ರೈಲ್ವೇ ಸಚಿವಾಲಯ
azadi ka amrit mahotsav

ಭಾರತೀಯ ರೈಲ್ವೆಯಿಂದ ರಾಷ್ಟ್ರಕ್ಕೆ ಹೊಸ ವರ್ಷದ ಉಡುಗೊರೆ: ಗುವಾಹಟಿ ಮತ್ತು ಹೌರಾ ನಡುವೆ ಸಂಚರಿಸಲಿರುವ ಮೊದಲ ವಂದೇ ಭಾರತ್‌ ಸ್ಲೀಪರ್‌ ರೈಲು

प्रविष्टि तिथि: 01 JAN 2026 5:03PM by PIB Bengaluru

ಕೇಂದ್ರ ರೈಲ್ವೆ, ವಾರ್ತಾ ಮತ್ತು ಪ್ರಸಾರ ಮತ್ತು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಶ್ರೀ ಅಶ್ವಿನಿ ವೈಷ್ಣವ್‌ ಅವರು ಇಂದು ನವದೆಹಲಿಯ ರೈಲು ಭವನದಲ್ಲಿ ನಡೆದ ಸಭೆಯಲ್ಲಿ ಹೊಸ ವರ್ಷದ ಶುಭಾಶಯಗಳನ್ನು ಕೋರಿದರು. ಈ ವೇಳೆ ಮೊದಲ ವಂದೇ ಭಾರತ್‌ ಸ್ಲೀಪರ್‌ ರೈಲು ಅಸ್ಸಾಂನ ಗುವಾಹಟಿ ಮತ್ತು ಪಶ್ಚಿಮ ಬಂಗಾಳದ ಹೌರಾ ನಡುವೆ ಸಂಚರಿಸಲಿದೆ ಎಂದು ಘೋಷಿಸಿದರು. ವಂದೇ ಭಾರತ್‌ ಸ್ಲೀಪರ್‌ ರೈಲಿನ ಸಂಪೂರ್ಣ ಪ್ರಯೋಗ, ಪರೀಕ್ಷೆ ಮತ್ತು ಪ್ರಮಾಣೀಕರಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ ಎಂದು ಅವರು ತಿಳಿಸಿದರು. ಜನವರಿ ತಿಂಗಳಲ್ಲಿ, ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಈ ಮಾರ್ಗದಲ್ಲಿ ಮೊದಲ ವಂದೇ ಭಾರತ್‌ ಸ್ಲೀಪರ್‌ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ. ಈ ಬೆಳವಣಿಗೆಯು ಭಾರತೀಯ ರೈಲ್ವೆ, ರಾಷ್ಟ್ರ ಮತ್ತು ಅದರ ರೈಲು ಪ್ರಯಾಣಿಕರಿಗೆ ಮಹತ್ವದ ಮೈಲಿಗಲ್ಲನ್ನು ಪ್ರತಿನಿಧಿಸುತ್ತದೆ ಎಂದು ಸಚಿವರು ಹೇಳಿದರು. 2026 ಭಾರತೀಯ ರೈಲ್ವೆಗೆ ಪ್ರಮುಖ ಸುಧಾರಣೆಗಳ ವರ್ಷವಾಗಲಿದೆ, ಹಲವಾರು ಪ್ರಯಾಣಿಕ ಕೇಂದ್ರಿತ ಉಪಕ್ರಮಗಳನ್ನು ಪರಿಚಯಿಸಲಾಗುವುದು ಎಂದು ಅವರು ಉಲ್ಲೇಖಿಸಿದರು.

ವಂದೇ ಭಾರತ್‌ ಸ್ಲೀಪರ್‌ ರೈಲಿನಿಂದ ಪ್ರಯೋಜನ ಪಡೆದ ಜಿಲ್ಲೆಗಳಲ್ಲಿಅಸ್ಸಾಂ ರಾಜ್ಯದ ಕಾಮರೂಪ್‌ ಮೆಟ್ರೋಪಾಲಿಟನ್‌ ಮತ್ತು ಬೊಂಗೈಗಾಂವ್‌ ಮತ್ತು ಪಶ್ಚಿಮ ಬಂಗಾಳ ರಾಜ್ಯದ ಕೂಚ್‌ ಬೆಹಾರ್‌, ಜಲ್ಪೈಗುರಿ, ಮಾಲ್ಡಾ, ಮುರ್ಷಿದಾಬಾದ್‌, ಪುರ್ಬಾ ಬರ್ಧಮಾನ್‌, ಹೂಗ್ಲಿಮತ್ತು ಹೌರಾ ಸೇರಿವೆ. ಈ ರೈಲು 16 ಬೋಗಿಗಳನ್ನು ಹೊಂದಿರುತ್ತದೆ, ಇದರಲ್ಲಿ11 ಮೂರು ಹಂತದ ಹವಾನಿಯಂತ್ರಿತ ಬೋಗಿಗಳು, 4 ಎರಡು ಹಂತದ ಹವಾನಿಯಂತ್ರಿತ ಬೋಗಿಗಳು ಮತ್ತು 1 ಪ್ರಥಮ ದರ್ಜೆ ಎಸಿ ಬೋಗಿಗಳು ಸೇರಿವೆ, ಒಟ್ಟು 823 ಪ್ರಯಾಣಿಕರ ಸಾಮರ್ಥ್ಯ‌ ಹೊಂದಿವೆ.

ಹೊಸ ಸಸ್ಪೆನ್ಶನ್‌(ವಾಹನದ ಚಕ್ರಗಳಿಗೆ ಅಳವಡಿಸಲಾಗುವ ಸಲಕರಣೆ) ಹೊಂದಿರುವ ಸಂಪೂರ್ಣವಾಗಿ ಹೊಸದಾಗಿ ವಿನ್ಯಾಸಗೊಳಿಸಲಾದ ಬೋಗಿಯನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಶ್ರೀ ಅಶ್ವಿನಿ ವೈಷ್ಣವ್‌ ಹೇಳಿದರು. ವಿನ್ಯಾಸ ನಿಯತಾಂಕಗಳನ್ನು ಹೊಸ ಮಟ್ಟಕ್ಕೆ ಕೊಂಡೊಯ್ಯಲಾಗಿದೆ. ಇದರ ಒಳಾಂಗಣ ಮತ್ತು ಏಣಿಗಳು ದಕ್ಷತಾಶಾಸ್ತ್ರದ ವಿನ್ಯಾಸವನ್ನು ಹೊಂದಿದ್ದು, ಸುರಕ್ಷತೆ ಮತ್ತು ಭದ್ರತೆಗಾಗಿ ವಿಶೇಷ ನಿಯತಾಂಕಗಳನ್ನು ಜಾರಿಗೆ ತರಲಾಗಿದೆ.

ವಂದೇ ಭಾರತ್‌ ಸ್ಲೀಪರ್‌ ರೈಲು ರಾತ್ರಿಯ ಪ್ರಯಾಣಕ್ಕೆ ಆರಾಮದಾಯಕ, ಸುರಕ್ಷಿತ ಮತ್ತು ಉತ್ತಮ - ಗುಣಮಟ್ಟದ ಪ್ರಯಾಣದ ಅನುಭವವನ್ನು ನೀಡುತ್ತದೆ. ವಂದೇ ಭಾರತ್‌ ಸ್ಲೀಪರ್‌ ರೈಲಿನ ವೇಳಾಪಟ್ಟಿಯನ್ನು ಸಂಜೆ ತನ್ನ ಮೂಲದಿಂದ ಹೊರಟು ಮರುದಿನ ಮುಂಜಾನೆ ತನ್ನ ಗಮ್ಯಸ್ಥಾನವನ್ನು ತಲುಪುವ ರೀತಿಯಲ್ಲಿ ಯೋಜಿಸಲಾಗುವುದು.

ವಂದೇ ಭಾರತ್‌ ಸ್ಲೀಪರ್‌ ರೈಲಿನ ಪ್ರಯಾಣಿಕರು ತಮ್ಮ ಪ್ರಯಾಣದ ಸಮಯದಲ್ಲಿ ಪ್ರದೇಶ-ನಿರ್ದಿಷ್ಟ ಪಾಕಶಾಲೆಯ ಕೊಡುಗೆಗಳನ್ನು ಆನಂದಿಸುತ್ತಾರೆ. ಗುವಾಹಟಿಯಿಂದ ಹೊರಡುವ ರೈಲು ಅಧಿಕೃತ ಅಸ್ಸಾಮಿ ಪಾಕಪದ್ಧತಿಯನ್ನು ಒಳಗೊಂಡಿರುತ್ತದೆ. ಆದರೆ ಕೋಲ್ಕತ್ತಾದಿಂದ ಹೊರಡುವ ರೈಲು ಸಾಂಪ್ರದಾಯಿಕ ಬಂಗಾಳಿ ಭಕ್ಷ್ಯಗಳನ್ನು ಪೂರೈಸುತ್ತದೆ. ರೈಲಿನಲ್ಲಿಆಹ್ಲಾದಕರ ಮತ್ತು ಸಾಂಸ್ಕೃತಿಕವಾಗಿ ಶ್ರೀಮಂತ ಊಟದ ಅನುಭವವನ್ನು ಖಚಿತಪಡಿಸುತ್ತದೆ.

ವಂದೇ ಭಾರತ್‌ ಸ್ಲೀಪರ್‌ ರೈಲಿನ ವೈಶಿಷ್ಟ್ಯಗಳು:

  • ಸೆಮಿ-ಹೈಸ್ಪೀಡ್‌ ರೈಲು 180 ಕಿ.ಮೀ ವೇಗದ ವಿನ್ಯಾಸ ವೇಗ
  • ಸುಧಾರಿತ ಕುಶನಿಂಗ್‌ನೊಂದಿಗೆ ದಕ್ಷತಾಶಾಸ್ತ್ರೀಯವಾಗಿ ವಿನ್ಯಾಸಗೊಳಿಸಲಾದ ಬರ್ತ್‌ಗಳು
  • ಸುಗಮ ಚಲನೆಗಾಗಿ ವೆಸ್ಟಿಬ್ಯೂಲ್‌ಗಳೊಂದಿಗೆ ಸ್ವಯಂಚಾಲಿತ ಬಾಗಿಲುಗಳು
  • ಉತ್ಕೃಷ್ಟ ಸಸ್ಪೆನ್ಶನ್‌ ಮತ್ತು ಶಬ್ದ ಕಡಿತದೊಂದಿಗೆ ವರ್ಧಿತ ಸವಾರಿ ಆರಾಮ
  • ಕವಚ್‌ ಅಳವಡಿಸಲಾಗಿದೆ
  • ಹೆಚ್ಚಿನ ನೈರ್ಮಲ್ಯವನ್ನು ಕಾಪಾಡಲು ಸೋಂಕುನಿವಾರಕ ತಂತ್ರಜ್ಞಾನ
  • ಸುಧಾರಿತ ನಿಯಂತ್ರಣಗಳು ಮತ್ತು ಸುರಕ್ಷತಾ ವ್ಯವಸ್ಥೆಗಳನ್ನು ಹೊಂದಿರುವ ಡ್ರೈವರ್‌ ಕ್ಯಾಬ್‌
  • ಏರೋಡೈನಾಮಿಕ್‌ ಬಾಹ್ಯ ನೋಟ ಮತ್ತು ಸ್ವಯಂಚಾಲಿತ ಬಾಹ್ಯ ಪ್ರಯಾಣಿಕರ ಬಾಗಿಲುಗಳು
  • ದಿವ್ಯಾಂಗರಿಗೆ ವಿಶೇಷ ವ್ಯವಸ್ಥೆ
  • ತುರ್ತು ಸಂದರ್ಭದಲ್ಲಿ ಪ್ರಯಾಣಿಕರು ಮತ್ತು ರೈಲು ಮ್ಯಾನೇಜರ್‌ / ಲೋಕೋ ಪೈಲಟ್‌ ನಡುವೆ ಸಂವಹನಕ್ಕಾಗಿ ತುರ್ತು ಟಾಕ್‌-ಬ್ಯಾಕ್‌ ಘಟಕ
  • ಎಲ್ಲಾ ಬೋಗಿಗಳಲ್ಲಿ ಸಿಸಿಟಿವಿ
  • ವಿದ್ಯುತ್‌ ಕ್ಯಾಬಿನೆಟ್‌ಗಳು ಮತ್ತು ಶೌಚಾಲಯಗಳಲ್ಲಿ ಸುಧಾರಿತ ಅಗ್ನಿ ಸುರಕ್ಷತೆ ಏರೋಸಾಲ್‌ ಆಧಾರಿತ ಅಗ್ನಿ ಪತ್ತೆ ಮತ್ತು ನಿಗ್ರಹ ವ್ಯವಸ್ಥೆ

ಮೊದಲ ವಂದೇ ಭಾರತ್‌ ಸ್ಲೀಪರ್‌ ರೈಲು ಭಾರತೀಯ ರೈಲ್ವೆಯಲ್ಲಿ ಹೊಸ ಯುಗವನ್ನು ಸೂಚಿಸುತ್ತದೆ. ಇದು ರಾತ್ರಿಯ ಪ್ರಯಾಣಕ್ಕಾಗಿ ವೇಗ, ಆರಾಮ ಮತ್ತು ಆಧುನಿಕ ಸೌಲಭ್ಯಗಳನ್ನು ಸಂಯೋಜಿಸುತ್ತದೆ. ಇದು ಪ್ರಯಾಣಿಕ ಕೇಂದ್ರಿತ ಸೇವೆಗಳು, ತಾಂತ್ರಿಕ ನಾವೀನ್ಯತೆ ಮತ್ತು ಪ್ರಾದೇಶಿಕ ಸಂಪರ್ಕದ ಮೇಲೆ ಭಾರತೀಯ ರೈಲ್ವೆಯ ಗಮನವನ್ನು ಪ್ರದರ್ಶಿಸುತ್ತದೆ, ಪ್ರಯಾಣಿಕರಿಗೆ ಸುರಕ್ಷಿತ, ವೇಗದ, ಅನುಕೂಲಕರ ಮತ್ತು ಸಾಂಸ್ಕೃತಿಕವಾಗಿ ಸಮೃದ್ಧ ಪ್ರಯಾಣವನ್ನು ಒದಗಿಸುತ್ತದೆ.

 

*****


(रिलीज़ आईडी: 2210658) आगंतुक पटल : 8
इस विज्ञप्ति को इन भाषाओं में पढ़ें: English , Urdu , Marathi , हिन्दी , Gujarati , Odia , Tamil , Telugu