ಗಣಿ ಸಚಿವಾಲಯ
2025 ವರ್ಷಾಂತ್ಯದ ಪುನರಾವಲೋಕನ
प्रविष्टि तिथि:
31 DEC 2025 11:56AM by PIB Bengaluru
ಭಾರತದ ಗಣಿಗಾರಿಕೆ ಪರಿಸರ ವ್ಯವಸ್ಥೆಯನ್ನು ಆಧುನೀಕರಿಸಲು ಮತ್ತು ಖನಿಜ ಭದ್ರತೆಯನ್ನು ಬಲಪಡಿಸಲು 2025 ರಲ್ಲಿ ಗಣಿ ಸಚಿವಾಲಯವು ಸಮಗ್ರ ನೀತಿ ಸುಧಾರಣೆಗಳನ್ನು ಜಾರಿಗೆ ತಂದಿತು. ಗಣಿ ಮತ್ತು ಖನಿಜಗಳು (ಅಭಿವೃದ್ಧಿ ಮತ್ತು ನಿಯಂತ್ರಣ - MMDR) ತಿದ್ದುಪಡಿ ಕಾಯ್ದೆ, 2025ರ ಜಾರಿ; ವರ್ಧಿತ ನಿಧಿಯೊಂದಿಗೆ ರಾಷ್ಟ್ರೀಯ ಖನಿಜ ಅನ್ವೇಷಣಾ ಮತ್ತು ಅಭಿವೃದ್ಧಿ ಟ್ರಸ್ಟ್ (NMEDT) ಆಗಿ ರಾಷ್ಟ್ರೀಯ ಖನಿಜ ಅನ್ವೇಷಣಾ ಟ್ರಸ್ಟ್ (NMET) ನ ವಿಸ್ತರಣೆ ಮತ್ತು ಮರುನಾಮಕರಣ; ನಿರ್ದಿಷ್ಟ ಸಮಯ ಕಾಲಮಿತಿಯಲ್ಲಿ ಸುವ್ಯವಸ್ಥಿತ ಹರಾಜು ಪ್ರಕ್ರಿಯೆಗಳು; ತನ್ನದೇ ಸಂಸ್ಥೆಯ ಅಗತ್ಯಗಳಿಗೆ ಕಚ್ಚಾ ವಸ್ತು ಪೂರೈಸುವ (ಕ್ಯಾಪ್ಟಿವ್ ಗಣಿ) ಮಾರಾಟದ ಮೇಲಿನ ನಿರ್ಬಂಧಗಳ ತೆಗೆದುಹಾಕುವಿಕೆ; ಪ್ರಮುಖ ಖನಿಜಗಳಾಗಿ ಆಯ್ದ ಖನಿಜಗಳ ಮರು ವರ್ಗೀಕರಣ; ನಿರ್ಣಾಯಕ ಖನಿಜಗಳಿಗೆ ರಾಯಧನ ದರಗಳ ಅಧಿಸೂಚನೆ; ಖನಿಜ ವಿನಿಮಯದ ಉತ್ತೇಜನ ಮತ್ತು ಕಡಲಾಚೆಯ ಗಣಿಗಾರಿಕೆ ಸುಧಾರಣೆಗಳ ಅನುಷ್ಠಾನ ಈ ವರ್ಷದ ಪ್ರಮುಖ ಕ್ರಮಗಳಾಗಿವೆ. ಒಟ್ಟಾರೆಯಾಗಿ, ಈ ಸುಧಾರಣೆಗಳು ಪಾರದರ್ಶಕತೆ ಸುಧಾರಿಸುತ್ತಾ, ಸುಲಲಿತ ವ್ಯವಹಾರ ಸಾಧ್ಯವಾಗಿಸುತ್ತಾ, ಖನಿಜ ಉತ್ಪಾದನೆಗೆ ವೇಗ ನೀಡುತ್ತಾ, ಸುಸ್ಥಿರ ಅಭಿವೃದ್ಧಿಗೆ ಬೆಂಬಲ ನೀಡುವ ಮೂಲಕ, ವಿಕಸಿತ ಭಾರತ 2047ರ ಮುನ್ನೋಟವನ್ನು ಸಾಕಾರಗೊಳಿಸಲು ಗಣಿಗಾರಿಕೆ ವಲಯವನ್ನು ಕಾರ್ಯತಂತ್ರದ ಆಧಾರಸ್ತಂಭವಾಗಿರಿಸುವ ಗುರಿಯನ್ನು ಹೊಂದಿವೆ.
ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ
*****
(रिलीज़ आईडी: 2210098)
आगंतुक पटल : 5