ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
azadi ka amrit mahotsav

ಮಾಲಿನ್ಯ ರಹಿತ ಸಾರಿಗೆಯನ್ನು ಉತ್ತೇಜಿಸಲು ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಮತ್ತು ನಿತಿನ್ ಗಡ್ಕರಿ ಅವರು ಹೈಡ್ರೋಜನ್ ಇಂಧನ ಕೋಶ ವಾಹನದಲ್ಲಿ ಜಂಟಿಯಾಗಿ ಪ್ರಯಾಣಿಸಿದರು

प्रविष्टि तिथि: 06 JAN 2026 4:45PM by PIB Bengaluru

ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಮತ್ತು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ಶ್ರೀ ನಿತಿನ್ ಗಡ್ಕರಿ ಅವರು ಇಂದು ಟೊಯೋಟಾ ಮಿರೈ ಹೈಡ್ರೋಜನ್ ಇಂಧನ ಕೋಶ ಎಲೆಕ್ಟ್ರಿಕ್ ವಾಹನದಲ್ಲಿ (ಎಫ್‌ ಸಿ ಇ ವಿ) ಜಂಟಿಯಾಗಿ ಪ್ರಯಾಣಿಸಿದರು.

ಈ ಸಂದರ್ಭದಲ್ಲಿ, ಶ್ರೀ ಪ್ರಲ್ಹಾದ್ ಜೋಶಿ ಅವರು ದೇಶದಲ್ಲಿ ಹಸಿರು ಹೈಡ್ರೋಜನ್ ಮತ್ತು ಮಾಲಿನ್ಯ ರಹಿತ ಸಾರಿಗೆ ಉತ್ತೇಜಿಸುವಲ್ಲಿ ಸರ್ಕಾರದ ಬದ್ಧತೆಯನ್ನು ತೋರಿಸಲು, ಭಾರತ ಮಂಟಪದಿಂದ ಶ್ರೀ ನಿತಿನ್ ಗಡ್ಕರಿ ಅವರ ನಿವಾಸದವರೆಗೆ 'ಮಿರೈ' ವಾಹನವನ್ನು ಚಲಾಯಿಸಿದರು.

ಟೊಯೋಟಾ ಮಿರೈ ಬಗ್ಗೆ

ಟೊಯೋಟಾ 'ಮಿರೈ' ಎರಡನೇ ತಲೆಮಾರಿನ ಹೈಡ್ರೋಜನ್ ಇಂಧನ ಕೋಶ ಎಲೆಕ್ಟ್ರಿಕ್ ವಾಹನವಾಗಿದೆ (ಎಫ್‌ ಸಿ ಇ ವಿ). ಇದು ಜಲಜನಕ ಮತ್ತು ಆಮ್ಲಜನಕದ ನಡುವಿನ ರಾಸಾಯನಿಕ ಕ್ರಿಯೆಯಿಂದ ವಿದ್ಯುತ್ ಉತ್ಪಾದಿಸುತ್ತದೆ ಮತ್ತು ಕೇವಲ ನೀರಿನ ಹಬೆಯನ್ನು ಮಾತ್ರ ಹೊರಹಾಕುತ್ತದೆ. ಒಮ್ಮೆ ಇಂಧನ ತುಂಬಿಸಿದರೆ ಸುಮಾರು 650 ಕಿ.ಮೀ ವರೆಗೆ ಚಲಿಸುವ ಸಾಮರ್ಥ್ಯ ಹೊಂದಿರುವ ಈ ಕಾರು, ಐದು ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ಇಂಧನ ಮರುಪೂರಣ ಮಾಡಿಕೊಳ್ಳಬಲ್ಲದು. ಇದು ವಿಶ್ವದ ಅತ್ಯಂತ ಸುಧಾರಿತ ಮತ್ತು ದಕ್ಷವಾದ ಮಾಲಿನ್ಯರಹಿತ ಸಾರಿಗೆ ವ್ಯವಸ್ಥೆಗಳಲ್ಲಿ ಒಂದಾಗಿದೆ.

 

*****


(रिलीज़ आईडी: 2211790) आगंतुक पटल : 13
इस विज्ञप्ति को इन भाषाओं में पढ़ें: English , Urdu , Marathi , हिन्दी , Telugu