ್ಲಿರುವ ಯಶೋಭೂಮಿ ಇದರ ವೇದಿಕೆಯಾಗಿತ್ತು.
  • ಹೋಲಿಕೆಗಾಗಿ ಹೇಳುವುದಾದರೆ, ಪಿ20 ರಲ್ಲಿ 20 ಜಿ20 ಸದಸ್ಯರು ಮತ್ತು 8 ಆಹ್ವಾನಿತ ದೇಶಗಳು ಭಾಗವಹಿಸಿದ್ದವು. ಸಿ ಎಸ್‌ ಪಿ ಒ ಸಿ ಯು 53 ಕಾಮನ್‌ವೆಲ್ತ್ ದೇಶಗಳು ಮತ್ತು 14 ಸ್ವಾಯತ್ತ ಸಂಸತ್ತುಗಳನ್ನು ಹೊಂದಿದೆ.

ಸಿ ಎಸ್‌ ಪಿ ಒ ಸಿ ಸದಸ್ಯ ಸಂಸತ್ತುಗಳು

ಆಫ್ರಿಕಾ ಪ್ರದೇಶ

(18 ದೇಶಗಳು)

  • ಬೋಟ್ಸ್ವಾನಾ
  • ಕ್ಯಾಮರೂನ್
  • ಘಾನಾ
  • ಕೀನ್ಯಾ
  • ಕಿಂಗಡಮ್‌ ಆಫ್‌ ಎಸ್ವಾಟಿನಿ
  • ಲೆಸೊಥೊ
  • ಮಲಾವಿ
  • ಮಾರಿಷಸ್
  • ಮೊಜಾಂಬಿಕ್
  • ನಮೀಬಿಯಾ
  • ನೈಜೀರಿಯಾ
  • ರುವಾಂಡಾ
  • ಸೀಶೆಲ್ಸ್
  • ಸಿಯೆರಾ ಲಿಯೋನ್
  • ದಕ್ಷಿಣ ಆಫ್ರಿಕಾ
  • ತಾಂಜಾನಿಯಾ
  • ಉಗಾಂಡಾ
  • ಜಾಂಬಿಯಾ

 

ಏಷ್ಯಾ ಪ್ರದೇಶ

(4 ದೇಶಗಳು)

  • ಬಾಂಗ್ಲಾದೇಶ

· ಮಾಲ್ಡೀವ್ಸ್

· ಪಾಕಿಸ್ತಾನ

  • ಶ್ರೀಲಂಕಾ

 

ಆಸ್ಟ್ರೇಲಿಯಾ/ನ್ಯೂಜಿಲೆಂಡ್ ಪ್ರದೇಶ

(2 ದೇಶಗಳು)

  • ಆಸ್ಟ್ರೇಲಿಯಾ
  • ನ್ಯೂಜಿಲೆಂಡ್

 

ಬ್ರಿಟಿಷ್ ದ್ವೀಪಗಳು ಮತ್ತು ಮೆಡಿಟರೇನಿಯನ್ ಪ್ರದೇಶ

(3 ದೇಶಗಳು)

  • ಸೈಪ್ರಸ್

· ಮಾಲ್ಟಾ

  • ಯುನೈಟೆಡ್ ಕಿಂಗ್‌ಡಮ್

 

ಕೆನಡಾ ಪ್ರದೇಶ

(1 ದೇಶ)

· ಕೆನಡಾ

 

ಕೆರಿಬಿಯನ್, ಅಮೆರಿಕ ಮತ್ತು ಅಟ್ಲಾಂಟಿಕ್ ಪ್ರದೇಶ

(13 ದೇಶಗಳು)

  • ಆಂಟಿಗುವಾ ಮತ್ತು ಬಾರ್ಬುಡಾ
  • ಬಹಾಮಾಸ್
  • ಬಾರ್ಬಡೋಸ್
  • ಬೆಲೀಜ್
  • ಬರ್ಮುಡಾ
  • ಡೊಮಿನಿಕಾ
  • ಗ್ರೆನಡಾ
  • ಗಯಾನಾ
  • ಜಮೈಕಾ
  • ಸೇಂಟ್ ಕಿಟ್ಸ್ ಮತ್ತು ನೆವಿಸ್
  • ಸೇಂಟ್ ಲೂಸಿಯಾ
  • ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್
  • ಟ್ರಿನಿಡಾಡ್ ಮತ್ತು ಟೊಬಾಗೊ

 

ಪೆಸಿಫಿಕ್ ಪ್ರದೇಶ

(9 ದೇಶಗಳು)

ಫಿಜಿ ದ್ವೀಪಗಳು

· ಕಿರಿಬಾಟಿ

· ನೌರು

· ಪಪುವಾ ನ್ಯೂ ಗಿನಿ

· ಸಮೋವಾ

· ಸೊಲೊಮನ್ ದ್ವೀಪಗಳು

· ಟೊಂಗಾ

· ಟುವಾಲು

· ವನುವಾಟು

 

ಆಗ್ನೇಯ ಏಷ್ಯಾ ಪ್ರದೇಶ

(2 ದೇಶಗಳು)

  • ಮಲೇಷ್ಯಾ
  • ಸಿಂಗಾಪುರ

 

ಭಾರತ ಪ್ರದೇಶ

  • ಭಾರತ

 

*****


(रिलीज़ आईडी: 2214351) आगंतुक पटल : 5
इस विज्ञप्ति को इन भाषाओं में पढ़ें: English , Urdu , हिन्दी , Odia , Malayalam